Trace Id is missing
ಮುಖ್ಯ ವಿಷಯಕ್ಕೆ ಸ್ಕಿಪ್ ಮಾಡಿ
ಸೈನ್ ಇನ್ ಮಾಡಿ

Windows Vista ಭಾಷೆ ಇಂಟರ್ಫೇಸ್ ಪ್ಯಾಕ್

ಎಚ್ಚರಿಕೆ! Vista LIP ಪ್ಯಾಕೇಜ್ ಸ್ಥಾಪಿಸುವ ಮೊದಲು ಫಾಂಟ್-ಕ್ರಿಯಾತ್ಮಕತೆ ಪ್ಯಾಕೇಜನ್ನು ಸ್ಥಾಪಿಸಬೇಕು. ನಿಮ್ಮ ಭಾಷೆಯನ್ನು ಸರಿಯಾಗಿ ವೀಕ್ಷಿಸಲು ಈ ಫಾಂಟ್ ಪ್ಯಾಕೇಜ್ ಮುಖ್ಯವಾದ ಫಾಂಟ್ ನವೀಕರಣ ಮಾಹಿತಿಯನ್ನು ಒಳಗೊಂಡಿದೆ. ಫಾಂಟ್ ಪ್ಯಾಕೇಜನ್ನು ಸ್ಥಾಪಿಸಲು, ಕೆಳಗಿನ ಫಾಂಟ್ ಪ್ಯಾಕೇಜ್ ಸ್ಥಾಪಿಸು ಕ್ಲಿಕ್ ಮಾಡಿ.

ಮುಖ್ಯವಾದುದು! ಈ ಕೆಳಗಿನ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಸಂಪೂರ್ಣ ಪುಟದ ವಿಷಯಾಂಶ ಆ ಭಾಷೆಗೆ ಕ್ರಿಯಾತ್ಮಕವಾಗಿ ಬದಲಾಗುತ್ತದೆ.

ಡೌನ್ಲೋಡ್ ಮಾಡಿ
  • ಆವೃತ್ತಿ:

    1.0

    ಪ್ರಕಟಿಸಿದ ದಿನಾಂಕ:

    24/7/2008

    ಫೈಲ್ ಹೆಸರು:

    LIP_kn-IN.mlc

    ಫೈಲ್ ಗಾತ್ರ:

    2.7 MB

    ಫಾಂಟ್ ಪ್ಯಾಕೇಜ್ ಸ್ಥಾಪಿಸು
    Windows Vista ಗಾಗಿ ಇರುವ Windows Vista ಭಾಷಾ ಇಂಟರ್ಫೇಸ್ ಪ್ಯಾಕ್ (LIP) ಅತಿ ವ್ಯಾಪಕ ಬಳಕೆಯ Windows ಕ್ಷೇತ್ರಗಳ ಭಾಗಶಃ ಭಾಷಾಂತರವಾದ ಆವೃತ್ತಿಯನ್ನು ಒದಗಿಸುತ್ತದೆ. LIP ಸ್ಥಾಪನೆಗೊಳಿಸಿದ ನಂತರ, ವಿಜಾರ್ಡ್‌ಗಳು, ಸಂವಾದ ಪೆಟ್ಟಿಗೆಗಳು, ಮೆನುಗಳು, ಸಹಾಯ ಮತ್ತು ಬೆಂಬಲ ಶೀರ್ಷಿಕೆಗಳಲ್ಲಿನ ಪಠ್ಯ, ಮತ್ತಿತರ ಬಳಕೆದಾರ ಇಂಟರ್ಫೇಸ್‌ನಲ್ಲಿರುವ ಐಟಂಗಳು LIP ಭಾಷೆಯಲ್ಲಿ ಪ್ರದರ್ಶಿತವಾಗುತ್ತವೆ. ಭಾಷಾಂತರವಾಗದ ಪಠ್ಯವು Windows Vista ದ ಮೂಲ ಭಾಷೆಯಲ್ಲಿರುತ್ತದೆ. ಉದಾಹರಣೆಗೆ, ನೀವು ಸ್ಪಾನಿಷ್ ಆವೃತ್ತಿಯ Windows Vista ವನ್ನು ಖರೀದಿಸಿ ಒಂದು ಕೆಟಲಾನ್ LIP ಅನ್ನು ಸ್ಥಾಪಿಸಿದರೆ, ಕೆಲ ಪಠ್ಯವು ಸ್ಪಾನಿಷ್‌ನಲ್ಲಿ ಉಳಿದುಕೊಳ್ಳುತ್ತವೆ. ಒಂದಕ್ಕಿಂತ ಹೆಚ್ಚು LIP ಅನ್ನು ನೀವು ಸ್ಥಾಪಿಸಬಹುದು, ಆದ್ದರಿಂದಾಗಿ ಕಂಪ್ಯೂಟರ್‌ನ ಪ್ರತಿಯೊಬ್ಬ ಬಳಕೆದಾರನೂ ಅವನಿಗೆ ಅಗತ್ಯವಿರುವ ಭಾಷೆಯಲ್ಲಿ ಇಂಟರ್ಫೇಸ್ ಅನ್ನು ಪ್ರದರ್ಶಿಸಬಹುದು.
  • ಬೆಂಬಲಿತ ಆಪರೇಟಿಂಗ್ ಸಿಸ್ಟಂಗಳು

