ನಿಮ್ಮ ಗೌಪ್ಯತೆ
1. ನಿಮ್ಮ ಗೌಪ್ಯತೆ. ನಿಮ್ಮ ಗೌಪ್ಯತೆ ನಮಗೆ ಅತ್ಯಂತ ಮುಖ್ಯ. Microsoft ಗೌಪ್ಯತೆ ಹೇಳಿಕೆ (https://go.microsoft.com/fwlink/?LinkId=521839) ("ಗೌಪ್ಯತೆ ಹೇಳಿಕೆ") ಅನ್ನು ದಯವಿಟ್ಟು ಓದಿ ಏಕೆಂದರೆ ಇದು ನಿಮ್ಮಿಂದ ಮತ್ತು ನಿಮ್ಮ ಸಾಧನಗಳಿಂದ ನಾವು ಸಂಗ್ರಹಿಸುವ ಡೇಟಾದ ("ಡೇಟಾ") ವಿಧಗಳನ್ನು, ನಿಮ್ಮ ಡೇಟಾವನ್ನು ನಾವು ಹೇಗೆ ಬಳಸುತ್ತೇವೆ ಎಂಬುದನ್ನು ಮತ್ತು ನಿಮ್ಮ ಡೇಟಾವನ್ನು ಪ್ರಕ್ರಿಯೆಗೊಳಿಸಲು ನಾವು ಹೊಂದಿರುವ ಕಾನೂನು ನೆಲೆಗಳನ್ನು ವಿವರಿಸುತ್ತದೆ. ಈ ಖಾಸಗಿತನದ ಹೇಳಿಕೆಯು, ಇತರರೊಂದಿಗಿನ ನಿಮ್ಮ ಸಂವಹನಗಳು; ಈ ಸೇವೆಗಳ ಮೂಲಕ Microsoft ಇವರಿಗೆ ನಿಮ್ಮಿಂದ ಸಲ್ಲಿಸಲ್ಪಟ್ಟಿರುವ ಪೋಸ್ಟಿಂಗ್ಗಳು; ಹಾಗೂ ಈ ಸೇವೆಗಳ ಮೂಲಕ ನೀವು ಅಪ್ಲೋಡ್ ಮಾಡುವ, ಸ್ಟೋರ್ ಮಾಡುವ, ಬ್ರಾಡ್ಕಾಸ್ಟ್ ಮಾಡುವ, ಸೃಷ್ಟಿಸುವ, ಉತ್ಪಾದಿಸುವ, ಅಥವಾ ಹಂಚಿಕೊಳ್ಳುವ ಫೈಲ್ಗಳು, ಫೋಟೊಗಳು, ದಾಖಲೆಗಳು, ಆಡಿಯೋ, ಡಿಜಿಟಲ್ ಕೆಲಸಗಳು, ಲೈವ್ಸ್ಟ್ರೀಮ್ಗಳು ಮತ್ತು ವೀಡಿಯೊಗಳು, ಅಥವಾ ವಿಷಯವನ್ನು ಜನರೇಟ್ ಮಾಡುವ ಸಲುವಾಗಿ ನೀವು ಸಲ್ಲಿಸುವ ಸಲಹೆಗಳು ಆಗಿರುವ ನಿಮ್ಮ ವಿಷಯ ("ನಿಮ್ಮ ವಿಷಯ") ಅನ್ನು Microsoft ಹೇಗೆ ಬಳಸುತ್ತದೆ ಎಂಬುದನ್ನು ವಿವರಿಸುತ್ತದೆ. ಪ್ರಕ್ರಿಯೆಗೊಳಿಸುವಿಕೆಯು ಸಮ್ಮತಿಯನ್ನು ಆಧರಿಸಿರುವ ಸಂದರ್ಭದಲ್ಲಿ ಮತ್ತು ಕಾನೂನು ಅನುಮತಿಸುವ ಮಟ್ಟಿಗೆ, ಈ ನಿಯಮಗಳನ್ನು ಒಪ್ಪುವ ಮೂಲಕ, ಗೌಪ್ಯತೆ ಹೇಳಿಕೆಯಲ್ಲಿ ವಿವರಿಸಿರುವ ಪ್ರಕಾರ ನಿಮ್ಮ ವಿಷಯ ಮತ್ತು ಡೇಟಾವನ್ನು Microsoft ಸಂಗ್ರಹಿಸಲು, ಬಳಸಲು ಮತ್ತು ಬಹಿರಂಗಪಡಿಸಲು ನೀವು ಅದಕ್ಕೆ ಸಮ್ಮತಿಯನ್ನು ನೀಡುತ್ತೀರಿ. ಕೆಲವೊಂದು ಸನ್ನಿವೇಶಗಳಲ್ಲಿ, ನಾವು ನಿಮಗೆ ಪ್ರತ್ಯೇಕ ಸೂಚನೆಯನ್ನು ಒದಗಿಸುತ್ತೇವೆ ಮತ್ತು ಗೌಪ್ಯತೆ ಹೇಳಿಕೆಯಲ್ಲಿ ಉಲ್ಲೇಖಿಸಿರುವಂತೆ ನಿಮ್ಮ ಸಮ್ಮತಿಯನ್ನು ವಿನಂತಿಸುತ್ತೇವೆ.
ನಿಮ್ಮ ವಿಷಯ
2. ನಿಮ್ಮ ವಿಷಯ. ನಮ್ಮ ಹೆಚ್ಚಿನ ಸೇವೆಗಳು ನಿಮ್ಮ ವಿಷಯವನ್ನು ರಚಿಸಲು, ಸಂಗ್ರಹಿಸಲು ಅಥವಾ ಹಂಚಲು ಅಥವಾ ಬೇರೆಯವರಿಂದ ಸಾಮಗ್ರಿಯನ್ನು ಸ್ವೀಕರಿಸಲು ನಿಮಗೆ ಅನುಮತಿಸುತ್ತವೆ. ನಿಮ್ಮ ವಿಷಯದ ಮಾಲೀಕತ್ವವನ್ನು ನಾವು ಕ್ಲೇಮು ಮಾಡುವುದಿಲ್ಲ. ನಿಮ್ಮ ವಿಷಯವು ನಿಮ್ಮದಾಗಿಯೇ ಇರುತ್ತದೆ ಮತ್ತು ಅದಕ್ಕೆ ನೀವೇ ಜವಾಬ್ದಾರರಾಗಿರುತ್ತೀರಿ.
- a. ನೀವು ನಿಮ್ಮ ವಿಷಯವನ್ನು ಬೇರೆ ಜನರೊಂದಿಗೆ ಹಂಚಿಕೊಳ್ಳುವಾಗ, ಅವರು ನಿಮಗೆ ಪರಿಹಾರ ನೀಡದೆಯೇ ನಿಮ್ಮ ವಿಷಯವನ್ನು ಸೇವೆಗಳಲ್ಲಿ ನಿಮ್ಮ ವಿಷಯವನ್ನು ನೀವು ಲಭ್ಯಗೊಳಿಸಿದ ಉದ್ದೇಶಕ್ಕಾಗಿ ವಿಶ್ವಾದ್ಯಂತವಾಗಿ ಬಳಸಬಹುದು, ಉಳಿಸಬಹುದು, ರೆಕಾರ್ಡ್ ಮಾಡಬಹುದು, ಮರು ಉತ್ಪಾದಿಸಬಹುದು, ಪ್ರಸಾರ ಮಾಡಬಹುದು, ಪ್ರಸಾರಣೆ ಮಾಡಬಹುದು, ಹಂಚಿಕೊಳ್ಳಬಹುದು ಮತ್ತು ಪ್ರದರ್ಶಿಸಬಹುದು ಎಂಬುದನ್ನು ನೀವು ಅರ್ಥೈಸಿಕೊಳ್ಳುತ್ತೀರಿ. ಬೇರೆಯವರಿಗೆ ಆ ಸಾಮರ್ಥ್ಯ ದೊರೆಯುವುದು ನಿಮಗೆ ಇಷ್ಟವಿಲ್ಲವೆಂದಾದರೆ, ನಿಮ್ಮ ವಿಷಯವನ್ನು ಹಂಚಿಕೊಳ್ಳಲು ಸೇವೆಗಳನ್ನು ಬಳಸಬೇಡಿ. ಈ ನಿಯಮಗಳ ಅವಧಿಯಲ್ಲಿ ಸೇವೆಗಳಲ್ಲಿ ಅಥವಾ ಅದರ ಮೂಲಕ ಅಪ್ಲೋಡ್ ಮಾಡಿದ, ಸಂಗ್ರಹಣೆ ಮಾಡಿದ, ಅಥವಾ ಹಂಚಿದ ನಿಮ್ಮ ವಿಷಯಕ್ಕೆ ಅಗತ್ಯವಿರುವ ಎಲ್ಲ ಹಕ್ಕುಗಳನ್ನು ನೀವು ಹೊಂದಿದ್ದೀರಿ (ಮತ್ತು ಹೊಂದುವಿರಿ) ಎಂಬುದನ್ನು ಹಾಗೂ ನಿಮ್ಮ ವಿಷಯದ ಸಂಗ್ರಹ, ಬಳಕೆ, ಮತ್ತು ಉಳಿಸಿಕೊಳ್ಳುವಿಕೆಯು ಯಾವುದೇ ಕಾನೂನು ಅಥವಾ ಬೇರೆಯವರ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂಬುದನ್ನು ನೀವು ಪ್ರತಿನಿಧಿಸುತ್ತೀರಿ ಮತ್ತು ಪ್ರಮಾಣೀಕರಿಸುತ್ತೀರಿ. Microsoft ನಿಮ್ಮ ವಿಷಯಕ್ಕಾಗಿ ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ, ನಿಯಂತ್ರಿಸುವುದಿಲ್ಲ, ದೃಢೀಕರಿಸುವುದಿಲ್ಲ, ಪಾವತಿಸುವುದಿಲ್ಲ, ಬೆಂಬಲಿಸುವುದಿಲ್ಲ ಅಥವಾ ಬೇರಾವುದನ್ನೂ ವಹಿಸಿಕೊಳ್ಳುವುದಿಲ್ಲ ಮತ್ತು ನಿಮ್ಮ ವಿಷಯಕ್ಕೆ ಅಥವಾ ಸೇವೆಗಳನ್ನು ಬಳಸಿ ಬೇರೆಯವರು ಅಪ್ಲೋಡ್ ಮಾಡುವ, ಸಂಗ್ರಹಿಸುವ ಅಥವಾ ಹಂಚುವ ಸಾಮಗ್ರಿಗೆ ಅದನ್ನು ಜವಾಬ್ದಾರವಾಗಿಸುವಂತಿಲ್ಲ.
- b. ನೀವು ಮತ್ತು ಇತರರಿಗೆ ಸೇವೆಗಳನ್ನು ಒದಗಿಸಲು ಅಗತ್ಯವಿರುವ ಮಟ್ಟಿಗೆ, ನಿಮ್ಮನ್ನು ಮತ್ತು ಸೇವೆಗಳನ್ನು ರಕ್ಷಿಸಲು, ಮತ್ತು Microsoft ಉತ್ಪನ್ನಗಳು ಹಾಗೂ ಸೇವೆಗಳನ್ನು ಸುಧಾರಿಸಲು, ನೀವು Microsoft ಗೆ ನಿಮ್ಮ ವಿಷಯದ ಬಳಕೆಗೆ, ಉದಾಹರಣೆಗೆ, ಸೇವೆಗಳಲ್ಲಿ ಸಂವಹನ ಪರಿಕರಗಳ ಮೂಲಕ ನಿಮ್ಮ ವಿಷಯದ ನಕಲುಗಳನ್ನು ಮಾಡಲು, ಉಳಿಸಿಕೊಳ್ಳಲು, ವರ್ಗಾಯಿಸಲು, ರೀಫಾರ್ಮ್ಯಾಟ್ ಮಾಡಲು, ಪ್ರದರ್ಶಿಸಲು, ಮತ್ತು ವಿತರಿಸಲು ಜಾಗತಿಕವಾದ ಮತ್ತು ರಾಯಧನ-ರಹಿತವಾದ ನಿಮ್ಮ ಬೌದ್ಧಿಕ ಆಸ್ತಿಯ ಪರವಾನಗಿಯನ್ನು ನೀಡುತ್ತೀರಿ. ನೀವು ನಿಮ್ಮ ವಿಷಯವನ್ನು ಆನ್ಲೈನ್ನಲ್ಲಿ ಯಾವುದೇ ನಿರ್ಬಂಧಗಳಿಲ್ಲದೆ ವಿಸ್ತಾರವಾಗಿ ಲಭ್ಯವಿರುವ ಸೇವೆಗಳ ಪ್ರದೇಶದಲ್ಲಿ ಪ್ರಕಟಿಸಿದರೆ, ಸೇವೆಗೆ ಪ್ರಚಾರ ನೀಡುವ ನಿರೂಪಣೆಗಳು ಅಥವಾ ಸಾಮಗ್ರಿಗಳಲ್ಲಿ ನಿಮ್ಮ ವಿಷಯವು ಕಾಣಿಸಿಕೊಳ್ಳಬಹುದು. ಕೆಲವು ಸೇವೆಗಳು ಜಾಹೀರಾತಿನಿಂದ ಬೆಂಬಲಿತವಾಗಿವೆ. Microsoft ಜಾಹೀರಾತನ್ನು ಹೇಗೆ ವೈಯಕ್ತೀಕರಿಸುತ್ತದೆ ಎಂಬ ಬಗೆಗಿನ ನಿಯಂತ್ರಣಗಳು https://choice.live.com ಎಂಬಲ್ಲಿ ಲಭ್ಯ ಇವೆ. ನಿಮಗೆ ಜಾಹೀರಾತನ್ನು ಗುರಿಯಾಗಿಸಲು ನಾವು ಇಮೇಲ್, ಚಾಟ್, ವೀಡಿಯೊ ಕರೆಗಳು ಅಥವಾ ಧ್ವನಿ ಮೇಲ್ನಲ್ಲಿ ನೀವು ಏನು ಹೇಳುತ್ತೀರಿ ಎಂಬುದನ್ನು ಅಥವಾ ನಿಮ್ಮ ದಾಖಲೆಗಳು, ಫೋಟೋಗಳು ಅಥವಾ ಬೇರೆ ವೈಯಕ್ತಿಕ ಫೈಲ್ಗಳನ್ನು ಬಳಸುವುದಿಲ್ಲ. ಗೌಪ್ಯತೆ ಹೇಳಿಕೆಯಲ್ಲಿ ನಮ್ಮ ಜಾಹೀರಾತು ನೀತಿಗಳನ್ನು ಸಮಗ್ರವಾಗಿ ವಿವರಿಸಲಾಗಿದೆ.
- c. ನಿಮ್ಮ Microsoft ಖಾತೆಯೊಂದಿಗೆ ದೃಢೀಕರಿಸಿದಾಗ, Microsoft ಗೌಪ್ಯತೆ ಡ್ಯಾಶ್ಬೋರ್ಡ್ (https://account.microsoft.com/privacy) ಅಥವಾ ಉತ್ಪನ್ನ ಬಳಕೆದಾರ ಇಂಟರ್ಫೇಸ್ ಮೂಲಕ ನಿಮ್ಮ ರಫ್ತು ಮಾಡಬಹುದಾದ ಡೇಟಾವನ್ನು ಪ್ರವೇಶಿಸುವ ಸಾಮರ್ಥ್ಯವನ್ನು Microsoft ನಿಮಗೆ ಒದಗಿಸುತ್ತದೆ. ಈ ರಫ್ತು ಮಾಡಬಹುದಾದ ಡೇಟಾವನ್ನು ಮೂರನೇ-ವ್ಯಕ್ತಿಯ ಪೂರೈಕೆದಾರರ ಸೇವೆಗಳಿಗೆ ಬದಲಾಯಿಸಲು ಬಳಸಬಹುದು. ಸೇವೆಗಳ ಸುರಕ್ಷತೆ ಅಥವಾ Microsoft ನ ಬೌದ್ಧಿಕ ಆಸ್ತಿಗೆ ಧಕ್ಕೆಯುಂಟುಮಾಡುವ ಡೇಟಾದ ರಫ್ತನ್ನು ನಿರ್ಬಂಧಿಸುವ ಹಕ್ಕನ್ನು Microsoft ಕಾಯ್ದಿರಿಸಿದೆ. ಈ ಕಾರ್ಯವಿಧಾನಗಳ ಮೂಲಕ ನಿಮ್ಮ ಡೇಟಾವನ್ನು ರಫ್ತು ಮಾಡಲು ನಿಮಗೆ ಸಾಧ್ಯವಾಗದಿದ್ದರೆ, ನಮ್ಮನ್ನು ಹೇಗೆ ಸಂಪರ್ಕಿಸುವುದು ವಿಭಾಗದಲ್ಲಿರುವ (https://privacy.microsoft.com/privacystatement#mainhowtocontactusmodule) ವಿಳಾಸದಲ್ಲಿ ಅಥವಾ ನಮ್ಮ ವೆಬ್ ಫಾರ್ಮ್ (https://go.microsoft.com/fwlink/?linkid=2126612) ಬಳಸಿಕೊಂಡು Microsoft ಅನ್ನು ಸಂಪರ್ಕಿಸಿ.
ನೀತಿ ಸಂಹಿತೆ
3. ನೀತಿ ಸಂಹಿತೆ. ಸೇವೆಗಳನ್ನು ಬಳಸುವಾಗ ನಿಮ್ಮ ನಡವಳಿಕೆ ಮತ್ತು ವಿಷಯಕ್ಕೆ ನೀವು ಜವಾಬ್ದಾರರಾಗಿರುತ್ತೀರಿ.
- a. ಈ ನಿಯಮಗಳಿಗೆ ಸಮ್ಮತಿಸುವ ಮೂಲಕ, ನೀವು ಸೇವೆಗಳನ್ನು ಬಳಸುವಾಗ, ನಿರ್ಧಾರಗಳನ್ನು ತೆಗೆದುಕೊಳ್ಳುವ ಅಥವಾ ಕ್ರಮಗಳನ್ನು ತೆಗೆದುಕೊಳ್ಳುವ AI ಸೇವೆಗಳನ್ನು ಒಳಗೊಂಡಂತೆ, ಸ್ವಾಯತ್ತವಾಗಿ ಅಥವಾ ವಿವಿಧ ಹಂತದ ಮಾನವ ಹಸ್ತಕ್ಷೇಪದೊಂದಿಗೆ, ನೀವು ಈ ನಿಯಮಗಳನ್ನು ಅನುಸರಿಸುತ್ತೀರಿ ಎಂದು ಒಪ್ಪುತ್ತೀರಿ:
- i. ಕಾನೂನುಬಾಹಿರವಾಗಿ ಏನನ್ನೂ ಮಾಡಬೇಡಿ ಅಥವಾ ಕಾನೂನುಬಾಹಿರವಾದ ವಿಷಯವನ್ನು ರಚಿಸಲು ಅಥವಾ ಹಂಚಿಕೊಳ್ಳಲು ಪ್ರಯತ್ನಿಸಬೇಡಿ.
- ii. ಮಕ್ಕಳನ್ನು ಪೀಡಿಸುವ, ತೊಂದರೆಗೀಡುಮಾಡುವ, ಅಥವಾ ಬೆದರಿಕೆಯೊಡ್ಡುವ ಯಾವುದೇ ಚಟುವಟಿಕೆಯಲ್ಲಿ ತೊಡಗುವುದಿಲ್ಲ.
- iii. ಸ್ಪ್ಯಾಮ್ ಕಳುಹಿಸಬೇಡಿ ಅಥವಾ ಫಿಶಿಂಗ್ನಲ್ಲಿ ತೊಡಗಬೇಡಿ ಅಥವಾ ಮಾಲ್ವೇರ್ ಅನ್ನು ಉತ್ಪಾದಿಸಲು ಅಥವಾ ವಿತರಿಸಲು ಪ್ರಯತ್ನಿಸಬೇಡಿ. ಸ್ಪ್ಯಾಮ್ ಎಂಬುದು ಅನಗತ್ಯ ಅಥವಾ ಅನಪೇಕ್ಷಿತ ಗುಂಪು ಇಮೇಲ್, ಪೋಸ್ಟಿಂಗ್ಗಳು, ಅಥವಾ ಸಂಪರ್ಕ ಕೋರಿಕೆಗಳು, SMS (ಪಠ್ಯ ಸಂದೇಶಗಳು), ಅಥವಾ ಅಂತಹುದೇ ಎಲೆಕ್ಟ್ರಾನಿಕ್ ಸಂವಹನಗಳಾಗಿರಬಹುದು. ಫಿಶಿಂಗ್ ಎಂಬುದು ಪಾಸ್ವರ್ಡ್ಗಳು, ಹುಟ್ಟಿದ ದಿನಾಂಕಗಳು, ಸಾಮಾಜಿಕ ಭದ್ರತಾ ಸಂಖ್ಯೆಗಳು, ಪಾಸ್ಪೋರ್ಟ್ ಸಂಖ್ಯೆಗಳು, ಕ್ರೆಡಿಟ್ ಕಾರ್ಡ್ ಮಾಹಿತಿ, ಹಣಕಾಸು ಮಾಹಿತಿ ಅಥವಾ ಇತರ ಸೂಕ್ಷ್ಮ ಮಾಹಿತಿಯಂತಹ ವೈಯಕ್ತಿಕ ಅಥವಾ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸಲು ಇಮೇಲ್ಗಳನ್ನು ಅಥವಾ ಇತರ ಎಲೆಕ್ಟ್ರಾನಿಕ್ ಸಂವಹನಗಳನ್ನು ಸ್ವೀಕರಿಸುವವರನ್ನು ಮೋಸದಿಂದ ಅಥವಾ ಕಾನೂನುಬಾಹಿರವಾಗಿ ಪ್ರೇರೇಪಿಸುವುದು, ಅಥವಾ ಖಾತೆಗಳು ಅಥವಾ ದಾಖಲೆಗಳಿಗೆ ಪ್ರವೇಶ ಪಡೆಯುವುದು, ದಾಖಲೆಗಳು ಅಥವಾ ಇತರ ಸೂಕ್ಷ್ಮ ಮಾಹಿತಿಗಳು, ಪಾವತಿ ಮತ್ತು/ಅಥವಾ ಆರ್ಥಿಕ ಲಾಭದ ಹೊರಹರಿವು ಆಗಿದೆ. ದುರುದ್ದೇಶಪೂರಿತ ಕಾರ್ಯಗತಗೊಳಿಸಬಹುದಾದ ವಸ್ತುಗಳನ್ನು ವಿತರಿಸುವುದು, ಸೇವಾ ದಾಳಿಗಳ ನಿರಾಕರಣೆ ಸಂಘಟಿಸುವುದು ಅಥವಾ ಕಮಾಂಡ್ ಮತ್ತು ಕಂಟ್ರೋಲ್ ಸರ್ವರ್ಗಳನ್ನು ನಿರ್ವಹಿಸುವಂತಹ ತಾಂತ್ರಿಕ ಹಾನಿಯನ್ನು ಉಂಟುಮಾಡಲು ವಿನ್ಯಾಸಗೊಳಿಸಲಾದ ಯಾವುದೇ ಚಟುವಟಿಕೆಯನ್ನು ಮಾಲ್ವೇರ್ ಒಳಗೊಂಡಿದೆ.
- iv. ಅನುಚಿತ ವಿಷಯ ಅಥವಾ ಸಾಮಗ್ರಿಯನ್ನು (ಉದಾಹರಣೆಗೆ, ನಗ್ನತೆ, ಮೃಗೀಯತೆ, ಅಶ್ಲೀಲತೆ, ಅವಮಾನಕರವಾದ ಭಾಷೆ, ಗ್ರಾಫಿಕ್ ಹಿಂಸೆ, ಸ್ವಯಂ-ಹಾನಿ, ಅಥವಾ ಕ್ರಿಮಿನಲ್ ಚಟುವಟಿಕೆಯನ್ನೂ ಒಳಗೊಂಡಂತೆ) ಅಥವಾ ಸ್ಥಳೀಯ ಕಾನೂನುಗಳು ಅಥವಾ ನಿಬಂಧನೆಗಳನ್ನು ಪಾಲಿಸದ ನಿಮ್ಮ ವಿಷಯ ಅಥವಾ ಸಾಮಗ್ರಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಅಥವಾ ಜನರೇಟ್ ಮಾಡಲು ಅಥವಾ ಹಂಚಲು ಸೇವೆಗಳನ್ನು ಬಳಸಬೇಡಿ.
- v. ವಂಚನಾತ್ಮಕವಾಗಿರುವ, ಸುಳ್ಳು ಅಥವಾ ತಪ್ಪುದಾರಿಗೆಳಸುವ (ಉದಾಹರಣೆಗೆ ಸುಳ್ಳು ಸೋಗಿನಲ್ಲಿ ಹಣವನ್ನು ಕೇಳುವುದು, ಬೇರೆಯವರಂತೆ ಸೋಗು ಹಾಕುವುದು, ನಕಲಿ ಖಾತೆಗಳನ್ನು ರಚಿಸುವುದು, ಅಧೀಕೃತವಲ್ಲದ ಚಟುವಟಿಕೆಯನ್ನು ಆಟೊಮೇಟ್ ಮಾಡುವುದು, ಉದ್ದೇಶಪೂರ್ವಕವಾಗಿ ವಂಚನಾತ್ಮಕವಾಗಿರುವ ವಿಷಯವನ್ನು ಜನರೇಟ್ ಅಥವಾ ಹಂಚುವುದು, ಪ್ಲೇ ಕೌಂಟ್ ಅನ್ನು ಹೆಚ್ಚಿಸಲು, ಅಥವಾ ರ್ಯಾಂಕಿಂಗ್ಗಳು, ರೇಟಿಂಗ್ಗಳು, ಅಥವಾ ಕಮೆಂಟ್ಗಳ ಮೇಲೆ ಪ್ರಭಾವ ಬೀರಲು ಸೇವೆಗಳೊಂದಿಗೆ ಕೈಚಳಕ ಮಾಡುವುದು) ಅಥವಾ ಹಾನಿಕಾರಕವಾದ ಅಥವಾ ಮಾನಹಾನಿಕರ ಚಟುವಟಿಕೆಯಲ್ಲಿ ತೊಡಗಬೇಡಿ.
- vi. ಈ ಸೇವೆಗಳನ್ನು ಪ್ರವೇಶಿಸುವಿಕೆ, ಬಳಸುವಿಕೆ, ಅಥವಾ ಲಭ್ಯತೆಯ ಮೇಲಿನ ಯಾವುದೇ ನಿರ್ಬಂಧನೆಗಳಿಂದ ತಪ್ಪಿಸಿಕೊಳ್ಳಬೇಡಿ (ಉದಾಹರಣೆಗೆ AI ಸಿಸ್ಟಂ ಒಂದನ್ನು "ಜೇಲ್ಬ್ರೇಕ್" ಮಾಡಲು ಅಥವಾ ಅನುಮತಿಸಲಾಗದ ಸ್ಕ್ರೇಪಿಂಗ್ ಮಾಡಲು ಪ್ರಯತ್ನಿಸುವುದು).
- vii. ನಿಮಗೆ, ಈ ಸೇವೆಗಳಿಗೆ, ಅಥವಾ ಇತರರಿಗೆ ಅಪಾಯಕರವಾಗುವಂಥ ಚಟುವಟಿಕೆಯೊಂದರಲ್ಲಿ ತೊಡಗಬೇಡಿ (ಉದಾಹರಣೆಗೆ ವೈರಸ್ಗಳನ್ನು ಪ್ರಸರಿಸುವುದು, ಹಿಂಬಾಲಿಸುವುದು, ಇತರರಿಗೆ ಕಿರಿಕಿರಿಯನ್ನುಂಟುಮಾಡುವ, ಪೀಡಿಸುವ ಅಥವಾ ಬೆದರಿಸುವ ವಿಷಯವನ್ನು ಜನರೇಟ್ ಮಾಡಲು ಅಥವಾ ಹಂಚಲು ಪ್ರಯತ್ನಿಸುವುದು, ಉಗ್ರಗಾಮಿ ಭಯೋತ್ಪಾದಕ ಅಥವಾ ಹಿಂಸಾತ್ಮಕ ವಿಷಯವನ್ನು ಪೋಸ್ಟ್ ಮಾಡುವುದು, ದ್ವೇಷ ಭಾಷಣವನ್ನು ಸಂವಹನ ಮಾಡುವುದು, ಅಥವಾ ಇತರರ ವಿರುದ್ಧ ಹಿಂಸೆಯನ್ನು ಪ್ರತಿಪಾದಿಸುವುದು).
- viii. ಇತರರ ಹಕ್ಕುಗಳನ್ನು ಉಲ್ಲಂಘಿಸಬೇಡಿ ಅಥವಾ ಅತೀಕ್ರಮಿಸಬೇಡಿ (ಉದಾಹರಣೆಗಾಗಿ, ಈ ಯಾವುದೇ ಸೇವೆಗಳನ್ನು ಬಳಸಿಕೊಂಡು ಕೃತಿಸ್ವಾಮ್ಯದ ಸಂಗೀತ ಅಥವಾ ಇತರ ಕೃತಿಸ್ವಾಮ್ಯದ ಸಾಮಗ್ರಿಯನ್ನು ಅನಧೀಕೃತವಾಗಿ ಹಂಚುವುದು, Bing ಮ್ಯಾಪ್ಗಳನ್ನು ಮರುಮಾರಾಟ ಮಾಡುವುದು ಅಥವಾ ಇತರ ರೀತಿಯಲ್ಲಿ ವಿತರಣೆ ಮಾಡುವುದು, ಅಥವಾ ಓರ್ವ ವ್ಯಕ್ತಿಯ ಬಯೊಮೆಟ್ರಿಕ್ ಐಡೆಂಟಿಫೈಯರ್ಗಳು/ಮಾಹಿತಿಯನ್ನು ಸಂಸ್ಕರಿಸುವುದಕ್ಕಾಗಿ ಅಥವಾ ಬೇರಾವುದೇ ಉದ್ದೇಶಕ್ಕಾಗಿ ಇತರರ ಸಮ್ಮತಿ ಇಲ್ಲದೇ ಅವರ ಫೋಟೊಗ್ರಾಫ್ಗಳು ಅಥವಾ ವೀಡಿಯೊ/ಆಡಿಯೋ ರಿಕಾರ್ಡಿಂಗ್ಗಳನ್ನು ತೆಗೆದುಕೊಳ್ಳುವುದು).
- ix. ಬೇರೆಯವರ ಗೌಪ್ಯತೆ ಅಥವಾ ಡೇಟಾ ಸುರಕ್ಷತೆಯ ಹಕ್ಕುಗಳನ್ನು ಉಲ್ಲಂಘಿಸುವ ಚಟುವಟಿಕೆಯಲ್ಲಿ ತೊಡಗುವುದಿಲ್ಲ.
- x. ಈ ನಿಯಮಗಳನ್ನು ಉಲ್ಲಂಘಿಸಲು ಬೇರೆಯವರಿಗೆ ಸಹಾಯ ಮಾಡುವುದಿಲ್ಲ.
- ನಮ್ಮ ನೀತಿಗಳು, ನಿಯಂತ್ರಣ ಮತ್ತು ಜಾರಿ ಪ್ರಕ್ರಿಯೆಗಳು ಹಾಗೂ ಸೇವಾ ನಿರ್ದಿಷ್ಟ ಷರತ್ತುಗಳ ಮೇಲಿನ ಹೆಚ್ಚಿನ ಮಾಹಿತಿಯು aka.ms/trustandsafety ನಲ್ಲಿ ಲಭ್ಯವಿದೆ.
ಸೇವೆಗಳು ಮತ್ತು ಬೆಂಬಲವನ್ನು ಬಳಸುವುದು
4. ಸೇವೆಗಳು ಮತ್ತು ಬೆಂಬಲವನ್ನು ಬಳಸುವುದು.
- a. Microsoft ಖಾತೆ. ಸೇವೆಗಳ ಹಲವಾರು ಭಾಗಗಳಿಗೆ ಪ್ರವೇಶ ಪಡೆಯಲು ನಿಮಗೆ Microsoft ಖಾತೆಯ ಅಗತ್ಯವಿರುತ್ತದೆ. Microsoft ಖಾತೆಯು ನಿಮಗೆ Microsoft ಮತ್ತು ಕೆಲವು Microsoft ಪಾಲುದಾರರು ಒದಗಿಸುವ ಉತ್ಪನ್ನಗಳು, ವೆಬ್ಸೈಟ್ಗಳು ಮತ್ತು ಸೇವೆಗಳಿಗೆ ಸೈನ್ ಇನ್ ಆಗಲು ಅವಕಾಶ ಮಾಡುತ್ತದೆ.
- i. ಖಾತೆ ರಚಿಸುವುದು. ನೀವು ಆನ್ಲೈನ್ನಲ್ಲಿ ಸೈನ್ ಅಪ್ ಮಾಡುವ ಮೂಲಕ Microsoft ಖಾತೆಯನ್ನು ರಚಿಸಬಹುದು. ನಿಮ್ಮ Microsoft ಖಾತೆಗಾಗಿ ಸೈನ್ ಅಪ್ ಮಾಡುವಾಗ ನೀವು ಯಾವುದೇ ತಪ್ಪು, ಅಸಮರ್ಪಕ ಅಥವಾ ದಾರಿತಪ್ಪಿಸುವ ಮಾಹಿತಿಯನ್ನು ಬಳಸದಿರಲು ಒಪ್ಪುತ್ತೀರಿ. ಕೆಲವು ಸಂದರ್ಭಗಳಲ್ಲಿ, ನಿಮ್ಮ ಇಂಟರ್ನೆಟ್ ಸೇವಾ ಪೂರೈಕೆದಾರರಂತಹಾ, ಮೂರನೇ ಪಕ್ಷವು, ನಿಮಗೊಂದು Microsoft ಖಾತೆಯನ್ನು ವಹಿಸಬಹುದಾಗಿದೆ. ನೀವು ಮೂರನೇ ಪಕ್ಷದಿಂದ ನಿಮ್ಮ Microsoft ಖಾತೆಯನ್ನು ಪಡೆದಿದ್ದರೆ, ನಿಮ್ಮ ಖಾತೆಯ ಮೇಲೆ ಮೂರನೇ ಪಕ್ಷಕ್ಕೆ, ನಿಮ್ಮ Microsoft ಖಾತೆಯನ್ನು ಪ್ರವೇಶಿಸುವ ಅಥವಾ ಅಳಿಸುವಂತಹಾ, ಹೆಚ್ಚುವರಿ ಹಕ್ಕುಗಳು ಇರಬಹುದಾಗಿದೆ. ಮೂರನೇ ಪಕ್ಷವು ನಿಮಗೆ ಒದಗಿಸುವ ಯಾವುದೇ ಹೆಚ್ಚುವರಿ ನಿಯಮಗಳ ಮೇಲೆ Microsoft ಗೆ ಯಾವುದೇ ಹೊಣೆಗಾರಿಕೆಗಳು ಇಲ್ಲದಿರುವುದರಿಂದ, ಈ ಹೆಚ್ಚುವರಿ ನಿಯಮಗಳನ್ನು ದಯವಿಟ್ಟು ಪರಿಶೀಲಿಸಿ. ನೀವು ನಿಮ್ಮ ವ್ಯವಹಾರ ಅಥವಾ ಉದ್ಯೋಗದಾತರಂತಹಾ, ಒಂದು ಸಂಸ್ಥೆಯ ಪರವಾಗಿ Microsoft ಖಾತೆ ರಚಿಸಿದರೆ, ಆ ಸಂಸ್ಥೆಯು ಈ ನಿಯಮಗಳಿಗೆ ಬದ್ಧವಾಗಿರುವಂತೆ ಮಾಡುವ ಶಾಸನಾತ್ಮಕ ಅಧಿಕಾರ ನಿಮಗಿದೆ ಎಂಬುದನ್ನು ನೀವು ಪ್ರತಿನಿಧಿಸುತ್ತೀರಿ. ನೀವು ನಿಮ್ಮ Microsoft ಖಾತೆಯ ರುಜುವಾತುಗಳನ್ನು ಬೇರೊಬ್ಬ ಬಳಕೆದಾರನಿಗೆ ಅಥವಾ ಸಂಸ್ಥೆಗೆ ವರ್ಗಾಯಿಸಲು ಸಾಧ್ಯವಿಲ್ಲ. ನಿಮ್ಮ ಖಾತೆಯನ್ನು ರಕ್ಷಿಸಲು, ನಿಮ್ಮ ಖಾತೆಯ ವಿವರಗಳು ಮತ್ತು ಪಾಸ್ವರ್ಡ್ ಅನ್ನು ಗೌಪ್ಯವಾಗಿರಿಸಿ. ನಿಮ್ಮ Microsoft ಖಾತೆಯಲ್ಲಿ ಸಂಭವಿಸುವ ಎಲ್ಲಾ ಚಟುವಟಿಕೆಗಳಿಗೆ ನೀವು ಜವಾಬ್ದಾರರು.
- ii. ಖಾತೆಯ ಬಳಕೆ. ನೀವು Microsoft ಖಾತೆಯನ್ನು ಚಾಲ್ತಿಯಲ್ಲಿರಿಸಬೇಕಿದ್ದರೆ ಅದನ್ನು ಬಳಸುತ್ತಿರಬೇಕು. https://go.microsoft.com/fwlink/p/?linkid=2086738 ನ Microsoft ಖಾತೆ ಚಟುವಟಿಕೆ ನೀತಿಯಲ್ಲಿ ದೀರ್ಘಾವಧಿಯನ್ನು ಒದಗಿಸದ ಅಥವಾ ಸೇವೆಗಳ ಪಾವತಿಸಿದ ಭಾಗದ ಕೊಡುಗೆಯಾಗಿರದ ಹೊರತು ನೀವು ನಿಮ್ಮ Microsoft ಖಾತೆ, ಮತ್ತು ಸಂಬಂಧಿತ ಸೇವೆಗಳನ್ನು (ಬೇರೆ ರೀತಿಯಲ್ಲಿ ನಿರ್ದಿಷ್ಟಪಡಿಸದ ಹೊರತು) ಸಕ್ರಿಯವಾಗಿರಿಸಲು, ಕನಿಷ್ಠ ಎರಡು-ವರ್ಷಗಳ ಅವಧಿಯಲ್ಲಿ ಒಮ್ಮೆಯಾದರೂ ಸೈನ್ ಇನ್ ಆಗಬೇಕು ಎಂಬುದು ಇದರರ್ಥವಾಗಿದೆ. ಈ ಸಮಯದಲ್ಲಿ ನೀವು ಸೈನ್ ಇನ್ ಆಗದಿದ್ದರೆ, ನಿಮ್ಮ Microsoft ಖಾತೆಯು ನಿಷ್ಕ್ರಿಯವಾಗಿದೆ ಎಂದು ನಾವು ಭಾವಿಸುತ್ತೇವೆ ಮತ್ತು ಅದನ್ನು ನಿಮಗೆ ಮುಚ್ಚುತ್ತೇವೆ. ಮುಚ್ಚಿದ Microsoft ಖಾತೆಯ ಪರಿಣಾಮಗಳಿಗಾಗಿ ದಯವಿಟ್ಟು ವಿಭಾಗ 4.a.iv.2 ನೋಡಿ. ನೀವು ನಿಮ್ಮ Outlook.com ಇನ್ಬಾಕ್ಸ್ ಮತ್ತು ನಿಮ್ಮ OneDrive ಗೆ (ಪ್ರತ್ಯೇಕವಾಗಿ) ಒಂದು ವರ್ಷದ ಅವಧಿಯಲ್ಲಿ ಕನಿಷ್ಠ ಒಂದು ಬಾರಿ ಸೈನ್ ಇನ್ ಆಗಬೇಕು, ಇಲ್ಲವಾದರೆ ನಾವು ನಿಮ್ಮ Outlook.com ಇನ್ಬಾಕ್ಸ್ ಮತ್ತು ನಿಮ್ಮ OneDrive ಅನ್ನು ನಿಮಗೆ ಮುಚ್ಚುತ್ತೇವೆ. ಒಂದು ವೇಳೆ ನಿಮ್ಮ Microsoft ಖಾತೆಯು ಮೂರನೇ ಪಕ್ಷದವಾರು ವಂಚನೆಯಿಂದ (ಉದಾಹರಣೆಗೆ, ಖಾತೆಯನ್ನು ರಾಜಿ ಮಾಡಿಕೊಳ್ಳುವಿಕೆಯ ಪರಿಣಾಮವಾಗಿ) ಬಳಸಿಕೊಳ್ಳುವ ಅಪಾಯವನ್ನು ಹೊಂದಿದೆಯೆಂದು ನಾವು ಸಮಂಜಸವಾಗಿ ಅನುಮಾನಿಸಿದರೆ, ನೀವು ಮಾಲೀಕತ್ವವನ್ನು ಮರುಪಡೆದುಕೊಳ್ಳುವವರೆಗೆ Microsoft ನಿಮ್ಮ ಖಾತೆಯನ್ನು ಅಮಾನತುಗೊಳಿಸಬಹುದು. ದುರ್ಬಳಕೆಯ ಸ್ವರೂಪವನ್ನು ಆಧರಿಸಿ, ನಾವು ನಿಮ್ಮ ಕೆಲವೊಂದು ಅಥವಾ ಎಲ್ಲಾ ವಿಷಯಕ್ಕೆ ಪ್ರವೇಶವನ್ನು ನಿಷ್ಕ್ರಿಯಗೊಳಿಸಬೇಕಾದ ಅಗತ್ಯ ಎದುರಾಗಬಹುದು. ನಿಮ್ಮ Microsoft ಖಾತೆಗೆ ಪ್ರವೇಶಿಸಲು ನಿಮಗೆ ತೊಂದರೆಯಿದ್ದರೆ, ದಯವಿಟ್ಟು ಈ ವೆಬ್ಸೈಟ್ಗೆ ಭೇಟಿ ನೀಡಿ: https://go.microsoft.com/fwlink/?LinkId=238656.
