ಪ್ರಮಾಣಿತ ಅಪ್ಲಿಕೇಶನ್ ಪರವಾನಗಿ ನಿಯಮಗಳು
MICROSOFT STORE, WINDOWS STORE, ಮತ್ತು XBOX STORE
ಅಕ್ಟೋಬರ್ 2017 ರಂದು ಅಪ್‌ಡೇಟ್ ಮಾಡಲಾಗಿದೆ

ಈ ಪರವಾನಗಿ ನಿಯಮಗಳು ನಿಮ್ಮ ಮತ್ತು ಅಪ್ಲಿಕೇಶನ್ ಪ್ರಕಾಶಕರ ನಡುವಿನ ಒಪ್ಪಂದವಾಗಿದೆ. ದಯವಿಟ್ಟು ಅದನ್ನು ಓದಿರಿ. ಅಪ್ಲಿಕೇಶನ್ ಪ್ರತ್ಯೇಕ ನಿಯಮಗಳೊಂದಿಗೆ ಬಂದಿರದ ಹೊರತು (ಹೀಗೆ ಬಂದಿರುವಾಗ ಆ ನಿಯಮಗಳು ಅನ್ವಯಿಸುತ್ತವೆ) ಅದು ನೀವು Microsoft Store, Windows Store, ಅಥವಾ Xbox Store ನಿಂದ (ಇವುಗಳಲ್ಲಿ ಪ್ರತಿಯೊಂದನ್ನು ಸಹ ಈ ಪರವಾನಗಿ ನಿಯಮಗಳಲ್ಲಿ "Store" ಎಂಬುದಾಗಿ ಉಲ್ಲೇಖಿಸಲಾಗುತ್ತದೆ) ಡೌನ್‌ಲೋಡ್ ಮಾಡುವ ಸಾಫ್ಟ್‌ವೇರ್‍ ಅಪ್ಲಿಕೇಶನ್‌ಗಳಿಗೆ (ಅಪ್ಲಿಕೇಶನ್‌ನ ಅಪ್‌ಡೇಟ್‌ಗಳು ಮತ್ತು ಅದಕ್ಕೆ ಪೂರಕಗಳೂ ಸೇರಿದಂತೆ) ಅನ್ವಯವಾಗುತ್ತದೆ.

ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಅಥವಾ ಬಳಸುವ ಮೂಲಕ ಅಥವಾ ಇವುಗಳಲ್ಲಿ ಯಾವುದನ್ನಾದರೂ ಮಾಡಲು ಪ್ರಯತ್ನಿಸಿದರೆ, ನೀವು ಈ ನಿಯಮಗಳನ್ನು ಒಪ್ಪಿಕೊಳ್ಳುತ್ತೀರಿ. ನೀವು ಅದನ್ನು ಒಪ್ಪದೇ ಇದ್ದಲ್ಲಿ, ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಅಥವಾ ಬಳಸಲು ನೀವು ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ ಮತ್ತು ಹಾಗೆ ಮಾಡಬಾರದು.

ಅಪ್ಲಿಕೇಶನ್ ಪ್ರಕಾಶಕರು ಎಂದರೆ Store ನಲ್ಲಿ ಗುರುತಿಸಿದಂತೆ ನಿಮಗೆ ಅಪ್ಲಿಕೇಶನ್‌ನ ಪರವಾನಗಿಯನ್ನು ನೀಡುತ್ತಿರುವ ಘಟಕ.