    Windows Vista

    • Microsoft Windows Vista
    • ಈ ಮುಂದಿನ ಭಾಷೆಯ(ಗಳ)ಲ್ಲಿರುವ ಬಳಕೆದಾರ ಇಂಟರ್ಫೇಸ್: ಇಂಗ್ಲಿಷ್, ಸ್ಪಾನಿಷ್, ಫ್ರೆಂಚ್, ರಷ್ಯನ್, ಸರ್ಬಿಯನ್ (ಲ್ಯಾಟಿನ್), ಕ್ರೊವೇಷ್ಯನ್, ನಾರ್ವೇಜಿಯನ್ (Bokmål)
    • ಡೌನ್‌ಲೋಡ್‌ಗಾಗಿ 4.63 Mb ಯಷ್ಟು ಖಾಲಿ ಜಾಗ
    • ಸೆಟಪ್‌ಗಾಗಿ 15 Mb ಯಷ್ಟು ಖಾಲಿ ಜಾಗ

    ಬೆಂಬಲಿತ ಪ್ಲಾಟ್‌ಫಾರ್ಮ್‌ಗಳು: LIP ಗಳು 32-ಬಿಟ್ ಆವೃತ್ತಿಯ Windows Vista ಗಳಲ್ಲಿ ಮಾತ್ರ ಕೆಲಸ ಮಾಡುತ್ತವೆ ಹಾಗೂ ಅವುಗಳನ್ನು ಹಿಂದಿನ ಆವೃತ್ತಿಯ Windows ಗಳಲ್ಲಾಗಲೀ ಅಥವಾ 64-ಬಿಟ್ ಆವೃತ್ತಿಯ Windows Vista ಗಳಲ್ಲಾಗಲೀ ಸ್ಥಾಪನೆಮಾಡಲು ಸಾಧ್ಯವಿಲ್ಲ.
    ಗಮನಿಸಿ: ಈ ಭಾಷೆಗೆ 96 DPI ಬಳಸುವಂತೆ ಶಿಫಾರಸು ಮಾಡಲಾಗಿದೆ.
    1. ಈ ಪುಟದ ಮೇಲಿರುವ ಡೌನ್‌ಲೋಡ್ ಬಟನ್ ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡುವುದನ್ನು ಪ್ರಾರಂಭಿಸಿ, ಅಥವಾ ಡ್ರಾಪ್-ಡೌನ್ ಪಟ್ಟಿಯಿಂದ ಬೇರೊಂದು ಭಾಷೆಯನ್ನು ಆಯ್ಕೆಮಾಡಿ ಹಾಗೂ ಹೋಗು ಕ್ಲಿಕ್ ಮಾಡಿ.
    2. ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:
      • ಸ್ಥಾಪನಕಾರ್ಯವನ್ನು ತತ್‌ಕ್ಷಣವೇ ಆರಂಭಿಸಲು, ತೆರೆ ಅಥವಾ ಪ್ರೋಗ್ರಾಂ ಅನ್ನು ಅದರ ಪ್ರಸಕ್ತ ಸ್ಥಾನದಿಂದ ಚಲಿಸು ಕ್ಲಿಕ್ ಮಾಡಿ.
      • ನಂತರದ ಸಮಯದಲ್ಲಿ ಸ್ಥಾಪಿಸಲು ಡೌನ್‌ಲೋಡ್ ಅನ್ನು ನಿಮ್ಮ ಕಂಪ್ಯೂಟರಿಗೆ ನಕಲಿಸಬೇಕಿದ್ದಲ್ಲಿ, ಉಳಿಸು ಅಥವಾ ಡಿಸ್ಕ್‌ಗೆ ಈ ಪ್ರೋಗ್ರಾಂ ಉಳಿಸು ಕ್ಲಿಕ್ ಮಾಡಿ.