Trace Id is missing
ಮುಖ್ಯ ವಿಷಯಕ್ಕೆ ಸ್ಕಿಪ್ ಮಾಡಿ
ಸೈನ್ ಇನ್ ಮಾಡಿ

Windows 7 ಭಾಷೆ ಇಂಟರ್ಫೇಸ್ ಪ್ಯಾಕ್

Windows 7 ಭಾಷಾ ಇಂಟರ್ಫೇಸ್ ಪ್ಯಾಕ್ (LIP) ಅತೀ ವ್ಯಾಪಕ ಬಳಕೆಯ Windows 7 ಕ್ಷೇತ್ರಗಳಿಗೆ ಭಾಗಶಃ ಭಾಷಾಂತರಿತ ಬಳಕೆದಾರ ಇಂಟರ್ಫೇಸ್ ಅನ್ನು ಒದಗಿಸುತ್ತದೆ.

ಮುಖ್ಯವಾದುದು! ಈ ಕೆಳಗಿನ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಸಂಪೂರ್ಣ ಪುಟದ ವಿಷಯಾಂಶ ಆ ಭಾಷೆಗೆ ಕ್ರಿಯಾತ್ಮಕವಾಗಿ ಬದಲಾಗುತ್ತದೆ.

  • ಆವೃತ್ತಿ:

    1.0

    ಪ್ರಕಟಿಸಿದ ದಿನಾಂಕ:

    2/9/2010

    ಫೈಲ್ ಹೆಸರು:

    LIP_kn-IN-32bit.mlc

    LIP_kn-IN-64bit.mlc

    ಫೈಲ್ ಗಾತ್ರ:

    2.9 MB

    4.6 MB

    Windows ನ ಅತೀ ವ್ಯಾಪಕ ಬಳಕೆಯ ಕ್ಷೇತ್ರಗಳ ಭಾಗಶಃ ಭಾಷಾಂತರಿತ ಆವೃತ್ತಿಯನ್ನು Windows ಭಾಷಾ ಇಂಟರ್ಫೇಸ್ ಪ್ಯಾಕ್ (LIP) ಒದಗಿಸುತ್ತದೆ. LIP ಅನ್ನು ಸ್ಥಾಪಿಸಿದ ನಂತರ, ವಿಜಾರ್ಡ್‌ಗಳು, ಸಂಭಾಷಣೆ ಪೆಟ್ಟಿಗೆಗಳು, ಮೆನುಗಳಲ್ಲಿನ ಪಠ್ಯ ಮತ್ತು ಸಹಾಯ ಮತ್ತು ಬೆಂಬಲ ವಿಷಯಗಳು LIP ಭಾಷೆಯಲ್ಲಿ ಪ್ರದರ್ಶಿತವಾಗುತ್ತದೆ. ಭಾಷಾಂತರಿಸದ ಪಠ್ಯವು Windows 7 ನ ಮೂಲ ಭಾಷೆಯಲ್ಲಿರುತ್ತದೆ. ಉದಾಹರಣೆಗಾಗಿ, ನೀವು Windows 7 ನ ಸ್ಪ್ಯಾನಿಶ್ ಆವೃತ್ತಿಯನ್ನು ಖರೀದಿಸಿದರೆ, ಮತ್ತು ಕೆಟಲಾನ್ LIP ಅನ್ನು ಸ್ಥಾಪಿಸಿದರೆ, ಕೆಲವು ಪಠ್ಯವು ಸ್ಪ್ಯಾನಿಷ್‌ನಲ್ಲಿಯೇ ಉಳಿಯುತ್ತದೆ. ಒಂದು ಮೂಲ ಭಾಷೆಯಲ್ಲಿ ನೀವು ಒಂದಕ್ಕಿಂತ ಹೆಚ್ಚು LIP ಅನ್ನು ಸ್ಥಾಪಿಸಬಹುದು. Windows LIP ಗಳನ್ನು ಎಲ್ಲ Windows 7 ಸಂಚಿಕೆಗಳಲ್ಲಿ ಸ್ಥಾಪಿಸಬಹುದು.
  • ಬೆಂಬಲಿತ ಆಪರೇಟಿಂಗ್ ಸಿಸ್ಟಂಗಳು

    Windows 7

    • Microsoft Windows 7
    • Windows 7 ನ ಅಗತ್ಯವಾದ ಮೂಲ ಭಾಷೆಯ ಸ್ಥಾಪನೆ: ಇಂಗ್ಲೀಷ್
    • ಡೌನ್‌ಲೋಡ್‌ಗಾಗಿ 4.63 Mb ಯಷ್ಟು ಮುಕ್ತ ಜಾಗ
    • ಸೆಟಪ್‌ಗಾಗಿ 15 Mb ಯಷ್ಟು ಮುಕ್ತ ಜಾಗ
  • ಎಚ್ಚರಿಕೆ: ನೀವು BitLocker ಎನ್‌ಕ್ರಿಪ್ಶನ್ ಅನ್ನು ಕ್ರಿಯಾತ್ಮಕಗೊಳಿಸಿದ್ದರೆ, LIP ಸ್ಥಾಪಿಸುವ ಮೊದಲು ಅದನ್ನು ಸ್ಥಗಿತಗೊಳಿಸಿ. Control Panel ತೆರೆಯಿರಿ, System and Security ತದನಂತರ BitLocker Drive Encryption ಆಯ್ಕೆ ಮಾಡಿ. Suspend Protection ಕ್ಲಿಕ್ ಮಾಡಿ.