- iii. ಮಕ್ಕಳು ಮತ್ತು ಖಾತೆಗಳು. Microsoft ಖಾತೆಯನ್ನು ರಚಿಸುವ ಮೂಲಕ ಅಥವಾ ಸೇವೆಗಳನ್ನು ಬಳಸುವ ಮೂಲಕ, ನೀವು ಈ ನಿಯಮಗಳಿಗೆ ಬದ್ಧರಾಗಿರಲು ಅಂಗೀಕರಿಸುತ್ತೀರಿ ಮತ್ತು ಒಪ್ಪುತ್ತೀರಿ ಮತ್ತು ನೀವು ವಾಸಿಸುವಲ್ಲಿ "ಪ್ರೌಢವಯಸ್ಕ" ಅಥವಾ "ಕಾನೂನಾತ್ಮಕ ಹೊಣೆಗಾರಿಕೆ" ವಯಸ್ಸನ್ನು ತಲುಪಿದ್ದೀರಿ ಅಥವಾ ನಿಮ್ಮ ಪರವಾಗಿ ನಿಮ್ಮ ಪೋಷಕರು ಅಥವಾ ಕಾನೂನು ಪಾಲಕರು ಈ ನಿಯಮಗಳಿಗೆ ಬದ್ದರಾಗಿರಲು ಒಪ್ಪುತ್ತಾರೆ ಎಂದು ಪ್ರತಿನಿಧಿಸುತ್ತೀರಿ. ನೀವು ವಾಸಿಸುವಲ್ಲಿ "ಪ್ರಾಪ್ತ ವಯಸ್ಸನ್ನು" ತಲುಪಿದ್ದೀರೇ ಅಥವಾ "ಕಾನೂನಾತ್ಮಕ ಹೊಣೆಗಾರಿಕೆಯನ್ನು" ಪಡೆದಿದ್ದೀರೇ ಎಂಬುದು ನಿಮಗೆ ತಿಳಿದಿಲ್ಲದಿದ್ದರೆ, ಅಥವಾ ಈ ವಿಭಾಗವು ಅರ್ಥವಾಗದಿದ್ದರೆ, ದಯವಿಟ್ಟು ನಿಮ್ಮ ಹೆತ್ತವರು ಅಥವಾ ಕಾನೂನಾತ್ಮಕ ಪೋಷಕರನ್ನು ಸಹಾಯಕ್ಕಾಗಿ ಸಂಪರ್ಕಿಸಿ. ನೀವು ಅಪ್ರಾಪ್ತರ ಹೆತ್ತವರು ಅಥವಾ ಕಾನೂನಾತ್ಮಕ ಪೋಷಕರು ಆಗಿದ್ದಲ್ಲಿ, ನೀವು ಮತ್ತು ಅಪ್ರಾಪ್ತರು ಈ ನಿಯಮಗಳನ್ನು ಸ್ವೀಕರಿಸುತ್ತೀರಿ ಮತ್ತು ಅದಕ್ಕೆ ಬದ್ಧವಾಗಿರಲು ಸಮ್ಮತಿಸುತ್ತೀರಿ ಹಾಗೂ ಅಪ್ರಾಪ್ತರ ಖಾತೆಯು ಪ್ರಸ್ತುತವಾಗಿ ತೆರೆದಿರಲಿ ಅಥವಾ ಮುಂದೆ ರಚಿಸುವುದಿರಲಿ, ಖರೀದಿಗಳೂ ಸೇರಿದಂತೆ, Microsoft ಖಾತೆ ಅಥವಾ ಸೇವೆಗಳ ಎಲ್ಲಾ ಪ್ರಕಾರದ ಬಳಕೆಗೆ ನೀವು ಜವಾಬ್ದಾರರಾಗಿರುತ್ತೀರಿ.
- iv. ನಿಮ್ಮ ಖಾತೆಯನ್ನು ಮುಚ್ಚುವುದು.
- 1. ನೀವು ಯಾವುದೇ ಸಮಯದಲ್ಲಿ ಯಾವುದೇ ಕಾರಣಕ್ಕೆ ನಿಮ್ಮ Microsoft ಖಾತೆಯನ್ನು ಮುಚ್ಚಬಹುದು ಅಥವಾ ನಿರ್ದಿಷ್ಟ ಸೇವೆಗಳನ್ನು ರದ್ದುಪಡಿಸಬಹುದು. ನಿಮ್ಮ Microsoft ಖಾತೆಯನ್ನು ಮುಚ್ಚಬೇಕಿದ್ದರೆ, ದಯವಿಟ್ಟು https://go.microsoft.com/fwlink/p/?linkid=618278 ಎಂಬಲ್ಲಿಗೆ ಭೇಟಿ ನೀಡಿ. ನಿಮ್ಮ Microsoft ಖಾತೆಯನ್ನು ಮುಚ್ಚಲು ನೀವು ನಮ್ಮನ್ನು ಕೇಳಿಕೊಂಡಾಗ, ನೀವೇನಾದರೂ ನಿಮ್ಮ ಮನಸ್ಸು ಬದಲಾಯಿಸುವುದಾದರೆ ಅದನ್ನು 30 ಅಥವಾ 60 ದಿನಗಳವರೆಗೆ ಅಮಾನತುಗೊಳಿಸಿದ ಸ್ಥಿತಿಯಲ್ಲಿ ಇರಿಸಲು ನೀವು ಆರಿಸಬಹುದು. 30- ಅಥವಾ 60-ದಿನಗಳ ಅವಧಿಯ ಬಳಿಕ, ನಿಮ್ಮ Microsoft ಖಾತೆಯನ್ನು ಮುಚ್ಚಲಾಗುತ್ತದೆ. ನಿಮ್ಮ Microsoft ಖಾತೆಯನ್ನು ಮುಚ್ಚಿದಾಗ ಏನಾಗುತ್ತದೆ ಎಂಬ ಬಗ್ಗೆ ವಿವರಣೆಗಾಗಿ ದಯವಿಟ್ಟು ಕೆಳಗಿರುವ ವಿಭಾಗ 4.a.iv.2 ನೋಡಿ. ಅಮಾನತು ಅವಧಿಯಲ್ಲಿ ಪುನಃ ಲಾಗ್ ಇನ್ ಆದರೆ ನಿಮ್ಮ Microsoft ಖಾತೆಯು ಪುನಃ ಸಕ್ರಿಯವಾಗುತ್ತದೆ.
- 2. ನಿಮ್ಮ Microsoft ಖಾತೆಯನ್ನು ಮುಚ್ಚಿದರೆ (ನಿಮ್ಮಿಂದ ಅಥವಾ ನಮ್ಮಿಂದ), ಕೆಲವೊಂದು ಸಂಗತಿಗಳು ಸಂಭವಿಸುತ್ತವೆ. ಮೊದಲನೆಯದಾಗಿ, ಸೇವೆಗಳನ್ನು ಪ್ರವೇಶಿಸಲು Microsoft ಖಾತೆಯನ್ನು ಬಳಸಲು ಇರುವ ನಿಮ್ಮ ಹಕ್ಕು ತಕ್ಷಣವೇ ಕೊನೆಗೊಳ್ಳುತ್ತದೆ. ಎರಡನೆಯದಾಗಿ, ನಿಮ್ಮ Microsoft ಖಾತೆಯೊಂದಿಗೆ ಸಂಬಂಧವಿರುವ ಡೇಟಾ ಅಥವಾ ನಿಮ್ಮ ವಿಷಯವನ್ನು ನಾವು ಅಳಿಸುತ್ತೇವೆ ಅಥವಾ ಅನ್ಯಥಾ ನೀವು ಮತ್ತು ನಿಮ್ಮ Microsoft ಖಾತೆಯು ಅದರೊಂದಿಗೆ ಹೊಂದಿರುವ ಸಂಬಂಧವನ್ನು ತೆಗೆದುಹಾಕುತ್ತೇವೆ (ಅದನ್ನು ಉಳಿಸಿಕೊಳ್ಳಲು, ಮರಳಿಸಲು, ಇಲ್ಲವೇ ನಿಮಗೆ ಅಥವಾ ನೀವು ಗುರುತಿಸಿರುವ ಮೂರನೇ ಪಕ್ಷಕ್ಕೆ ವರ್ಗಾಯಿಸಲು ನಮಗೆ ಕಾನೂನಿನ ಪ್ರಕಾರ ಅಗತ್ಯವಿರುವ ಸಂದರ್ಭವನ್ನು ಬಿಟ್ಟು ಬೇರೆ ಸಂದರ್ಭದಲ್ಲಿ). ನಿಮ್ಮ ಖಾತೆಯನ್ನು ಒಮ್ಮೆ ಮುಚ್ಚಿದ ಬಳಿಕ ನಿಮ್ಮ ವಿಷಯ ಅಥವಾ ಡೇಟಾವನ್ನು ಹಿಂಪಡೆಯುವುದು Microsoft ಗೆ ಸಾಧ್ಯವಿಲ್ಲದಿರುವುದರಿಂದ ನೀವು ನಿಯಮಿತ ಬ್ಯಾಕಪ್ ಯೋಜನೆಯೊಂದನ್ನು ಹೊಂದಿರಬೇಕು. ಮೂರನೆಯದಾಗಿ, ನೀವು ಗಳಿಸಿದ ಉತ್ಪನ್ನಗಳ ಪ್ರವೇಶಾವಕಾಶವನ್ನು ನೀವು ಕಳೆದುಕೊಳ್ಳಬಹುದು.
- b. ನಿಯಂತ್ರಣ ಮತ್ತು ಜಾರಿ. ನಮ್ಮ ಸೇವೆಗಳು ಹಾಗೂ ಇತರ ಬಳಕೆದಾರರನ್ನು ರಕ್ಷಿಸುವುದಕ್ಕಾಗಿ ವಿಷಯದೊಂದಿಗೆ ವ್ಯವಹರಿಸಲು, ಸೃಷ್ಟಿಸಲು, ಉತ್ಪಾದಿಸಲು, ಹಾಗೂ ಇತರರೊಂದಿಗೆ ಹಂಚಲು ನಿಮ್ಮನ್ನು ಅನುಮತಿಸುವ ನಮ್ಮ ಅನೇಕ ಸೇವೆಗಳು ಸುರಕ್ಷತಾ ವ್ಯವಸ್ಥೆಗಳನ್ನು ಬಳಸಿಕೊಳ್ಳುತ್ತವೆ.
- i. ನೀತಿಗಳು. ನಮ್ಮ ಸೇವೆಗಳನ್ನು ಬಳಸುವಾಗ ಯಾವುದು ನಿಷೇಧಿಸಲ್ಪಟ್ಟಿದೆ ಎಂಬುದನ್ನು ನಮ್ಮ ನೀತಿ ಸಂಹಿತೆಯು ಗುರುತಿಸುತ್ತದೆ. ನಮ್ಮ ವಿಷಯ ಮತ್ತು ನಡವಳಿಕೆ ನೀತಿಗಳನ್ನು ಇಲ್ಲಿ (https://www.microsoft.com/DigitalSafety/policies) ಕಾಣಬಹುದು. ನಿರ್ದಿಷ್ಟ ಸೇವೆಗಳು ತಮ್ಮ ಬಳಕೆದಾರರಿಗೆ ಅನ್ವಯವಾಗುವಂತೆ ಹೆಚ್ಚುವರಿ ನೀತಿಗಳು ಮತ್ತು ಸಮುದಾಯ ಮಾನಕಗಳನ್ನು ಹೊಂದಿದ್ದು, ಅವುಗಳು ಇಲ್ಲಿ (https://aka.ms/trustandsafety) ಲಭ್ಯವಿವೆ.
- ii. ಕಳಕಳಿಯನ್ನು ವರದಿ ಮಾಡುವುದು. ನಮ್ಮ ನೀತಿ ಸಂಹಿತೆಯನ್ನು ಉಲ್ಲಂಘಿಸಬಹುದಾದ ಕಳಕಳಿಯ ವಿಷಯ ಅಥವಾ ನಡತೆಯನ್ನು ನೀವು ಇಲ್ಲಿ (https://aka.ms/reportconcerns) ವರದಿ ಮಾಡಬಹುದು.
- iii. ಪರಿಶೀಲನೆ. ಅನ್ವಯವಾಗುವಲ್ಲಿ, ಸಂಶಯಾಸ್ಪದ ಸ್ಪ್ಯಾಮ್, ವೈರಸ್ಗಳು, ವಂಚನೆ, ಫಿಶಿಂಗ್, ಮಾಲ್ವೇರ್, ಜೇಲ್ಬ್ರೇಕಿಂಗ್, ಅಥವಾ ಇತರ ಕಾನೂನುಬಾಹಿರ ಅಥವಾ ಅಪಾಯಕಾರಿ ವಿಷಯ ಅಥವಾ ನಡತೆಯನ್ನು ಗುರುತಿಸುವುದಕ್ಕಾಗಿ ಆ ವಿಷಯವನ್ನು ಪುನರಾವಲೋಕಿಸಲು ಆಟೊಮೇಟೆಡ್ ಸಿಸ್ಟಮ್ಗಳು ಮತ್ತು ಮಾನವರನ್ನು ನಾವು ಬಳಸಬಹುದು.
- iv. ಅನುಷ್ಠಾನ. ಸಂಗ್ರಹಣೆ ಮೇಲಿನ ಅಥವಾ ಸೇವೆಯಿಂದ ಅನುಮತಿಸಲ್ಪಟ್ಟಿರುವ ಫೈಲ್ ಗಾತ್ರದಮೇಲಿನ ಮಿತಿಗಳನ್ನು ವಿಷಯವು ಮೀರಿದಲ್ಲಿ ಅದನ್ನು ನಿರಾಕರಿಸುವ ಹಕ್ಕನ್ನು ನಾವು ಕಾಯ್ದಿರಿಸುತ್ತೇವೆ. ವಿಷಯವು ನಮ್ಮ ನೀತಿ ಸಂಹಿತೆಯನ್ನು ಅಥವಾ ಬೇರೊಂದು ಸೇವಾ ನೀತಿಯನ್ನು ಉಲ್ಲಂಘಿಸುವುದಾಗಿ ತೋರಿದಲ್ಲಿ ಅಥವಾ ಕಾನೂನಿನಿಂದ ಅಗತ್ಯವಾಗುವಲ್ಲಿ ಅದನ್ನು ನಾವು ನಿರ್ಬಂಧಿಸಬಹುದು, ತೆಗೆದುಹಾಕಬಹುದು ಅಥವಾ ಪ್ರದರ್ಶಿಸಲು ನಿರಾಕರಿಸಬಹುದು. ಈ ಷರತ್ತುಗಳು ಅಥವಾ ನೀತಿಗಳನ್ನು (https://aka.ms/trustandsafety) ನೀವು ಉಲ್ಲಂಘಿಸಿದಲ್ಲಿ, ನಿಮ್ಮ ಖಾತೆಯ ವಿರುದ್ಧ ಕ್ರಮವನ್ನು ನಾವು ತೆಗೆದುಕೊಳ್ಳಬಹುದು. ಕೆಲವು ವೈಶಿಷ್ಟ್ಯತೆಗಳು ಅಥವಾ ಸೇವೆಗಳಿಗೆ ಪ್ರವೇಶವನ್ನು ಮಿತಿಗೊಳಿಸುವುದು, ಸೇವೆಗಳನ್ನು ಒದಗಿಸುವುದನ್ನು ನಿಲ್ಲಿಸುವುದು, ನಿಮ್ಮ Microsoft ಖಾತೆಯನ್ನು ತಕ್ಷಣ ಮುಚ್ಚುವುದು ಅಥವಾ ಸಂವಹನವೊಂದನ್ನು (ಇಮೇಲ್, ಫೈಲ್ ಹಂಚಿಕೆ ಅಥವಾ ತ್ವರಿತ ಸಂದೇಶದಂತಹವು) ತಲುಪಿಸುವುದನ್ನು ನಿರ್ಬಂಧಿಸುವುದು ಇವುಗಳನ್ನು ಇದು ಒಳಗೊಳ್ಳಬಹುದು. ಸೇವೆಯೊಂದಕ್ಕೆ ಅಥವಾ ನಿಮ್ಮ ಖಾತೆಗೆ ನಿಮ್ಮ ಪ್ರವೇಶವನ್ನು ಮುಕ್ತಾಯಗೊಳಿಸುವಿಕೆಯು ವಿಷಯ ಪರವಾನಗಿಗಳು, ಸಂಬಂಧಿತ ವಿಷಯ, ಸದಸ್ಯತ್ವಗಳು, ಮತ್ತು ಆ ಖಾತೆಗೆ ಸಂಬಂಧಿಸಿದ Microsoft ಖಾತೆ ಬ್ಯಾಲನ್ಸ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಕಾರಣವಾಗಬಹುದು. ಈ ಷರತ್ತುಗಳ ಆರೋಪಿತ ಉಲ್ಲಂಘನೆಗಳನ್ನು ಪುನರಾವಲೋಕನ ಮಾಡುವಾಗ, ಆ ಸಮಸ್ಯೆಯನ್ನು ಪರಿಹರಿಸಲು ಆ ವಿಷಯವನ್ನು ಪುನರಾವಲೋಕಿಸುವ ಹಕ್ಕನ್ನು Microsoft ಕಾಯ್ದಿರಿಸುತ್ತದೆ. ಆದರೆ, ಪೂರ್ತಿ ಸೇವೆಗಳ ಮೇಲ್ವಿಚಾರಣೆಯನ್ನು ನಾವು ನಡೆಸುವುದಿಲ್ಲ ಮತ್ತು ಆ ರೀತಿ ಮಾಡಲು ಪ್ರಯತ್ನಿಸುವುದಿಲ್ಲ. ನಿಯಂತ್ರಣ ಮತ್ತು ಜಾರಿ ಪ್ರಕ್ರಿಯೆಗಳು (https://www.microsoft.com/DigitalSafety/moderation-and-enforcement), ಸೇವಾ ನಿರ್ದಿಷ್ಟ ಷರತ್ತುಗಳು, ಹೆಚ್ಚುವರಿ ನೀತಿಗಳು ಮತ್ತು ಮಾರ್ಗಸೂಚಿಗಳು (https://www.microsoft.com/DigitalSafety/policies/additional-guidelines), ಮತ್ತು ಮನವಿಗಳ (https://www.microsoft.com/DigitalSafety/moderation-and-enforcement/appeals) ಬಗ್ಗೆ ಹೆಚ್ಚಿನ ಮಾಹಿತಿಗಾಗಿ https://aka.ms/trustandsafety ಅನ್ನು ನೋಡಿ. ಬೌದ್ಧಿಕ ಸ್ವತ್ತು ಅತೀಕ್ರಮಣದ ಕ್ಲೇಮ್ಗಳಿಗೆ ಸಂಬಂಧಿಸಿದ ನಮ್ಮ ನೀತಿಯ ಬಗೆಗಿನ ಮಾಹಿತಿಯನ್ನು ಸೂಚನೆಗಳಲ್ಲಿ ಕಾಣಬಹುದು.
- c. ಕೆಲಸ ಅಥವಾ ಶಾಲೆ ಖಾತೆಗಳು. ಕೆಲಸ ಅಥವಾ ಶಾಲೆ ಇಮೇಲ್ ವಿಳಾಸದೊಂದಿಗೆ ನೀವು ನಿರ್ದಿಷ್ಟ Microsoft ಸೇವೆಗಳಿಗೆ ಸೈನ್ ಇನ್ ಮಾಡಬಲ್ಲಿರಿ. ನೀವು ಮಾಡಿದರೆ, ನಿಮ್ಮ ಇಮೇಲ್ ವಿಳಾಸದೊಂದಿಗೆ ಸಂಯೋಜಿತವಾಗಿರುವ ಡೊಮೇನ್ ಮಾಲೀಕರು ನಿಮ್ಮ Microsoft ಖಾತೆ ಮತ್ತು ಅದರ ಸಂಬಂಧಿತ ಚಂದಾದಾರಿಕೆಗಳ ಅಸ್ತಿತ್ವದ ಬಗ್ಗೆ ಸೂಚನೆ ನೀಡಬಹುದು, ನಿಮ್ಮ ಖಾತೆಯನ್ನು ನಿಯಂತ್ರಿಸಬಹುದು ಮತ್ತು ನಿರ್ವಹಿಸಬಹುದು ಮತ್ತು ನಿಮ್ಮ ಡೇಟಾವನ್ನು ಪ್ರವೇಶಿಸಿ ಮತ್ತು ಪ್ರಕ್ರಿಯೆಗೊಳಿಸಬಹುದು, ಸಂವಹನಗಳು ಮತ್ತು ಫೈಲ್ಗಳು ಮತ್ತು ಖಾತೆ ಅಥವಾ ಡೇಟಾ ಹೊಂದಾಣಿಕೆಯಾದರೆ Microsoft ಡೊಮೈನ್ನ ಮಾಲೀಕರಿಗೆ ಸೂಚಿಸಬಹುದು. ಇಷ್ಟೇ ಅಲ್ಲದೆ Microsoft ಸೇವೆಗಳನ್ನು ನೀವು ಬಳಸುವುದು ನಿಮ್ಮೊಂದಿಗೆ ಅಥವಾ ನಿಮ್ಮ ಸಂಸ್ಥೆಯೊಂದಿಗೆ Microsoft ಹೊಂದಿರುವ ಒಪ್ಪಂದಗಳಿಗೆ ಒಳಪಟ್ಟಿರಬಹುದು ಮತ್ತು ಈ ನಿಯಮಗಳು ಅನ್ವಯಿಸದಿರಬಹುದು ಎಂಬುದನ್ನು ನೀವು ಒಪ್ಪುತ್ತೀರಿ. ಈ ನಿಯಮಗಳ ವ್ಯಾಪ್ತಿಯಲ್ಲಿ ಬರುವ ಸೇವೆಗಳನ್ನು ಪ್ರವೇಶಿಸಲು ನೀವು ಈಗಾಗಲೇ ಒಂದು Microsoft ಖಾತೆಯನ್ನು ಹೊಂದಿದ್ದರೆ ಮತ್ತು ನೀವು ಪ್ರತ್ಯೇಕ ಕೆಲಸ ಅಥವಾ ಶಾಲಾ ಇಮೇಲ್ ವಿಳಾಸವನ್ನು ಬಳಸಿದರೆ, ಇಂತಹ ಸೇವೆಗಳನ್ನು ಪ್ರವೇಶಿಸುವುದನ್ನು ಮುಂದುವರಿಸುವುದಕ್ಕಾಗಿ ನಿಮ್ಮ Microsoft ಖಾತೆಗೆ ಸಂಬಂಧಿಸಿದ ಇಮೇಲ್ ವಿಳಾಸವನ್ನು ಅಪ್ಡೇಟ್ ಮಾಡಬೇಕಾದ ಪ್ರಾಂಪ್ಟ್ ಅನ್ನು ನೀವು ಪಡೆಯಬಹುದು.
- d. ಹೆಚ್ಚುವರಿ ಉಪಕರಣ/ಡೇಟಾ ಯೋಜನೆಗಳು. ಸೇವೆಗಳ ಹೆಚ್ಚಿನ ಭಾಗಗಳನ್ನು ಬಳಸಲು, ನಿಮಗೆ ಇಂಟರ್ನೆಟ್ ಮತ್ತು/ಅಥವಾ ಡೇಟಾ/ಸೆಲ್ಯುಲಾರ್ ಯೋಜನೆಯ ಅಗತ್ಯವಿರುತ್ತದೆ. ಅಲ್ಲದೆ, ನಿಮಗೆ ಹೆಡ್ಸೆಟ್, ಕ್ಯಾಮೆರಾ ಅಥವಾ ಮೈಕ್ರೋಫೋನ್ ಮುಂತಾದ ಹೆಚ್ಚುವರಿ ಉಪಕರಣದ ಅಗತ್ಯವಿರಬಹುದು. ಸೇವೆಗಳನ್ನು ಬಳಸಲು ಅಗತ್ಯವಿರುವ ಸಂಪರ್ಕಗಳು, ಯೋಜನೆಗಳು, ಮತ್ತು ಉಪಕರಣವನ್ನು ಒದಗಿಸುವುದು ಮತ್ತು ನಿಮ್ಮ ಸಂಪರ್ಕಗಳು, ಯೋಜನೆಗಳು, ಮತ್ತು ಉಪಕರಣದ ಪೂರೈಕೆದಾರ(ರ) ಶುಲ್ಕಗಳನ್ನು ಪಾವತಿಸುವುದು ನಿಮ್ಮ ಜವಾಬ್ದಾರಿ. ಈ ಶುಲ್ಕಗಳು ಸೇವೆಗಳಿಗೆ ನೀವು ನಮಗೆ ಪಾವತಿಸುವ ಯಾವುದೇ ಶುಲ್ಕಗಳಿಗೆ ಹೆಚ್ಚುವರಿಯಾಗಿದೆ ಮತ್ತು ಇಂತಹಾ ಶುಲ್ಕಗಳನ್ನು ನಾವು ನಿಮಗೆ ಮರುಪಾವತಿ ಮಾಡುವುದಿಲ್ಲ. ನಿಮಗೆ ಅನ್ವಯವಾಗಬಹುದಾದ ಇಂತಹಾ ಯಾವುದೇ ಶುಲ್ಕಗಳಿವೆಯೇ ಎಂದು ತಿಳಿಯಲು ನಿಮ್ಮ ಪೂರೈಕೆದಾರ(ರ) ಜತೆ ಪರಿಶೀಲಿಸಿಕೊಳ್ಳಿ.
- e. ಸೇವಾ ಅಧಿಸೂಚನೆಗಳು. ನೀವು ಬಳಸುವ ಸೇವೆಯ ಕುರಿತಾಗಿ ನಾವು ನಿಮಗೆ ಏನಾದರೂ ತಿಳಿಸಬೇಕಾದ ಸನ್ನಿವೇಶದಲ್ಲಿ, ನಾವು ನಿಮಗೆ ಸೇವಾ ಅಧಿಸೂಚನೆಗಳನ್ನು ಕಳುಹಿಸುತ್ತೇವೆ. ನಿಮ್ಮ Microsoft ಖಾತೆಗೆ ಸಂಬಂಧಿಸಿದಂತೆ ನಿಮ್ಮ ಇಮೇಲ್ ವಿಳಾಸ ಅಥವಾ ಫೋನ್ ಸಂಖ್ಯೆಯನ್ನು ನೀವು ನಮಗೆ ನೀಡಿದ್ದರೆ, ನಿಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ನೋಂದಾಯಿಸುವ ಮತ್ತು ನಿಮ್ಮ ಖರೀದಿಗಳನ್ನು ಪರಿಶೀಲಿಸುವ ಮೊದಲು ನಿಮ್ಮ ಗುರುತು ಪರಿಶೀಲಿಸುವಿಕೆ ಸೇರಿದಂತೆ, ಇಮೇಲ್ ಮೂಲಕ ಅಥವಾ SMS ಮೂಲಕ (ಪಠ್ಯ ಸಂದೇಶ) ನಿಮಗೆ ಸೇವೆ ಅಧಿಸೂಚನೆಗಳನ್ನು ನಾವು ಕಳುಹಿಸಬಹುದು. ನಾವು ಇತರ ವಿಧಾನಗಳ (ಉದಾಹರಣೆಗೆ ಇನ್-ಪ್ರೊಡಕ್ಟ್ ಸಂದೇಶಗಳ ಮೂಲಕ) ಮುಖಾಂತರ ಸಹ ನಿಮಗೆ ಸೇವಾ ಅಧಿಸೂಚನೆಗಳನ್ನು ಕಳುಹಿಸಬಹುದಾಗಿದೆ. SMS ಮೂಲಕ ಅಧಿಸೂಚನೆಗಳನ್ನು ಪಡೆಯುವಾಗ ಡೇಟಾ ಅಥವಾ ಸಂದೇಶ ಸೇವಾ ಶುಲ್ಕಗಳು ಅನ್ವಯವಾಗಬಹುದು.
- f. ಬೆಂಬಲ. ಕೆಲವು ಸೇವೆಗಳಿಗೆ ಬೆಂಬಲವು https://support.microsoft.com ನಲ್ಲಿ ಲಭ್ಯವಿದೆ ಮತ್ತು ಈ ನಿಯಮಗಳಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಕೆಲವು ಸೇವೆಗಳು ಹೆಚ್ಚುವರಿ ನಿಯಮಗಳಿಗೆ ಒಳಪಟ್ಟು ಪ್ರತ್ಯೇಕ ಅಥವಾ ಹೆಚ್ಚುವರಿ ಗ್ರಾಹಕ ಬೆಂಬಲವನ್ನು ನೀಡಬಹುದು. ವೈಶಿಷ್ಟ್ಯಗಳು ಅಥವಾ ಸೇವೆಗಳ ಮುನ್ನೋಟ ಅಥವಾ ಬೀಟಾ ಆವೃತ್ತಿಗಳಿಗೆ ಬೆಂಬಲವು ಲಭ್ಯವಿಲ್ಲದಿರಬಹುದು. ಉತ್ಪನ್ನದ ಜೀವನಚಕ್ರದ ಹಂತವನ್ನು ಆಧರಿಸಿ ಬೆಂಬಲದ ಲಭ್ಯತೆಯು ಬದಲಾಗಬಹುದು ಮತ್ತು ನೀವು Microsoft ಲೈಫ್ಸೈಕಲ್ (https://learn.microsoft.com/lifecycle) ನಲ್ಲಿ ವಿವರಿಸಲಾದ ಬೆಂಬಲಕ್ಕಾಗಿ ಅನ್ವಯವಾಗುವ ಕನಿಷ್ಠ ಅವಶ್ಯಕತೆಗಳನ್ನು ಪೂರೈಸುವ ಅರ್ಹ ಮತ್ತು ಮಾನ್ಯವಾಗಿ ಪರವಾನಗಿ ಪಡೆದ ಸೇವೆ(ಗಳು) ಹೊಂದಿರಬೇಕು. ಸೇವೆಗಳು ಮೂರನೇ ಪಕ್ಷದವರು ಒದಗಿಸಿದ ಸಾಫ್ಟ್ವೇರ್ ಅಥವಾ ಸೇವೆಗಳೊಂದಿಗೆ ಹೊಂದಿಕೆಯಾಗಲಾರದು, ಮತ್ತು ಸರಿಹೊಂದುವಿಕೆ ಅಗತ್ಯತೆಗಳ ಬಗ್ಗೆ ತಿಳಿದುಕೊಳ್ಳುವುದು ನಿಮ್ಮದೇ ಜವಾಬ್ದಾರಿ.
- g. ನಿಮ್ಮ ಸೇವೆಗಳನ್ನು ಅಂತ್ಯಗೊಳಿಸುವುದು. ನಿಮ್ಮ ಸೇವೆಗಳು ರದ್ದುಗೊಂಡರೆ (ನಿಮ್ಮಿಂದ ಅಥವಾ ನಮ್ಮಿಂದ), ಮೊದಲನೆಯದಾಗಿ ಸೇವೆಗಳನ್ನು ಪ್ರವೇಶಿಸಲು ಇರುವ ನಿಮ್ಮ ಹಕ್ಕು ತಕ್ಷಣವೇ ಕೊನೆಗೊಳ್ಳುತ್ತದೆ ಮತ್ತು ಸೇವೆಗಳಿಗೆ ಸಂಬಂಧಿಸಿದ ಸಾಫ್ಟ್ವೇರ್ನ ನಿಮ್ಮ ಪರವಾನಗಿಯು ಕೊನೆಗೊಳ್ಳುತ್ತದೆ. ಎರಡನೆಯದಾಗಿ, ನಿಮ್ಮ ಸೇವೆಯೊಂದಿಗೆ ಸಂಬಂಧವಿರುವ ಡೇಟಾ ಅಥವಾ ನಿಮ್ಮ ವಿಷಯವನ್ನು ನಾವು ಅಳಿಸುತ್ತೇವೆ ಅಥವಾ ಅನ್ಯಥಾ ನೀವು ಮತ್ತು ನಿಮ್ಮ Microsoft ಖಾತೆಯು ಅದರೊಂದಿಗೆ ಹೊಂದಿರುವ ಸಂಬಂಧವನ್ನು ತೆಗೆದುಹಾಕುತ್ತೇವೆ (ಅದನ್ನು ಉಳಿಸಿಕೊಳ್ಳಲು, ಮರಳಿಸಲು, ಇಲ್ಲವೇ ನಿಮಗೆ ಅಥವಾ ನೀವು ಗುರುತಿಸಿರುವ ಮೂರನೇ ಪಕ್ಷಕ್ಕೆ ವರ್ಗಾಯಿಸಲು ನಮಗೆ ಕಾನೂನಿನ ಪ್ರಕಾರ ಅಗತ್ಯವಿರುವ ಸಂದರ್ಭವನ್ನು ಬಿಟ್ಟು ಬೇರೆ ಸಂದರ್ಭದಲ್ಲಿ). ಇದರ ಫಲಿತಾಂಶವಾಗಿ ಯಾವುದೇ ಸೇವೆಗಳನ್ನು (ಅಥವಾ ಅಂತಹ ಸೇವೆಗಳಲ್ಲಿ ನೀವು ಸಂಗ್ರಹಣೆ ಮಾಡಿರುವ ನಿಮ್ಮ ವಿಷಯ) ಪ್ರವೇಶಿಸಲು ನಿಮಗೆ ಇನ್ನು ಮುಂದೆ ಸಾಧ್ಯವಾಗದೇ ಇರಬಹುದು. ನೀವು ನಿಯಮಿತವಾದ ಬ್ಯಾಕ್ಅಪ್ ಯೋಜನೆಯನ್ನು ಹೊಂದಿರಬೇಕು. ಮೂರನೆಯದಾಗಿ, ನೀವು ಗಳಿಸಿದ ಉತ್ಪನ್ನಗಳ ಪ್ರವೇಶಾವಕಾಶವನ್ನು ನೀವು ಕಳೆದುಕೊಳ್ಳಬಹುದು. ನೀವು ನಿಮ್ಮ Microsoft ಖಾತೆಯನ್ನು ರದ್ದುಗೊಳಿಸಿದ್ದರೆ ಮತ್ತು ಸೇವೆಗಳನ್ನು ಪ್ರವೇಶಿಸಲು ಬೇರೆ ಯಾವುದೇ ಇತರ ಖಾತೆಯಿಂದ ಸಾಧ್ಯವಾಗದಿದ್ದರೆ ನಿಮ್ಮ ಸೇವೆಗಳನ್ನು ತಕ್ಷಣದಲ್ಲೇ ರದ್ದುಗೊಳಿಸಬಹುದಾಗಿದೆ.