ನೀವು ಈ ಪರವಾನಗಿಯ ಷರತ್ತುಗಳಿಗೆ ಬದ್ಧವಾಗಿದ್ದರೆ, ನೀವು ಕೆಳಗಿನ ಹಕ್ಕುಗಳನ್ನು ಹೊಂದಿರುತ್ತೀರಿ.
1. ಇನ್‌ಸ್ಟಾಲ್ ಮಾಡುವ ಮತ್ತು ಬಳಸುವ ಹಕ್ಕುಗಳು; ಅವಧಿ ಮೀರುವುದು. ನಮ್ಮ ಬಳಕೆಯ ನಿಯಮಗಳಲ್ಲಿ ವಿವರಿಸಿರುವಂತೆ ನೀವು Windows ಸಾಧನಗಳು ಅಥವಾ Xbox ಕನ್ಸೋಲ್‌ಗಳಲ್ಲಿ ಅಪ್ಲಿಕೇಶನ್ ಇನ್‍ಸ್ಟಾಲ್ ಮಾಡಬಹುದು ಮತ್ತು ಬಳಸಬಹುದು. ನಮ್ಮ ಬಳಕೆಯ ನಿಯಮಗಳನ್ನು ಯಾವುದೇ ಸಮಯದಲ್ಲಿ ಬೇಕಾದರೂ ಮಾರ್ಪಡಿಸುವ ಹಕ್ಕನ್ನು Microsoft ಕಾಯ್ದಿರಿಸಿದೆ.
2. ಇಂಟೆರ್ನೆಟ್-ಆಧಾರಿತ ಸೇವೆಗಳು.

a. ಇಂಟರ್ನೆಟ್-ಆಧಾರಿತ ಅಥವಾ ವೈರ್‌ಲೆಸ್ ಸೇವೆಗಳಿಗೆ ಸಮ್ಮತಿ. ಇಂಟರ್ನೆಟ್ ಮುಖಾಂತರ ಅಪ್ಲಿಕೇಶನ್ ಕಂಪ್ಯೂಟರ್ ಸಿಸ್ಟಂಗೆ ಸಂಪರ್ಕಗೊಂಡರೆ, ಇದು ವೈರ್‌ಲೆಸ್ ನೆಟ್‌ವರ್ಕ್ ಅನ್ನು ಒಳಗೊಂಡಿರಬಹುದು ಮತ್ತು ಈ ಸಮಯದಲ್ಲಿ ನೀವು ಅಪ್ಲಿಕೇಶನ್ ಅನ್ನು ಬಳಸಿದರೆ, ಈ ತರಹದ ಬಳಕೆಯನ್ನು ಇಂಟರ್ನೆಟ್ ಆಧಾರಿತ ಅಥವಾ ವೈರ್‌ಲೆಸ್ ಸೇವೆಗಳಿಗೆ ಪ್ರಮಾಣಿತ ಸಾಧನ ಮಾಹಿತಿಯನ್ನು (ಇದರಲ್ಲಿ ನಿಮ್ಮ ಸಾಧನ, ಸಿಸ್ಟಂ ಮತ್ತು ಅಪ್ಲಿಕೇಶನ್ ಸಾಫ್ಟ್‌ವೇರ್‍ ಮತ್ತು ಪೆರಿಫೆರಲ್‌ಗಳೂ ಸೇರಿವೆ ಆದರೆ ಇಷ್ಟಕ್ಕೇ ಸೀಮಿತವಾಗಿಲ್ಲ) ಪ್ರಸರಣೆ ಮಾಡಲು ಇರುವ ಸಮ್ಮತಿಯೆಂದು ಪರಿಗಣಿಸಲಾಗುತ್ತದೆ. ಅಪ್ಲಿಕೇಶನ್ ಬಳಸಿಕೊಂಡು ಪ್ರವೇಶಿಸಿದ ಸೇವೆಗಳ ನಿಮ್ಮ ಬಳಕೆಗೆ ಸಂಬಂಧಪಟ್ಟಂತೆ ಇತರ ನಿಯಮಗಳನ್ನು ಪ್ರಸ್ತುತ ಪಡಿಸಿದರೆ, ಆ ನಿಯಮಗಳೂ ಅನ್ವಯಿಸುತ್ತವೆ.

b. ಇಂಟೆರ್ನೆಟ್-ಆಧಾರಿತ ಸೇವೆಗಳ ದುರ್ಬಳಕೆ. ಇಂಟರ್ನೆಟ್-ಆಧಾರಿತ ಸೇವೆಯನ್ನು ಅದಕ್ಕೆ ಹಾನಿಯನ್ನು ಉಂಟುಮಾಡುವ ರೀತಿಯಲ್ಲಿ ಅಥವಾ ಬೇರೊಬ್ಬರು ಅದನ್ನು ಅಥವಾ ವೈರ್‌ಲೆಸ್ ನೆಟ್‌ವರ್ಕ್ ಅನ್ನು ಬಳಸುವುದಕ್ಕೆ ಧಕ್ಕೆ ತರುವ ರೀತಿಯಲ್ಲಿ ಬಳಸುವಂತಿಲ್ಲ. ಯಾವುದೇ ಸೇವೆ, ಡೇಟಾ, ಖಾತೆ ಅಥವಾ ನೆಟ್‌ವರ್ಕ್‌ಗೆ ಯಾವುದೇ ಪ್ರಕಾರದಲ್ಲಿ ಅನಧಿಕೃತ ಪ್ರವೇಶವನ್ನು ಪಡೆದುಕೊಳ್ಳಲು ಪ್ರಯತ್ನಿಸುವುದಕ್ಕೆ ನೀವು ಸೇವೆಯನ್ನು ಬಳಸುವಂತಿಲ್ಲ.