    Windows 7 LIP ಆವೃತ್ತಿಗಳಿಗಾಗಿ ಪ್ರತ್ಯೇಕವಾದ 32-ಬಿಟ್ ಮತ್ತು 64-ಬಿಟ್ ಡೌನ್‌ಲೋಡ್‌ಗಳಿರುವುದರಿಂದ, ನೀವು ಡೌನ್‌ಲೋಡ್ ಪ್ರಾರಂಭಿಸುವ ಮೊದಲು, Windows 7 ನ ಯಾವ ಆವೃತ್ತಿಯನ್ನು ಸ್ಥಾಪಿಸಿದ್ದೀರೆಂದು ನೀವು ಖಚಿತಪಡಿಸಿಕೊಳ್ಳಬೇಕು: Windows 7 ನ ಯಾವ ಆವೃತ್ತಿಗಳನ್ನು ನೀವು ಸ್ಥಾಪಿಸಿದ್ದೀರೆಂದು ಹೇಗೆ ಖಚಿತಪಡಿಸಿಕೊಳ್ಳಬೇಕೆಂಬ ಬಗ್ಗೆ ಇಲ್ಲಿದೆ:

    ನೀವು Start ಬಟನ್ ಕ್ಲಿಕ್ ಮಾಡಿ ತದನಂತರ ಕಂಪ್ಯೂಟರಿನಲ್ಲಿ ರೈಟ್-ಕ್ಲಿಕ್ ಮಾಡಿ ಹಾಗೂ Properties ಆಯ್ಕೆ ಮಾಡಿ. ಇದು ನಿಮ್ಮ ಕಂಪ್ಯೂಟರ್ ಬಗ್ಗೆ ಮೂಲ ಮಾಹಿತಿಯನ್ನು ತೋರಿಸುತ್ತದೆ.
    ಸಿಸ್ಟಮ್ ಪ್ರಕಾರಕ್ಕಾಗಿ ಸಿಸ್ಟಮ್ ವಿಭಾಗದಲ್ಲಿ ನೋಡಿ. ನಿಮ್ಮ Windows 7 ಆಪರೇಟಿಂಗ್ ಸಿಸ್ಟಮ್ 32-ಬಿಟ್ ಆಪರೇಟಿಂಗ್ ಸಿಸ್ಟಮ್ ಅಥವಾ ಅದು 64-ಬಿಟ್ ಆಪರೇಟಿಂಗ್ ಸಿಸ್ಟಮ್ ಆಗಿದೆಯೇ ಎನ್ನುವುದನ್ನು ಇದು ಸೂಚಿಸುತ್ತದೆ.


    32-ಬಿಟ್ ಆವೃತ್ತಿಯನ್ನು ಸ್ಥಾಪಿಸಲು, ನೀವು ಈ ರೀತಿ ಮಾಡಬಹುದು:

    1. LIP ಸ್ಥಾಪಿಸಲು ಡೌನ್ ಲೋಡ್ ಬಟನ್ ಕ್ಲಿಕ್ ಮಾಡಿ, ನಂತರ Open ಕ್ಲಿಕ್ ಮಾಡಿ


    2. ಅಥವಾ

    3. ಡೌನ್ ಲೋಡ್ ಬಟನ್ ಕ್ಲಿಕ್ ಮಾಡಿ
      • ನಿಮ್ಮ ಕಂಪ್ಯೂಟರ್‌ಗೆ ಫೈಲ್ ಅನ್ನು ನಕಲಿಸಲು Save ಕ್ಲಿಕ್ ಮಾಡಿ,
      • ಡೌನ್‌ಲೋಡ್ ಮಾಡಿದ ಫೈಲ್‌ಗೆ ನ್ಯಾವಿಗೇಟ್ ಮಾಡಿ ಮತ್ತು LIP ಅನ್ನು ಸ್ಥಾಪಿಸಲು ಅದರ ಮೇಲೆ ಡಬಲ್-ಕ್ಲಿಕ್ ಮಾಡಿ

    64-ಬಿಟ್ ಆವೃತ್ತಿಯನ್ನು ಸ್ಥಾಪಿಸಲು, ಮೇಲಿನ ಆಯ್ಕೆ 2 ಅನ್ನು ನೀವು ಬಳಸಬೇಕು.