ಮೂರನೇ-ಪಕ್ಷದ ಅಪ್ಲಿಗಳು ಮತ್ತು ಸೇವೆಗಳನ್ನು ಬಳಸುವುದು
5. ಮೂರನೇ-ಪಕ್ಷದ ಅಪ್ಲಿಗಳು ಮತ್ತು ಸೇವೆಗಳನ್ನು ಬಳಸುವುದು. ಸೇವೆಗಳು ನಿಮಗೆ ಸ್ವತಂತ್ರ ಮೂರನೇ ಪಕ್ಷದ (Microsoft ಅಲ್ಲದ ಕಂಪನಿಗಳ ಅಥವಾ ಜನರ) ಉತ್ಪನ್ನಗಳು, ಸೇವೆಗಳು, ವೆಬ್ಸೈಟ್ಗಳು, ಲಿಂಕ್ಗಳು, ವಿಷಯ, ಸಾಮಗ್ರಿ, ಆಟಗಳು, ಕೌಶಲಗಳು, ಏಕೀಕರಣಗಳು, ಬಾಟ್ಗಳು ಅಥವಾ ಅಪ್ಲಿಕೇಶನ್ಗಳಿಗೆ ("ಮೂರನೇ ಪಕ್ಷದ ಅಪ್ಲಿಕೇಶನ್ಗಳು ಮತ್ತು ಸೇವೆಗಳು") ಪ್ರವೇಶ ಪಡೆಯಲು ಅಥವಾ ಅವುಗಳನ್ನು ಪಡೆದುಕೊಳ್ಳಲು ಅನುಮತಿಸಬಹುದಾಗಿವೆ. ನಮ್ಮ ಹಲವಾರು ಸೇವೆಗಳು ನಿಮಗೆ ಹುಡುಕಲು, ವಿನಂತಿಸಲು, ಅಥವಾ ಮೂರನೇ ವ್ಯಕ್ತಿಯ ಅಪ್ಲಿಗಳು ಮತ್ತು ಸೇವೆಗಳೊಂದಿಗೆ ಸಂವಹನ ಮಾಡಲು ಸಹ ನಿಮಗೆ ಸಹಾಯ ಮಾಡುತ್ತವೆ ಮತ್ತು ಅಂತಹ ಮೂರನೇ ವ್ಯಕ್ತಿಯ ಅಪ್ಲಿಕೇಶನ್ಗಳು ಮತ್ತು ಸೇವೆಗಳೊಂದಿಗೆ ನಿಮ್ಮ ವಿಷಯ ಅಥವಾ ಡೇಟಾವನ್ನು ಹಂಚಿಕೊಳ್ಳಲು ನಿಮಗೆ ಅನುಮತಿಸಬಹುದು ಅಥವಾ ಅಗತ್ಯವಿರಬಹುದು, ಮತ್ತು ನಮ್ಮ ಸೇವೆಗಳನ್ನು ಬಳಸುವ ಮೂಲಕ ನೀವು ಮೂರನೇ ವ್ಯಕ್ತಿಯ ಅಪ್ಲಿಗಳು ಮತ್ತು ಸೇವೆಗಳನ್ನು ನಿಮಗೆ ಲಭ್ಯವಾಗುವಂತೆ ಮಾಡಲು ಅವುಗಳನ್ನು ನಿರ್ದೇಶಿಸುತ್ತಿದ್ದೀರಿ ಎಂದು ನೀವು ಅರ್ಥಮಾಡಿಕೊಂಡಿದ್ದೀರಿ. ಅಲ್ಲದೆ ಮೂರನೇ ಪಕ್ಷದ ಅಪ್ಲಿಗಳು ಮತ್ತು ಸೇವೆಗಳು ನಿಮ್ಮ ವಿಷಯ ಅಥವಾ ಡೇಟಾವನ್ನು ಮೂರನೇ ಪಕ್ಷದ ಅಪ್ಲಿಗಳು ಮತ್ತು ಸೇವೆಗಳ ಪ್ರಕಾಶಕರು, ಪೂರೈಕೆದಾರರು ಅಥವಾ ಆಪರೇಟರ್ಗಳೊಂದಿಗೆ ಸಂಗ್ರಹಣೆ ಮಾಡಲು ಸಹ ನಿಮಗೆ ಅನುಮತಿಸಬಹುದಾಗಿವೆ ಅಥವಾ ಅಗತ್ಯವಿರಬಹುದು. ಮೂರನೇ ಪಕ್ಷದ ಅಪ್ಲಿಗಳು ಮತ್ತು ಸೇವೆಗಳು ನಿಮಗೆ ಗೌಪ್ಯತೆಯ ನೀತಿಯನ್ನು ಪ್ರಸ್ತುತಪಡಿಸಬಹುದು ಅಥವಾ ಮೂರನೇ ಪಕ್ಷದ ಅಪ್ಲಿ ಮತ್ತು ಸೇವೆಗಳ ಬಳಕೆ ಅಥವಾ ಸ್ಥಾಪನೆಗೆ ಮುನ್ನ ಅವುಗಳ ನಿಯಮಗಳನ್ನು ನೀವು ಒಪ್ಪಬೇಕಾಗಬಹುದು. Microsoft ಅಥವಾ ಅದರ ಅಂಗಸಂಸ್ಥೆಗಳ ಮಾಲೀಕತ್ವದ ಅಥವಾ ನಿರ್ವಹಿಸುವ ಕೆಲವು Store ಗಳ ಮೂಲಕ (Office ಸಂಗ್ರಹ, Xbox ನಲ್ಲಿನ Microsoft Store ಮತ್ತು Windows ನಲ್ಲಿನ Microsoft Store ಸೇರಿದಂತೆ, ಆದರೆ ಅಷ್ಟಕ್ಕೆ ಸೀಮಿತವಾಗದಂತೆ) ಪಡೆದಿರುವ ಅರ್ಜಿಗಳಿಗಾಗಿ ಹೆಚ್ಚುವರಿ ನಿಯಮಗಳಿಗಾಗಿ ವಿಭಾಗ 13.b ನೋಡಿ. ಯಾವುದೇ ಮೂರನೇ-ಪಕ್ಷದ ಅಪ್ಲಿಗಳು ಮತ್ತು ಸೇವೆಗಳನ್ನು ಪಡೆಯುವ, ಬಳಸುವ, ವಿನಂತಿಸುವ ಮೊದಲು ಅಥವಾ ನಿಮ್ಮ Microsoft ಖಾತೆಯನ್ನು ಅವುಗಳಿಗೆ ಲಿಂಕ್ ಮಾಡುವ ಮೊದಲು ಯಾವುದೇ ಮೂರನೇ ಪಕ್ಷದ-ನಿಯಮಗಳು ಮತ್ತು ಗೌಪ್ಯತೆ ನೀತಿಗಳನ್ನು ನೀವು ಪರಿಶೀಲಿಸಬೇಕು. ಯಾವುದೇ ಮೂರನೇ-ಪಕ್ಷದ ನಿಯಮಗಳು ಈ ನಿಯಮಗಳನ್ನು ಮಾರ್ಪಡಿಸಲಾರವು. ಯಾವುದೇ ಮೂರನೇ ಪಕ್ಷದ ಅಪ್ಲಿಗಳು ಮತ್ತು ಸೇವೆಗಳ ಭಾಗವಾಗಿ Microsoft ನಿಮಗೆ ಯಾವುದೇ ಬೌದ್ಧಿಕ ಆಸ್ತಿಯ ಪರವಾನಗಿಯನ್ನು ನೀಡುವುದಿಲ್ಲ. ಈ ಮೂರನೇ ಪಕ್ಷದ ಅಪ್ಲಿಗಳು ಮತ್ತು ಸೇವೆಗಳ ಬಳಕೆಯಿಂದ ಉದ್ಭವವಾಗುವ ಎಲ್ಲ ರಿಸ್ಕ್ಗಳು ಮತ್ತು ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ಮತ್ತು ಅವುಗಳ ಬಳಕೆಯಿಂದ ಉಂಟಾಗುವ ಯಾವುದೇ ಸಮಸ್ಯೆಗಳಿಗೆ Microsoft ಜವಾಬ್ದಾರನಾಗುವುದಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ. ಯಾವುದೇ ಮೂರನೇ-ಪಕ್ಷದ ಅಪ್ಲಿಕೇಶನ್ಗಳು ಅಥವಾ ಸೇವೆಗಳ ಮೂಲಕ ಒದಗಿಸಲಾದ ಮಾಹಿತಿ ಅಥವಾ ಸೇವೆಗಳಿಗಾಗಿ ನಿಮಗೆ ಅಥವಾ ಇತರರಿಗೆ Microsoft ಜವಾಬ್ದಾರಿ ಅಥವಾ ಬಾಧ್ಯಸ್ಥನಾಗಿಲ್ಲ.
ಸೇವಾ ಲಭ್ಯತೆ
6. ಸೇವಾ ಲಭ್ಯತೆ.
- a. ಸೇವೆಗಳು, ಮೂರನೇ ಪಕ್ಷದ ಅಪ್ಲಿಗಳು ಮತ್ತು ಸೇವೆಗಳು, ಅಥವಾ ಸೇವೆಗಳ ಮೂಲಕ ನೀಡಲಾದ ಸಾಮಗ್ರಿ ಅಥವಾ ಉತ್ಪನ್ನಗಳು ಕಾಲದಿಂದ ಕಾಲಕ್ಕೆ ಲಭ್ಯವಿಲ್ಲದಿರಬಹುದು, ಸೀಮಿತ ಆಧಾರದಲ್ಲಿ ನೀಡಲಾಗಿರಬಹುದು, ಅಥವಾ ನಿಮ್ಮ ಪ್ರದೇಶ ಅಥವಾ ಸಾಧನಕ್ಕೆ ಅನುಗುಣವಾಗಿ ಬದಲಾಗಬಹುದು. ನಿಮ್ಮ Microsoft ಖಾತೆಯೊಂದಿಗೆ ಸಂಬಂಧವಿರುವ ಸ್ಥಳವನ್ನು ನೀವು ಬದಲಾಯಿಸಿದರೆ, ನಿಮಗೆ ಲಭ್ಯವಿರಬಹುದಾದ ಮತ್ತು ನಿಮ್ಮ ಹಿಂದಿನ ಪ್ರದೇಶದಲ್ಲಿ ಪಾವತಿಸಿರುವ ಸಾಮಗ್ರಿ ಅಥವಾ ಅಪ್ಲಿಕೇಶನ್ಗಳನ್ನು ನೀವು ಪುನಃ ಗಳಿಸಿಕೊಳ್ಳಬೇಕಾಗಬಹುದು. ಸಾಮಗ್ರಿ ಅಥವಾ ಸೇವೆಗಳನ್ನು ನೀವು ಪ್ರವೇಶಿಸುತ್ತಿರುವ ಅಥವಾ ಬಳಸುತ್ತಿರುವ ದೇಶದಲ್ಲಿ ಕಾನೂನುಬಾಹಿರವಾಗಿ ಅಥವಾ ಪರವಾನಗಿಯಿಲ್ಲದೆ ಅಂತಹಾ ಸಾಮಗ್ರಿ ಅಥವಾ ಸೇವೆಗಳನ್ನು ಪ್ರವೇಶಿಸುವಂತಿಲ್ಲ ಅಥವಾ ಬಳಸುವಂತಿಲ್ಲ ಎಂಬುದಕ್ಕೆ, ಅಥವಾ ಇಂತಹಾ ಸಾಮಗ್ರಿ ಅಥವಾ ಸೇವೆಗಳನ್ನು ಬಳಸಲು ನಿಮ್ಮ ಸ್ಥಳವನ್ನು ಮುಚ್ಚಿಡುವುದಿಲ್ಲ ಅಥವಾ ತಪ್ಪಾಗಿ ಪ್ರತಿನಿಧಿಸುವುದಿಲ್ಲ ಅಥವಾ ಗುರುತು ಮಾಡುವುದಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ.
- b. ಸೇವೆಗಳು ಸದಾಕಾಲ ಚಾಲನೆಯಲ್ಲಿರುವಂತೆ ಇರಿಸಲು ನಾವು ಶ್ರಮಿಸುತ್ತೇವೆ; ಆದರೆ, ಎಲ್ಲ ಆನ್ಲೈನ್ ಸೇವೆಗಳಿಗೆ ಸಾಂದರ್ಭಿಕವಾಗಿ ಅಡಚಣೆಗಳು ಮತ್ತು ಸ್ಥಾಗಿತ್ಯಗಳು ಸಂಭವಿಸುತ್ತವೆ, ಮತ್ತು ಇದರ ಪರಿಣಾಮವಾಗಿ ಆಗಬಹುದಾದ ಯಾವುದೇ ಅಡಚಣೆ ಅಥವಾ ನಷ್ಟಕ್ಕೆ Microsoft ಜವಾಬ್ದಾರವಾಗುವುದಿಲ್ಲ. ಸ್ಥಾಗಿತ್ಯದ ಸಂದರ್ಭದಲ್ಲಿ, ನೀವು ಸಂಗ್ರಹಿಸಿರುವ ನಿಮ್ಮ ವಿಷಯ ಅಥವಾ ಡೇಟಾವನ್ನು ಹಿಂಪಡೆಯುವುದು ನಿಮಗೆ ಸಾಧ್ಯವಾಗಲಾರದು. ನೀವು ಸೇವೆಗಳಲ್ಲಿ ಸಂಗ್ರಹಣೆ ಮಾಡುವ ಅಥವಾ ಮೂರನೇ ಪಕ್ಷದ ಅಪ್ಲಿಕೇಶನ್ಗಳು ಮತ್ತು ಸೇವೆಗಳನ್ನು ಬಳಸಿ ಸಂಗ್ರಹಣೆ ಮಾಡುವ ನಿಮ್ಮ ವಿಷಯ ಹಾಗೂ ಡೇಟಾವನ್ನು ನೀವು ನಿಯಮಿತವಾಗಿ ಬ್ಯಾಕಪ್ ಮಾಡಬೇಕೆಂದು ನಾವು ನಿಮಗೆ ಶಿಫಾರಸು ಮಾಡುತ್ತೇವೆ.
ಸೇವೆಗಳು ಅಥವಾ ಸಾಫ್ಟ್ವೇರ್ಗೆ ನವೀಕರಣಗಳು ಮತ್ತು ಈ ನಿಯಮಗಳಿಗೆ ಬದಲಾವಣೆಗಳು
7. ಸೇವೆಗಳು ಅಥವಾ ಸಾಫ್ಟ್ವೇರ್ಗೆ ಪರಿಷ್ಕರಣೆಗಳು, ಮತ್ತು ಈ ನಿಯಮಗಳಿಗೆ ಬದಲಾವಣೆಗಳು.
- a. ನಾವು ಯಾವುದೇ ಸಮಯದಲ್ಲಿ ಈ ನಿಯಮಗಳನ್ನು ಬದಲಾಯಿಸಬಹುದು, ಮತ್ತು ಹಾಗೆ ಮಾಡುವಾಗ ನಾವು ನಿಮಗೆ ತಿಳಿಸುತ್ತೇವೆ. ಬದಲಾವಣೆಗಳು ಚಾಲ್ತಿಗೆ ಬಂದ ಬಳಿಕ ಸೇವೆಗಳನ್ನು ಬಳಸಿದರೆ ನೀವು ಹೊಸ ನಿಯಮಗಳಿಗೆ ಒಪ್ಪುತ್ತೀರಿ ಎಂದರ್ಥ. ನೀವು ಹೊಸ ನಿಯಮಗಳನ್ನು ಒಪ್ಪದಿದ್ದರೆ, ಸೇವೆಗಳನ್ನು ಬಳಸುವುದನ್ನು ನೀವು ನಿಲ್ಲಿಸಬೇಕು, ನಿಮ್ಮ Microsoft ಖಾತೆಯನ್ನು ಮುಚ್ಚಬೇಕು, ಮತ್ತು ನೀವು ಹೆತ್ತವರು ಅಥವಾ ಪೋಷಕರಾಗಿದ್ದರೆ, ನಿಮ್ಮ ಅಪ್ರಾಪ್ತ ಮಗುವಿನ Microsoft ಖಾತೆಯನ್ನು ಮುಚ್ಚಲು ಆತನಿಗೆ ಆಥವಾ ಆಕೆಗೆ ಸಹಾಯ ಮಾಡಬೇಕು.
- b. ಕೆಲವೊಮ್ಮೆ ಸೇವೆಗಳ ಬಳಕೆ ಮುಂದುವರಿಸಲು ನೀವು ಸಾಫ್ಟ್ವೇರ್ ಅನ್ನು ಪರಿಷ್ಕರಿಸಬೇಕಾಗುತ್ತದೆ. ನಾವು ಸ್ವಯಂಚಾಲಿತವಾಗಿ ನಿಮ್ಮ ಬಳಿ ಇರುವ ಸಾಫ್ಟ್ವೇರ್ ಆವೃತ್ತಿಯನ್ನು ಪರೀಕ್ಷಿಸಬಹುದು ಮತ್ತು ಸಾಫ್ಟ್ವೇರ್ ಅಪ್ಡೇಟ್ಗಳನ್ನು ಅಥವಾ ಸಂರಚನಾ ಬದಲಾವಣೆಗಳನ್ನು ಡೌನ್ಲೋಡ್ ಮಾಡಬಹುದು. ಅಲ್ಲದೆ ಸೇವೆಗಳ ಬಳಕೆ ಮುಂದುವರಿಸಲು ನೀವು ಸಾಫ್ಟ್ವೇರ್ ಅನ್ನು ಪರಿಷ್ಕರಿಸಬೇಕಾಗಬಹುದು. ಪರಿಷ್ಕರಣೆಗಳೊಂದಿಗೆ ಬೇರೆ ನಿಯಮಗಳು ಜತೆಗಿದ್ದರೆ, ಆ ಸಂದರ್ಭದಲ್ಲಿ ಆ ನಿಯಮಗಳು ಅನ್ವಯವಾಗುತ್ತವೆ ಎಂಬುದನ್ನು ಹೊರತುಪಡಿಸಿದರೆ, ಇಂತಹಾ ಪರಿಷ್ಕರಣೆಗಳು ಈ ನಿಯಮಗಳಿಗೆ ಒಳಪಟ್ಟಿರುತ್ತವೆ. ಯಾವುದೇ ಅಪ್ಡೇಟ್ ಅನ್ನು ಲಭ್ಯವಾಗಿಸುವ ಬದ್ಧತೆ Microsoft ಗೆ ಇಲ್ಲ ಮತ್ತು ಸಿಸ್ಟಂನ ಯಾವ ಆವೃತ್ತಿಗಾಗಿ ನೀವು ಸಾಫ್ಟ್ವೇರ್, ಅಪ್ಲಿಕೇಶನ್, ವಿಷಯ ಅಥವಾ ಅನ್ಯ ಉತ್ಪನ್ನಗಳನ್ನು ಖರೀದಿಸಿದ್ದೀರೋ ಅಥವಾ ಪರವಾನಗಿ ಪಡೆದುಕೊಂಡಿದ್ದೀರೋ ಅಂತಹ ಸಿಸ್ಟಂನ ಆವೃತ್ತಿಯನ್ನು ನಾವು ಬೆಂಬಲಿಸುತ್ತೇವೆ ಎಂಬ ಯಾವುದೇ ಖಾತರಿಯನ್ನು Microsoft ನೀಡುವುದಿಲ್ಲ. ಮೂರನೇ ಪಕ್ಷಗಳು ಒದಗಿಸುವ ಸಾಫ್ಟ್ವೇರ್ ಅಥವಾ ಸೇವೆಗಳಿಗೆ ಇಂತಹಾ ಪರಿಷ್ಕರಣೆಗಳು ಸರಿಹೊಂದಿಕೆಯಾಗಿರಲಾರವು. ಸಾಫ್ಟ್ವೇರ್ ಅನ್ನು ಅಸ್ಥಾಪಿಸುವ ಮೂಲಕ ನೀವು ಭವಿಷ್ಯದ ಸಾಫ್ಟ್ವೇರ್ ಪರಿಷ್ಕರಣೆಗಳಿಗೆ ನೀವು ಯಾವುದೇ ಸಮಯದಲ್ಲಿ ಸಮ್ಮತಿಯನ್ನು ಹಿಂತೆಗೆದುಕೊಳ್ಳಬಹುದು.
- c. ಹೆಚ್ಚುವರಿಯಾಗಿ, ಕೆಲವೊಮ್ಮೆ ಸೇವೆಯ ವೈಶಿಷ್ಟ್ಯಗಳು ಅಥವಾ ಕಾರ್ಯವನ್ನು ತೆಗೆದುಹಾಕುವ ಅಥವಾ ಬದಲಾಯಿಸುವ ಅಗತ್ಯ ನಮಗೆ ಬರಬಹುದು ಅಥವಾ ಮೂರನೇ ಪಕ್ಷದ ಅಪ್ಲಿಗಳು ಮತ್ತು ಸೇವೆಗಳಿಗೆ ಸೇವೆಯನ್ನು ಅಥವಾ ಒಟ್ಟಾಗಿ ಪ್ರವೇಶ ಒದಗಿಸುವುದನ್ನು ನಾವು ನಿಲ್ಲಿಸಬಹುದು. ಅನ್ವಯವಾಗುವ ಕಾನೂನಿನ ಅಗತ್ಯ ಪ್ರಮಾಣದಷ್ಟಕ್ಕೆ ಹೊರತಾಗಿ, ಹಿಂದೆ ಖರೀದಿಸಿದ ಯಾವುದೇ ಸಾಮಗ್ರಿ, ಡಿಜಿಟಲ್ ಸರಕುಗಳು (ವಿಭಾಗ 13.i ಯಲ್ಲಿ ವಿವರಿಸಿರುವಂತೆ), ಅಥವಾ ಅಪ್ಲಿಕೇಶನ್ಗಳನ್ನು ಮರು-ಡೌನ್ಲೋಡ್ಗೆ ಅಥವಾ ಬದಲಾವಣೆಗೆ ಒದಗಿಸುವ ಬಾಧ್ಯತೆ ನಮಗೆ ಇರುವುದಿಲ್ಲ. ನಾವು ಸೇವೆಗಳು ಅಥವಾ ಅವುಗಳ ವೈಶಿಷ್ಟ್ಯಗಳನ್ನು, ಸರಿಯಾಗಿ ಕೆಲಸ ಮಾಡಲಾರದ ಅಥವಾ ಅಂತಿಮ ಆವೃತ್ತಿಯಂತೆಯೇ ಕೆಲಸ ಮಾಡಬಹುದಾದ ಮುನ್ನೋಟ ಅಥವಾ ಬೀಟಾ ಆವೃತ್ತಿಯಲ್ಲಿ ಬಿಡುಗಡೆ ಮಾಡಬಹುದಾಗಿದೆ.
- d. ಕೆಲವು ಸಂಗೀತ, ಆಟಗಳು, ಚಲನಚಿತ್ರಗಳು, ಪುಸ್ತಕಗಳು ಹಾಗೂ ಇನ್ನೂ ಮುಂತಾದ, ಡಿಜಿಟಲ್ ಹಕ್ಕುಗಳ ನಿರ್ವಹಣೆ (DRM) ನಿಂದ ಸಂರಕ್ಷಿತವಾಗಿರುವ ಸಾಮಗ್ರಿಯನ್ನು ನೀವು ಬಳಸಲು ಸಾಧ್ಯವಾಗುವಂತೆ, DRM ಸಾಫ್ಟ್ವೇರ್ ಸ್ವಯಂಚಾಲಿತವಾಗಿ ಆನ್ಲೈನ್ ಹಕ್ಕುಗಳ ಸರ್ವರ್ ಅನ್ನು ಸಂಪರ್ಕಿಸಬಹುದು ಮತ್ತು DRM ಅಪ್ಡೇಟ್ಗಳನ್ನು ಡೌನ್ಲೋಡ್ ಮಾಡಬಹುದು ಮತ್ತು ಸ್ಥಾಪಿಸಬಹುದು.
ಸಾಫ್ಟ್ವೇರ್ ಪರವಾನಗಿ
8. ಸಾಫ್ಟ್ವೇರ್ ಪರವಾನಗಿ. ಒಂದು ಪ್ರತ್ಯೇಕ Microsoft ಪರವಾನಗಿ ಒಪ್ಪಂದವನ್ನು (ಉದಾಹರಣೆಗೆ, ನೀವು ಬಳಸುತ್ತಿರುವ Microsoft ಅಪ್ಲಿಕೇಶನ್ Windows ಜೊತೆಗಿದ್ದರೆ ಮತ್ತು ಅದರ ಭಾಗವಾಗಿದ್ದರೆ, ಅಂತಹ ಸಾಫ್ಟ್ವೇರ್ ಅನ್ನು Windows ಆಪರೇಟಿಂಗ್ ಸಿಸ್ಟಂಗಾಗಿ ಇರುವ Microsoft ಸಾಫ್ಟ್ವೇರ್ ಪರವಾನಗಿ ನಿಯಮಗಳು ಅಧಿವ್ಯಾಪಿಸುತ್ತವೆ) ಹೊಂದಿರದ ಹೊರತು, ಸೇವೆಗಳ ಭಾಗವಾಗಿ ನಿಮಗೆ ನಾವು ಒದಗಿಸಿರುವ ಯಾವುದೇ ಸಾಫ್ಟ್ವೇರ್ ಈ ನಿಯಮಗಳಿಗೆ ಒಳಪಟ್ಟಿರುತ್ತದೆ. Microsoft ಅಥವಾ ಅದರ ಅಂಗಸಂಸ್ಥೆಗಳ ಮಾಲೀಕತ್ವ ಅಥವಾ ನಿರ್ವಹಣೆಯ ಕೆಲವು Stores ಗಳ ಮೂಲಕ (Office Store, Windows ನಲ್ಲಿ Microsoft Store ಮತ್ತು Xbox ನಲ್ಲಿ Microsoft Store ಒಳಗೊಂಡಂತೆ, ಆದರೆ ಅಷ್ಟಕ್ಕೇ ಸೀಮಿತವಾಗದಂತೆ) ಪಡೆದುಕೊಳ್ಳಲಾದ ಅಪ್ಲಿಕೇಶನ್ಗಳು ಕೆಳಗಿನ ವಿಭಾಗ 13.b.i ಗೆ ಒಳಪಟ್ಟಿರುತ್ತವೆ.
- a. ನೀವು ಈ ನಿಯಮಗಳಿಗೆ ಬದ್ಧರಾಗಿದ್ದರೆ, ಸೇವೆಗಳ ಬಳಕೆಯ ನಿಮ್ಮ ಭಾಗವಾಗಿ, ನಾವು ನಿಮಗೆ ತಲಾ ಸಾಧನಕ್ಕೆ, ವಿಶ್ವಾದ್ಯಂತದ ಆಧಾರದಲ್ಲಿ ಒಮ್ಮೆಗೆ ಕೇವಲ ಒಬ್ಬ ವ್ಯಕ್ತಿಯ ಬಳಕೆಗಾಗಿ ಒಂದು ಸಾಫ್ಟ್ವೇರ್ ನಕಲನ್ನು ಸ್ಥಾಪಿಸುವ ಮತ್ತು ಬಳಸುವ ಹಕ್ಕನ್ನು ನೀಡುತ್ತೇವೆ. ಕೆಲವೊಂದು ಸಾಧನಗಳ ವಿಷಯದಲ್ಲಿ, ಅಂತಹ ಸಾಫ್ಟ್ವೇರ್ ಅನ್ನು ನಿಮ್ಮ ವೈಯಕ್ತಿಕ, ಸೇವೆಗಳ ವಾಣಿಜ್ಯಿಕವಲ್ಲದ ಬಳಕೆಗೆ ಪೂರ್ವ-ಸ್ಥಾಪಿಸಬಹುದಾಗಿದೆ. ಸೇವೆಗಳ ಭಾಗವಾಗಿರುವ ಸಾಫ್ಟ್ವೇರ್ ಅಥವಾ ವೆಬ್ಸೈಟ್ ಮೂರನೇ ಪಕ್ಷದ ಕೋಡ್ ಅನ್ನು ಒಳಗೊಂಡಿರಬಹುದು. ಸಾಫ್ಟ್ವೇರ್ ಅಥವಾ ವೆಬ್ಸೈಟ್ಗೆ ಸಂಪರ್ಕವಾಗಿದ್ದರೆ ಅಥವಾ ಉಲ್ಲೇಖಿತವಾಗಿರುವ ಯಾವುದೇ ಮೂರನೇ ಪಕ್ಷದ ಲಿಪಿಗಳಿಗೆ ಅಥವಾ ಕೋಡ್ಗೆ, ನಿಮಗೆ ಇಂತಹಾ ಕೋಡ್ನ ಮಾಲೀಕತ್ವ ಹೊಂದಿರುವ ಮೂರನೇ ಪಕ್ಷದವರು ಪರವಾನಗಿ ನೀಡಿರುತ್ತಾರೆಯೇ ಹೊರತು, Microsoft ಅಲ್ಲ. ಮೂರನೇ ಪಕ್ಷದ ಕೋಡ್ಗೆ ಸೂಚನೆಗಳು, ಏನಾದರೂ ಇದ್ದಲ್ಲಿ, ನಿಮ್ಮ ಮಾಹಿತಿಗಾಗಿ ಮಾತ್ರ ಆಗಿರುತ್ತವೆ.
- b. ಸಾಫ್ಟ್ವೇರ್ನ ಪರವಾನಗಿ ನೀಡಲಾಗಿದೆಯೇ ಹೊರತು, ಮಾರಾಟ ಮಾಡಿಲ್ಲ, ಮತ್ತು Microsoft ನಿಂದ ಸೂಚಿತವಾಗಿರಲಿ, ಸ್ವಾರ್ಜಿತವಾಗಿರಲಿ, ಅಥವಾ ಬೇರೆ ರೀತಿಯಲ್ಲಾಗಲೀ, ಸ್ಪಷ್ಟವಾಗಿ ನೀಡಲಾಗದ ಸಾಫ್ಟ್ವೇರ್ನ ಎಲ್ಲ ಹಕ್ಕುಗಳನ್ನು, Microsoft ಕಾಯ್ದಿರಿಸಿಕೊಳ್ಳುತ್ತದೆ. ಈ ಪರವಾನಗಿಯು ನಿಮಗೆ ಯಾವುದೇ ಹಕ್ಕನ್ನು ನೀಡುವುದಿಲ್ಲ, ಮತ್ತು ನೀವು ಈ ಕೆಳಗಿನವುಗಳನ್ನು ಮಾಡುವಂತಿಲ್ಲ:
- i. ಸಾಫ್ಟ್ವೇರ್ ಅಥವಾ ಸೇವೆಗಳಲ್ಲಿ ಅಥವಾ ಅವುಗಳಿಗೆ ಸಂಬಂಧಿಸಿದಂತೆ ಯಾವುದೇ ತಾಂತ್ರಿಕ ಸುರಕ್ಷತಾ ಕ್ರಮಗಳನ್ನು ಮೀರುವಂತಿಲ್ಲ ಅಥವಾ ಬೈಪಾಸ್ ಮಾಡುವಂತಿಲ್ಲ;
- ii. ಅನ್ವಯವಾಗುವ ಕೃತಿಸ್ವಾಮ್ಯ ಕಾನೂನು ಸ್ಪಷ್ಟವಾಗಿ ಆ ರೀತಿ ಮಾಡಲು ಅನುಮತಿಸಿರುವುದನ್ನು ಮಾತ್ರ ಹೊರತುಪಡಿಸಿ, ಯಾವುದೇ ಸಾಫ್ಟ್ವೇರ್ ಅಥವಾ ಸೇವೆಗಳಲ್ಲಿ ಒಳಗೊಂಡ ಅಥವಾ ಅದರ ಮೂಲಕ ಪ್ರವೇಶಿಸಬಹುದಾದ, ಸೇವೆಗಳ ಬೇರೆ ವಿಧವನ್ನು ನೀವು, ಡೀಅಸೆಂಬಲ್, ಡೀಕಂಪೈಲ್, ಡೀಕ್ರಿಪ್ಟ್, ಹ್ಯಾಕ್, ಅನುಸರಣೆ, ತಪ್ಪಾಗಿ ಬಳಕೆ, ಅಥವಾ ರಿವರ್ಸ್ ಇಂಜಿನಿಯರ್ ಮಾಡುವಂತಿಲ್ಲ;
- iii. ವಿಭಿನ್ನ ಸಾಧನಗಳಲ್ಲಿ ಬಳಕೆಗಾಗಿ ಸಾಫ್ಟ್ವೇರ್ ಅಥವಾ ಸೇವೆಗಳ ಭಾಗಗಳನ್ನು ಪ್ರತ್ಯೇಕಿಸುವಂತಿಲ್ಲ;
- iv. Microsoft ಸ್ಪಷ್ಟವಾಗಿ ನಿಮಗೆ ಅಧಿಕಾರ ನೀಡದ ಹೊರತು, ನೀವು ಸಾಫ್ಟ್ವೇರ್ ಅಥವಾ ಸೇವೆಗಳನ್ನು ಪ್ರಕಟಣೆ, ನಕಲು, ಬಾಡಿಗೆ, ಲೀಸ್, ಮಾರಾಟ, ರಫ್ತು, ಆಮದು, ವಿತರಣೆ, ಅಥವಾ ಕಡ ನೀಡುವಂತಿಲ್ಲ;
- v. ಸೇವೆಗಳನ್ನು ಪ್ರವೇಶಿಸಲು ಅಥವಾ ಬಳಸಲು ಸಾಫ್ಟ್ವೇರ್, ಯಾವುದೇ ಸಾಫ್ಟ್ವೇರ್ ಪರವಾನಗಿಗಳು, ಅಥವಾ ಯಾವುದೇ ಹಕ್ಕುಗಳನ್ನು ವರ್ಗಾವಣೆ ಮಾಡುವಂತಿಲ್ಲ;
- vi. ಬೇರೆಯವರು ಸೇವೆಗಳನ್ನು ಬಳಸಲು ಅಡಚಣೆಯಾಗುವಂತೆ ಅಥವಾ ಯಾವುದೇ ಸೇವೆ, ಡೇಟಾ, ಖಾತೆ, ಅಥವಾ ನೆಟ್ವರ್ಕ್ಗೆ ಪ್ರವೇಶ ಪಡೆಯಲು ಯಾವುದೇ ಅನಧಿಕೃತ ರೂಪದಲ್ಲಿ ಅವುಗಳನ್ನು ಬಳಸುವಂತಿಲ್ಲ;
- vii. ಅನಧಿಕೃತ ಮೂರನೇ-ಪಕ್ಷದ ಅಪ್ಲಿಕೇಶನ್ಗಳ ಮೂಲಕ ಸೇವೆಗಳಿಗೆ ಪ್ರವೇಶವನ್ನು ಸಕ್ರಿಯಗೊಳಿಸಿ ಅಥವಾ ಯಾವುದೇ Microsoft-ಅಧಿಕೃತ ಸಾಧನವನ್ನು ಮಾರ್ಪಡಿಸಿ (ಉದಾ., Xbox ಕನ್ಸೋಲ್ಗಳು, Microsoft Surface, ಇತ್ಯಾದಿ).
ಪಾವತಿ ನಿಯಮಗಳು
9. ಪಾವತಿ ನಿಯಮಗಳು. ನೀವು ಸೇವೆಯನ್ನು ಖರೀದಿಸಿದರೆ, ನಿಮ್ಮ ಖರೀದಿಗೆ ಈ ಪಾವತಿ ನಿಯಮಗಳು ಅನ್ವಯವಾಗುತ್ತವೆ ಮತ್ತು ನೀವು ಅವುಗಳನ್ನು ಒಪ್ಪುತ್ತೀರಿ.
- a. ಶುಲ್ಕಗಳು. ಸೇವೆಗಳ ಒಂದು ಭಾಗಕ್ಕೆ ಶುಲ್ಕವು ನಿಗದಿಯಾಗಿದ್ದರೆ, ನಿರ್ದಿಷ್ಟಪಡಿಸಿದ ಕರೆನ್ಸಿಯಲ್ಲಿ ಆ ಶುಲ್ಕವನ್ನು ಪಾವತಿಸಲು ನೀವು ಒಪ್ಪುತ್ತೀರಿ. ಸೇವೆಗಳಿಗೆ ಉಲ್ಲೇಖಿಸಿರುವ ದರವು, ಪ್ರತ್ಯೇಕವಾಗಿ ತಿಳಿಸದ ಹೊರತು, ಅನ್ವಯವಾಗುವ ಎಲ್ಲ ತೆರಿಗೆಗಳು, ಕರೆನ್ಸಿ ವಿನಿಮಯ ಫೈಸಲಾತಿಗಳನ್ನು ಒಳಗೊಂಡಿರುವುದಿಲ್ಲ. Skype ಪಾವತಿಸಿದ ಉತ್ಪನ್ನಗಳ ಎಲ್ಲ ಶುಲ್ಕಗಳು, ನಿರ್ದಿಷ್ಟಪಡಿಸದಿರುವುದನ್ನು ಹೊರತುಪಡಿಸಿ, ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಿರುತ್ತವೆ. ಇಂತಹಾ ತೆರಿಗೆಗಳು ಅಥವಾ ಬೇರೆ ಶುಲ್ಕಗಳನ್ನು ಪಾವತಿಸುವುದು ನಿಮ್ಮದೇ ಜವಾಬ್ದಾರಿ. ನಿಮ್ಮ ಬಿಲ್ಲಿಂಗ್ ಮಾಹಿತಿಯೊಂದಿಗೆ ಸಂಬಂಧವನ್ನು ಹೊಂದಿರುವ ನಿವಾಸ ವಿಳಾಸದ ಆಧಾರದ ಮೇಲೆ Skype ತೆರಿಗೆಗಳನ್ನು ಲೆಕ್ಕಾಚಾರ ಮಾಡುತ್ತದೆ. ಈ ವಿಳಾಸವು ನವೀಕೃತವಾಗಿದೆ ಮತ್ತು ನಿಖರವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ. Skype ಉತ್ಪನ್ನಗಳನ್ನು ಹೊರತುಪಡಿಸಿ, ತೆರಿಗೆಗಳನ್ನು, ನಿಮ್ಮ ಸ್ಥಳೀಯ ಕಾನೂನು ಬೇರೆ ಆಧಾರದಲ್ಲಿ ಲೆಕ್ಕಾಚಾರ ಹಾಕಬೇಕೆಂದು ಸೂಚಿಸಿರದ ಹೊರತು, ನಿಮ್ಮ Microsoft ಖಾತೆಯು ನೋಂದಣಿಯಾದ ಸಮಯದಲ್ಲಿ ನಿಮ್ಮ ಸ್ಥಳದ ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ. ನಿಮ್ಮಿಂದ ಸಕಾಲಕ್ಕೆ, ಪೂರ್ಣ ಪಾವತಿಯು ನಮಗೆ ಲಭ್ಯವಾಗದಿದ್ದರೆ ನಾವು ಸೇವೆಗಳನ್ನು ಅಮಾನತಿನಲ್ಲಿರಿಸಬಹುದು ಅಥವಾ ರದ್ದುಗೊಳಿಸಬಹುದು. ಪಾವತಿಸದೇ ಇರುವುದಕ್ಕಾಗಿ ಸೇವೆಯ ಅಮಾನತು ಅಥವಾ ರದ್ದುಗೊಳಿಸುವಿಕೆಯು ನಿಮ್ಮ ಖಾತೆಗೆ ಮತ್ತು ಅದರ ವಿಷಯಕ್ಕೆ ಪ್ರವೇಶಿಸಲು ಅಥವಾ ಬಳಕೆಗೆ ನಿಮಗೆ ತಡೆಯಾಗಬಹುದು. ನಿಮ್ಮ ಸ್ಥಳವನ್ನು ಮರೆಮಾಡುವ ಕಾರ್ಪೊರೇಟ್ ಅಥವಾ ಖಾಸಗಿ ನೆಟ್ವರ್ಕ್ ಮೂಲಕ ಇಂಟರ್ನೆಟ್ಗೆ ಸಂಪರ್ಕಿಸಿದರೆ ನಿಮ್ಮ ವಾಸ್ತವಿಕ ಸ್ಥಳದಲ್ಲಿ ಪ್ರದರ್ಶಿತವಾಗಿದ್ದಕ್ಕಿಂತ ಶುಲ್ಕಗಳು ಭಿನ್ನವಾಗಿರಲು ಕಾರಣವಾಗಬಹುದು. ನಿಮ್ಮ ಸ್ಥಳವನ್ನು ಅವಲಂಬಿಸಿ, ಕೆಲವು ವ್ಯವಹಾರಗಳನ್ನು ಮಾಡಲು ವಿದೇಶಿ ಕರೆನ್ಸಿ ಪರಿವರ್ತನೆಗಳ ಅಗತ್ಯವಿರಬಹುದು ಅಥವಾ ಇನ್ನೊಂದು ದೇಶದಲ್ಲಿ ಪ್ರಕ್ರಿಯೆಗೊಳಪಡಿಸಬೇಕಾಗಬಹುದು. ನೀವು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿದಾಗ ಅಂತಹ ಸೇವೆಗಳಿಗೆ ನಿಮ್ಮ ಬ್ಯಾಂಕ್ ಹೆಚ್ಚುವರಿ ಶುಲ್ಕವನ್ನು ವಿಧಿಸಬಹುದು. ವಿವರಗಳಿಗಾಗಿ ದಯವಿಟ್ಟು ನಿಮ್ಮ ಬ್ಯಾಂಕ್ ಸಂಪರ್ಕಿಸಿ.
- b. ನಿಮ್ಮ ಬಿಲ್ಲಿಂಗ್ ಖಾತೆ. ಸೇವೆಗಾಗಿ ಶುಲ್ಕಗಳನ್ನು ಪಾವತಿಸಲು, ಆ ಸೇವೆಗೆ ಸೈನ್ ಅಪ್ ಆಗುವಾಗ ಪಾವತಿ ವಿಧಾನವೊಂದನ್ನು ಒದಗಿಸುವಂತೆ ನಿಮ್ಮನ್ನು ಕೇಳಿಕೊಳ್ಳಬಹುದಾಗಿದೆ. Skype ಅನ್ನು ಹೊರತುಪಡಿಸಿ ಎಲ್ಲಾ ಸೇವೆಗಳಿಗೆ, Microsoft ಖಾತೆ ನಿರ್ವಹಣಾ ವೆಬ್ಸೈಟ್ (https://go.microsoft.com/fwlink/p/?linkid=618281) ನಲ್ಲಿ ಮತ್ತು Skype ಸಾಫ್ಟ್ವೇರ್ ಹಾಗೂ ಉತ್ಪನ್ನಗಳಿಗಾಗಿ https://skype.com/go/myaccount ನಲ್ಲಿ ನಿಮ್ಮ ಖಾತೆ ಪೋರ್ಟಲ್ಗೆ ಸೈನ್ ಇನ್ ಮಾಡುವ ಮೂಲಕ ನೀವು ನಿಮ್ಮ ಬಿಲ್ಲಿಂಗ್ ಮಾಹಿತಿ ಮತ್ತು ಪಾವತಿ ವಿಧಾನವನ್ನು ಪ್ರವೇಶಿಸಬಹುದು ಮತ್ತು ಬದಲಿಸಬಹುದು. ಹೆಚ್ಚುವರಿಯಾಗಿ, ನೀವು ಆಯ್ಕೆ ಮಾಡಿದ ಪಾವತಿ ವಿಧಾನಕ್ಕೆ ಸಂಬಂಧಿಸಿದಂತೆ ನಿಮ್ಮ ಬ್ಯಾಂಕ್ ಅಥವಾ ಅನ್ವಯವಾಗುವ ಪಾವತಿ ನೆಟ್ವರ್ಕ್ ನೀಡಿದ ಯಾವುದೇ ಪರಿಷ್ಕರಿಸಿದ ಖಾತೆ ಮಾಹಿತಿಯನ್ನು ಬಳಸಲು Microsoft ಗೆ ಅನುಮತಿ ನೀಡಲು ನೀವು ಒಪ್ಪುತ್ತೀರಿ. ನಾವು ನಿಮ್ಮ ವ್ಯವಹಾರ ಪೂರ್ಣಗೊಳಿಸಲು ಮತ್ತು ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಸನ್ನಿವೇಶದಲ್ಲಿ ನಿಮ್ಮನ್ನು ಸಂಪರ್ಕಿಸಲು ಸಾಧ್ಯವಾಗುವಂತೆ ಮಾಡಲು, ನಿಮ್ಮ ಇಮೇಲ್ ವಿಳಾಸ ಮತ್ತು ಪಾವತಿ ವಿಧಾನ ವಿವರಗಳು ಸೇರಿದಂತೆ, ನಿಮ್ಮ ಖಾತೆ ಮತ್ತು ಇತರ ಮಾಹಿತಿಯನ್ನು ಕೂಡಲೇ ಅಪ್ಡೇಟ್ ಮಾಡಲು ನೀವು ಒಪ್ಪುವಿರಿ. ನಿಮ್ಮ ಬಿಲ್ಲಿಂಗ್ ಖಾತೆಗೆ ನೀವು ಮಾಡಿದ ಬದಲಾವಣೆಗಳ ಮೇಲೆ ನಾವು ಸಕಾರಣವಾಗಿ ಕ್ರಮ ಕೈಗೊಳ್ಳುವ ಮೊದಲು, ನಿಮ್ಮ ಬಿಲ್ಲಿಂಗ್ ಖಾತೆಗೆ ಮಾಡಿದ ಬದಲಾವಣೆಗಳು ನಿಮ್ಮ ಬಿಲ್ಲಿಂಗ್ ಖಾತೆಗೆ ನಾವು ವಿಧಿಸುವ ಶುಲ್ಕಗಳ ಮೇಲೆ ಪರಿಣಾಮ ಬೀರುವುದಿಲ್ಲ.