3. ಪರವಾನಗಿಯ ವ್ಯಾಪ್ತಿ. ಅಪ್ಲಿಕೇಶನ್ ಅನ್ನು ಪರವಾನಗಿ ನೀಡಲಾಗಿದೆ, ಇದನ್ನು ಮಾರಾಟ ಮಾಡಿಲ್ಲ. ಅಪ್ಲಿಕೇಶನ್ ಅನ್ನು ಬಳಸಲು ಈ ಒಪ್ಪಂದವು ನಿಮಗೆ ಕೆಲವು ಹಕ್ಕುಗಳನ್ನು ಮಾತ್ರ ನೀಡುತ್ತದೆ. Microsoft ಜೊತೆಗಿನ ನಿಮ್ಮ ಒಪ್ಪಂದಕ್ಕೆ ಅನುಸಾರವಾಗಿ ನಿಮ್ಮ ಸಾಧನಗಳಲ್ಲಿ ಅಪ್ಲಿಕೇಶನ್ ಬಳಸುವ ಸಾಮರ್ಥ್ಯವನ್ನು Microsoft ನಿಷ್ಕ್ರಿಯಗೊಳಿಸಿದರೆ, ಯಾವುದೇ ಸಂಬಂಧಿತ ಪರವಾನಗಿ ಹಕ್ಕುಗಳು ಅಂತ್ಯಗೊಳ್ಳುತ್ತವೆ. ಅಪ್ಲಿಕೇಶನ್‌ನ ಪ್ರಕಾಶಕರು ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಿದ್ದಾರೆ. ಈ ಮಿತಿ ಇದ್ದರೂ ಸಹ ಅನ್ವಯವಾಗುವ ಕಾನೂನು ನಿಮಗೆ ಹೆಚ್ಚು ಹಕ್ಕುಗಳನ್ನು ನೀಡದ ಹೊರತು, ಈ ಒಪ್ಪಂದದಲ್ಲಿ ಸ್ಪಷ್ಟವಾಗಿ ಅನುಮತಿಸಿರುವಂತೆ ಮಾತ್ರ ನೀವು ಅಪ್ಲಿಕೇಶನ್ ಅನ್ನು ಬಳಸಬಹುದಾಗಿದೆ. ಹೀಗೆ ಮಾಡುವಾಗ, ಅಪ್ಲಿಕೇಶನ್ ಅನ್ನು ಕೆಲವೊಂದು ವಿಧಾನಗಳಲ್ಲಿ ಮಾತ್ರ ಬಳಸಲು ಅನುಮತಿಸುವ ಅಪ್ಲಿಕೇಶನ್‌ನಲ್ಲಿರುವ ಯಾವುದೇ ತಾಂತ್ರಿಕ ಇತಿಮಿತಿಗಳಿಗೆ ನೀವು ಬದ್ಧವಾಗಿರಬೇಕು. ನೀವು ಹೀಗೆ ಮಾಡುವಂತಿಲ್ಲ:

a. ಅಪ್ಲಿಕೇಶನ್‌ನಲ್ಲಿರುವ ಯಾವುದೇ ತಾಂತ್ರಿಕ ಇತಿಮಿತಿಗಳ ಕುರಿತು ಕೆಲಸ ಮಾಡುವುದು.