- c. ಬಿಲ್ಲಿಂಗ್. Microsoft ಗೆ ಪಾವತಿ ವಿಧಾನವೊಂದನ್ನು ಒದಗಿಸುವ ಮೂಲಕ, ನೀವು (i) ನೀವು ಒದಗಿಸಿದ ಪಾವತಿ ವಿಧಾನವನ್ನು ಬಳಸಲು ನೀವು ಅಧಿಕಾರ ಹೊಂದಿದ್ದೀರಿ ಎಂದು ಹಾಗೂ ನೀವು ಒದಗಿಸುವ ಯಾವುದೇ ಪಾವತಿ ಮಾಹಿತಿಯು ಸರಿಯಾಗಿದೆ ಮತ್ತು ನಿಖರವಾಗಿದೆ ಎಂಬುದನ್ನು ನೀವು ಪ್ರತಿನಿಧಿಸುತ್ತೀರಿ; (ii) ಸೇವೆಗಳು ಅಥವಾ ಲಭ್ಯವಿರುವ ವಿಷಯಕ್ಕೆ ನಿಮ್ಮ ಪಾವತಿ ವಿಧಾನದ ಮೂಲಕ ಶುಲ್ಕ ವಿಧಿಸಲು Microsoft ಗೆ ಅಧಿಕಾರ ನೀಡುತ್ತೀರಿ; ಮತ್ತು (iii) ಈ ನಿಯಮಗಳು ಅನುಷ್ಠಾನದಲ್ಲಿರುವಾಗ ಸೇವೆಗಳಲ್ಲಿ ನೀವು ಸೈನ್ ಅಪ್ ಆಗಲು ಆರಿಸುವ ಅಥವಾ ಬಳಸುವ ಯಾವುದೇ ಪಾವತಿ ವೈಶಿಷ್ಟ್ಯಕ್ಕೆ ಶುಲ್ಕ ವಿಧಿಸಲು Microsoft ಗೆ ಅಧಿಕಾರ ನೀಡುತ್ತೀರಿ. ನಾವು ನಿಮಗೆ (a) ಮುಂಗಡವಾಗಿ; (b) ಖರೀದಿಯ ಸಮಯದಲ್ಲಿ; (c) ಖರೀದಿಯ ಕೆಲವೇ ಕ್ಷಣಗಳಲ್ಲಿ; ಅಥವಾ (d) ಚಂದಾದಾರಿಕೆ ಸೇವೆಗಳಿಗೆ ಪುನರಾವರ್ತನೆ ಆಧಾರದಲ್ಲಿ ಬಿಲ್ ಮಾಡಬಹುದಾಗಿದೆ. ಅಲ್ಲದೆ, ನೀವು ಅನುಮೋದಿಸಿದಷ್ಟು ಮೊತ್ತಕ್ಕೆ ನಾವು ನಿಮಗೆ ಶುಲ್ಕ ವಿಧಿಸಬಹುದು, ಮತ್ತು ಪುನರಾವರ್ತನೆ ಚಂದಾದಾರಿಕೆ ಸೇವೆಗಳಿಗೆ ವಿಧಿಸಲಾಗುವ ಶುಲ್ಕದ ಮೊತ್ತದಲ್ಲಿ ಯಾವುದೇ ಬದಲಾವಣೆಯಿದ್ದರೆ ನಾವು ನಿಮಗೆ ಮುಂಗಡವಾಗಿ ಸೂಚನೆ ನೀಡುತ್ತೇವೆ. ಹಿಂದೆ ಪ್ರಕ್ರಿಯೆಗೊಳಿಸದೇ ಇದ್ದ ಹಿಂದಿನ ನಿಮ್ಮ ಒಂದಕ್ಕಿಂತ ಹೆಚ್ಚು ಬಿಲ್ಲಿಂಗ್ ಅವಧಿಗಳ ಮೊತ್ತಗಳಿಗೆ ನಾವು ಏಕಕಾಲದಲ್ಲಿ ನಿಮಗೆ ಬಿಲ್ ಮಾಡಬಹುದಾಗಿದೆ.
- d. ಪುನರಾವರ್ತಿತ ಪಾವತಿಗಳು. ನೀವು ಚಂದಾದಾರಿಕೆ ಆಧಾರದಲ್ಲಿ ಸೇವೆಗಳನ್ನು ಖರೀದಿಸುವಾಗ (ಉದಾ. ಮಾಸಿಕ, ಪ್ರತೀ 3 ತಿಂಗಳಿಗೊಮ್ಮೆ ಅಥವಾ ವಾರ್ಷಿಕವಾಗಿ), ನೀವು ಪುನರಾವರ್ತಿತ ಪಾವತಿಗಳನ್ನು ದೃಢೀಕರಿಸುತ್ತೀರಿ, ಮತ್ತು ಪಾವತಿಗಳನ್ನು ನೀವು ಒಪ್ಪಿರುವ ಪುನರಾವರ್ತಿತ ಮಧ್ಯಂತರಗಳಲ್ಲಿ, ಆ ಸೇವೆಯ ಚಂದಾದಾರಿಕೆಯು ನಿಮ್ಮಿಂದ ಅಥವಾ Microsoft ನಿಂದ ಕೊನೆಗೊಳ್ಳುವವರೆಗೆ, ನೀವು ಆರಿಸಿದ ವಿಧಾನದ ಮೂಲಕ Microsoft ಗೆ ಪಾವತಿಗಳನ್ನು ಮಾಡಲಾಗುತ್ತದೆ ಎಂಬುದನ್ನು ನೀವು ಒಪ್ಪುತ್ತೀರಿ. ನಿಮ್ಮ ಸೇವೆ ಮುಂದುವರಿಕೆಗೆ ಶುಲ್ಕ ವಿಧಿಸುವುದನ್ನು ನಿಲ್ಲಿಸಲು ಮುಂದಿನ ಬಿಲ್ಲಿಂಗ್ ದಿನಾಂಕದ ಮೊದಲು ನಿಮ್ಮ ಸೇವೆಗಳನ್ನು ನೀವು ರದ್ದುಗೊಳಿಸಬೇಕು. ನೀವು ಸೇವೆಗಳನ್ನು ಹೇಗೆ ರದ್ದುಗೊಳಿಸಬಹುದು ಎಂಬುದರ ಕುರಿತು ನಾವು ನಿಮಗೆ ಸೂಚನೆಗಳನ್ನು ನೀಡುತ್ತೇವೆ. ಪುನರಾವರ್ತಿತ ಪಾವತಿಗಳಿಗೆ ಅಧಿಕಾರ ನೀಡುವ ಮೂಲಕ, ಅಂತಹ ಪಾವತಿಯನ್ನು ಎಲೆಕ್ಟ್ರಾನಿಕ್ ಡೆಬಿಟ್ಗಳು ಅಥವಾ ಫಂಡ್ ವರ್ಗಾವಣೆಗಳಾಗಿ ಅಥವಾ ನಿಮ್ಮ ನಿಯೋಜಿತ ಖಾತೆಯಿಂದ ಎಲೆಕ್ಟ್ರಾನಿಕ್ ಕರಡುಗಳಾಗಿ (ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ ಅಥವಾ ಅಂತಹುದೇ ಪಾವತಿಗಳಿಗಾಗಿ) ಅಥವಾ ನಿಮ್ಮ ನಿಯೋಜಿತ ಖಾತೆಗೆ ಶುಲ್ಕಗಳಾಗಿ (ಕ್ರೆಡಿಟ್ ಕಾರ್ಡ್ ಅಥವಾ ಅಂತಹುದೇ ಪಾವತಿಗಳಿಗಾಗಿ) (ಒಟ್ಟಾರೆಯಾಗಿ, "ಎಲೆಕ್ಟ್ರಾನಿಕ್ ಪಾವತಿಗಳು") ಪ್ರಕ್ರಿಯೆಗೊಳಿಸಲು ನೀವು Microsoft ಗೆ ಅಧಿಕಾರ ನೀಡುತ್ತಿರುವಿರಿ. ಚಂದಾದಾರಿಕೆ ಶುಲ್ಕಗಳನ್ನು ಸಾಮಾನ್ಯವಾಗಿ ಅನ್ವಯಿಸುವ ಚಂದಾದಾರಿಕೆ ಅವಧಿಗೆ ಮುಂಚಿತವಾಗಿ ವಿಧಿಸಲಾಗುತ್ತದೆ. ಯಾವುದೇ ಪಾವತಿಯು ಹಣ ಪಾವತಿಯಾಗದೆ ವಾಪಸಾದರೆ ಅಥವಾ ಯಾವುದೇ ಕ್ರೆಡಿಟ್ ಕಾರ್ಡ್ ಅಥವಾ ಅಂತಹ ವಹಿವಾಟು ತಿರಸ್ಕೃತವಾದರೆ ಅಥವಾ ನಿರಾಕರಿಸಲ್ಪಟ್ಟರೆ, ಅನ್ವಯವಾಗುವ ಯಾವುದೇ ಐಟಂ ಮರಳಿಸುವ, ತಿರಸ್ಕರಿಸುವ ಅಥವಾ ಅಸಮರ್ಪಕ ನಿಧಿಗಳ ಶುಲ್ಕವನ್ನು ಸಂಗ್ರಹಿಸುವ ಮತ್ತು ಇಂತಹ ಯಾವುದೇ ಪಾವತಿಯನ್ನು ಎಲೆಕ್ಟ್ರಾನಿಕ್ ಪಾವತಿಯಾಗಿ ಪ್ರಕ್ರಿಯೆಗೊಳಿಸುವ ಹಕ್ಕನ್ನು, Microsoft ಅಥವಾ ಅದರ ಸೇವಾ ಪೂರೈಕೆದಾರರು ಕಾಯ್ದಿರಿಸಿಕೊಳ್ಳುತ್ತಾರೆ.
- e. ಆನ್ಲೈನ್ ಹೇಳಿಕೆ ಮತ್ತು ದೋಷಗಳು. Skype ಹೊರತುಪಡಿಸಿ ಎಲ್ಲಾ ಸೇವೆಗಳಿಗೆ, Microsoft ನಿಮಗೆ Microsoft ಖಾತೆ ನಿರ್ವಹಣೆ ವೆಬ್ಸೈಟ್ (https://go.microsoft.com/fwlink/p/?linkid=618282) ನಲ್ಲಿ ಆನ್ಲೈನ್ ಬಿಲ್ಲಿಂಗ್ ಹೇಳಿಕೆಯನ್ನು ನೀಡುತ್ತದೆ, ಅಲ್ಲಿ ನೀವು ನಿಮ್ಮ ಹೇಳಿಕೆಯನ್ನು ವೀಕ್ಷಿಸಬಹುದು ಮತ್ತು ಮುದ್ರಿಸಬಹುದು. Skype ಗಾಗಿ, www.skype.com (https://www.skype.com) ನಲ್ಲಿ ನಿಮ್ಮ ಖಾತೆಗೆ ಸೈನ್ ಇನ್ ಆಗುವ ಮೂಲಕ ನಿಮ್ಮ ಆನ್ಲೈನ್ ಹೇಳಿಕೆಗಳನ್ನು ಪ್ರವೇಶಿಸಬಹುದಾಗಿದೆ. ಇದು ನಾವು ಒದಗಿಸುವ ಏಕೈಕ ಬಿಲ್ ಸ್ಟೇಟ್ಮೆಂಟ್ ಆಗಿರುತ್ತದೆ. ನಾವು ನಿಮ್ಮ ಬಿಲ್ನಲ್ಲಿ ತಪ್ಪು ಮಾಡಿದ್ದರೆ, ನಿಮ್ಮ ಬಿಲ್ನಲ್ಲಿ ಮೊದಲು ತಪ್ಪು ಕಾಣಿಸಿಕೊಂಡ 90 ದಿನಗಳೊಳಗೆ ನೀವು ನಮಗೆ ತಿಳಿಸಬೇಕು. ಆ ಬಳಿಕ ನಾವು ಪ್ರಾಮಾಣಿಕವಾಗಿ ಶುಲ್ಕದ ತನಿಖೆ ನಡೆಸುತ್ತೇವೆ. ಕಾನೂನಿನಡಿ ಅಗತ್ಯವಿರುವ ಸನ್ನಿವೇಶವನ್ನು ಹೊರತುಪಡಿಸಿ, ನೀವು ಆ ಸಮಯದೊಳಗೆ ನಮಗೆ ತಿಳಿಸದಿದ್ದರೆ, ದೋಷದ ಪರಿಣಾಮವಾಗಿ ಆಗುವ ನಷ್ಟದ ಕ್ಲೇಮುಗಳು ಮತ್ತು ಬಾಧ್ಯತೆಯಿಂದ ನೀವು ನಮ್ಮನ್ನು ಬಿಡುಗಡೆಗೊಳಿಸುತ್ತೀರಿ ಮತ್ತು ದೋಷವನ್ನು ನಾವು ಸರಿಪಡಿಸಬೇಕಾಗಿಲ್ಲ ಅಥವಾ ಮರುಪಾವತಿ ಮಾಡಬೇಕಾಗಿಲ್ಲ. Microsoft ಬಿಲ್ಲಿಂಗ್ ದೋಷವನ್ನು ಗುರುತಿಸಿದರೆ, ನಾವು ಆ ದೋಷವನ್ನು 90 ದಿನಗಳೊಳಗೆ ಸರಿಪಡಿಸುತ್ತೇವೆ. ಈ ನೀತಿಯು ಅನ್ವಯವಾಗಬಹುದಾದ ಯಾವುದೇ ಶಾಸನಾತ್ಮಕ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ.
- f. ಮರುಪಾವತಿ ನೀತಿ. ಕಾನೂನು ಅಥವಾ ನಿರ್ದಿಷ್ಟ ಸೇವಾ ಕೊಡುಗೆಯ ನಿಯಮಗಳಿಂದ ಒದಗಿಸಿರುವುದರ ಹೊರತಾಗಿ, ಎಲ್ಲ ಖರೀದಿಗಳು ಅಂತಿಮ ಹಾಗೂ ಮರು-ಪಾವತಿರಹಿತವಾಗಿರುತ್ತವೆ. Microsoft ತಪ್ಪಾಗಿ ನಿಮಗೆ ಶುಲ್ಕ ವಿಧಿಸಿದೆ ಎಂದು ನೀವು ಭಾವಿಸಿದರೆ, ಅಂತಹಾ ಶುಲ್ಕದ ಬಗ್ಗೆ ನೀವು ನಮ್ಮನ್ನು 90 ದಿನಗಳೊಳಗೆ ಸಂಪರ್ಕಿಸಬೇಕು. ಕಾನೂನಿನಡಿ ಅಗತ್ಯವಿರುವ ಹೊರತು, 90 ದಿನಗಳಿಗಿಂತ ಹೆಚ್ಚು ಸಮಯದ ಯಾವುದೇ ಶುಲ್ಕಗಳಿಗೆ ಮರುಪಾವತಿ ಮಾಡಲಾಗುವುದಿಲ್ಲ. ಕಾನೂನಿನಡಿ ಅಗತ್ಯವಿರುವ ಹೊರತು ಮರುಪಾವತಿಗಳು ಅಥವಾ ಕ್ರೆಡಿಟ್ಗಳನ್ನು ನೀಡುವ ಹಕ್ಕನ್ನು ನಮ್ಮ ಪೂರ್ಣ ವಿವೇಚನೆಯಲ್ಲಿ ಕಾಯ್ದಿರಿಸುತ್ತೇವೆ. ನಾವು ಮರುಪಾವತಿ ಅಥವಾ ಕ್ರೆಡಿಟ್ ನೀಡಿದರೆ, ಭವಿಷ್ಯದಲ್ಲಿ ಇದೇ ರೀತಿಯ ಅಥವಾ ಇಂತಹಾ ಮರುಪಾವತಿಯನ್ನು ನೀಡಬೇಕೆಂಬ ಬಾಧ್ಯತೆ ನಮ್ಮ ಮೇಲಿರುವುದಿಲ್ಲ. ಈ ಮರುಪಾವತಿ ನೀತಿಯು ಅನ್ವಯವಾಗಬಹುದಾದ ಯಾವುದೇ ಶಾಸನಾತ್ಮಕ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ. ಮರುಪಾವತಿ ಮಾಹಿತಿಗಾಗಿ, ದಯವಿಟ್ಟು ನಮ್ಮ ಸಹಾಯ ವಿಷಯ (https://go.microsoft.com/fwlink/p/?linkid=618283) ಕ್ಕೆ ಭೇಟಿಕೊಡಿ. ನೀವು ತೈವಾನ್ ಅಥವಾ ಇಸ್ರೇಲ್ನಲ್ಲಿ ವಾಸವಾಗಿದ್ದರೆ, ತೈವಾನ್ನ ಗ್ರಾಹಕ ರಕ್ಷಣೆಯ ಕಾಯಿದೆ ಮತ್ತು ಅದರ ಸಂಬಂಧಿತ ನಿಯಮಗಳ ಪ್ರಕಾರ, ಇಂತಹ ವಿಷಯ ಅಥವಾ ಸೇವೆಯನ್ನು ಆನ್ಲೈನ್ನಲ್ಲಿ ಒದಗಿಸಿದಾಗ ಅಮೂರ್ತ ರೂಪದಲ್ಲಿ ಒದಗಿಸಲಾದ ಡಿಜಿಟಲ್ ವಿಷಯಕ್ಕೆ ಸಂಬಂಧಪಟ್ಟ ಎಲ್ಲಾ ಖರೀದಿಗಳು ಮತ್ತು/ಅಥವಾ ಆನ್-ಲೈನ್ ಸೇವೆಗಳು ಅಂತಿಮವಾಗಿರುತ್ತವೆ ಮತ್ತು ಮರುಪಾವತಿಯಾಗುವುದಿಲ್ಲ. ನೀವು ಯಾವುದೇ ಕೂಲಿಂಗ್ ಆಫ್ ಅವಧಿ ಅಥವಾ ಯಾವುದೇ ಮರುಪಾವತಿಯನ್ನು ಪಡೆಯಲು ಅಧಿಕಾರವನ್ನು ಪಡೆದಿರುವುದಿಲ್ಲ.
- g. ಸೇವೆಗಳನ್ನು ರದ್ದುಗೊಳಿಸುವುದು. ನೀವು ಸೇವೆಯನ್ನು ಯಾವುದೇ ಸಮಯದಲ್ಲಿ, ಕಾರಣ ಸಹಿತ ಅಥವಾ ಕಾರಣವಿಲ್ಲದೆ, ರದ್ದುಗೊಳಿಸಬಹುದು. ಪಾವತಿಸಿದ ಸೇವೆಗಳನ್ನು ರದ್ದುಗೊಳಿಸುವುದರಿಂದ ಸೇವೆಯನ್ನು ಮುಂದುವರಿಸಲು ಭವಿಷ್ಯದ ಶುಲ್ಕಗಳು ನಿಲ್ಲುತ್ತದೆ. ಸೇವೆಯನ್ನು ರದ್ದುಗೊಳಿಸಲು ಮತ್ತು ನೀವು ಅರ್ಹರಾಗಿದ್ದರೆ, ಮರುಪಾವತಿಗೆ ವಿನಂತಿಸಲು Microsoft ಖಾತೆ ನಿರ್ವಹಣಾ ವೆಬ್ಸೈಟ್ ಗೆ ಹೋಗಿ. Skype ಗೆ, ಇಲ್ಲಿ (https://go.microsoft.com/fwlink/p/?linkid=618286) ಒದಗಿಸಲಾದ ಮಾಹಿತಿಯನ್ನು ಬಳಸಿ ಹಿಂತೆಗೆತದ ಫಾರ್ಮ್ ಅನ್ನು ದಯವಿಟ್ಟು ಪೂರ್ಣಗೊಳಿಸಿ. ಸೇವೆಗಳನ್ನು (i) ರದ್ದುಗೊಳಿಸುವ ಸಮಯದಲ್ಲಿ ನೀವು ಮರುಪಾವತಿಯನ್ನು ಪಡೆಯಲು ಸಾಧ್ಯವಾಗಲಾರದು; (ii) ರದ್ದುಗೊಳಿಸುವಿಕೆ ಶುಲ್ಕ ಪಾವತಿಸಲು ನೀವು ಬಾಧ್ಯರಾಗಿರಬಹುದು; (iii) ರದ್ದುಗೊಳಿಸುವಿಕೆಯ ದಿನಾಂಕಕ್ಕಿಂತ ಮೊದಲು ನಿಮ್ಮ ಸೇವೆಗಳ ಬಿಲ್ಲಿಂಗ್ ಖಾತೆಗೆ ವಿಧಿಸಲಾದ ಎಲ್ಲ ಶುಲ್ಕಗಳನ್ನು ಪಾವತಿಸಲು ನೀವು ಬಾಧ್ಯರಾಗಿರಬಹುದು; ಮತ್ತು (iv) ನೀವು ಸೇವೆಗಳನ್ನು ರದ್ದುಗೊಳಿಸಿದಾಗ ನಿಮ್ಮ ಖಾತೆಯ ಬಳಕೆಯನ್ನು ಅಥವಾ ಅದಕ್ಕೆ ಪ್ರವೇಶವನ್ನು ನೀವು ಕಳೆದುಕೊಳ್ಳಬಹುದು; ಅಥವಾ, ನೀವು ತೈವಾನ್ ಅಥವಾ ಇಸ್ರೇಲ್ನಲ್ಲಿ ವಾಸಿಸುತ್ತಿದ್ದರೆ, (v) ರದ್ದುಗೊಳಿಸುವ ಸಮಯದಲ್ಲಿ ಲೆಕ್ಕಾಚಾರ ಮಾಡಿದ ನಿಮ್ಮ ಪಾವತಿಯ ಬಳಕೆಯಾಗದ ಶುಲ್ಕದಷ್ಟು ಪ್ರಮಾಣದ ಮರುಪಾವತಿ ಮೊತ್ತವನ್ನು ನೀವು ಪಡೆಯಬಹುದು ಎಂಬ ಈ ಎಲ್ಲಾ ಕಾರಣಗಳಿಂದ ಸೇವೆಗಳನ್ನು ವಿವರಿಸುವ ಕೊಡುಗೆಯನ್ನು ನೀವು ಪುನಃ ನೋಡಬೇಕು. ನೀವು ಇಸ್ರೇಲ್ನಲ್ಲಿ ವಾಸಿಸುತ್ತಿದ್ದರೆ https://support.microsoft.com/help/4027815 ನಲ್ಲಿ ಪಟ್ಟಿ ಮಾಡಲಾದ ಯಾವುದೇ ವಿಧಾನದಿಂದ ನೀವು ರದ್ದುಗೊಳಿಸಬಹುದು. ನೀವು ಅರ್ಹರಾಗಿದ್ದರೆ ಮರುಪಾವತಿ ಪಡೆಯಲು ದಯವಿಟ್ಟು ದೂರವಾಣಿ ಮೂಲಕ Microsoft ಪ್ರತಿನಿಧಿಯನ್ನು ಸಂಪರ್ಕಿಸಿ. ಸೆಕ್ಷನ್ 4 ರಲ್ಲಿ ವಿವರಿಸಿರುವಂತೆ ನಾವು ನಿಮ್ಮ ಡೇಟಾವನ್ನು ಪ್ರಕ್ರಿಯೆಗೊಳಿಸುತ್ತೇವೆ. ನೀವು ರದ್ದುಗೊಳಿಸಿದರೆ, ನಿಮ್ಮ ಪ್ರಸ್ತುತ ಸೇವಾ ಅವಧಿಯು ಕೊನೆಗೊಳ್ಳುವ ಸಮಯದಲ್ಲಿ, ಅಥವಾ ನಿಮ್ಮ ಖಾತೆಗೆ ನಾವು ನಿಯತಕಾಲಿಕ ಆಧಾರದಲ್ಲಿ ಬಿಲ್ ಮಾಡಿದರೆ, ನೀವು ರದ್ದುಗೊಳಿಸಿದ ಅವಧಿಯ ಕೊನೆಗೆ ಸೇವೆಗಳಿಗೆ ನಿಮ್ಮ ಪ್ರವೇಶಾವಕಾಶವು ಕೊನೆಗೊಳ್ಳುತ್ತದೆ. ನಿಮ್ಮ ಸೇವೆಗಳ ಪಾವತಿಗಾಗಿ ನಿಮ್ಮ ಬ್ಯಾಂಕ್ನೊಂದಿಗೆ ಚಾರ್ಜ್ಬ್ಯಾಕ್ ಅಥವಾ ರಿವರ್ಸಲ್ ಅನ್ನು ನೀವು ಪ್ರಾರಂಭಿಸಿದರೆ, ಮೂಲ ಪಾವತಿ ಮಾಡಿದ ದಿನಾಂಕದಂದು ನೀವು ರದ್ದುಗೊಳಿಸಿದ್ದೀರಿ ಎಂದು ನಾವು ಭಾವಿಸುತ್ತೇವೆ, ಮತ್ತು ನಿಮ್ಮ ಸೇವೆಯನ್ನು ತಕ್ಷಣವೇ ರದ್ದುಗೊಳಿಸಲು ಮತ್ತು/ಅಥವಾ ಅಂತಹ ಪಾವತಿಗೆ ಬದಲಾಗಿ ನಿಮಗೆ ಒದಗಿಸಲಾದ ಯಾವುದೇ ವಿಷಯವನ್ನು ಹಿಂತೆಗೆದುಕೊಳ್ಳಲು ನೀವು ನಮಗೆ ಅಧಿಕಾರ ನೀಡುತ್ತೀರಿ.
- h. ಪ್ರಯೋಗ-ಅವಧಿಯ ಕೊಡುಗೆಗಳು. ನೀವು ಯಾವುದೇ ಪ್ರಯೋಗ ಅವಧಿಯ ಕೊಡುಗೆಯಲ್ಲಿ ಪಾಲ್ಗೊಳ್ಳುತ್ತಿದ್ದರೆ, ಪ್ರಯೋಗ ಅವಧಿಯ ಅಂತ್ಯಭಾಗದಲ್ಲಿ ಸೇವೆ (ಗಳು) ಮುಂದುವರಿಸಲು ಶುಲ್ಕ ವಿಧಿಸುವುದನ್ನು ತಪ್ಪಿಸಲು ನೀವು ಕೊಡುಗೆಯನ್ನು ಸ್ವೀಕರಿಸುವಾಗ ನಿಮಗೆ ಸಂವಹನ ಮಾಡಿದ ಸಮಯದೊಳಗೆ ನೀವು ಪ್ರಯೋಗ ಸೇವೆ(ಗಳನ್ನು) ರದ್ದುಮಾಡುವುದು ಅಗತ್ಯವಾಗಿರುತ್ತದೆ. ಕೆಲವು ಪ್ರಾಯೋಗಿಕ-ಅವಧಿಯ ಆಫರ್ಗಳಿಗಾಗಿ, ನಾವು ಸ್ವಯಂ-ನವೀಕರಣವನ್ನು ಆನ್ ಮಾಡಬೇಕಾಗಬಹುದು.
- i. ಪ್ರಚಾರಾತ್ಮಕ ಕೊಡುಗೆಗಳು. ಕಾಲದಿಂದ ಕಾಲಕ್ಕೆ, ಪ್ರಯೋಗ ಅವಧಿಗಾಗಿ ಸೇವೆಗಳನ್ನು Microsoft ಉಚಿತವಾಗಿ ಒದಗಿಸಬಹುದಾಗಿದೆ. ಕೊಡುಗೆಯ ನಿಯಮಗಳನ್ನು ನೀವು ದುರುಪಯೋಗಪಡಿಸಿಕೊಳ್ಳುತ್ತಿದ್ದೀರಿ ಎಂದು Microsoft ಪತ್ತೆ ಹಚ್ಚಿದರೆ (ತನ್ನ ಸಕಾರಣದ ವಿವೇಚನೆಯಲ್ಲಿ) ಇಂತಹ ಸೇವೆಗಳಿಗೆ ಶುಲ್ಕ ವಿಧಿಸುವ (ಸಾಮಾನ್ಯ ದರದಲ್ಲಿ) ಹಕ್ಕನ್ನು Microsoft ಕಾಯ್ದಿರಿಸಿಕೊಳ್ಳುತ್ತದೆ.
- j. ದರ ಬದಲಾವಣೆಗಳು. ನಾವು ಯಾವುದೇ ಸಮಯದಲ್ಲಿ ಸೇವೆಗಳ ದರವನ್ನು ಬದಲಾಯಿಸಬಹುದು ಮತ್ತು ನೀವು ಪುನರಾವರ್ತಿತ ಖರೀದಿಯನ್ನು ಹೊಂದಿದ್ದರೆ, ದರ ಬದಲಾವಣೆಯ 15 ದಿನಗಳ ಮೊದಲು ನಾವು ನಿಮಗೆ ಇಮೇಲ್ ಮೂಲಕ, ಅಥವಾ ಇತರ ಸಮಂಜಸವಾದ ರೀತಿಯಲ್ಲಿ ಸೂಚನೆ ನೀಡುತ್ತೇವೆ. ದರ ಬದಲಾವಣೆಗೆ ನೀವು ಒಪ್ಪದಿದ್ದರೆ, ದರ ಬದಲಾವಣೆಯು ಅನುಷ್ಠಾನಕ್ಕೆ ಬರುವ ಮೊದಲು ನೀವು ಸೇವೆಗಳನ್ನು ರದ್ದುಗೊಳಿಸಬೇಕು ಮತ್ತು ಬಳಸುವುದನ್ನು ನಿಲ್ಲಿಸಬೇಕು. ನಿಮ್ಮ ಸೇವಾ ಕೊಡುಗೆಗೆ ನಿಗದಿತ ಅವಧಿ ಮತ್ತು ದರ ಇದ್ದರೆ, ಆ ನಿಗದಿತ ಅವಧಿಗೆ ಆ ದರವು ಅನುಷ್ಠಾನದಲ್ಲಿರುತ್ತದೆ.
- k. ನಿಮಗೆ ಪಾವತಿಗಳು. ನಾವು ನಿಮಗೆ ಹಣ ಪಾವತಿಸಬೇಕಿದ್ದರೆ, ಆ ಪಾವತಿಯು ನಿಮಗೆ ದೊರೆಯುವಂತಾಗಲು ನಮಗೆ ಅಗತ್ಯವಿರುವ ಯಾವುದೇ ಮಾಹಿತಿಯನ್ನು ನೀವು ಸೂಕ್ತ ಸಮಯದಲ್ಲಿ ಮತ್ತು ನಿಖರವಾಗಿ ನೀಡುತ್ತೀರಿ ಎಂಬುದನ್ನು ಒಪ್ಪುತ್ತೀರಿ. ಅನ್ವಯವಾಗುವ ಕಾನೂನಿಗೆ ಒಳಪಟ್ಟು, ನಿಮಗೆ ಮಾಡಲಾಗುವ ಈ ಪಾವತಿಯ ಪರಿಣಾಮ ಅನ್ವಯವಾಗಬಹುದಾದ ಯಾವುದೇ ತೆರಿಗೆಗಳು ಮತ್ತು ಶುಲ್ಕಗಳಿಗೆ ನೀವೇ ಜವಾಬ್ದಾರರು. ಯಾವುದೇ ಪಾವತಿಗೆ ನಿಮ್ಮ ಹಕ್ಕಿನ ಮೇಲೆ ನಾವು ವಿಧಿಸುವ ಯಾವುದೇ ಬೇರೆ ಷರತ್ತುಗಳನ್ನು ಕೂಡ ನೀವು ಪಾಲಿಸಬೇಕು. ನೀವು ತಪ್ಪಾಗಿ ಪಾವತಿಯೊಂದನ್ನು ಪಡೆದಿದ್ದರೆ, ನಾವು ಅದನ್ನು ವಾಪಾಸು ತೆಗೆದುಕೊಳ್ಳಬಹುದು ಅಥವಾ ನೀವು ಪಾವತಿಯನ್ನು ಹಿಂತಿರುಗಿಸಬೇಕಾಗಬಹುದು. ಈ ರೀತಿ ಮಾಡುವ ನಮ್ಮ ಪ್ರಯತ್ನಕ್ಕೆ ನಮ್ಮೊಂದಿಗೆ ಸಹಕರಿಸಲು ನೀವು ಒಪ್ಪುತ್ತೀರಿ. ಹಿಂದಿನ ಯಾವುದೇ ಹೆಚ್ಚುವರಿ ಪಾವತಿಯನ್ನು ಹೊಂದಿಸಲು ನಾವು ನಿಮಗೆ ಸೂಚನೆ ನೀಡದೆಯೇ ಪಾವತಿಯ ಮೊತ್ತವನ್ನು ತಗ್ಗಿಸಬಹುದಾಗಿದೆ.
- l. ಉಡುಗೊರೆ ಕಾರ್ಡ್ಗಳು. ಉಡುಗೊರೆ ಕಾರ್ಡ್ಗಳನ್ನು (Skype ಉಡುಗೊರೆ ಕಾರ್ಡ್ಗಳನ್ನು ಹೊರತುಪಡಿಸಿ) ಪಡೆದುಕೊಳ್ಳುವುದು ಮತ್ತು ಬಳಸುವುದು Microsoft ಉಡುಗೊರೆ ಕಾರ್ಡ್ ನಿಯಮಗಳು ಮತ್ತು ಷರತ್ತುಗಳ (https://support.microsoft.com/help/10562/microsoft-account-gift-card-terms-and-conditions) ಅಧೀನಕ್ಕೆ ಒಳಪಟ್ಟಿರುತ್ತದೆ. Skype ಉಡುಗೊರೆ ಕಾರ್ಡ್ಗಳ ಕುರಿತ ಮಾಹಿತಿಯು Skype ನ ಸಹಾಯ ಪುಟ (https://go.microsoft.com/fwlink/?LinkId=615383) ದಲ್ಲಿ ಲಭ್ಯವಿದೆ.
- m. ಬ್ಯಾಂಕ್ ಖಾತೆ ಪಾವತಿ ವಿಧಾನ. ನೀವು ಒಂದು ಅರ್ಹವಾಗಿರುವ ಬ್ಯಾಂಕ್ ಖಾತೆಯನ್ನು ನಿಮ್ಮ ಪಾವತಿ ವಿಧಾನವಾಗಿ ಬಳಸಲು ಅದನ್ನು ನಿಮ್ಮ Microsoft ಖಾತೆಯೊಂದಿಗೆ ನೋಂದಾಯಿಸಿಕೊಳ್ಳಬಹುದು. ಅರ್ಹ ಬ್ಯಾಂಕ್ ಖಾತೆಗಳಲ್ಲಿ, ನೇರ ಡೆಬಿಟ್ ನಮೂದುಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಹೊಂದಿರುವ ಹಣಕಾಸು ಸಂಸ್ಥೆಯಲ್ಲಿ ಹೊಂದಿರುವಂತಹ ಖಾತೆಗಳು (ಉದಾ: ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ ("ACH") ನಮೂದುಗಳನ್ನು ಬೆಂಬಲಿಸುವ ಯುನೈಟೆಡ್ ಸ್ಟೇಟ್ಸ್ ಮೂಲದ ಹಣಕಾಸು ಸಂಸ್ಥೆ, ಏಕ ಯೂರೋ ಪಾವತಿ ಕ್ಷೇತ್ರವನ್ನು ("SEPA") ಬೆಂಬಲಿಸುವ ಯೂರೋಪಿಯನ್ ಹಣಕಾಸು ಸಂಸ್ಥೆ ಅಥವಾ ನೆದರ್ಲ್ಯಾಂಡ್ಸ್ ನಲ್ಲಿರುವ "iDEAL") ಸೇರಿವೆ. ನಿಮ್ಮ ಬ್ಯಾಂಕ್ ಖಾತೆಯನ್ನು ನಿಮ್ಮ Microsoft ಖಾತೆಯಲ್ಲಿ (ಉದಾ SEPA ಪ್ರಕರಣದಲ್ಲಿ "ಮ್ಯಾಂಡೇಟ್") ಒಂದು ಪಾವತಿ ವಿಧಾನವಾಗಿ ಸೇರಿಸಿದಾಗ ನೀವು ಒಪ್ಪಿದ ನಿಯಮಗಳೂ ಸಹ ಅನ್ವಯಿಸುತ್ತವೆ. ನಿಮ್ಮ ನೋಂದಾಯಿತ ಬ್ಯಾಂಕ್ ಖಾತೆಯು ನಿಮ್ಮ ಹೆಸರಿನಲ್ಲಿದೆ ಅಥವಾ ಈ ಬ್ಯಾಂಕ್ ಖಾತೆಯನ್ನು ನಿಮ್ಮ ಪಾವತಿ ವಿಧಾನವಾಗಿ ಬಳಸಲು ಮತ್ತು ನೋಂದಾಯಿಸಲು ನಿಮಗೆ ಅಧಿಕಾರವಿದೆ ಎಂಬುದನ್ನು ನೀವು ಪ್ರತಿನಿಧಿಸುತ್ತೀರಿ ಹಾಗೂ ಅದರ ವಾರಂಟಿಯನ್ನು ನೀಡುತ್ತೀರಿ. ನಿಮ್ಮ ಬ್ಯಾಂಕ್ ಖಾತೆಯನ್ನು ನಿಮ್ಮ ಪಾವತಿ ವಿಧಾನವಾಗಿ ನೋಂದಾಯಿಸುವ ಅಥವಾ ಆಯ್ಕೆಮಾಡುವ ಮೂಲಕ, ನಿಮ್ಮ ಖರೀದಿಯ ಒಟ್ಟು ಮೊತ್ತಕ್ಕಾಗಿ ಅಥವಾ ಚಂದಾದಾರಿಕೆಯ ಶುಲ್ಕಕ್ಕಾಗಿ (ನಿಮ್ಮ ಚಂದಾದಾರಿಕೆ ಸೇವೆಯ ನಿಯಮಗಳಿಗೆ ಅನುಸಾರವಾಗಿ) ನಿಮ್ಮ ಬ್ಯಾಂಕ್ ಖಾತೆಯಿಂದ ಒಂದು ಅಥವಾ ಹೆಚ್ಚಿನ ಡೆಬಿಟ್ಗಳನ್ನು ಪ್ರಾರಂಭಿಸಲು (ಮತ್ತು, ಅಗತ್ಯವಿದ್ದಲ್ಲಿ, ದೋಷಗಳನ್ನು ಸರಿಪಡಿಸಲು ನಿಮ್ಮ ಬ್ಯಾಂಕ್ ಖಾತೆಗೆ ಒಂದು ಅಥವಾ ಹೆಚ್ಚು ಕ್ರೆಡಿಟ್ಗಳನ್ನು ಮಾಡಲು, ಮರುಪಾವತಿ ಅಥವಾ ಅಂತಹುದೇ ಉದ್ದೇಶಕ್ಕಾಗಿ), ನೀವು Microsoft ಗೆ (ಅಥವಾ ಅದರ ಏಜೆಂಟ್ಗಳಿಗೆ) ಅಧಿಕಾರವನ್ನು ನೀಡುತ್ತೀರಿ, ಮತ್ತು ಅಂತಹ ಡೆಬಿಟ್ಗಳನ್ನು ಕಡಿತಗೊಳಿಸಲು ಅಥವಾ ಅಂತಹ ಕ್ರೆಡಿಟ್ಗಳನ್ನು ಸ್ವೀಕರಿಸಲು ನಿಮ್ಮ ಬ್ಯಾಂಕ್ ಖಾತೆಯನ್ನು ಹೊಂದಿರುವ ಹಣಕಾಸು ಸಂಸ್ಥೆಗೆ ನೀವು ಅಧಿಕಾರವನ್ನು ನೀಡುತ್ತೀರಿ. ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ನಿಮ್ಮ Microsoft ಖಾತೆಯಿಂದ ತೆಗೆದುಹಾಕುವ ತನಕ ಈ ಅಧಿಕಾರವು ಪೂರ್ಣ ರೂಪದಲ್ಲಿ ಮತ್ತು ಪರಿಣಾಮಕಾರಿಯಾಗಿ ಜಾರಿಯಲ್ಲಿರುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಂಡಿದ್ದೀರಿ. ದೋಷದ ಕಾರಣದಿಂದ ನಿಮಗೆ ಶುಲ್ಕವನ್ನು ವಿಧಿಸಲಾಗಿದೆಯೆಂದು ನೀವು ಭಾವಿಸುವುದಾದರೆ ಸಾಧ್ಯವಾದಷ್ಟು ಬೇಗನೇ ವಿಭಾಗ 4.e ನಲ್ಲಿ ವಿವರಿಸಿರುವಂತೆ ಗ್ರಾಹಕ ಬೆಂಬಲವನ್ನು ಸಂಪರ್ಕಿಸಿ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ನಡೆಯುವ ಯಾವುದೇ ಮೋಸದ, ತಪ್ಪಾದ ಅಥವಾ ಅನಧಿಕೃತ ವಹಿವಾಟುಗಳ ಮೇಲಿನ ನಿಮ್ಮ ಹೊಣೆಗಾರಿಕೆಯನ್ನು ನಿಮ್ಮ ರಾಷ್ಟ್ರದಲ್ಲಿ ಅನ್ವಯಿಸುವ ಕಾನೂನುಗಳು ಸಹ ಸೀಮಿತಗೊಳಿಸಬಹುದು. ಬ್ಯಾಂಕ್ ಖಾತೆಯನ್ನು ನಿಮ್ಮ ಪಾವತಿ ವಿಧಾನವಾಗಿ ನೋಂದಾಯಿಸುವ ಅಥವಾ ಆಯ್ಕೆಮಾಡುವ ಮೂಲಕ, ನೀವು ಈ ನಿಯಮಗಳನ್ನು ಓದಿದ್ದೀರಿ, ಅರ್ಥಮಾಡಿಕೊಂಡಿದ್ದೀರಿ ಹಾಗೂ ಅದನ್ನು ಒಪ್ಪುತ್ತೀರಿ ಎಂದು ಸಮ್ಮತಿಸುತ್ತೀರಿ.
ವಿವಾದಗಳನ್ನು ಪರಿಹರಿಸಲು ಗುತ್ತಿಗೆಯ ಸಂಸ್ಥೆ, ಕಾನೂನಿನ ಆಯ್ಕೆ ಮತ್ತು ಸ್ಥಳ
10. ವಿವಾದಗಳನ್ನು ಪರಿಹರಿಸಲು ಗುತ್ತಿಗೆಯ ಸಂಸ್ಥೆ, ಕಾನೂನಿನ ಆಯ್ಕೆ ಮತ್ತು ಸ್ಥಳ. ಉಚಿತ ಮತ್ತು ಪಾವತಿಸಿದ ಗ್ರಾಹಕ Skype-ಬ್ರಾಂಡ್ ಸೇವೆಗಳ ನಿಮ್ಮ ಬಳಕೆಗಾಗಿ, ಒಂದು ವೇಳೆ ನೀವು ಯುರೋಪ್, ಮಧ್ಯ ಪೂರ್ವ ಮತ್ತು ಆಫ್ರಿಕಾ ಹೊರಗಡೆ ವಾಸಿಸುತ್ತಿದ್ದರೆ, ನೀವು ಒಪ್ಪಂದ ಮಾಡಿಕೊಳ್ಳುತ್ತಿರುವಿರಿ ಮತ್ತು ಕೆಳಗೆ ನಿರ್ದಿಷ್ಟಪಡಿಸದ ಹೊರತು ಈ ವಿಷಯಗಳಲ್ಲಿ "Microsoft" ನ ಎಲ್ಲಾ ಉಲ್ಲೇಖಗಳು Skype ಕಮ್ಯೂನಿಕೇಶನ್ಸ್ S.à.r.l, 23 – 29 Rives de Clausen, L-2165 Luxembourg ಎಂದು ಅರ್ಥೈಸುತ್ತವೆ. ಉಚಿತ ಅಥವಾ ಪಾವತಿಸಿದ ಗ್ರಾಹಕರ Skype-ಬ್ರಾಂಡ್ ಸೇವೆಗಳಿಗಾಗಿ, ಒಂದು ವೇಳೆ ನೀವು ಯುರೋಪ್, ಮಧ್ಯ ಪೂರ್ವ ಮತ್ತು ಆಫ್ರಿಕಾ ಹೊರಗಡೆ ವಾಸಿಸುತ್ತಿದ್ದರೆ, ಕಾನೂನು ತತ್ವಗಳ ಘರ್ಷಣೆಯ ಹೊರತಾಗಿಯೂ, ಲಕ್ಸೆಂಬರ್ಗ್ ಕಾನೂನು ಈ ನಿಯಮಗಳ ವ್ಯಾಖ್ಯಾನಗಳು ಮತ್ತು ಅವುಗಳ ಉಲ್ಲಂಘನೆಯ ಹಕ್ಕುಗಳನ್ನು ನಿಯಂತ್ರಿಸುತ್ತದೆ. ಬೇರೆಲ್ಲಾ ಕ್ಲೇಮುಗಳು (ಗ್ರಾಹಕ ಸಂರಕ್ಷಣೆ, ಅನ್ಯಾಯದ ಸ್ಫರ್ಧೆ, ಮತ್ತು ಕರ್ತವ್ಯ ಲೋಪದ ಕ್ಲೇಮುಗಳು) ನೀವು ವಾಸಿಸುವ ಪ್ರಾಂತ್ಯ ಅಥವಾ ದೇಶದ ಕಾನೂನುಗಳ ಅಧೀನದಲ್ಲಿರುತ್ತವೆ. ಒಂದು ವೇಳೆ ನೀವು ಯೂರೋಪ್, ಮಧ್ಯ ಪೂರ್ವ ಮತ್ತು ಆಫ್ರಿಕಾ ಹೊರಗಡೆ ವಾಸಿಸುತ್ತಿದ್ದರೆ, Skype-ಬ್ರಾಂಡ್ ಸೇವೆಗಳಿಗೆ ಸಂಬಂಧಿಸಿದ ಅಥವಾ ಅದರ ಹೊರತಾಗಿ ಉದ್ಭವಿಸುವ ಎಲ್ಲಾ ವಿವಾದಗಳಿಗೆ ಲಕ್ಸೆಂಬರ್ಗ್ ನ್ಯಾಯಾಲಯಗಳ ವಿಶೇಷ ನ್ಯಾಯವ್ಯಾಪ್ತಿ ಮತ್ತು ಸ್ಥಳವನ್ನು ಮಾರ್ಪಡಿಸಲಾಗದಂತೆ ನೀವು ಮತ್ತು ನಾವು ಒಪ್ಪಿಕೊಳ್ಳಬೇಕು. ಎಲ್ಲಾ ಇತರ ಸೇವೆಗಳಿಗೆ, ನೀವು ಒಪ್ಪಂದ ಮಾಡಿಕೊಳ್ಳುವ ಘಟಕ, ಆಡಳಿತ ಕಾನೂನು ಮತ್ತು ವಿವಾದಗಳನ್ನು ಬಗೆಹರಿಸುವ ಸ್ಥಳ ಕೆಳಗಿರುತ್ತದೆ:
- a. ಕೆನಡಾ. ನೀವು ಕೆನಡಾದಲ್ಲಿ ವಾಸಿಸುತ್ತಿದ್ದರೆ (ಅಥವಾ, ಒಂದು ವ್ಯವಹಾರವಾಗಿದ್ದರೆ, ನಿಮ್ಮ ವ್ಯವಹಾರದ ಪ್ರಧಾನ ಸ್ಥಳವು ಅಲ್ಲಿದ್ದು), ಪಾವತಿಸಿದ ಗ್ರಾಹಕ Skype-ಬ್ರ್ಯಾಂಡೆಡ್ ಸೇವೆಗಳನ್ನು ನೀವು ಬಳಸುತ್ತಿದ್ದಲ್ಲಿ, ಅಥವಾ Microsoft Teams ನ ಉಚಿತ ಭಾಗಗಳನ್ನು ನೀವು ಬಳಸುತ್ತಿದ್ದಲ್ಲಿ, Skype Communications US Corporation, 2215-B Renaissance Drive, Las Vegas, NV 89119, United States ಇವರೊಂದಿಗೆ ನೀವು ಒಪ್ಪಂದ ಮಾಡಿಕೊಳ್ಳುತ್ತಿದ್ದೀರಿ. ಎಲ್ಲಾ ಇತರ ಉಚಿತ ಮತ್ತು ಪಾವತಿಸಿದ ಗ್ರಾಹಕ ಸೇವೆಗಳಿಗಾಗಿ, ನೀವು Microsoft Corporation, One Microsoft Way, Redmond, WA 98052, U.S.A. ಜತೆ ಒಪ್ಪಂದ ಮಾಡಿಕೊಳ್ಳುತ್ತೀರಿ. ಈ ನಿಯಮಗಳ ವ್ಯಾಖ್ಯಾನಗಳು, ಅವುಗಳ ಉಲ್ಲಂಘನೆಗಾಗಿನ ಕ್ಲೇಮುಗಳು, ಮತ್ತು ಬೇರೆಲ್ಲಾ ಕ್ಲೇಮುಗಳು (ಗ್ರಾಹಕ ಸಂರಕ್ಷಣೆ, ಅನ್ಯಾಯಯುತ ಸ್ಫರ್ಧೆ, ಮತ್ತು ಕರ್ತವ್ಯ ಲೋಪದ ಕ್ಲೇಮುಗಳು ಸೇರಿದಂತೆ) ನೀವು ವಾಸಿಸುವ ಪ್ರಾಂತ್ಯದ (ಅಥವಾ, ವ್ಯವಹಾರವಾಗಿದ್ದರೆ, ನಿಮ್ಮ ವ್ಯವಹಾರದ ಪ್ರಧಾನ ಸ್ಥಳದ) ಕಾನೂನುಗಳ ಅಧೀನದಲ್ಲಿರುತ್ತವೆ. ಈ ನಿಯಮಗಳು ಮತ್ತು ಸೇವೆಗಳಿಂದ ಉಂಟಾಗುವ ಮತ್ತು ಅವುಗಳಿಗೆ ಸಂಬಂಧಿಸಿದ ಎಲ್ಲ ವಿವಾದಗಳಿಗೆ ಒಂಟಾರಿಯೋ ನ್ಯಾಯಾಲಯಗಳ ಸ್ಥಳ ಮತ್ತು ವಿಶಿಷ್ಟ ನ್ಯಾಯಾಂಗ ವ್ಯಾಪ್ತಿಗೆ ನಾವು ಮತ್ತು ನೀವು ಬದಲಾಯಿಸಲಾಗದಂತೆ ಸಮ್ಮತಿಸುತ್ತೇವೆ.
- b. ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದ ಹೊರಗಿರುವ ಉತ್ತರ ಅಥವಾ ದಕ್ಷಿಣ ಅಮೆರಿಕ. ನೀವು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದ ಹೊರಗಿರುವ ಉತ್ತರ ಅಥವಾ ದಕ್ಷಿಣ ಅಮೆರಿಕಲ್ಲಿ ವಾಸಿಸುತ್ತಿದ್ದರೆ (ಅಥವಾ, ವ್ಯವಹಾರವಾಗಿದ್ದರೆ, ನಿಮ್ಮ ಪ್ರಧಾನ ವ್ಯವಹಾರದ ಸ್ಥಳವು ಅಲ್ಲಿದ್ದರೆ) ನೀವು Microsoft Corporation, One Microsoft Way, Redmond, WA 98052, U.S.A. ಜತೆ ಒಪ್ಪಂದ ಮಾಡಿಕೊಳ್ಳುತ್ತೀರಿ. ಈ ನಿಯಮಗಳ ಮತ್ತು ಅವುಗಳ ಉಲ್ಲಂಘನೆಗಾಗಿನ ಕ್ಲೇಮುಗಳ ವ್ಯಾಖ್ಯಾನಗಳು, ಕಾನೂನು ಸಿದ್ಧಾಂತಗಳ ಆಯ್ಕೆಯನ್ನು ಲೆಕ್ಕಿಸದೆ, ವಾಷಿಂಗ್ಟನ್ ರಾಜ್ಯದ ಕಾನೂನಿನ ಅಧೀನದಲ್ಲಿರುತ್ತವೆ. ಬೇರೆಲ್ಲಾ ಕ್ಲೇಮುಗಳು (ಗ್ರಾಹಕ ಸಂರಕ್ಷಣೆ, ಅನ್ಯಾಯದ ಸ್ಫರ್ಧೆ, ಮತ್ತು ಕರ್ತವ್ಯ ಲೋಪದ ಕ್ಲೇಮುಗಳು) ನಾವು ನಿಮ್ಮ ಸೇವೆಗಳನ್ನು ನಿರ್ದೇಶಿಸುವ ದೇಶದ ಕಾನೂನುಗಳ ಅಧೀನದಲ್ಲಿರುತ್ತವೆ.
- c. ಮಧ್ಯಪೂರ್ವ, ಆಫ್ರಿಕಾ ಅಥವಾ ಯುರೋಪ್. ಒಂದು ವೇಳೆ ನೀವು ಮಧ್ಯಪ್ರಾಚ್ಯ, ಆಫ್ರಿಕಾ ಅಥವಾ ಯೂರೋಪಿಯನ್ ಒಕ್ಕೂಟ (EU), ಐಸ್ಲ್ಯಾಂಡ್, ಲಿಚ್ಟೆನ್ಸ್ಟೈನ್, ನಾರ್ವೆ, ಸ್ವಿಟ್ಜರ್ಲೆಂಡ್, ಮತ್ತು ಯುನೈಟೆಡ್ ಕಿಂಗ್ಡಮ್ ಹೊರತುಪಡಿಸಿ ಯೂರೋಪ್ನಲ್ಲಿ ವಾಸಿಸುತ್ತಿದ್ದರೆ (ಅಥವಾ, ಒಂದು ವೇಳೆ ವ್ಯವಹಾರ, ನಿಮ್ಮ ವ್ಯವಹಾರದ ಪ್ರಮುಖ ಸ್ಥಳವಿದ್ದರೆ), ಮತ್ತು ನೀವು ಸೇವೆಗಳ (Bing ಹಾಗೂ MSN ಗಳಂತಹ) ಉಚಿತ ಭಾಗಗಳನ್ನು ಬಳಸುತ್ತಿದ್ದರೆ, ನೀವು Microsoft Corporation, One Microsoft Way, Redmond, WA 98052, U.S.A. ಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವಿರಿ, ಅದನ್ನು ಹೊರತುಪಡಿಸಿ ಒಂದು ವೇಳೆ ನೀವು Skype ನ ಉಚಿತ ಭಾಗಗಳನ್ನು ಬಳಸುತ್ತಿದ್ದರೆ, ನೀವು Microsoft Ireland Operations Limited, One Microsoft Place, South County Business Park, Leopardstown, Dublin 18, Ireland ನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವಿರಿ. ಒಂದು ವೇಳೆ ನೀವು ಸೇವೆಗಳ ಭಾಗದ ಬಳಕೆಗಾಗಿ ಪಾವತಿಸಿದರೆ, ನೀವು Microsoft Ireland Operations Limited, One Microsoft Place, South County Business Park, Leopardstown, Dublin 18, Ireland ನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವಿರಿ. ಉಚಿತ ಮತ್ತು ಪಾವತಿಸಿದ ಸೇವೆಗಳಿಗಾಗಿ, ಕಾನೂನು ಸಿದ್ಧಾಂತಗಳ ಸಂಘರ್ಷವನ್ನು ಲೆಕ್ಕಿಸದೆ, ಈ ನಿಯಮಗಳ ಮತ್ತು ಅವುಗಳ ಉಲ್ಲಂಘನೆಗಾಗಿನ ಕ್ಲೇಮುಗಳ ವ್ಯಾಖ್ಯಾನವು, ಐರ್ಲೆಂಡ್ ಕಾನೂನುಗಳ ಅಧೀನದಲ್ಲಿರುತ್ತದೆ. ಬೇರೆಲ್ಲಾ ಕ್ಲೇಮುಗಳು (ಗ್ರಾಹಕ ಸಂರಕ್ಷಣೆ, ಅನ್ಯಾಯದ ಸ್ಫರ್ಧೆ, ಮತ್ತು ಕರ್ತವ್ಯ ಲೋಪದ ಕ್ಲೇಮುಗಳು) ನಾವು ನಿಮ್ಮ ಸೇವೆಗಳನ್ನು ನಿರ್ದೇಶಿಸುವ ದೇಶದ ಕಾನೂನುಗಳ ಅಧೀನದಲ್ಲಿರುತ್ತವೆ. ಈ ನಿಯಮಗಳು ಮತ್ತು ಸೇವೆಗಳಿಂದ ಉಂಟಾಗುವ ಮತ್ತು ಅವುಗಳಿಗೆ ಸಂಬಂಧಿಸಿದ ಎಲ್ಲ ವಿವಾದಗಳಿಗೆ ಐರ್ಲೆಂಡ್ ನ್ಯಾಯಾಲಯಗಳ ಸ್ಥಳ ಮತ್ತು ವಿಶಿಷ್ಟ ನ್ಯಾಯಾಂಗ ವ್ಯಾಪ್ತಿಗೆ ನಾವು ಮತ್ತು ನೀವು ಬದಲಾಯಿಸಲಾಗದಂತೆ ಒಪ್ಪುತ್ತೇವೆ.
- d. ಕೆಳಗೆ ನಿಮ್ಮ ದೇಶವನ್ನು ವಿಶೇಷವಾಗಿ ಪ್ರಸ್ತಾಪಿಸಿದ ಹೊರತಾಗಿ, ಏಷ್ಯಾ ಅಥವಾ ದಕ್ಷಿಣ ಪೆಸಿಫಿಕ್. ನೀವು ಏಷ್ಯಾದಲ್ಲಿ (ಚೀನಾ, ಜಪಾನ್, ಕೊರಿಯಾ ಗಣರಾಜ್ಯ ಅಥವಾ ತೈವಾನ್ ಹೊರತುಪಡಿಸಿ) ಅಥವಾ ದಕ್ಷಿಣ ಪೆಸಿಫಿಕ್ನಲ್ಲಿ ವಾಸಿಸುತ್ತಿದ್ದರೆ (ಅಥವಾ, ನಿಮ್ಮ ವ್ಯವಹಾರದ ಪ್ರಮುಖ ಸ್ಥಳವಾಗಿದ್ದರೆ) ಮತ್ತು ನೀವು ಸೇವೆಗಳ ಉಚಿತ ಭಾಗಗಳನ್ನು (Bing ಮತ್ತು MSN ನಂತಹ) ಬಳಸುತ್ತಿದ್ದರೆ, ನೀವು Microsoft Corporation, One Microsoft Way, Redmond, WA 98052, U.S.A. ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದ್ದೀರಿ. ನೀವು ಸೇವೆಗಳ ಒಂದು ಭಾಗವನ್ನು ಬಳಸಲು ಪಾವತಿಸಿದ್ದರೆ ಅಥವಾ ಸಿಂಗಾಪುರ ಅಥವಾ ಹಾಂಗ್ ಕಾಂಗ್ನಲ್ಲಿ ಉಚಿತ Outlook.com ಸೇವೆಯನ್ನು ಬಳಸುತ್ತಿದ್ದರೆ, ನೀವು Microsoft Regional Sales Pte Ltd., ನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದೀರಿ, ಇದು ಸಿಂಗಾಪುರದ ಕಾನೂನುಗಳ ಅಡಿಯಲ್ಲಿ ಸಂಘಟಿತವಾದ ನಿಗಮವಾಗಿದ್ದು, ಅದರ ನೋಂದಾಯಿತ ವಿಳಾಸ 182 Cecil Street, #13-01 Frasers Tower, Singapore 069547; ನೀವು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದರೆ (ಅಥವಾ, ವ್ಯವಹಾರವಾಗಿದ್ದರೆ, ನಿಮ್ಮ ಪ್ರಮುಖ ವ್ಯವಹಾರ ಸ್ಥಳವಾಗಿದ್ದರೆ), ನೀವು Microsoft Pty Ltd, 1 Denison St, North Sydney, NSW 2060, Australia ದೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದೀರಿ ಮತ್ತು ನೀವು ನ್ಯೂಜಿಲೆಂಡ್ನಲ್ಲಿ ವಾಸಿಸುತ್ತಿದ್ದರೆ (ಅಥವಾ, ವ್ಯವಹಾರವಾಗಿದ್ದರೆ, ನಿಮ್ಮ ಪ್ರಮುಖ ವ್ಯವಹಾರ ಸ್ಥಳವಾಗಿದ್ದರೆ), ನೀವು Microsoft New Zealand Limited, Level 5, 22 Viaduct Harbour Avenue, PO Box 8070 Symonds Street, Auckland, 1150 New Zealand ನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದೀರಿ. ಉಚಿತ ಮತ್ತು ಪಾವತಿಸಿದ ಸೇವೆಗಳಿಗಾಗಿ, ಕಾನೂನುಗಳ ಸಿದ್ಧಾಂತಗಳ ಸಂಘರ್ಷವನ್ನು ಲೆಕ್ಕಿಸದೆ, ಈ ನಿಯಮಗಳ ಮತ್ತು ಅವುಗಳ ಉಲ್ಲಂಘನೆಗಾಗಿನ ಕ್ಲೇಮುಗಳ ಅರ್ಥವ್ಯಾಖ್ಯಾನವು, ವಾಷಿಂಗ್ಟನ್ ರಾಜ್ಯ ಕಾನೂನಿನ ಅಧೀನದಲ್ಲಿರುತ್ತದೆ. ಬೇರೆಲ್ಲಾ ಕ್ಲೇಮುಗಳು (ಗ್ರಾಹಕ ಸಂರಕ್ಷಣೆ, ಅನ್ಯಾಯದ ಸ್ಫರ್ಧೆ, ಮತ್ತು ಕರ್ತವ್ಯ ಲೋಪದ ಕ್ಲೇಮುಗಳು) ನಾವು ನಿಮ್ಮ ಸೇವೆಗಳನ್ನು ನಿರ್ದೇಶಿಸುವ ದೇಶದ ಕಾನೂನುಗಳ ಅಧೀನದಲ್ಲಿರುತ್ತವೆ. ಈ ನಿಯಮಗಳು ಅಥವಾ Skype ಜತೆಗಿನ ಸೇವೆಗಳಿಂದ ಉಂಟಾಗುವ ಅಥವಾ ಅವುಗಳಿಗೆ ಸಂಬಂಧಿಸಿದ, ಅವುಗಳ ಅಸ್ತಿತ್ವ, ಮಾನ್ಯತೆ, ಅಥವಾ ಅವಧಿ ಮುಕ್ತಾಯಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಯೂ ಸೇರಿದಂತೆ, ಯಾವುದೇ ವಿವಾದವು, ಈ ವಿಧಿಗೆ ಉಲ್ಲೇಖಿಸುವ ಮೂಲಕ ಸೇರಿಸಿಕೊಳ್ಳಲಾಗಿದೆ ಎಂದು ಭಾವಿಸಲಾಗುವ ನಿಯಮಗಳನ್ನು, ಸಿಂಗಾಪುರದಲ್ಲಿರುವ ಸಿಂಗಾಪುರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರಕ್ಕೆ (SIAC) ಉಲ್ಲೇಖಿಸಲಾಗುತ್ತದೆ ಮತ್ತು ಅಂತಿಮವಾಗಿ ಅದರ ಅನುಸಾರವಾಗಿ ಮಧ್ಯಸ್ಥಿಕೆಯ ಮೂಲಕ ಪರಿಹರಿಸಲಾಗುತ್ತದೆ. ನ್ಯಾಯ ಮಂಡಳಿಯು SIACಯ ಅಧ್ಯಕ್ಷರು ನೇಮಿಸುವ ಒಬ್ಬ ಮಧ್ಯಸ್ಥಿಕೆದಾರರನ್ನು ಒಳಗೊಂಡಿರುತ್ತದೆ. ಮಧ್ಯಸ್ಥಿಕೆಯ ಭಾಷೆಯು ಇಂಗ್ಲಿಷ್ ಆಗಿರುತ್ತದೆ. ಮಧ್ಯಸ್ಥಿಕೆದಾರರ ನಿರ್ಣಯವು ಅಂತಿಮವಾಗಿರುತ್ತದೆ, ಬದ್ಧವಾಗಿರತಕ್ಕದ್ದು, ಮತ್ತು ಪ್ರಶ್ನಾರ್ಹವಲ್ಲ, ಹಾಗೂ ಯಾವುದೇ ದೇಶ ಅಥವಾ ಪ್ರದೇಶದಲ್ಲಿನ ತೀರ್ಪಿಗೆ ಇದನ್ನು ಆಧಾರವಾಗಿ ಬಳಸಬಹುದಾಗಿದೆ.
- e. ಜಪಾನ್. ನೀವು ಜಪಾನ್ನಲ್ಲಿ ವಾಸಿಸುತ್ತಿದ್ದರೆ (ಅಥವಾ, ವ್ಯವಹಾರವಾಗಿದ್ದರೆ, ನಿಮ್ಮ ಪ್ರಧಾನ ವ್ಯವಹಾರದ ಸ್ಥಳವು ಅಲ್ಲಿದ್ದರೆ), ಮತ್ತು ನೀವು ಸೇವೆಗಳ (Bing ಮತ್ತು MSN ಮುಂತಾದ) ಉಚಿತ ಭಾಗಗಳನ್ನು ಬಳಸುತ್ತಿದ್ದರೆ, ನೀವು Microsoft Corporation, One Microsoft Way, Redmond, WA 98052, U.S.A. ಜತೆ ಒಪ್ಪಂದ ಮಾಡಿಕೊಳ್ಳುತ್ತೀರಿ. ಸೇವೆಗಳ ಒಂದು ಭಾಗವನ್ನು ಬಳಸಲು ನೀವು ಪಾವತಿ ಮಾಡಿದ್ದರೆ, ನೀವು Microsoft Japan Co., Ltd (MSKK), Shinagawa Grand Central Tower, 2-16-3 Konan Minato-ku, Tokyo 108-0075 ಜತೆ ಒಪ್ಪಂದ ಮಾಡಿಕೊಳ್ಳುತ್ತೀರಿ. ಉಚಿತ ಮತ್ತು ಪಾವತಿಸಿದ ಸೇವೆಗಳಿಗಾಗಿ, ಈ ನಿಯಮಗಳು ಮತ್ತು ಅವುಗಳಿಂದ ಅಥವಾ ಸೇವೆಗಳಿಂದ ಉಂಟಾಗುವ ಅಥವಾ ಅವುಗಳಿಗೆ ಸಂಬಂಧಿಸುವ ಯಾವುದೇ ವಿಷಯಗಳು, ಜಪಾನ್ ಕಾನೂನುಗಳ ಅಧೀನದಲ್ಲಿರುತ್ತದೆ. ಈ ನಿಯಮಗಳು ಮತ್ತು ಸೇವೆಗಳಿಂದ ಉಂಟಾಗುವ ಮತ್ತು ಅವುಗಳಿಗೆ ಸಂಬಂಧಿಸಿದ ಎಲ್ಲ ವಿವಾದಗಳಿಗೆ ಟೋಕಿಯೋ ಜಿಲ್ಲಾ ನ್ಯಾಯಾಲಯದ ಸ್ಥಳ ಮತ್ತು ವಿಶಿಷ್ಟವಾದ ಮೂಲ ನ್ಯಾಯಾಂಗ ವ್ಯಾಪ್ತಿಗೆ ನಾವು ಮತ್ತು ನೀವು ಬದಲಾಯಿಸಲಾಗದಂತೆ ಒಪ್ಪುತ್ತೇವೆ.
- f. ಕೊರಿಯಾ ಗಣರಾಜ್ಯ.
- i. ಕೊರಿಯಾ ಗಣರಾಜ್ಯದಲ್ಲಿ ನೀವು ವಾಸಿಸುತ್ತಿದ್ದು (ಅಥವಾ, ವ್ಯವಹಾರವೊಂದು, ವ್ಯವಹಾರದ ನಿಮ್ಮ ಪ್ರಧಾನ ಸ್ಥಳವು ಅಲ್ಲಿ ಇದ್ದು), ಈ ಸೇವೆಗಳ (Bing ಮತ್ತು MSN ಗಳಂಥವು) ಉಚಿತ ಭಾಗಗಳನ್ನು ನೀವು ಬಳಸುತ್ತಿದ್ದಲ್ಲಿ, Microsoft Corporation, One Microsoft Way, Redmond, WA 98052, U.S.A. ಇವರೊಂದಿಗೆ ನೀವು ಕರಾರು ಮಾಡಿಕೊಳ್ಳುತ್ತಾ ಇದ್ದೀರಿ. ಈ ಸೇವೆಗಳ ಭಾಗವೊಂದನ್ನು ಬಳಸಲು ಪಾವತಿಯನ್ನು ನೀವು ಮಾಡಿದ್ದಲ್ಲಿ, Microsoft Korea, Inc., 12th Floor, Tower A, The K-Twin Tower, Jongro 1 gil 50, Jongro-gu, Seoul, Republic of Korea, 03142 ಇವರೊಂದಿಗೆ ನೀವು ಕರಾರು ಮಾಡಿಕೊಳ್ಳುತ್ತಾ ಇದ್ದೀರಿ. ಉಚಿತ ಮತ್ತು ಪಾವತಿಸಿದ ಸೇವೆಗಳಿಗೆ, ಈ ಷರತ್ತುಗಳನ್ನು ಮತ್ತು ಅವುಗಳಿಂದ ಅಥವಾ ಈ ಸೇವೆಗಳಿಂದ ಉದ್ಭವಿಸುವ ಅಥವಾ ಅವುಗಳಿಗೆ ಸಂಬಂಧಿಸುವ ಯಾವುದೇ ಸಂಗತಿಗಳನ್ನು ಕೊರಿಯಾ ಗಣರಾಜ್ಯದ ಕಾನೂನುಗಳು ಆಳುತ್ತವೆ. ಈ ನಿಯಮಗಳು ಮತ್ತು ಸೇವೆಗಳಿಂದ ಉಂಟಾಗುವ ಮತ್ತು ಅವುಗಳಿಗೆ ಸಂಬಂಧಿಸಿದ ಎಲ್ಲ ವಿವಾದಗಳಿಗೆ ಸಿಯೋಲ್ ಕೇಂದ್ರೀಯ ಜಿಲ್ಲಾ ನ್ಯಾಯಾಲಯದ ಸ್ಥಳ ಮತ್ತು ವಿಶಿಷ್ಟವಲ್ಲದ ಮೂಲ ನ್ಯಾಯಾಂಗ ವ್ಯಾಪ್ತಿಗೆ ನಾವು ಮತ್ತು ನೀವು ಬದಲಾಯಿಸಲಾಗದಂತೆ ಒಪ್ಪುತ್ತೇವೆ.
- ii. ನೀವು ಕೊರಿಯಾ ಗಣರಾಜ್ಯದಲ್ಲಿ ವಾಸಿಸುತ್ತಿದ್ದರೆ, ಕಾನೂನಿನ ಪ್ರಕಾರ, ಈ ನಿಯಮಗಳಂತಹ ಒಪ್ಪಂದದಿಂದ ಸೀಮಿತಗೊಳಿಸಲಾಗದಂತಹ ಕೆಲವು ಹಕ್ಕುಗಳನ್ನು ನೀವು ಹೊಂದಿರಬಹುದು. ಆ ಹಕ್ಕುಗಳನ್ನು ನಿರ್ಬಂಧಿಸುವ ಅಥವಾ ಕಾನೂನಿನಿಂದ ವಿಧಿಸಿರುವ Microsoft ನ ಬಾಧ್ಯತೆಗಳನ್ನು ನಿರ್ಬಂಧಿಸುವ ಯಾವ ಉದ್ದೇಶವನ್ನೂ ಈ ನಿಯಮಗಳು ಹೊಂದಿರುವುದಿಲ್ಲ. ಇದರಲ್ಲಿ ಒಳಗೊಂಡಿರುವುದಕ್ಕೆ ವ್ಯತಿರಿಕ್ತವಾಗಿ ಏನೇ ಇದ್ದರೂ, ಈ ನಿಯಮಗಳು ಕಾನೂನಿನಿಂದ ಅನುಮತಿಸಲ್ಪಟ್ಟ ಮಟ್ಟಿಗೆ ಪರಿಣಾಮಕಾರಿಯಾಗಿರುತ್ತವೆ. ಈ ನಿಯಮಗಳ ಯಾವುದೇ ಬದಲಾವಣೆಗಳನ್ನು (ಹಾಗೂ ಆವರ್ತ ಚಂದಾದಾರಿಕೆ ಸೇವೆಗಳಿಗೆ, ಅನ್ವಯವಾದಲ್ಲಿ, ವಿಧಿಸಲಾಗುವ ಮೊತ್ತದಲ್ಲಿನ ಯಾವುದೇ ಬದಲಾವಣೆಯನ್ನು) ಕಾನೂನಿನ ಅಗತ್ಯತೆಗಳಿಗೆ ಅನುಸಾರವಾಗಿ ಮಾಡಲಾಗುತ್ತದೆ.
- g. ತೈವಾನ್. ಒಂದು ವೇಳೆ ನೀವು (ಅಥವಾ, ಒಂದು ವೇಳೆ ವ್ಯವಹಾರ, ನಿಮ್ಮ ವ್ಯವಹಾರದ ಪ್ರಮುಖ ಸ್ಥಳವು) ತೈವಾನ್ನಲ್ಲಿದ್ದರೆ, ಮತ್ತು ನೀವು ಸೇವೆಗಳ (Bing ಹಾಗೂ MSN ಗಳಂತಹ) ಉಚಿತ ಭಾಗಗಳನ್ನು ಬಳಸುತ್ತಿದ್ದರೆ, ನೀವು Microsoft Corporation, One Microsoft Way, Redmond, WA 98052, U.S.A ಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವಿರಿ. ಒಂದು ವೇಳೆ ಸೇವೆಗಳ ಭಾಗದ ಬಳಕೆಗಾಗಿ ಪಾವತಿಸಿದರೆ, ನೀವು Microsoft Taiwan Corp., 18F, No. 68, Sec. 5, Zhongxiao E. Rd., Xinyi District, Taipei 11065, Taiwan ನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಿರುವಿರಿ. ಉಚಿತ ಮತ್ತು ಪಾವತಿಸಿದ ಸೇವೆಗಳಿಗೆ, ಈ ನಿಯಮಗಳು ಮತ್ತು ಅವುಗಳಿಗೆ ಅಥವಾ ಸೇವೆಗಳಿಗೆ ಸಂಬಂಧಿಸಿದಂತೆ ಅಥವಾ ಹೊರತುಪಡಿಸಿದಂತೆ ಉದ್ಭವಿಸುವ ಯಾವುದೇ ವಿಷಯಗಳ ನಿಯಂತ್ರಣವನ್ನು ತೈವಾನ್ನ ಕಾನೂನುಗಳು ಹೊಂದಿವೆ. Microsoft Taiwan Corp. ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಆರ್ಥಿಕ ವ್ಯವಹಾರಗಳ ಸಚಿವಾಲಯ R.O.C. ಒದಗಿಸಿದ ವೆಬ್ಸೈಟ್ ಅನ್ನು ದಯವಿಟ್ಟು ವೀಕ್ಷಿಸಿ (https://gcis.nat.gov.tw/mainNew/). ತೈವಾನ್ ಕಾನೂನುಗಳಲ್ಲಿ ಅನುಮತಿಸಲಾದ ಗರಿಷ್ಠ ಪ್ರಮಾಣಕ್ಕೆ ಅನುಗುಣವಾಗಿ, ಈ ನಿಯಮಗಳು ಮತ್ತು ಸೇವೆಗಳಿಂದ ಉಂಟಾಗುವ ಮತ್ತು ಅವುಗಳಿಗೆ ಸಂಬಂಧಿಸಿದ ಎಲ್ಲ ವಿವಾದಗಳಿಗೆ, ನ್ಯಾಯಾಂಗ ವ್ಯಾಪ್ತಿ ಹೊಂದಿರುವ ನ್ಯಾಯಾಲಯವೆಂದು ಮೊದಲ ಮನ್ನಣೆಯಾಗಿ ತೈಪೈ ಜಿಲ್ಲಾ ನ್ಯಾಯಾಲಯವನ್ನು, ನಾವು ಮತ್ತು ನೀವು ಬದಲಾಯಿಸಲಾಗದಂತೆ ನಿಯೋಜಿಸಿರುತ್ತೇವೆ.
ಈ ನಿಯಮಗಳ ಹೊರತಾಗಿಯೂ ಬೇರೊಂದು ವೇದಿಕೆಯಲ್ಲಿ ವಿವಾದಗಳನ್ನು ಪರಿಹರಿಸಿಕೊಳ್ಳಲು ಅಧಿಕಾರವಿರುವ ಅಥವಾ ನಿಮಗೆ ಹಕ್ಕು ನೀಡುವ ನಿಮ್ಮ ಸ್ಥಳೀಯ ಗ್ರಾಹಕ ಕಾನೂನುಗಳಿಗೆ ಕೆಲವು ಸ್ಥಳೀಯ ಕಾನೂನುಗಳ ಅಗತ್ಯವಿರಬಹುದು. ಹಾಗಾದಲ್ಲಿ, ವಿಭಾಗ 10ರಲ್ಲಿರುವ ಕಾನೂನು ಹಾಗೂ ವೇದಿಕೆಯ ಆಯ್ಕೆಯು ನಿಮ್ಮ ಸ್ಥಳೀಯ ಗ್ರಾಹಕ ಕಾನೂನುಗಳು ಅನುಮತಿಸುವಷ್ಟರ ಮಟ್ಟಿಗೆ ಅನ್ವಯವಾಗುತ್ತದೆ.
ವಾರಂಟಿಗಳು
11. ವಾರಂಟಿಗಳು.