b. ಈ ಮಿತಿ ಇದ್ದರೂ ಅಪ್ಲಿಕೇಶನ್ ಅನ್ನು ರಿವರ್ಸ್ ಎಂಜಿನಿಯರ್, ಡಿಕಂಪೈಲ್ ಅಥವಾ ಡಿಸ್ಅಸೆಂಬಲ್ ಮಾಡುವುದು (ಅನ್ವಯಿಸುವ ಕಾನೂನು ಸ್ಪಷ್ಟವಾಗಿ ಇದನ್ನು ಅನುಮತಿಸಿದ ಸಂದರ್ಭವನ್ನು ಹೊರತುಪಡಿಸಿ ಹಾಗೂ ಅಂತಹ ಸಂದರ್ಭದಲ್ಲಿ ಮಾತ್ರ).

c. ಈ ಮಿತಿ ಇದ್ದರೂ ಸಹ, ಈ ಒಪ್ಪಂದದಲ್ಲಿ ನಿರ್ದಿಷ್ಟಪಡಿಸಿರುವ ಅಥವಾ ಅನ್ವಯಿಸುವ ಕಾನೂನು ಅನುಮತಿಸುವುದಕ್ಕಿಂತ ಹೆಚ್ಚಿನ ಅಪ್ಲಿಕೇಶನ್ ನಕಲು ಪ್ರತಿಗಳನ್ನು ಸೃಷ್ಟಿಸುವುದು.

d. ಅಪ್ಲಿಕೇಶನ್ ಅನ್ನು ಪ್ರಕಟಿಸುವುದು ಅಥವಾ ಇತರರು ನಕಲು ಮಾಡುವಂತಾಗಲು ಅದನ್ನು ಲಭ್ಯವಾಗಿಸುವುದು.

e. ಅಪ್ಲಿಕೇಶನ್ ಅನ್ನು ಬಾಡಿಗೆ, ಲೀಸ್ ಅಥವಾ ಸಾಲ ನೀಡುವುದು.