- a. MICROSOFT, ಮತ್ತು ಅದರ ಸಹಸಂಸ್ಥೆಗಳು, ಮರುಮಾರಾಟಗಾರರು, ವಿತರಕರು, ಮತ್ತು ಮಾರಾಟಗಾರರು, ಸ್ಪಷ್ಟ ಅಥವಾ ಸೂಚಿತ, ಯಾವುದೇ ವಾರಂಟಿಗಳನ್ನು, ಗ್ಯಾರಂಟಿಗಳನ್ನು ಅಥವಾ ಸೇವೆಗಳ ನಿಮ್ಮ ಬಳಕೆಗೆ ಸಂಬಂಧಪಟ್ಟ ಷರತ್ತುಗಳನ್ನು ನೀಡುವುದಿಲ್ಲ. ಸೇವೆಗಳ ಬಳಕೆಯ ರಿಸ್ಕ್ಗೆ ನೀವೇ ಹೊಣೆಗಾರರು ಮತ್ತು ಸೇವೆಗಳನ್ನು ನಾವು "ಇದ್ದದ್ದು ಇದ್ದಂತೆಯೇ" ಆಧಾರದಲ್ಲಿ "ಎಲ್ಲ ದೋಷಗಳೊಂದಿಗೆ" ಮತ್ತು "ಲಭ್ಯವಿರುವಂತೆ" ಒದಗಿಸುತ್ತೇವೆ ಎಂಬುದನ್ನು ನೀವು ಅರ್ಥೈಸಿಕೊಂಡಿದ್ದೀರಿ. ಸೇವೆಗಳ ನಿಖರತೆ ಅಥವಾ ಸಕಾಲಿಕತೆಗೆ MICROSOFT ಗ್ಯಾರಂಟಿಯನ್ನು ನೀಡುವುದಿಲ್ಲ. ನೀವು ನಿಮ್ಮ ಸ್ಥಳೀಯ ಕಾನೂನಿನಡಿಯಲ್ಲಿ ಕೆಲವೊಂದು ಹಕ್ಕುಗಳನ್ನು ಹೊಂದಿರಬಹುದು. ಈ ನಿಯಮಗಳಲ್ಲಿರುವ ಯಾವುದು ಕೂಡ, ಅವುಗಳು ಅನ್ವಯವಾಗುವುದಾದರೆ, ಆ ಹಕ್ಕುಗಳ ಮೇಲೆ ಪರಿಣಾಮ ಬೀರುವ ಉದ್ದೇಶವನ್ನು ಹೊಂದಿಲ್ಲ. ಕಂಪ್ಯೂಟರ್ ಮತ್ತು ದೂರಸಂವಹನಗಳ ವ್ಯವಸ್ಥೆಗಳು ದೋಷ-ರಹಿತವೇನಲ್ಲ ಮತ್ತು ಸಾಂದರ್ಭಿಕ ಕಾರ್ಯಸ್ಥಾಗಿತ್ಯದ ಅವಧಿಗಳು ಸಂಭವಿಸಬಹುದು ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರಿ. ಸೇವೆಗಳು ಅಡಚಣೆರಹಿತ, ಸಕಾಲಿಕ, ಸುರಕ್ಷಿತ, ಅಥವಾ ದೋಷ-ಮುಕ್ತವಾಗಿರುತ್ತವೆ ಎಂದಾಗಲೀ, ಅಥವಾ ವಿಷಯದ ನಷ್ಟವು ಸಂಭವಿಸುವುದಿಲ್ಲವೆಂದಾಗಲೀ, ನಾವು ಗ್ಯಾರಂಟಿ ನೀಡುವುದಿಲ್ಲ, ಅಂತೆಯೇ ಕಂಪ್ಯೂಟರ್ ನೆಟ್ವರ್ಕ್ಗಳಿಗೆ ಸಂಪರ್ಕ ಅಥವಾ ಅದರಿಂದ ಟ್ರಾನ್ಸ್ಮಿಶನ್ ಬಗ್ಗೆ ನಾವು ಗ್ಯಾರಂಟಿ ನೀಡುವುದಿಲ್ಲ.
- b. ನಿಮ್ಮ ಸ್ಥಳೀಯ ಕಾನೂನಿನಡಿಯಲ್ಲಿ ಅನುಮತಿಸಲಾದ ಮಟ್ಟಿಗೆ, ವ್ಯಾಪಾರಾತ್ಮಕತೆ, ಸಮಾಧಾನಕರ ಗುಣಮಟ್ಟ, ನಿರ್ದಿಷ್ಟ ಉದ್ದೇಶಕ್ಕಾಗಿನ ಕಾರ್ಯಕ್ಷಮತೆ, ಮಾನವ ಕೆಲಸದಂತಹಾ ಪ್ರಯತ್ನ, ಮತ್ತು ಉಲ್ಲಂಘಿಸದಿರುವುದೂ ಸೇರಿದಂತೆ, ಯಾವುದೇ ಸೂಚಿತ ವಾರಂಟಿಗಳನ್ನು ನಾವು ಹೊರತುಪಡಿಸುತ್ತೇವೆ.
- c. ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುವ ಗ್ರಾಹಕರಿಗೆ: ನಮ್ಮ ಸರಕು ಮತ್ತು ಸೇವೆಗಳು ಆಸ್ಟ್ರೇಲಿಯಾದ ಗ್ರಾಹಕ ಕಾನೂನು ಅಡಿಯಲ್ಲಿ ಹೊರತುಪಡಿಸಲು ಸಾಧ್ಯವಿಲ್ಲದ ಖಾತರಿಗಳೊಂದಿಗೆ ಬರುತ್ತವೆ. ಸೇವೆಯೊಂದಿಗಿನ ಪ್ರಮುಖ ವೈಫಲ್ಯಗಳಿಗೆ, ನೀವು ಕೆಳಗಿನವುಗಳಿಗೆ ಅರ್ಹರಾಗಿರುತ್ತೀರಿ:
- ನಮ್ಮೊಂದಿಗೆ ನಿಮ್ಮ ಸೇವಾ ಒಪ್ಪಂದವನ್ನು ರದ್ದುಗೊಳಿಸಲು; ಮತ್ತು
- ಬಳಕೆಯಾಗದ ಭಾಗದ ಮರುಪಾವತಿಗೆ ಅಥವಾ ಅದರ ಕಡಿಮೆಗೊಂಡ ಮೌಲ್ಯದ ಪರಿಹಾರಕ್ಕಾಗಿ.
ಸರಕುಗಳೊಂದಿಗಿನ ಪ್ರಮುಖ ವೈಫಲ್ಯಗಳಿಗಾಗಿ ಸಹಾ ಮರುಪಾವತಿ ಅಥವಾ ಬದಲಿ ಆರಿಸಲು ನೀವು ಅರ್ಹರಾಗಿರುತ್ತೀರಿ. ಸರಕುಗಳು ಅಥವಾ ಸೇವೆಯೊಂದಿಗಿನ ವೈಫಲ್ಯವು ಪ್ರಮುಖ ವೈಫಲ್ಯಕ್ಕೆ ಕಾರಣವಾಗದಿದ್ದರೆ, ಸಮಂಜಸವಾದ ಸಮಯದಲ್ಲಿ ವಿಫಲವಾದ ವೈಫಲ್ಯ ಸರಿಪಡಿಸುವಿಕೆಯನ್ನು ಹೊಂದಲು ನೀವು ಅರ್ಹರಾಗಿರುತ್ತೀರಿ. ಇದನ್ನು ಮಾಡದಿದ್ದರೆ ನೀವು ಸರಕುಗಳಿಗಾಗಿ ಮರುಪಾವತಿ ಪಡೆಯಲು ಮತ್ತು ಸೇವೆಗಾಗಿ ಒಪ್ಪಂದವನ್ನು ರದ್ದುಮಾಡಲು ಮತ್ತು ಯಾವುದೇ ಬಳಕೆಯಾಗದ ಭಾಗದ ಮರುಪಾವತಿಯನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತೀರಿ. ಸರಕು ಅಥವಾ ಸೇವೆಯಲ್ಲಿನ ವೈಫಲ್ಯದಿಂದ ಯಾವುದೇ ನ್ಯಾಯಯುತ ನಿರೀಕ್ಷಿತ ನಷ್ಟ ಅಥವಾ ಹಾನಿಗಾಗಿ ಪರಿಹಾರವನ್ನು ಪಡೆಯಲು ಸಹ ನೀವು ಅರ್ಹರಾಗಿರುತ್ತೀರಿ.
- d. ನ್ಯೂಜಿಲೆಂಡ್ನಲ್ಲಿ ವಾಸಿಸುತ್ತಿರುವ ಗ್ರಾಹಕರಿಗೆ, ನಿಮಗೆ ನ್ಯೂಜಿಲೆಂಡ್ ಗ್ರಾಹಕ ಗ್ಯಾರಂಟಿಗಳ ಕಾಯಿದೆಯಡಿಯಲ್ಲಿ ಶಾಸನಾತ್ಮಕ ಹಕ್ಕುಗಳಿರಬಹುದು, ಮತ್ತು ಈ ನಿಯಮಗಳಲ್ಲಿರುವ ಯಾವುದು ಕೂಡ ಆ ಹಕ್ಕುಗಳ ಮೇಲೆ ಪರಿಣಾಮ ಬೀರುವ ಉದ್ದೇಶವನ್ನು ಹೊಂದಿಲ್ಲ.
ಹೊಣೆಗಾರಿಕೆಯ ಮಿತಿ
12. ಬಾಧ್ಯತೆಯ ಮಿತಿ.
- a. ಹಾನಿಗಳ ಪರಿಹಾರ ಪಡೆಯಲು ನಿಮ್ಮಲ್ಲಿ ಯಾವುದೇ ಆಧಾರಗಳಿದ್ದರೆ (ಈ ನಿಯಮಗಳ ಉಲ್ಲಂಘನೆಯೂ ಸೇರಿದಂತೆ), ಅನ್ವಯವಾಗುವ ಕಾನೂನು ಅನುಮತಿಸಿದ ಪ್ರಮಾಣದವರೆಗೆ, Microsoft ಅಥವಾ ಯಾವುದೇ ಸಹ ಸಂಸ್ಥೆಗಳು, ಮರುಮಾರಾಟಗಾರರು, ವಿತರಕರು, ಮೂರನೇ-ಪಕ್ಷದ ಅಪ್ಲಿಗಳು ಮತ್ತು ಸೇವಾ ಪೂರೈಕೆದಾರರು, ಹಾಗೂ ಮಾರಾಟಗಾರರಿಂದ ನೇರ ಹಾನಿಗಳಿಗೆ ನಿಮ್ಮ ವಿಶಿಷ್ಟ ಪರಿಹಾರವು, ನಷ್ಟ ಅಥವಾ ಉಲ್ಲಂಘನೆಯು ಸಂಭವಿಸಿದ ತಿಂಗಳಿಗಾಗಿನ ನಿಮ್ಮ ಸೇವೆಗಳ ಶುಲ್ಕಕ್ಕೆ ಸಮಾನವಾದ ಮೊತ್ತದವರೆಗೆ (ಅಥವಾ ಸೇವೆಗಳು ಉಚಿತವಾಗಿದ್ದರೆ USD$10.00 ವರೆಗೆ) ಇರುತ್ತದೆ ಎಂಬುದನ್ನು ನೀವು ಒಪ್ಪುತ್ತೀರಿ.
- b. ಅನ್ವಯವಾಗುವ ಕಾನೂನು ಅನುಮತಿಸಿದ ಪ್ರಮಾಣದವರೆಗೆ, ಯಾವುದೇ (i) ಪ್ರಾಸಂಗಿಕ ನಷ್ಟಗಳು ಅಥವಾ ಹಾನಿಗಳು; (ii) ವಾಸ್ತವಿಕ ಅಥವಾ ನಿರೀಕ್ಷಿತ ಲಾಭದ ನಷ್ಟ (ಪ್ರತ್ಯಕ್ಷ ಅಥವಾ ಪರೋಕ್ಷ); (iii) ವಾಸ್ತವಿಕ ಅಥವಾ ನಿರೀಕ್ಷಿತ ಆದಾಯದ ನಷ್ಟ (ಪ್ರತ್ಯಕ್ಷ ಅಥವಾ ಪರೋಕ್ಷ); (iv) ವೈಯಕ್ತಿಕವಲ್ಲದ ನೆಲೆಯಲ್ಲಿ ಸೇವೆಗಳ ನಿಮ್ಮ ಬಳಕೆಯಿಂದ ಉಂಟಾದ ಗುತ್ತಿಗೆ ಅಥವಾ ವ್ಯವಹಾರ ಅಥವಾ ಬೇರೆ ನಷ್ಟಗಳು ಅಥವಾ ಹಾನಿಗಳು; (v) ವಿಶೇಷ, ಪರೋಕ್ಷ, ಘಟನಾತ್ಮಕ ಅಥವಾ ಶಿಕ್ಷಾರೂಪದ ನಷ್ಟಗಳು ಅಥವಾ ಹಾನಿಗಳು; ಮತ್ತು (vi) ಕಾನೂನಿನಲ್ಲಿ ಅನುಮತಿಸಲಾದ ಮಟ್ಟಿಗೆ, 12.a ನಲ್ಲಿ ನಿರ್ದಿಷ್ಟಪಡಿಸಲಾದ ಪರಿಮಿತಿಗಳನ್ನು ಮೀರಿದ ನೇರ ನಷ್ಟಗಳು ಅಥವಾ ಹಾನಿಗಳನ್ನು ನೀವು ಹಿಂಪಡೆಯಲಾಗದು. ಯಾವುದೇ ನಷ್ಟಗಳಿಗೆ ಈ ಪರಿಹಾರವು ನಿಮಗೆ ಪೂರ್ಣ ಪರಿಹಾರ ನೀಡದಿದ್ದರೆ, ಅಥವಾ ಅದರ ಅಗತ್ಯ ಉದ್ದೇಶದಿಂದ ವಿಫಲವಾದರೆ ಅಥವಾ ಹಾನಿಗಳ ಸಂಭವನೀಯತೆಗಳ ಬಗ್ಗೆ ನಮಗೆ ತಿಳಿದಿದ್ದರೆ ಅಥವಾ ನಾವು ತಿಳಿದಿರಬೇಕಾಗಿತ್ತು ಎಂದಾದರೆ, ಈ ಮಿತಿಗಳು ಮತ್ತು ಹೊರತುಪಡಿಸುವಿಕೆಗಳು ಅನ್ವಯವಾಗುತ್ತವೆ. ಕಾನೂನಿನಡಿ ಗರಿಷ್ಠ ಪ್ರಮಾಣದಲ್ಲಿ ಅನುಮತಿಸಲಾದ ಮಟ್ಟಿಗೆ, ಈ ನಿಯಮಗಳು, ಸೇವೆಗಳು, ಅಥವಾ ಸೇವೆಗಳಿಗೆ ಸಂಬಂಧಿಸಿದ ಸಾಫ್ಟ್ವೇರ್ಗೆ ಸಂಬಂಧವಿರುವ ಯಾವುದಕ್ಕೂ ಮತ್ತು ಯಾವುದೇ ಕ್ಲೇಮುಗಳಿಗೆ ಈ ಮಿತಿಗಳು ಮತ್ತು ಹೊರತುಪಡಿಸುವಿಕೆಗಳು ಅನ್ವಯವಾಗುತ್ತವೆ.
- c. ವೈಫಲ್ಯ ಅಥವಾ ವಿಳಂಬವು Microsoft ನ ಸಕಾರಣ ನಿಯಂತ್ರಣಕ್ಕಿಂತ ಹೊರತಾದ ಪರಿಸ್ಥಿತಿಗಳಿಂದ (ಕಾರ್ಮಿಕ ವಿವಾದಗಳು, ದೈವ ಕಾರ್ಯಗಳು, ಯುದ್ಧ ಅಥವಾ ಭಯೋತ್ಪಾದನಾ ಚಟುವಟಿಕೆ, ದುರುದ್ದೇಶಪೂರ್ವಕ ಹಾನಿ, ಆಕಸ್ಮಿಕಗಳು ಅಥವಾ ಅನ್ವಯವಾಗುವ ಯಾವುದೇ ಕಾನೂನು ಅಥವಾ ಸರಕಾರಿ ಆದೇಶಕ್ಕೆ ಬದ್ಧವಾಗಿರುವಿಕೆ ಮುಂತಾದವುಗಳಿಂದ) ಸಂಭವಿಸಿದೆ ಎಂದಾದರೆ, ಕಾರ್ಯನಿರ್ವಹಿಸುವಲ್ಲಿನ ಯಾವುದೇ ವೈಫಲ್ಯ ಅಥವಾ ಈ ನಿಯಮಗಳಡಿಯ ತನ್ನ ಹೊಣೆಗಾರಿಕೆಗಳ ಕಾರ್ಯನಿರ್ವಹಣೆಯ ವಿಳಂಬಕ್ಕೆ, Microsoft ಜವಾಬ್ದಾರವಲ್ಲ ಅಥವಾ ಹೊಣೆಯಲ್ಲ. ಇಂತಹಾ ಯಾವುದೇ ಘಟನೆಗಳ ಪರಿಣಾಮಗಳನ್ನು ಕನಿಷ್ಠಗೊಳಿಸಲು ಮತ್ತು ಪ್ರಭಾವಿತವಾಗದ ಹೊಣೆಗಾರಿಕೆಗಳನ್ನು ನಿಭಾಯಿಸಲು Microsoft ಕಂಕಣಬದ್ಧವಾಗಿರುತ್ತದೆ.
ಸೇವಾ-ನಿರ್ದಿಷ್ಟ ನಿಯಮಗಳು
13. ಸೇವಾ-ನಿರ್ದಿಷ್ಟ ನಿಯಮಗಳು. ವಿಭಾಗ 13ರ ಮೊದಲಿನ ಹಾಗೂ ನಂತರದ ನಿಯಮಗಳು ಸಾಮಾನ್ಯವಾಗಿ ಎಲ್ಲ ಸೇವೆಗಳಿಗೆ ಅನ್ವಯವಾಗುತ್ತವೆ. ಈ ವಿಭಾಗವು ಸಾಮಾನ್ಯ ನಿಯಮಗಳಿಗೆ ಹೆಚ್ಚುವರಿಯಾಗಿರುವ ಸೇವಾ-ನಿರ್ದಿಷ್ಟ ನಿಯಮಗಳನ್ನು ಒಳಗೊಂಡಿದೆ. ಸಾಮಾನ್ಯ ನಿಯಮಗಳ ಜೊತೆಗೆ ಯಾವುದಾದರೂ ಸಂಘರ್ಷವಿದ್ದ ಸಂದರ್ಭದಲ್ಲಿ ಈ ಸೇವಾ-ನಿರ್ದಿಷ್ಟ ನಿಯಮಗಳು ಅಧಿವ್ಯಾಪಿಸುತ್ತವೆ.
Xbox
- a. Xbox.
- i. ವೈಯಕ್ತಿಕ ವಾಣಿಜ್ಯೇತರ ಬಳಕೆ. Xbox ಆನ್ಲೈನ್ ಸೇವೆ, ("Xbox ನೆಟ್ವರ್ಕ್"), Xbox Game Studios ಆಟಗಳು (Mojang Games ಸೇರಿದಂತೆ) (https://www.xbox.com/xbox-game-studios), ಅಪ್ಲಿಕೇಶನ್ಗಳು, ಚಂದಾದಾರಿಕೆಗಳು (ಉದಾ., Xbox Game Pass ಚಂದಾದಾರಿಕೆ ಸೇವೆ ಕೊಡುಗೆಗಳು), ಸೇವೆಗಳು (ಉದಾ., Xbox ಕ್ಲೌಡ್ ಗೇಮಿಂಗ್), ಮತ್ತು Microsoft ಒದಗಿಸಿದ ವಿಷಯವು (ಒಟ್ಟಾರೆಯಾಗಿ, "Xbox ಸೇವೆಗಳು") ನಿಮ್ಮ ವೈಯಕ್ತಿಕ ಮತ್ತು ವಾಣಿಜ್ಯೇತರ ಬಳಕೆಗಾಗಿ ಮಾತ್ರ.
- ii. Xbox ಸೇವೆಗಳು. Xbox ಸೇವೆಗಳನ್ನು ಸ್ವೀಕರಿಸಲು ನೀವು ಸೈನ್ ಅಪ್ ಮಾಡಿದಾಗ, Xbox ಸೇವೆಗಳನ್ನು Microsoft ಡೆಲಿವರ್ ಮಾಡುವುದಕ್ಕಾಗಿ ಹಾಗೂ Microsoft ಅಲ್ಲದ ಆಟಗಳು ಮತ್ತು ಸೇವೆಗಳನ್ನು ಮೂರನೇ ವ್ಯಕ್ತಿಗಳು ಆಪರೇಟ್ ಮಾಡುವುದಕ್ಕಾಗಿ ನಿಮ್ಮ ಗೇಮ್ ಪ್ಲೇ, ಚಟುವಟಿಕೆಗಳು ಮತ್ತು ಆಟಗಳು ಹಾಗೂ Xbox ಸೇವೆಗಳ ಬಳಕೆಯ ಬಗೆಗಿನ ಮಾಹಿತಿಯು ಟ್ರ್ಯಾಕ್ ಮಾಡಲ್ಪಡುತ್ತದೆ ಹಾಗೂ ಗೇಮ್ಸ್ ಡೆವಲಪರ್ಗಳು ಮತ್ತು ಪ್ರಕಾಶಕರು ಸೇರಿದಂತೆ ಅನ್ವಯಿಸುವ ಮೂರನೇ ವ್ಯಕ್ತಿಗಳೊಂದಿಗೆ ಹಂಚಲ್ಪಡುತ್ತದೆ. ಹೆಚ್ಚುವರಿಯಾಗಿ, Xbox ಸೇವೆಗಳನ್ನು ಮೂರನೇ-ವ್ಯಕ್ತಿಯ ಸಾಧನಗಳು ಅಥವಾ ಪ್ಲಾಟ್ಫಾರ್ಮ್ಗಳ ಮೂಲಕ ಪ್ರವೇಶಿಸಿದರೆ, ನಿಮ್ಮ ಗೇಮ್ ಪ್ಲೇ, ಚಟುವಟಿಕೆಗಳು ಮತ್ತು ಆಟಗಳ ಬಳಕೆ ಮತ್ತು Xbox ಸೇವೆಗಳ ಕುರಿತು ಮಾಹಿತಿಯನ್ನು ಟ್ರ್ಯಾಕ್ ಮಾಡಬಹುದು ಮತ್ತು ಅಂತಹ ಮೂರನೇ ವ್ಯಕ್ತಿಯ ಸಾಧನಗಳು ಮತ್ತು ಪ್ಲಾಟ್ಫಾರ್ಮ್ಗಳು ಯಾವುದೇ ಮೂರನೇ ವ್ಯಕ್ತಿಯ ನಿಯಮಗಳು ಮತ್ತು ಗೌಪ್ಯತೆ ನೀತಿಗಳಿಗೆ ಒಳಪಟ್ಟಿರುತ್ತವೆ. ನೀವು ನಿಮ್ಮ Microsoft ಖಾತೆಯೊಂದಿಗೆ ಇನ್ನೊಂದು ಪ್ಲಾಟ್ಫಾರ್ಮ್ ಅಥವಾ ಸಾಧನಕ್ಕೆ ಸೈನ್ ಇನ್ ಮಾಡಿದರೆ ಅಥವಾ Microsoft ಅಲ್ಲದ ಸೇವೆಯನ್ನು ಪ್ರವೇಶಿಸಲು ನಿಮ್ಮ Microsoft ಖಾತೆಯನ್ನು ಅಂತಹ ಪ್ಲಾಟ್ಫಾರ್ಮ್ಗಳು ಅಥವಾ ಸಾಧನಗಳೊಂದಿಗೆ ಲಿಂಕ್ ಮಾಡಿದರೆ (ಉದಾಹರಣೆಗೆ, ಮೂರನೇ ವ್ಯಕ್ತಿಯ ಅಪ್ಲಿಕೇಶನ್ಗಳು ಮತ್ತು ಸೇವೆಗಳ Microsoft ಅಲ್ಲದ ಗೇಮ್ ಪ್ರಕಾಶಕರು), ನೀವು ಇದನ್ನು ಒಪ್ಪುತ್ತೀರಿ: (a) Microsoft ಗೌಪ್ಯತಾ ಹೇಳಿಕೆಯಲ್ಲಿ ಹೇಳಿರುವಂತೆ ಆ ಪಕ್ಷದೊಂದಿಗೆ ಸೀಮಿತ ಖಾತೆ ಮತ್ತು ಬಳಕೆಗೆ ಸಂಬಂಧಿಸಿದ ಮಾಹಿತಿಯನ್ನು (ಗೇಮರ್ಟ್ಯಾಗ್, ಗೇಮರ್ಸ್ಕೋರ್, ಆಟದ ಇತಿಹಾಸ, ಬಳಕೆಯ ಡೇಟಾ ಮತ್ತು ಸ್ನೇಹಿತರ ಪಟ್ಟಿ ಸೇರಿದಂತೆ) Microsoft ಹಂಚಿಕೊಳ್ಳಬಹುದು, ಮತ್ತು (b) ನಿಮ್ಮ Xbox ಗೌಪ್ಯತಾ ಸೆಟ್ಟಿಂಗ್ಗಳು ಅನುಮತಿಸಿದರೆ, ನೀವು ಆ ಪಕ್ಷದೊಂದಿಗೆ ನಿಮ್ಮ ಖಾತೆಗೆ ಸೈನ್ ಇನ್ ಮಾಡಿದಾಗ ನೀವು ಬಳಸುವ ಇನ್-ಗೇಮ್ ಸಂವಹನಗಳು ಅಥವಾ ಇತರ ಅಪ್ಲಿಕೇಶನ್ಗಳಿಂದ ಪಕ್ಷವು ನಿಮ್ಮ ವಿಷಯಕ್ಕೆ ಪ್ರವೇಶವನ್ನು ಹೊಂದಿರಬಹುದು. ಅಲ್ಲದೆ, ನಿಮ್ಮ Xbox ಗೌಪ್ಯತೆ ಸೆಟ್ಟಿಂಗ್ಗಳು ಅನುಮತಿಸಿದರೆ, ನಿಮ್ಮ ಹೆಸರು, ಗೇಮರ್ಟ್ಯಾಗ್, ಗೇಮರ್ಪಿಕ್, ಮೊಟ್ಟೊ, ಅವತಾರ್, ಗೇಮ್ಕ್ಲಿಪ್ಗಳು ಮತ್ತು ನೀವು ಅನುಮತಿಸುವ ಜನರ ಜೊತೆಗೆ ಸಂವಹಿಸುವ ಮೂಲಕ ನೀವು ಆಡಿದ ಆಟಗಳನ್ನು Microsoft ಪ್ರಕಟಿಸಬಹುದಾಗಿದೆ. ನೀವು Xbox-ನಿರ್ದಿಷ್ಟ ಕುಟುಂಬ ಸುರಕ್ಷತಾ ಸೆಟ್ಟಿಂಗ್ಗಳನ್ನು ಸಕ್ರಿಯಗೊಳಿಸಿದ್ದರೆ, ಆ ಸೆಟ್ಟಿಂಗ್ಗಳು Xbox ಕನ್ಸೋಲ್ಗಳು, Xbox ಕ್ಲೌಡ್ ಗೇಮಿಂಗ್ ಮತ್ತು PC ಅಥವಾ ಮೊಬೈಲ್ ಸಾಧನಗಳಲ್ಲಿನ Xbox ಅಪ್ಲಿಕೇಶನ್ನಲ್ಲಿ ಅನ್ವಯಿಸುತ್ತವೆ, ಆದರೆ Xbox Game Studios ಆಟಗಳು ಅಥವಾ ಇತರ ಸಾಧನಗಳು ಅಥವಾ ಪ್ಲಾಟ್ಫಾರ್ಮ್ಗಳಲ್ಲಿ ಪ್ರವೇಶಿಸಿದ ಅಥವಾ ಆಡಿದ ಸೇವೆಗಳಿಗೆ ಅನ್ವಯಿಸದಿರಬಹುದು. ನಿಮ್ಮ ಕುಟುಂಬಕ್ಕಾಗಿ ಸುರಕ್ಷಿತ ಗೇಮಿಂಗ್ ಅನುಭವವನ್ನು ಖಚಿತಪಡಿಸಿಕೊಳ್ಳಲು, ದಯವಿಟ್ಟು ಈ ಇತರ ಸಾಧನಗಳು ಮತ್ತು ಪ್ಲಾಟ್ಫಾರ್ಮ್ಗಳಲ್ಲಿ ಪೋಷಕರ ಸೆಟ್ಟಿಂಗ್ಗಳನ್ನು ಪರಿಶೀಲಿಸಿ.
- iii. ನಿಮ್ಮ ವಿಷಯ. Xbox ಸೇವೆಗಳ ಸಮುದಾಯ ನಿರ್ಮಾಣದ ಭಾಗವಾಗಿ, ನಿಮ್ಮ ವಿಷಯ ಅಥವಾ ನಿಮ್ಮ ಹೆಸರು, ಯಾವುದೇ Xbox ಸೇವೆಗಳಲ್ಲಿ ನೀವು ಪೋಸ್ಟ್ ಮಾಡುವ ಗೇಮರ್ಟ್ಯಾಗ್, ಧ್ಯೇಯವಾಕ್ಯ, ಅಥವಾ ಅವತಾರವನ್ನು ಬಳಸುವ, ಮಾರ್ಪಡಿಸುವ, ಮರು ಉತ್ಪಾದಿಸುವ, ವಿತರಿಸುವ, ಪ್ರಸಾರ ಮಾಡುವ, ಹಂಚಿಕೊಳ್ಳುವ ಮತ್ತು ಪ್ರದರ್ಶಿಸುವ ಒಂದು ಉಚಿತ ಮತ್ತು ಪ್ರಪಂಚಾದ್ಯಂತ ಹಕ್ಕನ್ನು ನೀವು Microsoft, ಅದರ ಸಹ ಸಂಸ್ಥೆಗಳು ಮತ್ತು ಉಪ ಪರವಾನಗಿದಾರರಿಗೆ ನೀಡುತ್ತೀರಿ.
- iv. ಆಟದ ವ್ಯವಸ್ಥಾಪಕರು. ಕೆಲವು ಆಟಗಳು ಆಟದ ವ್ಯವಸ್ಥಾಪಕರು, ರಾಯಭಾರಿಗಳು, ಹಾಗೂ ಹೋಸ್ಟ್ಗಳನ್ನು ಬಳಸಬಹುದು. ಆಟದ ವ್ಯವಸ್ಥಾಪಕರು ಹಾಗೂ ಹೋಸ್ಟ್ಗಳು Microsoft ನ ಅಧಿಕೃತ ವಕ್ತಾರರಲ್ಲ. ಅವರ ಅಭಿಪ್ರಾಯಗಳು Microsoft ಅಭಿಪ್ರಾಯವನ್ನು ಬಿಂಬಿಸಬೇಕೆಂದೇನಿಲ್ಲ.
- v. ಮಕ್ಕಳು ಮತ್ತು Xbox. ನೀವು Xbox ಸೇವೆಗಳನ್ನು ಬಳಸುತ್ತಿರುವ ಅಪ್ರಾಪ್ತ ವಯಸ್ಕರಾಗಿದ್ದರೆ, ನಿಮ್ಮ ಹೆತ್ತವರು ಅಥವಾ ಪೋಷಕರು ನಿಮ್ಮ ಖಾತೆಯ ಹಲವಾರು ಸಂಗತಿಗಳ ಮೇಲೆ ನಿಯಂತ್ರಣವನ್ನು ಹೊಂದಿರಬಹುದು ಮತ್ತು ನಿಮ್ಮ Xbox ಸೇವೆಗಳ ಬಳಕೆಯ ಕುರಿತು ವರದಿಗಳನ್ನು ಪಡೆಯಬಹುದಾಗಿದೆ. ಈ ವೈಶಿಷ್ಟ್ಯಗಳು Xbox ಸೇವೆಗಳಿಗೆ ಪ್ರತ್ಯೇಕವಾಗಿವೆ ಮತ್ತು ಇತರ ಸಾಧನಗಳು ಅಥವಾ ಪ್ಲಾಟ್ಫಾರ್ಮ್ಗಳಿಗೆ ವರ್ಗಾಯಿಸದಿರಬಹುದು.
- vi. ಆಟದ ಕರೆನ್ಸಿ ಮತ್ತು ಅಗೋಚರ ಸರಕುಗಳು. ನೀವು ವಾಸಿಸುತ್ತಿರುವಲ್ಲಿ ನೀವು "ಪ್ರಾಪ್ತ ವಯಸ್ಸಿಗೆ" ತಲುಪಿದ್ದರೆ Microsoft ನಿಂದ ಅಥವಾ ಅವರ ಪರವಾಗಿ ವಾಸ್ತವಿಕ ಹಣಕಾಸು ಉಪಕರಣಗಳನ್ನು ಬಳಸಿ ಖರೀದಿಸಬಹುದಾದ ಅಗೋಚರ, ಆಟದ ಕರೆನ್ಸಿಯನ್ನು (ಚಿನ್ನ, ನಾಣ್ಯ ಅಥವಾ ಪಾಯಿಂಟ್ಗಳಂತಹ) Xbox ಸೇವೆಗಳು ಹೊಂದಿರಬಹುದಾಗಿದೆ. ವರ್ಚುವಲ್ ಹಣಕಾಸು ಉಪಕರಣಗಳನ್ನು ಬಳಸಿ ಅಥವಾ ಆಟದ ಕರೆನ್ಸಿಯನ್ನು ಬಳಸಿ Microsoft ನಿಂದ ಅಥವಾ ಅವರ ಪರವಾಗಿ ಖರೀದಿಸಬಹುದಾದ ಅಗೋಚರ, ಡಿಜಿಟಲ್ ಐಟಂಗಳು ಅಥವಾ ಸರಕುಗಳನ್ನು ಕೂಡ Xbox ಸೇವೆಗಳು ಹೊಂದಿರಬಹುದಾಗಿದೆ. ಆಟದ ಕರೆನ್ಸಿ ಅಥವಾ ಅಗೋಚರ ಸರಕುಗಳನ್ನು Microsoft ಅಥವಾ ಬೇರೆ ಯಾವುದೇ ಪಕ್ಷದಿಂದ ಹಣಕಾಸು ಮೌಲ್ಯವುಳ್ಳ ವಾಸ್ತವಿಕ ಹಣಕಾಸು ಉಪಕರಣಗಳು, ಸರಕುಗಳು, ಅಥವಾ ಬೇರೆ ಐಟಂಗಳಿಗಾಗಿ ಎಂದಿಗೂ ರೀಡೀಮ್ ಮಾಡಲಾಗದು. Xbox ಸೇವೆಗಳಲ್ಲಿ ಮಾತ್ರ ಬಳಸಬಹುದಾದ ಸೀಮಿತ, ವೈಯಕ್ತಿಕ, ಹಿಂತೆಗೆದುಕೊಳ್ಳಬಹುದಾದ, ವರ್ಗಾವಣೆ ಮಾಡಲಾಗದ, ಉಪ ಪರವಾನಗಿ ನೀಡಲಾಗದ ಆಟದ ಕರೆನ್ಸಿ ಮತ್ತು ವಾಸ್ತವಿಕ ಸರಕುಗಳ ಪರವಾನಗಿಯನ್ನು ಹೊರತುಪಡಿಸಿ, Xbox ಸೇವೆಗಳಲ್ಲಿ, ಅಥವಾ ಸೇವೆಗಳ ಬಳಕೆಯೊಂದಿಗೆ ಸಂಬಂಧವಿರುವ ಬೇರೆ ಯಾವುದೇ ವೈಶಿಷ್ಟ್ಯಗಳಲ್ಲಿ ಕಾಣಿಸಿಕೊಳ್ಳುವ ಅಥವಾ ಅದರಿಂದ ಬರಬಹುದಾದ, ಅಥವಾ Xbox ಸೇವೆಗಳೊಳಗೆ ಸಂಗ್ರಹಿಸಲಾಗಿರುವ ಇಂತಹ ಆಟದ ಕರೆನ್ಸಿ ಅಥವಾ ವಾಸ್ತವಿಕ ಸರಕುಗಳ ಮೇಲೆ ನಿಮಗೆ ಯಾವುದೇ ಹಕ್ಕು ಅಥವಾ ಅಧಿಕಾರ ಇರುವುದಿಲ್ಲ. Microsoft ಯಾವುದೇ ಸಮಯದಲ್ಲಿ ನಿಮ್ಮ ಸ್ಥಳೀಯ ಕಾನೂನುಗಳಿಂದ ಅನುಮತಿಸಲಾದ ಗರಿಷ್ಠ ಮಟ್ಟಿಗೆ ತನ್ನ ಸ್ವಂತ ವಿವೇಚನೆಗೆ ಸರಿಹೊಂದುವಂತೆ ಯಾವುದೇ ಒಂದು ಅಥವಾ ಹೆಚ್ಚಿನ Xbox ಆಟಗಳು ಅಥವಾ ಅಪ್ಲಿಕೇಶನ್ಗಳಿಗೆ ಸಂಬಂಧಿಸಿದ ಆಟದ ಕರೆನ್ಸಿ ಮತ್ತು/ಅಥವಾ ವರ್ಚುವಲ್ ಸರಕುಗಳನ್ನು ನಿರ್ಬಂಧಿಸಬಹುದು, ನಿಯಂತ್ರಿಸಬಹುದು, ಮಾರ್ಪಡಿಸಬಹುದು ಮತ್ತು/ಅಥವಾ ತೆಗೆದುಹಾಕಬಹುದು.
- vii. ಸಾಫ್ಟ್ವೇರ್ ನವೀಕರಣಗಳು. Xbox ಸೇವೆಗಳನ್ನು ನೀವು ಪ್ರವೇಶಿಸಲು ನಿಮ್ಮನ್ನು ತಡೆಯುವ ವಿಷಯಗಳೂ ಸೇರಿದಂತೆ, ಅನಧಿಕೃತ Xbox ಗೇಮ್ಗಳು ಅಥವಾ Xbox ಅಪ್ಲಿಕೇಶನ್ಗಳನ್ನು ಬಳಸಿ ಅಥವಾ Xbox ಕನ್ಸೋಲ್ನೊಂದಿಗೆ ಅನಧಿಕೃತ ಹಾರ್ಡ್ವೇರ್ ಬಾಹ್ಯ ಘಟಕಗಳನ್ನು ಬಳಸಿ, Xbox ಸೇವೆಗಳಿಗೆ ಸಂಪರ್ಕಗೊಳ್ಳಬಲ್ಲ ಯಾವುದೇ ಸಾಧನಕ್ಕಾಗಿ, ನಾವು ಸ್ವಯಂಚಾಲಿತವಾಗಿ Xbox ಕನ್ಸೋಲ್ ಸಾಫ್ಟ್ವೇರ್ನ ಅಥವಾ Xbox ಅಪ್ಲಿಕೇಶನ್ ಸಾಫ್ಟ್ವೇರ್ನ ನಿಮ್ಮ ಆವೃತ್ತಿಯನ್ನು ಪರೀಕ್ಷಿಸಬಹುದು ಅಥವಾ Xbox ಕನ್ಸೋಲ್ ಅಥವಾ Xbox ಅಪ್ಲಿಕೇಶನ್ ಸಾಫ್ಟ್ವೇರ್ ನವೀಕರಣಗಳು ಅಥವಾ ಸಂರಚನಾ ಬದಲಾವಣೆಗಳನ್ನು ಡೌನ್ಲೋಡ್ ಮಾಡಬಹುದು.
- viii. ಮೋಸ ಮಾಡುವುದು ಮತ್ತು ಸಾಫ್ಟ್ವೇರ್ ಅನ್ನು ಅಕ್ರಮವಾಗಿ ತಿದ್ದುವುದು. Xbox ಸೇವೆಗಳಿಗೆ ಸಂಪರ್ಕಗೊಳ್ಳುವ ಯಾವುದೇ ಸಾಧನಕ್ಕಾಗಿ, ನಡವಳಿಕೆಯ ನಿಯಮಾವಳಿ ಅಥವಾ ಈ ನಿಯಮಗಳನ್ನು ಉಲ್ಲಂಘಿಸುವ ಮೂಲಕ ಮೋಸ ಅಥವಾ ಅಕ್ರಮ ತಿದ್ದುವಿಕೆಯನ್ನು ಸಕ್ರಿಯಗೊಳಿಸುವ ಅಂತಹ ಅನಧಿಕೃತ ಹಾರ್ಡ್ವೇರ್ ಅಥವಾ ಸಾಫ್ಟ್ವೇರ್ ಗಾಗಿ ನಿಮ್ಮ ಸಾಧನದ ಪರೀಕ್ಷೆಯನ್ನು ನಾವು ಸ್ವಯಂಚಾಲಿತವಾಗಿ ಮಾಡಬಹುದಾಗಿದೆ ಮತ್ತು Xbox ಅಪ್ಲಿ ಸಾಫ್ಟ್ವೇರ್ ನವೀಕರಣಗಳು ಅಥವಾ ಕಾನ್ಫಿಗರೇಶನ್ ಬದಲಾವಣೆಗಳನ್ನು ಡೌನ್ಲೋಡ್ ಮಾಡಬಹುದಾಗಿದೆ, ಇದರಲ್ಲಿ ನೀವು ಅನಧಿಕೃತ Xbox ಸೇವೆಗಳನ್ನು ಪ್ರವೇಶಿಸುವುದನ್ನು ತಡೆಯುವ, ಅಥವಾ ಮೋಸ ಅಥವಾ ಅಕ್ರಮ ತಿದ್ದುವಿಕೆಯನ್ನು ಸಕ್ರಿಯಗೊಳಿಸುವ ಹಾರ್ಡ್ವೇರ್ ಅಥವಾ ಸಾಫ್ಟ್ವೇರ್ ಅನ್ನು ಬಳಸುವುದನ್ನು ತಡೆಯುವ ಬದಲಾವಣೆಗಳು ಸೇರಿವೆ.
- ix. ಹೆಚ್ಚುವರಿ ಚಂದಾದಾರಿಕೆ ನಿಯಮಗಳು ಮತ್ತು ಷರತ್ತುಗಳು. Xbox ಸೇವೆಗಳ ಚಂದಾದಾರಿಕೆಗಳು Xbox ಚಂದಾದಾರಿಕೆಯ ನಿಯಮಗಳು ಮತ್ತು ಷರತ್ತುಗಳಲ್ಲಿ | Xbox (https://www.xbox.com/legal/subscription-terms) ನಿಗದಿಪಡಿಸಿರುವ ಹೆಚ್ಚುವರಿ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತವೆ.
- x. ನಿಷ್ಕ್ರಿಯ Xbox ಸೇವಾ ಚಂದಾದಾರಿಕೆಗಳು. ನಿಮ್ಮ Xbox ಸೇವೆಗಳ ಚಂದಾದಾರಿಕೆಯನ್ನು ಅವಧಿಯೊಂದಕ್ಕೆ ನೀವು ಬಳಸದಿದ್ದಲ್ಲಿ, ಆಯ್ದ ದೇಶಗಳಲ್ಲಿ ನಿಮ್ಮ ಪುನರಾವರ್ತನೆ ಬಿಲ್ಲಿಂಗ್ ಅನ್ನು Microsoft ಆಫ್ ಮಾಡಬಹುದು ಹಾಗೂ ಪುನರಾವರ್ತನೆ ಶುಲ್ಕಗಳನ್ನು ನಿಲ್ಲಿಸಬಹುದು. ಪುನರಾವರ್ತನೆ ಬಿಲ್ಲಿಂಗ್ ಅನ್ನು ಆಫ್ ಮಾಡುವ ಮೊದಲು ಸೂಚನೆಯನ್ನು Microsoft ನಿಮಗೆ ನೀಡುತ್ತದೆ. ಅನ್ವಯವಾಗುವ ನಿಷ್ಕ್ರಿಯತಾ ಅವಧಿಯೂ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ, ಚಂದಾದಾರಿಕೆ ನಿಷ್ಕ್ರಿಯತೆ FAQ | Xbox ಬೆಂಬಲ (https://support.xbox.com/en-GB/help/subscriptions-billing/manage-subscriptions/xbox-subscription-inactivity-policy) ಅನ್ನು ನೋಡಿ.
- xi. ಹೆಚ್ಚುವರಿ ಅಂತಿಮ-ಬಳಕೆದಾರ ಪರವಾನಗಿ ಒಪ್ಪಂದಗಳು ಮತ್ತು ನೀತಿ ಸಂಹಿತೆಗಳು. ಕೆಲವು Xbox ಸೇವೆಗಳು ತಮ್ಮದೇ ಆದ ಬಳಕೆಯ ನಿಯಮಗಳು ಮತ್ತು ನೀತಿ ಸಂಹಿತೆಗಳನ್ನು ಹೊಂದಿರಬಹುದು.
ಸಂಗ್ರಹ
- b. ಸಂಗ್ರಹ. "ಸಂಗ್ರಹ" ಎಂಬುದು ನಿಮಗೆ ಅಪ್ಲಿಕೇಶನ್ಗಳನ್ನು (“ಅಪ್ಲಿಕೇಶನ್” ಪದವು ಆಟಗಳನ್ನೂ ಒಳಗೊಂಡಿರುತ್ತದೆ) ಮತ್ತು ಇತರ ಡಿಜಿಟಲ್ ವಿಷಯವನ್ನು ಬ್ರೌಸ್ ಮಾಡಲು, ಡೌನ್ಲೋಡ್ ಮಾಡಲು, ಖರೀದಿಸಲು, ಮತ್ತು ರೇಟ್ ಹಾಗೂ ವಿಮರ್ಶೆ ಮಾಡಲು ಅನುಮತಿಸುವ ಒಂದು ಸೇವೆಯಾಗಿದೆ. ಈ ನಿಯಮಗಳು Microsoft ಅಥವಾ ಅದರ ಅಂಗಸಂಸ್ಥೆಗಳ ಮಾಲೀಕತ್ವ ಅಥವಾ ನಿರ್ವಹಣೆಯ ಕೆಲವು Stores ಗಳ (Office Store, Windows ನಲ್ಲಿ Microsoft Store ಮತ್ತು Xbox ನಲ್ಲಿ Microsoft Store ಒಳಗೊಂಡಂತೆ, ಆದರೆ ಅಷ್ಟಕ್ಕೇ ಸೀಮಿತವಾಗದಂತೆ) ಬಳಕೆಯನ್ನು ಒಳಗೊಂಡಿದೆ. Office ಉತ್ಪನ್ನಗಳಿಗಾಗಿ ಇರುವ Store ಮತ್ತು Office, Microsoft 365, SharePoint, Exchange, Access ಮತ್ತು Project (2013 ಆವೃತ್ತಿಗಳು ಅಥವಾ ನಂತರದವು) ಗಾಗಿ ಇರುವ ಅಪ್ಲಿಗಳು ಅಥವಾ ಬ್ರಾಂಡೆಡ್ Office Store ಆಗಿರುವ ಯಾವುದೇ ಇತರ ಅನುಭವವನ್ನು “Office Store” ಎಂದು ಕರೆಯಲಾಗುತ್ತದೆ. "Windows ನಲ್ಲಿ Microsoft Store" ಎಂದರೆ ಫೋನ್, PC ಮತ್ತು ಟ್ಯಾಬ್ಲೆಟ್ಗಳಂತಹ Windows ಸಾಧನಗಳಿಗಾಗಿ Microsoft ಅಥವಾ ಅದರ ಅಂಗಸಂಸ್ಥೆಗಳ ಮಾಲೀಕತ್ವ ಮತ್ತು ನಿರ್ವಹಣೆಯನ್ನು ಹೊಂದಿರುವ Store, ಅಥವಾ Microsoft Store ಬ್ರಾಂಡ್ ಆಗಿರುವ ಮತ್ತು ಫೋನ್, PC, ಅಥವಾ ಟ್ಯಾಬ್ಲೆಟ್ಗಳಂತಹ Windows ಸಾಧನಗಳಿಗೆ ಪ್ರವೇಶಿಸುವ ಯಾವುದೇ ಇತರ ಅನುಭವವಾಗಿದೆ. "Xbox ನಲ್ಲಿ Microsoft Store" ಎಂದರೆ Microsoft ಅಥವಾ ಅದರ ಅಂಗಸಂಸ್ಥೆಗಳ ಮಾಲೀಕತ್ವ ಮತ್ತು ನಿರ್ವಹಣೆಯನ್ನು ಹೊಂದಿರುವ Store, ಅಥವಾ Microsoft Store ಬ್ರಾಂಡ್ ಆಗಿರುವ ಮತ್ತು Xbox ಕನ್ಸೋಲ್ಗಳು ಲಭ್ಯವಾಗುವಂತೆ ಮಾಡುವ ಯಾವುದೇ ಇತರ ಅನುಭವವಾಗಿದೆ.
- i. ಪರವಾನಗಿ ನಿಯಮಗಳು. ಸಂಬಂಧಿತ ಸಂಗ್ರಹದಲ್ಲಿ ಲಭ್ಯವಿರುವ ಪ್ರತಿಯೊಂದು ಅಪ್ಲಿಕೇಶನ್ ಪ್ರಕಾಶಕರನ್ನು ನಾವು ಗುರುತಿಸುತ್ತೇವೆ. ಈ ಅಪ್ಲಿಕೇಶನ್ನೊಂದಿಗೆ ವಿವಿಧ ಪರವಾನಗಿ ನಿಯಮಗಳನ್ನು ಒದಗಿಸದ ಹೊರತು, ಈ ನಿಯಮಗಳ ಅಂತ್ಯದಲ್ಲಿರುವ ಪ್ರಮಾಣಿತ ಅಪ್ಲಿಕೇಶನ್ ಪರವಾನಗಿ ನಿಯಮಗಳು ("SALT") ನಿಮ್ಮ ಮತ್ತು ಅಪ್ಲಿಕೇಶನ್ ಪ್ರಕಾಶಕರ ನಡುವಿನ ಒಪ್ಪಂದವಾಗಿದ್ದು, ಇದು Microsoft ಅಥವಾ ಅದರ ಅಂಗಸಂಸ್ಥೆಗಳ ಮಾಲೀಕತ್ವ ಅಥವಾ ನಿರ್ವಹಣೆಯನ್ನು ಹೊಂದಿರುವ (Office Store ಅನ್ನು ಹೊರತುಪಡಿಸಿ) ಯಾವುದೇ Store ಮೂಲಕ ನೀವು ಡೌನ್ಲೋಡ್ ಮಾಡಿಕೊಳ್ಳುವ ಅಪ್ಲಿಕೇಶನ್ಗೆ ಅನ್ವಯವಾಗುವ ಪರವಾನಗಿ ನಿಯಮಗಳನ್ನು ಹೊಂದಿಸುತ್ತದೆ. ಸ್ಪಷ್ಟತೆಗಾಗಿ, ಈ ನಿಯಮಗಳು Microsoft ಸೇವೆಗಳು ಒದಗಿಸುವ ಸೇವೆಗಳನ್ನು ಮತ್ತು ಅದರ ಬಳಕೆಯನ್ನು ವ್ಯಾಪಿಸುತ್ತವೆ. ಈ ನಿಯಮಗಳ 5 ನೇ ವಿಭಾಗವೂ ಸಹ ಸಂಗ್ರಹದ ಮೂಲಕ ಪಡೆದುಕೊಂಡ ಯಾವುದೇ ಮೂರನೇ ಪಕ್ಷದ ಅಪ್ಲಿಕೇಶನ್ಗಳಿಗೆ ಮತ್ತು ಸೇವೆಗಳಿಗೆ ಅನ್ವಯಿಸುತ್ತದೆ. Office ಸಂಗ್ರಹದ ಮೂಲಕ ಡೌನ್ಲೋಡ್ ಮಾಡಿದ ಅಪ್ಲಿಕೇಶನ್ಗಳು SALT ಅಧೀನದಲ್ಲಿರುವುದಿಲ್ಲ ಮತ್ತು ಅನ್ವಯವಾಗುವ ಪ್ರತ್ಯೇಕ ಪರವಾನಗಿ ನಿಯಮಗಳನ್ನು ಹೊಂದಿರುತ್ತವೆ.
- ii. ಪರಿಷ್ಕರಣೆಗಳು. ಸಂಬಂಧಿತ ಸಂಗ್ರಹಕ್ಕೆ ನೀವು ಸೈನ್ ಇನ್ ಆಗಿಲ್ಲದಿದ್ದರೂ ಕೂಡ Microsoft ನಿಮ್ಮ ಅಪ್ಲಿಕೇಶನ್ಗಳಿಗಾಗಿ ಪರಿಷ್ಕರಣೆಗಳನ್ನು ಸ್ವಯಂಚಾಲಿತವಾಗಿ ಪರಿಶೀಲಿಸುತ್ತದೆ ಮತ್ತು ಡೌನ್ಲೋಡ್ ಮಾಡುತ್ತದೆ. ಸಂಗ್ರಹದ ಅಪ್ಲಿಕೇಶನ್ಗಳಿಗೆ ಸ್ವಯಂಚಾಲಿತ ಪರಿಷ್ಕರಣೆಗಳನ್ನು ಸ್ವೀಕರಿಸುವುದು ನಿಮಗೆ ಇಷ್ಟವಿಲ್ಲದಿದ್ದರೆ ನಿಮ್ಮ ಸಂಗ್ರಹ ಅಥವಾ ಸಿಸ್ಟಂ ಸಂಯೋಜನೆಗಳನ್ನು ನೀವು ಬದಲಾಯಿಸಿಕೊಳ್ಳಬಹುದು. ಆದರೆ, ಪೂರ್ಣವಾಗಿ ಅಥವಾ ಭಾಗಶಃವಾಗಿ ಆನ್ಲೈನ್ನಲ್ಲಿ ಹೋಸ್ಟ್ ಆಗಿರುವ ಕೆಲವೊಂದು Office ಸಂಗ್ರಹ ಅಪ್ಲಿಕೇಶನ್ಗಳನ್ನು ಯಾವುದೇ ಸಮಯದಲ್ಲಿ ಅಪ್ಲಿಕೇಶನ್ ಡೆವಲಪರ್ಗಳು ಪರಿಷ್ಕರಿಸಬಹುದಾಗಿದೆ ಮತ್ತು ಪರಿಷ್ಕರಣೆಗೆ ನಿಮ್ಮ ಅನುಮತಿ ಬೇಕಾಗಿರಲಾರದು.
- iii. ರೇಟಿಂಗ್ಗಳು ಮತ್ತು ವಿಮರ್ಶೆಗಳು. ನೀವು ಸ್ಟೋರ್ನಲ್ಲಿ ಯಾವುದೇ ಒಂದು ಅಪ್ಲಿಕೇಶನ್ ಅಥವಾ ಇತರ ಡಿಜಿಟಲ್ ಸರಕುಗಳಿಗೆ ರೇಟಿಂಗ್ ನೀಡಿದ್ದರೆ ಅಥವಾ ಅದನ್ನು ಪರಾಮರ್ಶಿಸಿದ್ದರೆ, ಅಪ್ಲಿಕೇಶನ್ ಅಥವಾ ಡಿಜಿಟಲ್ ಸರಕಿನ ಪ್ರಕಾಶಕರ ವಿಷಯವಿರುವ ಇಮೇಲ್ ಒಂದನ್ನು ನೀವು Microsoft ನಿಂದ ಪಡೆಯಬಹುದಾಗಿದೆ. ಇಂತಹ ಯಾವುದೇ ಇಮೇಲ್ Microsoft ನಿಂದ ಬರುತ್ತದೆ; ನೀವು ಸ್ಟೋರ್ ಮೂಲಕ ಗಳಿಸಿಕೊಳ್ಳುವ ಅಪ್ಲಿಕೇಶನ್ಗಳ ಅಥವಾ ಇತರ ಡಿಜಿಟಲ್ ಸರಕುಗಳ ಪ್ರಕಾಶಕರೊಂದಿಗೆ ನಾವು ನಿಮ್ಮ ಇಮೇಲ್ ವಿಳಾಸವನ್ನು ಹಂಚುವುದಿಲ್ಲ.
- iv. ಸುರಕ್ಷತೆಯ ಎಚ್ಚರಿಕೆ. ಸಂಭವನೀಯ ಗಾಯ, ಅಸೌಖ್ಯತೆ ಅಥವಾ ಕಣ್ಣಿನ ತ್ರಾಸವನ್ನು ತಪ್ಪಿಸಲು, ವಿಶೇಷವಾಗಿ ಗೇಮ್ಗಳು ಅಥವಾ ಇತರೆ ಅಪ್ಲಿಕೇಶನ್ಗಳ ಬಳಕೆ ಪರಿಣಾಮವಾಗಿ ನೀವು ನೋವು ಅಥವಾ ದಣಿವು ಅನುಭವಿಸುತ್ತಿದ್ದರೆ, ಅವುಗಳ ಬಳಕೆಗೆ ನೀವು ಸಾಂದರ್ಭಿಕವಾಗಿ ವಿರಾಮಗಳನ್ನು ನೀಡಬೇಕಾಗುತ್ತದೆ. ನೀವು ಅಸೌಖ್ಯತೆಯನ್ನು ಅನುಭವಿಸಿದಲ್ಲಿ, ವಿರಾಮವನ್ನು ತೆಗೆದುಕೊಳ್ಳಿ. ಅಸೌಖ್ಯತೆಯು ವಾಕರಿಕೆ, ಚಲನೆಯ ಅನಾರೋಗ್ಯ, ತಲೆಸುತ್ತುವಿಕೆ, ದಿಗ್ಭ್ರಮೆ, ತಲೆನೋವು, ಆಯಾಸ, ಕಣ್ಣಿನ ಆಯಾಸ, ಅಥವಾ ಕಣ್ಣಿನ ಶುಷ್ಕತೆಯ ಭಾವನೆಗಳನ್ನು ಒಳಗೊಂಡಿರಬಹುದು. ಅಪ್ಲಿಕೇಶನ್ಗಳ ಬಳಕೆಯು ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಬಹುದು ಅಥವಾ ನಿಮ್ಮ ಪರಿಸರವನ್ನು ನಿರೋಧಿಸಬಹುದು. ಜಾರಿಬೀಳುವ ಅಪಾಯಗಳು, ಮೆಟ್ಟಿಲುಗಳು, ತಗ್ಗಾದ ಛಾವಣಿಗಳು, ಹಾನಿಗೀಡಾಗಬಲ್ಲ ನಾಜೂಕು ಅಥವಾ ಬೆಲೆಬಾಳುವ ವಸ್ತುಗಳಿಂದ ದೂರವಿರಿ. ಅಪ್ಲಿಕೇಶನ್ಗಳಲ್ಲಿ ಕಾಣಿಸಿಕೊಳ್ಳುವ ಬೆಳಕಿನ ಫ್ಲ್ಯಾಶಿಂಗ್ ಅಥವಾ ಚಿತ್ರಾಕೃತಿಗಳಂತಹಾ ಕಣ್ಣಿಗೆ ಕಾಣಿಸುವ ಚಿತ್ರಗಳನ್ನು ನೋಡಿದಾಗ ಕೆಲವು ಜನರಿಗೆ ಸೆಳೆತದ ಅನುಭವವಾಗಬಹುದಾಗಿದೆ. ಸೆಳೆತದ ಇತಿಹಾಸ ಇಲ್ಲದಿರುವ ಜನರಲ್ಲಿಯೂ ಈ ಸೆಳೆತಗಳಿಗೆ ಕಾರಣವಾಗಬಲ್ಲ, ವೈದ್ಯಕೀಯವಾಗಿ ಪತ್ತೆಯಾಗದಿರುವ ಸ್ಥಿತಿ ಇರಬಹುದಾಗಿದೆ. ರೋಗಚಿಹ್ನೆಗಳೆಂದರೆ ತಲೆಸುತ್ತುವಿಕೆ, ದೃಷ್ಟಿ ವ್ಯತ್ಯಾಸ, ಸೆಳೆತ, ಎಳೆತ ಅಥವಾ ಕಾಲುಗಳ ಅದುರುವಿಕೆ, ದಿಗ್ಭ್ರಮೆ, ಗೊಂದಲ, ಪ್ರಜ್ಞೆ ತಪ್ಪುವಿಕೆ, ಅಥವಾ ನಡುಕ ಮುಂತಾದವು. ಇಂತಹಾ ಯಾವುದೇ ರೋಗಚಿಹ್ನೆಗಳು ನಿಮ್ಮ ಅನುಭವಕ್ಕೆ ಬಂದರೆ, ತಕ್ಷಣವೇ ಬಳಸುವುದನ್ನು ನಿಲ್ಲಿಸಿ ಮತ್ತು ವೈದ್ಯರನ್ನು ಸಂಪರ್ಕಿಸಿ ಅಥವಾ ಸೆಳೆತಗಳಿಗೆ ಸಂಬಂಧಿಸಿದ ರೋಗಚಿಹ್ನೆಗಳು ನಿಮಗೆ ಈ ಹಿಂದೆ ಕಾಣಿಸಿಕೊಂಡಿದ್ದರೆ ಅಪ್ಲಿಕೇಶನ್ಗಳನ್ನು ಬಳಸುವ ಮೊದಲೇ ವೈದ್ಯರ ಸಲಹೆ ಪಡೆಯಿರಿ. ರೋಗ ಚಿಹ್ನೆಗಳ ಸೂಚನೆಗಳಿಗಾಗಿ ಪೋಷಕರು ತಮ್ಮ ಮಕ್ಕಳು ಬಳಸುತ್ತಿರುವ ಅಪ್ಲಿಕೇಶನ್ಗಳ ಮೇಲೆ ಕಣ್ಣಿಡಬೇಕು.
Microsoft ಕುಟುಂಬ ವೈಶಿಷ್ಟ್ಯಗಳು
- c. Microsoft ಕುಟುಂಬ ವೈಶಿಷ್ಟ್ಯಗಳು. ತಮ್ಮ ಕುಟುಂಬದಲ್ಲಿ ಯಾವ ನಡವಳಿಕೆಗಳು, ವೆಬ್ಸೈಟ್ಗಳು, ಅಪ್ಲಿಗಳು, ಆಟಗಳು, ಭೌತಿಕ ಸ್ಥಳಗಳು, ಮತ್ತು ಖರ್ಚು ಮಾಡುವುದು ಸರಿಯಾಗಿರುತ್ತವೆ ಎಂಬ ಕುರಿತಾಗಿ ಪರಸ್ಪರ ತಿಳಿವಳಿಕೆಯ ಆಧಾರದಲ್ಲಿ ವಿಶ್ವಾಸ ನಿರ್ಮಿಸಲು ಪೋಷಕರು ಮತ್ತು ಮಕ್ಕಳು Microsoft Family Safety ಸೇರಿದಂತೆ Microsoft ಕುಟುಂಬ ವೈಶಿಷ್ಟ್ಯಗಳನ್ನು ಬಳಸಿಕೊಳ್ಳಬಹುದು. ಪೋಷಕರು https://account.microsoft.com/family ಗೆ ಹೋಗುವ ಮೂಲಕ (ಅಥವಾ ತಮ್ಮ Windows ಸಾಧನ ಅಥವಾ Xbox ಕನ್ಸೋಲ್ನಲ್ಲಿ ಸೂಚನೆಗಳನ್ನು ಅನುಸರಿಸುವ ಮೂಲಕ) "ಕುಟುಂಬ" ವನ್ನು ರಚಿಸಬಹುದಾಗಿದೆ ಮತ್ತು ಸೇರಿಕೊಳ್ಳುವಂತೆ ಮಕ್ಕಳು ಅಥವಾ ಬೇರೆ ಪೋಷಕರನ್ನು ಆಮಂತ್ರಿಸಬಹುದಾಗಿದೆ. ಕುಟುಂಬದ ಸದಸ್ಯರಿಗೆ ಸಾಕಷ್ಟು ವೈಶಿಷ್ಟ್ಯಗಳು ಲಭ್ಯ ಇವೆ, ಹೀಗಾಗಿ "ಕುಟುಂಬ"ವನ್ನು ರಚಿಸಲು ಅಥವಾ ಸೇರಲು ಒಪ್ಪಿಗೆ ಸೂಚಿಸುವಾಗ ಮತ್ತು ಕುಟುಂಬ ಪ್ರವೇಶಕ್ಕಾಗಿ ನೀವು ಡಿಜಿಟಲ್ ಸರಕುಗಳನ್ನು ಖರೀದಿಸುವಾಗ ಒದಗಿಸಲಾಗುವ ಮಾಹಿತಿಯನ್ನು ದಯವಿಟ್ಟು ಕೂಲಂಕಷವಾಗಿ ಪರಿಶೀಲಿಸಿ. ಕುಟುಂಬವನ್ನು ರಚಿಸುವ ಅಥವಾ ಸೇರುವ ಮೂಲಕ, ಕುಟುಂಬವನ್ನು ನೀವು ಅದರ ಉದ್ದೇಶಕ್ಕೆ ಅನುಸಾರವಾಗಿ ಬಳಸುತ್ತೀರಿ ಮತ್ತು ಬೇರೊಬ್ಬ ವ್ಯಕ್ತಿಯ ಮಾಹಿತಿಗೆ ಕಾನೂನುಬಾಹಿರವಾಗಿ ಪ್ರವೇಶ ಪಡೆಯಲು ಅನಧಿಕೃತ ಮಾರ್ಗವಾಗಿ ಅದನ್ನು ಬಳಸುವುದಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ. Microsoft ಕುಟುಂಬ ವೈಶಿಷ್ಟ್ಯಗಳು Microsoft ಸೇವೆಗಳಿಗೆ ಪ್ರತ್ಯೇಕವಾಗಿವೆ ಮತ್ತು ಇತರ ಪ್ಲಾಟ್ಫಾರ್ಮ್ಗಳಿಗೆ ವರ್ಗಾಯಿಸಲಾಗುವುದಿಲ್ಲ. ಉದಾಹರಣೆಗೆ, Xbox-ನಿರ್ದಿಷ್ಟ ಕುಟುಂಬ ಸುರಕ್ಷತಾ ಸೆಟ್ಟಿಂಗ್ಗಳು Xbox ಕನ್ಸೋಲ್ಗಳು, Xbox ಕ್ಲೌಡ್ ಗೇಮಿಂಗ್ ಮತ್ತು PC ಅಥವಾ ಮೊಬೈಲ್ ಸಾಧನಗಳಲ್ಲಿನ Xbox ಅಪ್ಲಿಕೇಶನ್ನಲ್ಲಿ ಅನ್ವಯಿಸುತ್ತವೆ, ಆದರೆ ಇತರ ಸಾಧನಗಳು ಅಥವಾ ಪ್ಲಾಟ್ಫಾರ್ಮ್ಗಳಲ್ಲಿ ಪ್ರವೇಶಿಸಿದ ಅಥವಾ ಆಡಿದ Xbox Game Studios ಆಟಗಳು ಅಥವಾ ಸೇವೆಗಳಿಗೆ ವಿಸ್ತರಿಸದಿರಬಹುದು. ನಿಮ್ಮ ಕುಟುಂಬಕ್ಕಾಗಿ ಸುರಕ್ಷಿತ ಗೇಮಿಂಗ್ ಅನುಭವವನ್ನು ಖಚಿತಪಡಿಸಿಕೊಳ್ಳಲು, ದಯವಿಟ್ಟು ಈ ಸಾಧನಗಳು ಮತ್ತು ಪ್ಲಾಟ್ಫಾರ್ಮ್ಗಳಲ್ಲಿ ಪೋಷಕರ ಸೆಟ್ಟಿಂಗ್ಗಳನ್ನು ಪರಿಶೀಲಿಸಿ.
ಗುಂಪು ಸಂದೇಶಕಳುಹಿಸುವಿಕೆ
- d. ಗುಂಪು ಸಂದೇಶಕಳುಹಿಸುವಿಕೆ. ವಿವಿಧ Microsoft ಸೇವೆಗಳು ವಾಯ್ಸ್ ಅಥವಾ ಎಸ್ಎಮ್ಎಸ್ ("ಸಂದೇಶಗಳು") ಮೂಲಕ ಇತರರಿಗೆ ಸಂದೇಶಗಳನ್ನು ಕಳುಹಿಸಲು ನಿಮಗೆ ಅನುಮತಿಯನ್ನು ಒದಗಿಸುತ್ತವೆ, ಮತ್ತು/ಅಥವಾ Microsoft ಮತ್ತು Microsoft-ನಿಯಂತ್ರಿತ ಅಂಗಸಂಸ್ಥೆಗಳು ಇಂತಹ ಸಂದೇಶಗಳನ್ನು ನಿಮಗೆ ಅಥವಾ ನಿಮ್ಮ ಪರವಾಗಿ ಒಂದು ಅಥವಾ ಹೆಚ್ಚು ಬಳಕೆದಾರರಿಗೆ ಕಳುಹಿಸಲು ಅನುಮತಿಸುತ್ತವೆ. ಇಂತಹ ಸಂದೇಶಗಳನ್ನು ನಿಮಗೆ ಅಥವಾ ಇತರರಿಗೆ ಕಳುಹಿಸಲು Microsoft ಮತ್ತು Microsoft-ನಿಯಂತ್ರಿತ ಅಂಗಸಂಸ್ಥೆಗಳಿಗೆ ನೀವು ಸೂಚಿಸಿದಾಗ, ನೀವು ಮತ್ತು ಸಂದೇಶ ರವಾನಿಸಲು ನೀವು ನಮಗೆ ಸೂಚಿಸಿದ ಪ್ರತಿಯೊಬ್ಬ ವ್ಯಕ್ತಿಯು ಅಂತಹ ಸಂದೇಶಗಳನ್ನು ಹಾಗು MICROSOFT ಮತ್ತು MICROSOFT-ನಿಯಂತ್ರಿತ ಅಂಗಸಂಸ್ಥೆಗಳಿಂದ ಇತರ ಯಾವುದೇ ಸಂಬಂಧಿತ ಆಡಳಿತ ಪಠ್ಯ ಸಂದೇಶಗಳನ್ನು ಪಡೆಯಲು ಸಮ್ಮತಿಯನ್ನು ನೀಡುವಿರಿ ಎಂದು ಪ್ರತಿನಿಧಿತ್ವ ಮತ್ತು ಸಮರ್ಥನೆಯನ್ನು ಒದಗಿಸುವಿರಿ. "ಆಡಳಿತ ಪಠ್ಯ ಸಂದೇಶಗಳು" ಒಂದು ನಿರ್ದಿಷ್ಟ Microsoft ಸೇವಾ ಸೇವೆಯಿಂದ ಬರುವ ಸಾಂದರ್ಭಿಕ ವ್ಯವಹಾರ ಸಂದೇಶಗಳಾಗಿದ್ದು, ಇದು "ಸ್ವಾಗತ ಸಂದೇಶ" ಅಥವಾ ಸಂದೇಶಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುವ ಬಗೆಗಿನ ಸೂಚನೆಗಳನ್ನು ಒಳಗೊಂಡಿರುತ್ತದೆ ಆದರೆ ಇಷ್ಟಕ್ಕೇ ಸೀಮಿತವಾಗಿಲ್ಲ. ನೀವು ಅಥವಾ ಗುಂಪಿನ ಸದಸ್ಯರು Microsoft ಅಥವಾ Microsoft-ನಿಯಂತ್ರಿತ ಅಂಗಸಂಸ್ಥೆಯಿಂದ ಇನ್ನು ಮುಂದೆ ಇಂತಹ ಸಂದೇಶಗಳನ್ನು ಪಡೆಯಲು ಬಯಸದಿದ್ದರೆ ಯಾವುದೇ ಸಮಯದಲ್ಲಿ ಬೇಕಾದರೂ ಕೆಳಗೆ ಒದಗಿಸಿರುವ ಸೂಚನೆಗಳನ್ನು ಪಾಲಿಸುವ ಮೂಲಕ ಮುಂದಿನ ಸಂದೇಶಗಳನ್ನು ಪಡೆಯುವುದರಿಂದ ಹೊರಗುಳಿಯಬಹುದು. ನೀವು ಇನ್ನು ಮುಂದೆ ಇಂತಹ ಸಂದೇಶಗಳನ್ನು ಪಡೆಯಲು ಅಥವಾ ಗುಂಪಿನಲ್ಲಿ ಭಾಗವಹಿಸಲು ಬಯಸದಿದ್ದರೆ, ಅನ್ವಯಿಸುವ ಪ್ರೋಗ್ರಾಂ ಅಥವಾ ಸೇವೆಯ ಮೂಲಕ ಒದಗಿಸಲಾದ ಸೂಚನೆಗಳ ಮೂಲಕ ಹೊರಗುಳಿಯುವ ಆಯ್ಕೆಯನ್ನು ಮಾಡುವಿರಿ ಎಂದು ನೀವು ಒಪ್ಪುವಿರಿ. ಗುಂಪಿನ ಸದಸ್ಯನು ಇನ್ನು ಮುಂದೆ ಇಂತಹ ಸಂದೇಶಗಳನ್ನು ಪಡೆಯಲು ಅಥವಾ ಗುಂಪಿನಲ್ಲಿ ಭಾಗವಹಿಸಲು ಬಯಸುವುದಿಲ್ಲ ಎಂಬ ನಿಮ್ಮ ನಂಬಿಕೆಗೆ ನೀವು ಕಾರಣವನ್ನು ಹೊಂದಿದ್ದರೆ, ಅವರನ್ನು ಗುಂಪಿನಿಂದ ತೆಗೆಯಲು ನೀವು ಒಪ್ಪುವಿರಿ. US- ಮೂಲದ ಸಂಖ್ಯೆಗಳಿಂದ ಸಂದೇಶಗಳನ್ನು ರವಾನಿಸಿದಾಗ ಅನ್ವಯವಾಗುವ ಅಂತಾರಾಷ್ಟ್ರೀಯ ಸಂದೇಶ ಶುಲ್ಕಗಳು ಸೇರಿದಂತೆ, ಗುಂಪಿನ ಸದಸ್ಯ ಅಥವಾ ಸದಸ್ಯಳ ಮೊಬೈಲ್ ವಾಹಕದ ಮೂಲಕ ನಿರ್ಣಯಿಸಲಾದ ಯಾವುದೇ ಸಂದೇಶ ಶುಲ್ಕಗಳ ವೆಚ್ಚಗಳು ಆ ಸದಸ್ಯ ಅಥವಾ ಸದಸ್ಯಳ ಜವಾಬ್ದಾರಿಯಾಗಿರುತ್ತದೆ ಎಂಬುದನ್ನು ನೀವು ಮತ್ತು ಸಂದೇಶ ರವಾನಿಸಲು ನೀವು ನಮಗೆ ಸೂಚಿಸಿದ ಪ್ರತಿಯೊಬ್ಬ ವ್ಯಕ್ತಿಯು ತಿಳಿದಿರುತ್ತಾರೆ ಎಂಬ ಪ್ರತಿನಿಧಿತ್ವ ಹಾಗು ಸಮರ್ಥನೆಯನ್ನು ಕೂಡಾ ನೀವು ಒದಗಿಸುವಿರಿ.
Skype, Microsoft Teams, ಮತ್ತು GroupMe
- e. Skype, Microsoft Teams, ಮತ್ತು GroupMe.
- i. ತುರ್ತು ಸೇವೆಗಳು. ಸಾಂಪ್ರದಾಯಿಕ ಮೊಬೈಲ್ ಅಥವಾ ಸ್ಥಿರ ದೂರವಾಣಿ ಸೇವೆಗಳು ಮತ್ತು Skype, Microsoft Teams, ಮತ್ತು GroupMe ನಡುವೆ ಮಹತ್ವದ ವ್ಯತ್ಯಾಸಗಳಿವೆ. Skype, Microsoft Teams, ಮತ್ತು GroupMe ಮೂಲಕ 911 ಅಥವಾ 112 ತುರ್ತು ಕಾಲಿಂಗ್ ("ತುರ್ತು ಸೇವೆಗಳು") ಗಳಂತಹ ತುರ್ತು ಸೇವೆಗಳಿಗೆ ಪ್ರವೇಶವನ್ನು ಒದಗಿಸಲು, ಅನ್ವಯವಾಗುವ ಸ್ಥಳೀಯ ಮತ್ತು ರಾಷ್ಟ್ರೀಯ ನಿಯಮಗಳು, ನಿಬಂಧನೆಗಳು ಅಥವಾ ಕಾನೂನಿನಡಿಯಲ್ಲಿ ಸೀಮಿತ ಬಾಧ್ಯತೆಗಳನ್ನು Microsoft ಹೊಂದಿರುತ್ತದೆ. ತುಂಬಾ ಸೀಮಿತವಾದ ಸಂಖ್ಯೆಯ ದೇಶಗಳಲ್ಲಿ, ಮತ್ತು ಬಳಸಲಾಗುವ ಪ್ಲಾಟ್ಫಾರ್ಮ್ನ ಮೇಲೆ ಅವಲಂಬಿತವಾಗಿ, Skype ನ Skype ನಿಂದ ಫೋನ್ ವೈಶಿಷ್ಟ್ಯದ ಸೀಮಿತ ಸಾಫ್ಟ್ವೇರ್ ಆವೃತ್ತಿಗಳು ಮಾತ್ರ ತುರ್ತು ಸೇವೆಗಳನ್ನು ಬೆಂಬಲಿಸಬಹುದು. ಈ ವೈಶಿಷ್ಟ್ಯದ ಲಭ್ಯತೆ ಹಾಗೂ ಅದನ್ನು ಹೇಗೆ ಕಾನ್ಫಿಗರ್ ಮಾಡುವುದು ಎಂಬ ವಿವರಗಳನ್ನು ಇಲ್ಲಿ ನೀವು ಕಂಡುಕೊಳ್ಳಬಹುದು: https://www.skype.com/go/emergency. ನಿಮ್ಮ Skype ನಿಂದ ಫೋನ್ ತುರ್ತು ಕರೆಯು ಸಂಪರ್ಕಿತವಾದಲ್ಲಿ, ನಿಮಗೆ ಸ್ಪಂದಿಸಲು ತುರ್ತು ಸೇವೆಗಳನ್ನು ಸಕ್ರಿಯಗೊಳಿಸಲು ನಿಮ್ಮ ಭೌತಿಕ ಸ್ಥಾನದ ವಿವರಗಳನ್ನು ನೀವು ಒದಗಿಸಬೇಕಾಗುತ್ತದೆ.
- ii. API ಗಳು ಅಥವಾ ಬ್ರಾಡ್ಕಾಸ್ಟಿಂಗ್. ಒಂದು ವೇಳೆ ಯಾವುದೇ ಪ್ರಸಾರಕ್ಕೆ ಸಂಬಂಧಿಸಿದಂತೆ ನೀವು Skype ಸಾಫ್ಟ್ವೇರ್ ಮತ್ತು ಉತ್ಪನ್ನಗಳನ್ನು ಬಳಸಲು ಬಯಸಿದರೆ, ನೀವು https://www.skype.com/go/legal.broadcast ನಲ್ಲಿ "ಪ್ರಸಾರ TOS" ಅನ್ನು ಅನುಸರಿಸಬೇಕು. ಒಂದು ವೇಳೆ ನೀವು Skype ನಿಂದ ತೋರಿಸಲ್ಪಟ್ಟ ಅಥವಾ ಲಭ್ಯವಾಗುವಂತಹ ಯಾವುದೇ ಅಪ್ಲಿಕೇಶನ್ ಪ್ರೋಗ್ರಾಂ ಇಂಟರ್ಫೇಸ್ (API) ಬಳಸಲು ಬಯಸಿದರೆ, ನೀವು www.skype.com/go/legal ನಲ್ಲಿ ಲಭ್ಯವಿರುವ ಅನ್ವಯಿಸುವ ಪರವಾನಗಿ ನಿಯಮಗಳನ್ನು ಅನುಸರಿಸಬೇಕು.
- iii. ನ್ಯಾಯಯುತ ಬಳಕೆ ನೀತಿಗಳು. Skype ಸಾಫ್ಟ್ವೇರ್ ಮತ್ತು ಉತ್ಪನ್ನಗಳ ನಿಮ್ಮ ಬಳಕೆಗೆ ನ್ಯಾಯೋಚಿತ ಬಳಕೆಯ ನೀತಿಗಳು ಅನ್ವಯಿಸಬಹುದು. ವಂಚನೆ ಮತ್ತು ದುರುಪಯೋಗದ ವಿರುದ್ಧ ರಕ್ಷಣೆಗಾಗಿ ವಿನ್ಯಾಸಗೊಳಿಸಲಾಗಿರುವ ಮತ್ತು ನೀವು ಮಾಡಲು ಸಾಧ್ಯವಾಗುವ ಕರೆಗಳು ಅಥವಾ ಸಂದೇಶಗಳ ವಿಧ, ಅವಧಿ ಅಥವಾ ಪ್ರಮಾಣದ ಮೇಲೆ ಮಿತಿ ಹೇರಬಹುದಾದ ಈ ನೀತಿಗಳನ್ನು ದಯವಿಟ್ಟು ಪರಿಶೀಲಿಸಿ. ಈ ನೀತಿಗಳನ್ನು ಉಲ್ಲೇಖದ ಅನುಸಾರ ಈ ನಿಯಮಗಳಲ್ಲಿ ಸಂಯೋಜಿಸಲಾಗಿದೆ. https://www.skype.com/go/terms.fairusage/ ನಲ್ಲಿ ಈ ನೀತಿಗಳನ್ನು ನೀವು ಕಾಣಬಹುದು.