f. ಅಪ್ಲಿಕೇಶನ್ ಅಥವಾ ಈ ಒಪ್ಪಂದವನ್ನು ಯಾವುದೇ ಮೂರನೇ ಪಕ್ಷಕ್ಕೆ ವರ್ಗಾಯಿಸುವುದು.
4. ದಾಖಲೀಕರಣ. ಅಪ್ಲಿಕೇಶನ್ ಜೊತೆಗೆ ದಾಖಲೀಕರಣವನ್ನು ಒದಗಿಸಿದ್ದರೆ, ನೀವು ವೈಯಕ್ತಿಕ ಉಲ್ಲೇಖದ ಉದ್ದೇಶಗಳಿಗಾಗಿ ದಾಖಲೀಕರಣವನ್ನು ನಕಲಿಸಬಹುದು ಮತ್ತು ಬಳಸಬಹುದು.
5. ತಂತ್ರಜ್ಞಾನ ಮತ್ತು ರಫ್ತು ನಿರ್ಬಂಧಗಳು. ಅಪ್ಲಿಕೇಶನ್, ಯುನೈಟೆಡ್ ಸ್ಟೇಟ್ಸ್ ಅಥವಾ ಅಂತಾರಾಷ್ಟ್ರೀಯ ತಂತ್ರಜ್ಞಾನ ನಿಯಂತ್ರಣಕ್ಕೆ ಅಥವಾ ರಫ್ತು ಕಾನೂನು ಮತ್ತು ನಿಬಂಧನೆಗಳಿಗೆ ಒಳಪಟ್ಟಿರಬಹುದಾಗಿದೆ. ಅಪ್ಲಿಕೇಶನ್‌ನಲ್ಲಿ ಬಳಸಿರುವ ಅಥವಾ ಅದು ಬೆಂಬಲಿಸುವ ತಂತ್ರಜ್ಞಾನಕ್ಕೆ ಅನ್ವಯವಾಗುವ ಎಲ್ಲಾ ದೇಶೀಯ ಮತ್ತು ಅಂತಾರಾಷ್ಟ್ರೀಯ ರಫ್ತು ಕಾನೂನು ಹಾಗೂ ನಿಬಂಧನೆಗಳಿಗೆ ನೀವು ಬದ್ಧವಾಗಿರಬೇಕು. ಈ ಕಾನೂನುಗಳು ಗಮ್ಯಸ್ಥಳಗಳು, ಅಂತಿಮ ಬಳಕೆದಾರರು, ಮತ್ತು ಅಂತಿಮ ಬಳಕೆಗೆ ನಿರ್ಬಂಧಗಳನ್ನು ಒಳಗೊಂಡಿವೆ. Microsoft ಬ್ರಾಂಡ್‌ನ ಉತ್ಪನ್ನಗಳಿಗಾಗಿ, Microsoft ರಫ್ತು ವೆಬ್‌ಸೈಟ್‌ಗೆ ಹೋಗಿ (http://go.microsoft.com/fwlink/?LinkId=242130).
6. ಬೆಂಬಲ ಸೇವೆಗಳು. ಯಾವುದೇ ಬೆಂಬಲ ಸೇವೆಗಳು ಲಭ್ಯವಿವೆಯೇ ಎಂಬುದನ್ನು ನಿರ್ಧರಿಸಲು ಅಪ್ಲಿಕೇಶನ್ ಪ್ರಕಾಶಕರನ್ನು ಸಂಪರ್ಕಿಸಿ. Microsoft, ನಿಮ್ಮ ಹಾರ್ಡ್‌ವೇರ್‍ ತಯಾರಕರು ಮತ್ತು ನಿಮ್ಮ ವೈರ್‌ಲೆಸ್ ಕ್ಯಾರಿಯರ್ (ಇವರ ಪೈಕಿ ಒಬ್ಬರು ಅಪ್ಲಿಕೇಶನ್ ಪ್ರಕಾಶಕರಾಗಿರದ ಹೊರತು) ಅಪ್ಲಿಕೇಶನ್‌ಗಾಗಿ ಬೆಂಬಲ ಸೇವೆಗಳನ್ನು ಒದಗಿಸುವ ಜಬಾಬ್ದಾರಿಯನ್ನು ಹೊಂದಿಲ್ಲ.
7. ಸಂಪೂರ್ಣ ಒಪ್ಪಂದ. ಈ ಒಪ್ಪಂದ, ಯಾವುದೇ ಅನ್ವಯಿಸುವ ಗೌಪ್ಯತೆ ನೀತಿ, ಅಪ್ಲಿಕೇಶನ್‍ ಜೊತೆಗೆ ಬರುವ ಯಾವುದೇ ಹೆಚ್ಚುವರಿ ನಿಯಮಗಳು ಮತ್ತು ಪೂರಕಗಳು ಹಾಗೂ ಅಪ್‌ಡೇಟ್‌‍ಗಳಿಗಾಗಿ ಇರುವ ನಿಯಮಗಳು ಅಪ್ಲಿಕೇಶನ್‌ಗಾಗಿ ನಿಮ್ಮ ಹಾಗೂ ಅಪ್ಲಿಕೇಶನ್ ಪ್ರಕಾಶಕರ ನಡುವಿನ ಸಂಪೂರ್ಣ ಪರವಾನಗಿ ಒಪ್ಪಂದವಾಗಿವೆ.
8. ಅನ್ವಯಿಸುವ ಕಾನೂನು.

a. ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ. ನೀವು ಅಪ್ಲಿಕೇಶನ್ ಅನ್ನು ಯುನೈಟೆಡ್ ಸ್ಟೇಟ್ಸ್ ಅಥವಾ ಕೆನಡಾದಲ್ಲಿ ಪಡೆದುಕೊಂಡಿದ್ದರೆ, ನೀವು ನೆಲೆಸಿರುವ ರಾಜ್ಯ ಅಥವಾ ಪ್ರಾಂತ್ಯದ (ಅಥವಾ ನೀವೊಂದು ವ್ಯಾಪಾರವಾಗಿದ್ದರೆ, ವ್ಯಾಪಾರದ ಪ್ರಧಾನ ಸ್ಥಳವು ನೆಲೆಗೊಂಡಿರುವ ಪ್ರದೇಶ) ಕಾನೂನುಗಳು ಈ ನಿಯಮಗಳ ಅರ್ಥವಿವರಣೆ, ಇವುಗಳ ಉಲ್ಲಂಘನೆಗಾಗಿ ಮಾಡುವ ಕ್ಲೇಮ್‌ಗಳು ಮತ್ತು ಎಲ್ಲಾ ಇತರ ಕ್ಲೇಮ್‌ಗಳಿಗೆ (ಗ್ರಾಹಕರ ರಕ್ಷಣೆ, ನ್ಯಾಯೋಚಿತವಲ್ಲದ ಸ್ಪರ್ಧೆ ಮತ್ತು ಟಾರ್ಟ್ ಕ್ಲೇಮ್‌ಗಳೂ ಸೇರಿದಂತೆ) ಕಾನೂನಿನ ಸಂಘರ್ಷದ ಮೂಲತತ್ವಗಳನ್ನು ಲೆಕ್ಕಿಸದೆಯೇ ಅನ್ವಯವಾಗುತ್ತವೆ.

b. ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದ ಹೊರಗೆ. ನೀವು ಅಪ್ಲಿಕೇಶನ್ ಅನ್ನು ಯಾವುದೇ ಇತರ ದೇಶದಲ್ಲಿ ಪಡೆದಿದ್ದರೆ, ಆ ದೇಶದ ಕಾನೂನುಗಳು ಅನ್ವಯಿಸುತ್ತವೆ.
9. ಕಾನೂನು ಪರಿಣಾಮ. ಈ ಒಪ್ಪಂದವು ಕೆಲವೊಂದು ಕಾನೂನು ಹಕ್ಕುಗಳನ್ನು ವಿವರಿಸುತ್ತದೆ. ನಿಮ್ಮ ರಾಜ್ಯ ಅಥವಾ ದೇಶದ ಕಾನೂನುಗಳ ಅಡಿಯಲ್ಲಿ ನೀವು ಇತರ ಹಕ್ಕುಗಳನ್ನು ಹೊಂದಿರಬಹುದು. ನಿಮ್ಮ ರಾಜ್ಯ ಅಥವಾ ದೇಶದ ಕಾನೂನುಗಳು ನಿಮಗೆ ಹಾಗೆ ಮಾಡುವಂತೆ ಅನುಮತಿಸದಿದ್ದರೆ ನಿಮ್ಮ ರಾಜ್ಯದ ಅಥವಾ ದೇಶದ ಕಾನೂನುಗಳ ಅಡಿಯಲ್ಲಿ ನಿಮ್ಮ ಹಕ್ಕುಗಳನ್ನು ಈ ಒಪ್ಪಂದವು ಬದಲಾಯಿಸುವುದಿಲ್ಲ.
10. ವಾರಂಟಿಯ ಹಕ್ಕುನಿರಾಕರಣೆ. ಅಪ್ಲಿಕೇಶನ್ ಅನ್ನು “ಇದ್ದದ್ದು ಇದ್ದಂತೆ”, “ಎಲ್ಲಾ ದೋಷಗಳ ಜೊತೆಗೆ” ಮತ್ತು “ಲಭ್ಯವಿರುವಂತೆ” ಪರವಾನಗಿ ಮಾಡಲಾಗಿದೆ. ಅದನ್ನು ಬಳಸುವುದಕ್ಕೆ ಸಂಬಂಧಿಸಿದ ಎಲ್ಲಾ ಅಪಾಯಗಳ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ. ಅಪ್ಲಿಕೇಶನ್‌ನ ಪ್ರಕಾಶಕರು, ತಮ್ಮದೇ ಪರವಾಗಿ, Microsoft (Microsoft ಅಪ್ಲಿಕೇಶನ್ ಪ್ರಕಾಶಕರಾಗಿರದಿದ್ದರೆ), ವೈರ್‌ಲೆಸ್ ಕ್ಯಾರಿಯರ್‌ಗಳು (ಇವರ ನೆಟ್‍ವರ್ಕ್‌ ಮೂಲಕ ಅಪ್ಲಿಕೇಶನ್‌ ಅನ್ನು ಒದಗಿಸಲಾಗಿರುತ್ತದೆ), ಮತ್ತು ನಮ್ಮ ಪ್ರತಿಯೊಂದು ಸಂಬಂಧಿತ ಅಂಗಸಂಸ್ಥೆಗಳು, ವೆಂಡರ್‌ಗಳು, ಏಜೆಂಟ್‌ಗಳು ಹಾಗೂ ಪೂರೈಕೆದಾರರು (“ಕವರ್ ಮಾಡಿರುವ ಪಕ್ಷಗಳು”), ಅಪ್ಲಿಕೇಶನ್‌ಗೆ ಸಂಬಂಧಪಟ್ಟಂತೆ ಯಾವುದೇ ಸ್ಪಷ್ಟ ವಾರಂಟಿಗಳು, ಖಾತರಿಗಳು ಅಥವಾ ಷರತ್ತುಗಳನ್ನು ನೀಡುವುದಿಲ್ಲ. ಅಪ್ಲಿಕೇಶನ್‌ನ ಗುಣಮಟ್ಟ, ಸುರಕ್ಷತೆ, ಆರಾಮ ಮತ್ತು ಕಾರ್ಯನಿರ್ವಹಣೆಗೆ ಸಂಬಂಧಪಟ್ಟ ಸಂಪೂರ್ಣ ಅಪಾಯವು ನಿಮ್ಮ ಜವಾಬ್ದಾರಿಯಾಗಿದೆ. ಅಪ್ಲಿಕೇಶನ್ ದೋಷಪೂರಿತವೆಂದು ಸಾಬೀತಾದರೆ, ಎಲ್ಲಾ ಅಗತ್ಯ ಸರ್ವೀಸಿಂಗ್ ಅಥವಾ ರಿಪೇರಿಯ ಸಂಪೂರ್ಣ ವೆಚ್ಚವನ್ನು ನೀವೇ ಭರಿಸುತ್ತೀರಿ. ಈ ಒಪ್ಪಂದವು ಬದಲಾಯಿಸಲು ಸಾಧ್ಯವಾಗದೇ ಇರುವ ಹೆಚ್ಚುವರಿ ಗ್ರಾಹಕ ಹಕ್ಕುಗಳನ್ನು ನಿಮ್ಮ ಸ್ಥಳೀಯ ಕಾನೂನುಗಳ ಅಡಿಯಲ್ಲಿ ನೀವು ಹೊಂದಿರಬಹುದು. ನಿಮ್ಮ ಸ್ಥಳೀಯ ಕಾನೂನುಗಳ ಅಡಿಯಲ್ಲಿ ಅನುಮತಿಸಿರುವ ಮಟ್ಟಿಗೆ, ವ್ಯಾಪಾರೀಕರಣ, ನಿರ್ದಿಷ್ಟ ಉದ್ದೇಶಕ್ಕಾಗಿ ಕ್ಷಮತೆ, ಸುರಕ್ಷತೆ, ಆರಾಮದಾಯಕತೆ ಮತ್ತು ಉಲ್ಲಂಘನೆ ಮಾಡದಿರುವಿಕೆಯೂ ಸೇರಿದಂತೆ ಯಾವುದೇ ಸೂಚಿತ ವಾರಂಟಿಗಳು ಅಥವಾ ಷರತ್ತುಗಳನ್ನು ಕವರ್ ಮಾಡಿರುವ ಪಕ್ಷಗಳಿಂದ ಹೊರಗಿಡಲಾಗಿದೆ.
11. ಪರಿಹಾರ ಮತ್ತು ಹಾನಿಗೆ ಸಂಬಂಧಪಟ್ಟ ಮಿತಿ ಮತ್ತು ಹೊರಗಿಡುವಿಕೆ. ಕಾನೂನು ನಿಷೇಧಿಸದೇ ಇರುವ ಮಟ್ಟಿಗೆ, ಹಾನಿಗಳಿಗೆ ಪರಿಹಾರವನ್ನು ಪಡೆದುಕೊಳ್ಳಲು ನೀವು ಯಾವುದೇ ಆಧಾರಾಂಶವನ್ನು ಹೊಂದಿದ್ದರೆ, ಕೇವಲ ನೇರ ಹಾನಿಗಳಿಗೆ ಅಪ್ಲಿಕೇಶನ್‌ಗಾಗಿ ನೀವು ಪಾವತಿಸಿರುವ ಮೊತ್ತದಷ್ಟು ಅಥವಾ USD$1.00 ಮೊತ್ತದ (ಇವೆರಡರಲ್ಲಿ ಯಾವುದು ದೊಡ್ಡದೋ ಅದು) ಹಣವನ್ನು ಪುನಃ ಪಡೆದುಕೊಳ್ಳಬಹುದು. ಸಾಂದರ್ಭಿಕ, ಕಳೆದುಕೊಂಡ ಲಾಭಗಳು, ವಿಶೇಷ, ಪರೋಕ್ಷ ಅಥವಾ ಪ್ರಾಸಂಗಿಕ ಹಾನಿಗಳೂ ಸೇರಿದಂತೆ ನೀವು ಅಪ್ಲಿಕೇಶನ್‌ನ ಪ್ರಕಾಶಕರಿಂದ ಯಾವುದೇ ಇತರ ಹಾನಿಗಳಿಗಾಗಿ ಪರಿಹಾರವನ್ನು ವಸೂಲು ಮಾಡುವುದಿಲ್ಲ ಮತ್ತು ಯಾವುದೇ ಹಕ್ಕನ್ನು ಬಿಟ್ಟುಕೊಡುವುದಿಲ್ಲ. ಈ ನಿಯಮಗಳು ಹೇರದಿದ್ದರೂ ನಿಮ್ಮ ಸ್ಥಳೀಯ ಕಾನೂನುಗಳು ವಾರಂಟಿ, ಖಾತರಿ ಅಥವಾ ಷರತ್ತನ್ನು ಹೇರಿದರೆ, ಅದರ ಅವಧಿಯು ನೀವು ಅಪ್ಲಿಕೇಶನ್‍ ಡೌನ್‍ಲೋಡ್ ಮಾಡಿದ ದಿನದಿಂದ 90 ದಿನಗಳಿಗೆ ಸೀಮಿತವಾಗಿರುತ್ತದೆ.

ಈ ಮಿತಿಯು ಇದಕ್ಕೆ ಅನ್ವಯಿಸುತ್ತದೆ:
ಅಪ್ಲಿಕೇಶನ್‌ಗೆ ಅಥವಾ ಅಪ್ಲಿಕೇಶನ್ ಮೂಲಕ ಲಭ್ಯವಾಗಿಸಿದ ಸೇವೆಗಳಿಗೆ ಸಂಬಂಧಪಟ್ಟ ಯಾವುದೇ ವಿಷಯ; ಮತ್ತು
ಒಪ್ಪಂದ, ವಾರಂಟಿ, ಖಾತರಿ ಅಥವಾ ಷರತ್ತಿನ ಉಲ್ಲಂಘನೆಗಾಗಿ ಮಾಡಿರುವ ಕ್ಲೇಮ್‌ಗಳು; ಕಟ್ಟುನಿಟ್ಟಾದ ಹೊಣೆಗಾರಿಕೆ, ನಿರ್ಲಕ್ಷ್ಯ ಅಥವಾ ಇತರ ಟಾರ್ಟ್; ಕಾನೂನು ಅಥವಾ ನಿಯಂತ್ರಣದ ಉಲ್ಲಂಘನೆ; ಅನ್ಯಾಯದ ಪುಷ್ಟೀಕರಣ; ಅಥವಾ ಯಾವುದೇ ಇತರ ಸಿದ್ಧಾಂತದ ಅಡಿಯಲ್ಲಿ; ಇವೆಲ್ಲವೂ ಅನ್ವಯಿಸುವ ಕಾನೂನು ಅನುಮತಿಸುವಷ್ಟು ಮಟ್ಟಿಗೆ ಆಗಿರುತ್ತದೆ.

ಹೀಗಿದ್ದರೂ ಸಹ ಇದು ಅನ್ವಯವಾಗುತ್ತದೆ:
ಈ ಪರಿಹಾರವು ಯಾವುದೇ ನಷ್ಟಗಳಿಗಾಗಿ ನಿಮಗೆ ಸಂಪೂರ್ಣವಾಗಿ ಪರಿಹಾರವನ್ನು ಒದಗಿಸದೇ ಇದ್ದರೆ; ಅಥವಾ
ಹಾನಿಗಳು ಉಂಟಾಗುವ ಸಾಧ್ಯತೆಯ ಕುರಿತಾಗಿ ಅಪ್ಲಿಕೇಶನ್ ಪ್ರಕಾಶಕರು ತಿಳಿದಿದ್ದರೆ ಅಥವಾ ತಿಳಿದಿರಬೇಕಿದ್ದರೆ.