- iv. ವೈಯಕ್ತಿಕ/ವಾಣಿಜ್ಯೇತರ ಬಳಕೆ. Skype ಸಾಫ್ಟ್ವೇರ್ ಅಥವಾ ಉತ್ಪನ್ನಗಳ ಬಳಕೆಯು ನಿಮ್ಮ ವೈಯಕ್ತಿಕ ಮತ್ತು ವಾಣಿಜ್ಯೇತರ ಬಳಕೆಗಾಗಿ ಇರುತ್ತದೆ. ನಿಮ್ಮ ಸ್ವಂತ ವ್ಯವಹಾರದ ಸಂವಹನಗಳಿಗೆ ಕಚೇರಿಯಲ್ಲಿ Skype ಬಳಸಲು ನಿಮಗೆ ಅನುಮತಿಸಲಾಗಿದೆ.
- v. Skype ಸಂಖ್ಯೆ/Skype To Go. ಒಂದು ವೇಳೆ Microsoft ನಿಮಗೆ Skype ಸಂಖ್ಯೆ ಅಥವಾ Skype ಟು ಗೋ ಸಂಖ್ಯೆಯನ್ನು ಒದಗಿಸಿದರೆ, ನೀವು ಸಂಖ್ಯೆಯನ್ನು ಹೊಂದಿಲ್ಲವೆಂದು ಅಥವಾ ಆ ಸಂಖ್ಯೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ಹಕ್ಕಿದೆ ಎಂದು ಒಪ್ಪುತ್ತೀರಿ. ಕೆಲವು ರಾಷ್ಟ್ರಗಳಲ್ಲಿ, Microsoft ನ ಬದಲಿಗೆ Microsoft ಪಾಲುದಾರರಿಂದ ನಿಮಗೆ ಸಂಖ್ಯೆ ಲಭ್ಯವಾಗಬಹುದು, ಮತ್ತು ನೀವು ಅಂತಹ ಪಾಲುದಾರರೊಂದಿಗೆ ಪ್ರತ್ಯೇಕ ಒಪ್ಪಂದಕ್ಕೆ ಒಳಗಾಗಬೇಕಾಗಬಹುದು. Skype ಸಂಖ್ಯೆ ಕುರಿತು ಹೆಚ್ಚಿನ ವಿವರಗಳಿಗಾಗಿ https://go.skype.com/home.skype-number ಅನ್ನು ನೋಡಿ.
- vi. Skype ವ್ಯವಸ್ಥಾಪಕರು. "Skype ವ್ಯವಸ್ಥಾಪಕ ಅಡ್ಮಿನ್ ಖಾತೆಯನ್ನು" ನಿಮ್ಮಿಂದ ರಚಿಸಲಾಗಿದೆ ಮತ್ತು ನಿರ್ವಹಿಸಲಾಗಿದೆ, ಇದು Skype ವ್ಯವಸ್ಥಾಪಕ ಗುಂಪಿನ ವೈಯಕ್ತಿಕ ನಿರ್ವಾಹಕನಾಗಿ ಕೆಲಸ ಮಾಡುತ್ತದೆಯೇ ಹೊರತು ವ್ಯವಹಾರದ ಸಂಸ್ಥೆಯ ರೂಪದಲ್ಲಿ ಅಲ್ಲ. ನೀವು ನಿಮ್ಮ ವೈಯಕ್ತಿಕ Microsoft ಖಾತೆಯನ್ನು Skype ವ್ಯವಸ್ಥಾಪಕ ಗುಂಪಿಗೆ ಲಿಂಕ್ ಮಾಡಬಹುದಾಗಿದೆ ("ಲಿಂಕ್ ಮಾಡಿದ ಖಾತೆ"). ನೀವು ನಿಮ್ಮ Skype ವ್ಯವಸ್ಥಾಪಕ ಗುಂಪಿಗೆ ಅವರು ಈ ನಿಯಮಗಳನ್ನು ಒಪ್ಪಬೇಕೆಂಬ ಷರತ್ತಿಗೊಳಪಟ್ಟು ಹೆಚ್ಚುವರಿ ನಿರ್ವಾಹಕರನ್ನು ನೇಮಿಸಬಹುದಾಗಿದೆ. ನೀವು ಸಂಪರ್ಕಿತ ಖಾತೆಯೊಂದಕ್ಕೆ Skype ಸಂಖ್ಯೆಗಳನ್ನು ವಿತರಿಸಿದರೆ, ನಿಮ್ಮ ಸಂಪರ್ಕಿತ ಖಾತೆಯ ಬಳಕೆದಾರರ ನಿವಾಸ ಅಥವಾ ಸ್ಥಳಕ್ಕೆ ಸಂಬಂಧಿಸಿದ ಯಾವುದೇ ಅಗತ್ಯತೆಗಳಿಗೆ ಬದ್ಧರಾಗಿರಬೇಕಾದುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. Skype ವ್ಯವಸ್ಥಾಪಕ ಗುಂಪಿನಿಂದ ಸಂಪರ್ಕಿತ ಖಾತೆಯೊಂದನ್ನು ಅಸಂಪರ್ಕಿತಗೊಳಿಸಲು ನೀವು ಆಯ್ದುಕೊಂಡರೆ, ನಿಯೋಜಿಸಲಾದ ಯಾವುದೇ ಚಂದಾದಾರಿಕೆಗಳು, Skype ಕ್ರೆಡಿಟ್ ಅಥವಾ Skype ಸಂಖ್ಯೆಗಳನ್ನು ಮರಳಿಪಡೆಯಲಾಗುವುದಿಲ್ಲ ಮತ್ತು ಅಸಂಪರ್ಕಿತ ಖಾತೆಯೊಂದಿಗೆ ಸಂಬಂಧವಿರುವ ನಿಮ್ಮ ವಿಷಯ ಅಥವಾ ಸಾಮಗ್ರಿಯು ನಿಮಗೆ ಪ್ರವೇಶಕ್ಕೆ ಲಭ್ಯವಿರುವುದಿಲ್ಲ. ಅನ್ವಯವಾಗುವ ಎಲ್ಲ ಡೇಟಾ ಸುರಕ್ಷತೆ ಕಾನೂನುಗಳಿಗೆ ಅನುಗುಣವಾಗಿ ನಿಮ್ಮ ಸಂಪರ್ಕಿತ ಖಾತೆಯ ಬಳಕೆದಾರರ ಯಾವುದೇ ವೈಯಕ್ತಿಕ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವುದಕ್ಕೆ ನೀವು ಒಪ್ಪುತ್ತೀರಿ. ಈ MSA ನಲ್ಲಿರುವ ನೀತಿ ಸಂಹಿತೆಯನ್ನು ಗುಂಪಿನ ಸದಸ್ಯರು ಪಾಲಿಸಲು ವಿಫಲವಾದರೆ ನಿಮ್ಮ Skype ಮ್ಯಾನೇಜರ್ ಅನ್ನು ಅಮಾನತುಗೊಳಿಸಬಹುದು.
- vii. Skype ಶುಲ್ಕಗಳು. Skype ಪಾವತಿಸಿದ ಉತ್ಪನ್ನಗಳ ಎಲ್ಲ ಶುಲ್ಕಗಳು, ನಿರ್ದಿಷ್ಟಪಡಿಸದಿರುವುದನ್ನು ಹೊರತುಪಡಿಸಿ, ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡಿರುತ್ತವೆ. ಚಂದಾದಾರಿಕೆಯ ಹೊರಗೆ ಫೋನ್ಗಳಿಗೆ ಕರೆ ಮಾಡಲು ಪಾವತಿಸಬೇಕಾದ ಶುಲ್ಕಗಳು www.skype.com/go/allrates ಎಂಬಲ್ಲಿ ವಿವರಿಸಿರುವಂತೆ ಸಂಪರ್ಕ ಶುಲ್ಕ (ಕರೆಗೆ ಒಮ್ಮೆ ಶುಲ್ಕ ವಿಧಿಸಲಾಗುತ್ತದೆ) ಮತ್ತು ಪ್ರತಿ ನಿಮಿಷಕ್ಕೆ ಎಂಬ ದರವನ್ನು ಒಳಗೊಂಡಿರುತ್ತದೆ. ಕರೆ ದರಗಳನ್ನು ನಿಮ್ಮ Skype ಕ್ರೆಡಿಟ್ ಬ್ಯಾಲೆನ್ಸ್ನಿಂದ ಕಳೆಯಲಾಗುತ್ತದೆ. Microsoft www.skype.com/go/allrates ನಲ್ಲಿ ತನ್ನ ಕರೆ ದರಗಳ ಬದಲಾವಣೆಯನ್ನು ಪೋಸ್ಟ್ ಮಾಡುವ ಮೂಲಕ Microsoft ಯಾವುದೇ ಸಮಯದಲ್ಲಿ ಅವುಗಳನ್ನು ಬದಲಾಯಿಸಬಹುದಾಗಿದೆ. ಹೊಸ ದರಗಳ ಪ್ರಕಟಣೆಯ ಬಳಿಕ ನಿಮ್ಮ ಮುಂದಿನ ಕರೆಗೆ ಹೊಸ ದರವು ಅನ್ವಯವಾಗುತ್ತದೆ. ದಯವಿಟ್ಟು ನೀವು ಕರೆ ಮಾಡುವ ಮೊದಲು ತಾಜಾ ದರಗಳನ್ನು ಪರೀಕ್ಷಿಸಿಕೊಳ್ಳಿ. ಭಿನ್ನರಾಶಿಯ ಕರೆ ನಿಮಿಷಗಳು ಮತ್ತು ಭಿನ್ನರಾಶಿಯ ಶುಲ್ಕಗಳನ್ನು ಮುಂದಿನ ಪೂರ್ಣಾಂಕಕ್ಕೆ ಹೊಂದಿಸಲಾಗುತ್ತದೆ. ಕೆಲವು ದೇಶಗಳಲ್ಲಿ, Skype ಪಾವತಿಸಿದ ಉತ್ಪನ್ನಗಳನ್ನು Microsoft ನ ಸ್ಥಳೀಯ ಪಾಲುದಾರರು ಒದಗಿಸುತ್ತಾರೆ ಮತ್ತು ಇಂತಹ ವ್ಯವಹಾರಗಳಿಗೆ ಪಾಲುದಾರರ ಬಳಕೆಯ ನಿಯಮಗಳು ಅನ್ವಯವಾಗುತ್ತವೆ. ಮೇಲ್ಕಂಡ ವಿಷಯಗಳ ಹೊರತಾಗಿಯೂ, ನಿಮ್ಮ Skype ಸಂಖ್ಯೆಯನ್ನು ನೀವು ಇನ್ನೊಂದು ಪೂರೈಕೆದಾರರಿಗೆ ಬದಲಾಯಿಸಿದಲ್ಲಿ ಯಾವುದೇ ಪೂರ್ವ-ಪಾವತಿಸಿದ ಚಂದಾದಾರಿಕೆ ಬಾಕಿ ಮೊತ್ತದ ಕೋರಿಕೆಯ ಮೇರೆಗೆ ಮರುಪಾವತಿಗೆ ನೀವು ಅನ್ವಯವಾಗಬಹುದು.
- viii. Skype ಕ್ರೆಡಿಟ್. ಪಾವತಿಸಿದ ಉತ್ಪನ್ನಗಳು ಕಾಲಕಾಲಕ್ಕೆ ಬದಲಾಗಬಹುದಾದ್ದರಿಂದ, ನಿಮ್ಮ Skype ಕ್ರೆಡಿಟ್ ಬ್ಯಾಲೆನ್ಸ್ ಅನ್ನು ಬಳಸಿಕೊಂಡು ಎಲ್ಲಾ Skype ಪಾವತಿಸಿದ ಉತ್ಪನ್ನಗಳನ್ನು ಖರೀದಿಸಲು ನಿಮಗೆ ಸಾಧ್ಯವಾಗುತ್ತದೆ ಎಂದು Microsoft ಗ್ಯಾರಂಟಿ ನೀಡುವುದಿಲ್ಲ. ನೀವು ನಿಮ್ಮ Skype ಕ್ರೆಡಿಟ್ ಅನ್ನು 180-ದಿನಗಳ ಅವಧಿಯವರೆಗೆ ಬಳಸದೇ ಇದ್ದರೆ, Microsoft ನಿಮ್ಮ Skype ಕ್ರೆಡಿಟ್ ಅನ್ನು ನಿಷ್ಕ್ರಿಯ ಸ್ಥಿತಿಯಲ್ಲಿ ಇರಿಸುತ್ತದೆ. ನೀವು https://www.skype.com/go/store.reactivate.credit ಎಂಬ ಮರುಸಕ್ರಿಯಗೊಳಿಸುವ ಸಂಪರ್ಕಕೊಂಡಿಯನ್ನು ಅನುಸರಿಸುವ ಮೂಲಕ Skype ಕ್ರೆಡಿಟ್ ಅನ್ನು ಮರುಸಕ್ರಿಯಗೊಳಿಸಬಹುದು. ನೀವು ಜಪಾನ್ನಲ್ಲಿ ನೆಲೆಗೊಂಡಿದ್ದರೆ ಮತ್ತು Skype ವೆಬ್ಸೈಟ್ನಿಂದ Skype ಕ್ರೆಡಿಟ್ ಅನ್ನು ಖರೀದಿಸಿದರೆ, ಮುಂಚಿನ ಎರಡು ವಾಕ್ಯಗಳು ನಿಮಗೆ ಅನ್ವಯಿಸುವುದಿಲ್ಲ ಮತ್ತು ಖರೀದಿ ದಿನಾಂಕದ 180 ದಿನಗಳ ನಂತರ ನಿಮ್ಮ Skype ಕ್ರೆಡಿಟ್ ಅವಧಿ ಮೀರತಕ್ಕದ್ದು. ಕ್ರೆಡಿಟ್ ಅವಧಿ ಮೀರಿದ ನಂತರ, ಅದನ್ನು ಮರುಸಕ್ರಿಯಗೊಳಿಸಲು ಅಥವಾ ಅದನ್ನು ಬಳಸಲು ಇನ್ನು ಮುಂದೆ ನಿಮಗೆ ಸಾಧ್ಯವಾಗುವುದಿಲ್ಲ. ಯಾವುದೇ ಕಾರಣಕ್ಕೆ ನಿಮ್ಮ Microsoft ಖಾತೆಯನ್ನು ಮುಚ್ಚಿದರೆ, ನಿಮ್ಮ Microsoft ಖಾತೆಯೊಂದಿಗೆ ಸಂಬಂಧವನ್ನು ಹೊಂದಿರುವ ಬಳಸದೇ ಇರುವ ಯಾವುದೇ Skype ಕ್ರೆಡಿಟ್ ಕಳೆದುಹೋಗುತ್ತದೆ ಮತ್ತು ಅದನ್ನು ಮರಳಿ ಪಡೆಯಲು ಆಗುವುದಿಲ್ಲ. Skype ಕ್ರೆಡಿಟ್ಗಳನ್ನು ಇತರರಿಗೆ ವರ್ಗಾಯಿಸಲಾಗುವುದಿಲ್ಲ.
- ix. Skype ಡಯಲ್ ಪ್ಯಾಡ್. Skype ಡೆಸ್ಕ್ಟಾಪ್ ಮತ್ತು ಮೊಬೈಲ್ ಅಪ್ಲಿಕೇಶನ್ಗಳು ಸ್ಥಗಿತಗೊಂಡ ನಂತರ ನೀವು ಸಕ್ರಿಯ ಚಂದಾದಾರಿಕೆಯೊಂದಿಗೆ Skype ಡಯಲ್ ಪ್ಯಾಡ್ ಅಥವಾ Skype ಕ್ರೆಡಿಟ್ಗಳನ್ನು ಬಳಸಬಹುದು. Skype ಡಯಲ್ ಪ್ಯಾಡ್ ಒಂದು Skype ಉತ್ಪನ್ನವಾಗಿದ್ದು, ನೀವು Microsoft Teams ನಿಂದ ಅಥವಾ ವೆಬ್ನಲ್ಲಿ ಪ್ರವೇಶಿಸಬಹುದು.
- x. ಅಂತರಾಷ್ಟ್ರೀಯ ಸಂದೇಶ ಶುಲ್ಕ. ರಚಿಸಲಾದ ಪ್ರತಿಯೊಂದು ಗುಂಪಿಗೂ GroupMe ಪ್ರಸ್ತುತವಾಗಿ ಯುಎಸ್-ಆಧಾರಿತ ಸಂಖ್ಯೆಗಳನ್ನು ಬಳಸುತ್ತದೆ. GroupMe ಸಂಖ್ಯೆಗೆ ಕಳುಹಿಸಿದ ಅಥವಾ ಈ ಸಂಖ್ಯೆ ಸ್ವೀಕರಿಸಿದ ಪ್ರತಿಯೊಂದು ಪಠ್ಯ ಸಂದೇಶವನ್ನು ಯುನೈಟೆಡ್ ಸ್ಟೇಟ್ಸ್ ನಿಂದ ಕಳುಹಿಸಿದ ಅಥವಾ ಸ್ವೀಕರಿಸಿದ ಅಂತರಾಷ್ಟ್ರೀಯ ಪಠ್ಯ ಸಂದೇಶ ಎಂಬುದಾಗಿ ಎಣಿಸಲಾಗುತ್ತದೆ. ನಿಮ್ಮ ಸ್ಥಾನದ ಮೇಲೆ ಆಧರಿತವಾಗಿ, ಒಂದು ಅಂತರಾಷ್ಟ್ರೀಯ ಪಠ್ಯ ಸಂದೇಶದಂತೆ ಎಣಿಕೆ ಮಾಡಬಹುದಾದ ಫೋನ್ ಸಂಖ್ಯೆಯನ್ನು Microsoft Teams ಬಳಸುತ್ತಿರಬಹುದು. ಸಂಬಂಧಿತ ಅಂತರಾಷ್ಟ್ರೀಯ ದರಗಳಿಗಾಗಿ ನಿಮ್ಮ ಪೂರೈಕೆದಾರನೊಂದಿಗೆ ದಯವಿಟ್ಟು ಪರಿಶೀಲಿಸಿ.
- xi. Microsoft Teams SMS. ಆಸ್ಟ್ರೇಲಿಯಾದ ಸಂಖ್ಯೆಗಳನ್ನು ಹೊಂದಿರುವ ಸ್ವೀಕೃತಿದಾರರಿಗೆ ಕಳುಹಿಸಲಾಗುವ ಸಂದೇಶಗಳಿಗಾಗಿ, Boulevard du Roi Albert II, 27 1030, Bruxelles Belgium ("BICS") ಇಲ್ಲಿ ತಮ್ಮ ವ್ಯವಹಾರದ ಪ್ರಾಥಮಿಕ ಸ್ಥಳವನ್ನು ಹೊಂದಿರುವ Belgacom International Carrier Services SA. ಇವರಿಂದ ಒದಗಿಸಲಾಗುವ ಆಸ್ಟ್ರೇಲಿಯ ಆಧರಿತ ಸಂಖ್ಯೆಗಳನ್ನು Microsoft Teams ಬಳಸಬಹುದು. Microsoft ಮತ್ತು ಅದರ ಅಂಗಸಂಸ್ಥೆಗಳು BICS ನೊಂದಿಗೆ ಸಂಯೋಜಿತವಾಗಿರುವುದಿಲ್ಲ.
Bing ಮತ್ತು MSN
- f. Bing ಮತ್ತು MSN.
- i. Bing ಮತ್ತು MSN ಸಾಮಗ್ರಿಗಳು. Microsoft ಬಾಟ್ಗಳು, ಅಪ್ಲಿಕೇಶನ್ಗಳು ಮತ್ತು ಪ್ರೋಗ್ರಾಂಗಳ ಮೂಲಕವೂ ಸೇರಿದಂತೆ, Bing ಮತ್ತು MSN ನಲ್ಲಿ ಲಭ್ಯವಿರುವ ಲೇಖನಗಳು, ಪಠ್ಯ, ಫೋಟೋಗಳು, ನಕ್ಷೆಗಳು, ವೀಡಿಯೊಗಳು, ವೀಡಿಯೊ ಪ್ಲೇಯರ್ಗಳು ಮತ್ತು ಮೂರನೇ-ಪಕ್ಷದ ಸಾಮಗ್ರಿಯು, ನಿಮ್ಮ ವಾಣಿಜ್ಯೇತರ, ವೈಯಕ್ತಿಕ ಬಳಕೆಗಾಗಿ ಮಾತ್ರ ಇರುತ್ತದೆ. ಈ ಸಾಮಗ್ರಿಗಳನ್ನು ಡೌನ್ಲೋಡ್ ಮಾಡಲು, ನಕಲಿಸಲು ಅಥವಾ ಮರುವಿತರಿಸಲು, ಅಥವಾ ನಿಮ್ಮ ಸ್ವಂತ ಉತ್ಪನ್ನಗಳನ್ನು ನಿರ್ಮಿಸಲು ಈ ವಸ್ತುಗಳು ಅಥವಾ ಉತ್ಪನ್ನಗಳನ್ನು ಬಳಸುವುದು ಸೇರಿದಂತೆ, ಬೇರೆ ಬಳಕೆಗಳಿಗೆ Microsoft ಅಥವಾ ಹಕ್ಕು ಸ್ವಾಮ್ಯವುಳ್ಳವರು ನಿರ್ದಿಷ್ಟವಾಗಿ ಅಧಿಕಾರ ನೀಡಿರುವ ಅಥವಾ ಅನ್ವಯವಾಗುವ ಕೃತಿಸ್ವಾಮ್ಯ ಕಾನೂನಿನ ಅನುಸಾರ ಮಾತ್ರ ಅನುಮತಿಸಲಾಗಿದೆ. ಸಾಮಗ್ರಿಗಳಿಗೆ ಪರವಾನಗಿ ನಿಯಮಗಳಡಿಯಲ್ಲಿ, ಸೂಚಿತ, ಸ್ವಯಂ-ಪ್ರತಿಬಂಧದಿಂದ, ಅಥವಾ ಬೇರೆ ರೀತಿಯಲ್ಲಿ ಸ್ಪಷ್ಟವಾಗಿ ನೀಡಲಾಗದ ಎಲ್ಲ ಹಕ್ಕುಗಳನ್ನು Microsoft ಅಥವಾ ಬೇರೆ ಹಕ್ಕುಸ್ವಾಮ್ಯವುಳ್ಳವರು ಕಾಯ್ದಿರಿಸಿಕೊಂಡಿದ್ದಾರೆ.
- ii. Bing ನಕ್ಷೆಗಳು. ಯುನೈಟೆಡ್ ಸ್ಟೇಟ್ಸ್, ಕೆನಡಾ, ಮೆಕ್ಸಿಕೋ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಅಥವಾ ಜಪಾನ್ನ ಪಕ್ಷಿನೋಟದ ಚಿತ್ರಣವನ್ನು ನೀವು ನಮ್ಮಿಂದ ಪ್ರತ್ಯೇಕ ಲಿಖಿತ ಅನುಮತಿಯಿಲ್ಲದೆ ಸರಕಾರಿ ಬಳಕೆಗಾಗಿ ಬಳಸುವಂತಿಲ್ಲ.
- iii. Bing ಸ್ಥಳಗಳು. Bing ಜಾಗಗಳಿಗೆ ನಿಮ್ಮ ಡೇಟಾ ಅಥವಾ ನಿಮ್ಮ ವಿಷಯವನ್ನು ನೀವು ಒದಗಿಸಿದಾಗ, (ನಿಮ್ಮ ಡೇಟಾ ಮತ್ತು ನಿಮ್ಮ ವಿಷಯದಲ್ಲಿನ ಬೌದ್ಧಿಕ ಸ್ವತ್ತು ಹಕ್ಕುಗಳೂ ಸೇರಿದಂತೆ) ನಿಮ್ಮ ಡೇಟಾ ಮತ್ತು ನಿಮ್ಮ ವಿಷಯವನ್ನು ಬಳಸಿಕೊಳ್ಳುವ, ಪುನರುತ್ಪಾದಿಸುವ, ಉಳಿಸಿಕೊಳ್ಳುವ, ಮಾರ್ಪಡಿಸುವ, ಕ್ರೋಢೀಕರಿಸುವ, ಪ್ರಚಾರ ಮಾಡುವ, ಪ್ರಸರಣ ಮಾಡುವ, ಪ್ರದರ್ಶಿಸುವ, ಹಾಗೂ ವಿತರಿಸುವ ವಿಶ್ವವ್ಯಾಪಿಯಾದ, ರಾಜಧನ-ರಹಿತ ಪರವಾನಗಿಯೊಂದನ್ನು Microsoft ಇವರಿಗೆ ನೀವು ಮಂಜೂರು ಮಾಡುತ್ತೀರಿ, ಹಾಗೂ ಈ ಮುಂಚೆ ತಿಳಿಸಿದ ಯಾವುದೇ ಅಥವಾ ಎಲ್ಲ ಹಕ್ಕುಗಳನ್ನು ತೃತೀಯ ಪಕ್ಷಗಳಿಗೆ ಒಳಪರವಾನಗಿ ನೀಡುತ್ತೀರಿ.
Cortana
- g. Cortana.
- i. ವೈಯಕ್ತಿಕ ವಾಣಿಜ್ಯೇತರ ಬಳಕೆ. Cortana ಎಂಬುದು Microsoft ನ ವೈಯಕ್ತಿಕ ಸಹಾಯಕ ಸೇವೆಯಾಗಿದೆ. Cortana ಮೂಲಕ ಒದಗಿಸಲಾದ ವೈಶಿಷ್ಟ್ಯಗಳು, ಸೇವೆಗಳು, ವಿಷಯ (ಒಟ್ಟಾಗಿ "Cortana ಸೇವೆಗಳು") ಕೇವಲ ನಿಮ್ಮ ವೈಯಕ್ತಿಕ ಮತ್ತು ವಾಣಿಜ್ಯೇತರ ಬಳಕೆಗಾಗಿ ಮಾತ್ರ.
- ii. ಕಾರ್ಯಶೀಲತೆ ಮತ್ತು ವಿಷಯ. Cortana ವಿಶಾಲ ಶ್ರೇಣಿಯ ವೈಶಿಷ್ಟ್ಯಗಳನ್ನು ಒದಗಿಸುತ್ತದೆ, ಇವುಗಳಲ್ಲಿ ಕೆಲವನ್ನು ವೈಯಕ್ತೀಕರಿಸಲಾಗಿದೆ. ಇತರ Microsoft ಸೇವೆಗಳು ಅಥವಾ ಮೂರನೇ-ಪಕ್ಷದ ಅಪ್ಲಿಗಳು ಹಾಗೂ ಸೇವೆಗಳು ಒದಗಿಸುವ ಸೇವೆಗಳು, ಮಾಹಿತಿ ಅಥವಾ ಕಾರ್ಯಶೀಲತೆಯನ್ನು ಪ್ರವೇಶಿಸಲು Cortana ಸೇವೆಗಳು ನಿಮಗೆ ಅನುಮತಿಸಬಹುದಾಗಿದೆ. Cortana ಸೇವೆಗಳ ಮೂಲಕ ಪ್ರವೇಶಿಸಿದ ಅನ್ವಯಿಸುವ Microsoft ಸೇವೆಗಳ ನಿಮ್ಮ ಬಳಕೆಗೆ ಸೆಕ್ಷನ್ 13ರ ಸೇವಾ-ನಿರ್ದಿಷ್ಟ ನಿಯಮಗಳೂ ಸಹ ಅನ್ವಯವಾಗುತ್ತವೆ. Cortana ನಿಮಗೆ ಯೋಜನೆಯ ಉದ್ದೇಶಕ್ಕಾಗಿ ಮಾತ್ರ ಮಾಹಿತಿಯನ್ನು ನೀಡುತ್ತದೆ ಮತ್ತು ನೀವು ಈ ಮಾಹಿತಿಯನ್ನು ಪರಾಮರ್ಶಿಸುವಾಗ ಮತ್ತು ಅನುಸರಿಸುವಾಗ ನಿಮ್ಮ ಸ್ವತಂತ್ರ ವಿವೇಚನೆಯನ್ನು ಉಪಯೋಗಿಸಬೇಕು. Cortana ಒದಗಿಸುವ ವೈಯಕ್ತೀಕೃತ ಅನುಭವಗಳ ವಿಶ್ವಾಸಾರ್ಹತೆ, ಲಭ್ಯತೆ ಅಥವಾ ಸಕಾಲಿಕತೆಯ ಬಗ್ಗೆ Microsoft ಗ್ಯಾರಂಟಿ ನೀಡುವುದಿಲ್ಲ. ಒಂದು ವೇಳೆ Cortana ವೈಶಿಷ್ಟ್ಯವು ಸಂವಹನ ಅಥವಾ ಅಧಿಸೂಚನೆಯನ್ನು ಸ್ವೀಕರಿಸಲು, ಪರಿಶೀಲಿಸಲು ಅಥವಾ ಕಳುಹಿಸಲು ಅಥವಾ ಸೇವೆಯನ್ನು ಪಡೆಯಲು ವಿಳಂಬ ಮಾಡುತ್ತಿದ್ದರೆ ಅಥವಾ ನಿಮ್ಮನ್ನು ತಡೆಯುತ್ತಿದ್ದರೆ, Microsoft ಜವಾಬ್ದಾರಿಯಾಗಿರುವುದಿಲ್ಲ.
- iii. ಮೂರನೇ-ಪಕ್ಷದ ಅಪ್ಲಿಗಳು ಮತ್ತು ಸೇವೆಗಳು. Cortana ಸೇವೆಗಳನ್ನು ವಿತರಿಸುವ ಭಾಗವಾಗಿ, ಮೂರನೇ-ಪಕ್ಷದ ಅಪ್ಲಿಗಳು ಮತ್ತು ಸೇವೆಗಳೊಂದಿಗೆ ಸಂವಹನ ಮಾಡಲು (ಮೂರನೇ-ಪಕ್ಷದ ಕೌಶಲ್ಯಗಳು ಅಥವಾ ಸಂಪರ್ಕಿತ ಸೇವೆಗಳು) Cortana ಸೂಚಿಸಬಹುದು ಮತ್ತು ಸಹಾಯ ಮಾಡಬಹುದು. ಒಂದು ವೇಳೆ ನೀವು ಆರಿಸಿದರೆ, ವಿನಂತಿಸಿದ ಸೇವೆಗಳನ್ನು ಪಡೆದುಕೊಳ್ಳಲು ಸಹಾಯ ಮಾಡಲು, ನಿಮ್ಮ ಪಿನ್-ಕೋಡ್ ಮತ್ತು ಪ್ರಶ್ನೆಗಳು ಮತ್ತು ಮೂರನೇ-ಪಕ್ಷದ ಅಪ್ಲಿ ಮತ್ತು ಸೇವೆಗಳಿಂದ ಮರಳಿದ ಪ್ರತಿಕ್ರಿಯೆಗಳಂತಹ ಮಾಹಿತಿಯನ್ನು ಮೂರನೇ-ಪಕ್ಷದ ಅಪ್ಲಿಗಳು ಮತ್ತು ಸೇವೆಗಳೊಂದಿಗೆ Cortana ವಿನಿಮಯ ಮಾಡಿಕೊಳ್ಳಬಹುದು. ಮೂರನೇ-ಪಕ್ಷದ ಅಪ್ಲಿಗಳು ಮತ್ತು ಸೇವೆಗಳೊಂದಿಗೆ ನೀವು ನೇರವಾಗಿ ಸ್ಥಾಪಿಸಿರುವ ಖಾತೆ ಆದ್ಯತೆಗಳು ಮತ್ತು ಸೆಟ್ಟಿಂಗ್ಗಳನ್ನು ಬಳಸಿಕೊಂಡು ಮೂರನೇ-ಪಕ್ಷದ ಅಪ್ಲಿಗಳು ಮತ್ತು ಸೇವೆಗಳ ಮೂಲಕ ಖರೀದಿ ಮಾಡಲು Cortana ನಿಮಗೆ ಅವಕಾಶ ಮಾಡಿಕೊಡಬಹುದು. ಮೂರನೇ-ಪಕ್ಷದ ಅಪ್ಲಿಗಳು ಮತ್ತು ಸೇವೆಗಳಿಂದ ಯಾವುದೇ ಸಮಯದಲ್ಲಾದರೂ ನೀವು ನಿಮ್ಮ Cortana ಸೇವೆಯ ಸಂಪರ್ಕವನ್ನು ಕಡಿತಗೊಳಿಸಬಹುದು. ಮೂರನೇ-ಪಕ್ಷದ ಅಪ್ಲಿಗಳು ಮತ್ತು ಸೇವೆಗಳೊಂದಿಗೆ ಸಂಪರ್ಕ ಸಾಧಿಸಲು ನಿಮ್ಮ Cortana ಸೇವೆಗಳ ಬಳಕೆಯು ಈ ನಿಯಮಗಳ 5 ನೇ ವಿಭಾಗಕ್ಕೆ ಒಳಪಟ್ಟಿರುತ್ತದೆ. ಮೂರನೇ ಪಕ್ಷದ ಅಪ್ಲಿಕೇಶನ್ಗಳು ಮತ್ತು ಸೇವೆಗಳ ಪ್ರಕಾಶಕರು ತಮ್ಮ ಮೂರನೇ ಪಕ್ಷದ ಅಪ್ಲಿಕೇಶನ್ಗಳು ಮತ್ತು ಸೇವೆಗಳ ಕಾರ್ಯಶೀಲತೆ ಅಥವಾ ವೈಶಿಷ್ಟ್ಯಗಳನ್ನು ಅಥವಾ Cortana ಸೇವೆಗಳ ಜೊತೆಗಿನ ಏಕೀಕರಣವನ್ನು ಬದಲಾಯಿಸಬಹುದು ಅಥವಾ ಮುಂದುವರಿಸದೇ ಇರಬಹುದು. ತಯಾರಕರು ಒದಗಿಸಿದ ಸಾಫ್ಟ್ವೇರ್ ಅಥವಾ ಫರ್ಮ್ವೇರ್ಗೆ Microsoft ಜವಾಬ್ದಾರನಾಗಿರುವುದಿಲ್ಲ.
- iv. Cortana-ಸಕ್ರಿಯಗೊಳಿಸಿದ ಸಾಧನಗಳು. Cortana-ಸಕ್ರಿಯಗೊಳಿಸಿದ ಸಾಧನಗಳು, Cortana ಸೇವೆಗಳನ್ನು ಪ್ರವೇಶಿಸಲು ಸಕ್ರಿಯಗೊಳಿಸಲಾದ ಉತ್ಪನ್ನಗಳು ಅಥವಾ ಸಾಧನಗಳಾಗಿವೆ ಅಥವಾ Cortana ಸೇವೆಗಳ ಜೊತೆಗೆ ಹೊಂದಾಣಿಕೆಯನ್ನು ಹೊಂದಿರುವ ಉತ್ಪನ್ನಗಳು ಅಥವಾ ಸಾಧನಗಳಾಗಿವೆ. Cortana-ಸಕ್ರಿಯಗೊಳಿಸಿದ ಸಾಧನಗಳು Microsoft ಸ್ವಾಮ್ಯದಲ್ಲಿರದ, ಅದು ತಯಾರಿಸದ ಅಥವಾ ಅಭಿವೃದ್ಧಿಪಡಿಸದ ಮೂರನೇ ಪಕ್ಷದ ಸಾಧನಗಳು ಅಥವಾ ಉತ್ಪನ್ನಗಳನ್ನು ಒಳಗೊಂಡಿವೆ. ಈ ಮೂರನೇ ಪಕ್ಷದ ಸಾಧನಗಳಿಗೆ ಅಥವಾ ಉತ್ಪನ್ನಗಳಿಗೆ Microsoft ಜವಾಬ್ದಾರನಾಗಿರುವುದಿಲ್ಲ ಅಥವಾ ಬಾಧ್ಯಸ್ಥನಾಗಿರುವುದಿಲ್ಲ.
- v. ಸಾಫ್ಟ್ವೇರ್ ಅಪ್ಡೇಟ್ಗಳು. Cortana ಸೇವೆಗಳ ಸಾಫ್ಟ್ವೇರ್ ಅನ್ನು ನವೀಕೃತವಾಗಿಟ್ಟುಕೊಳ್ಳಲು Cortana ಸೇವೆಗಳ ಸಾಫ್ಟ್ವೇರ್ನ ನಿಮ್ಮ ಆವೃತ್ತಿಯನ್ನು ನಾವು ಸ್ವಯಂಚಾಲಿತವಾಗಿ ಪರೀಕ್ಷಿಸಬಹುದು ಮತ್ತು ಸಾಫ್ಟ್ವೇರ್ ಅಪ್ಡೇಟ್ಗಳನ್ನು ಅಥವಾ ಕಾನ್ಫಿಗರೇಶನ್ ಬದಲಾವಣೆಯನ್ನು ಡೌನ್ಲೋಡ್ ಮಾಡಬಹುದು ಅಥವಾ Cortana ಸಕ್ರಿಯಗೊಳಿಸಿದ ಸಾಧನಗಳ ಯಾವುದೇ ತಯಾರಕರ ಅಗತ್ಯವನ್ನು ಹೊಂದಿರಬಹುದು.
Microsoft 365 ಅಪ್ಲಿಕೇಶನ್ಗಳು ಮತ್ತು ಸೇವೆಗಳು
- h. Microsoft 365 ಅಪ್ಲಿಕೇಶನ್ಗಳು ಮತ್ತು ಸೇವೆಗಳು.
- i. ಬಳಕೆಯ ನಿಯಮಗಳು. i. Microsoft ಜೊತೆಗೆ ನೀವು ಪ್ರತ್ಯೇಕ ಒಪ್ಪಂದದ ಅಡಿಯಲ್ಲಿ ವಾಣಿಜ್ಯ ಬಳಕೆಯ ಹಕ್ಕುಗಳನ್ನು ಹೊಂದಿರದ ಹೊರತು, Microsoft 365 Family, Microsoft 365 Personal, Microsoft 365 Basic, Sway, OneNote.com ಮತ್ತು ಯಾವುದೇ ಇತರ Microsoft 365 ಅಪ್ಲಿಕೇಶನ್ ಅಥವಾ ಸೇವೆ ಅಥವಾ Office-ಬ್ರಾಂಡೆಡ್ ಸೇವೆ ನಿಮ್ಮ ವೈಯಕ್ತಿಕ, ವಾಣಿಜ್ಯೇತರ ಬಳಕೆಗಾಗಿ ಇದೆ. Microsoft 365 Family, Microsoft 365 Personal, ಮತ್ತು ಇನ್ನಾವುದೇ Microsoft 365 ಅಪ್ಲಿಕೇಶನ್ ಅಥವಾ ಚಂದಾದಾರಿಕೆ ಸೇವೆಯಲ್ಲಿ Word, Excel, PowerPoint, Outlook, OneDrive, Access ಮತ್ತು Publisher ನಂತಹ ಅಪ್ಲಿಕೇಶನ್ಗಳ ಬಳಕೆಯನ್ನು ಈ ನಿಯಮಗಳೊಂದಿಗೆ https://aka.ms/useterms ರಲ್ಲಿರುವ ಪೂರಕ ಪರವಾನಗಿ ನಿಯಮಗಳಿಂದ ನಿಯಂತ್ರಿಸಲಾಗುತ್ತದೆ.
- ii. ಹೆಚ್ಚುವರಿ Outlook ನಿಯಮಗಳು. Outlook Bing ನಕ್ಷೆಗಳ ಬಳಕೆಯನ್ನು ಒಳಗೊಂಡಿದೆ. ಜಿಯೋಕೋಡ್ಗಳು ಸೇರಿದಂತೆ Bing ನಕ್ಷೆಗಳ ಮೂಲಕ ಒದಗಿಸಲಾದ ಯಾವುದೇ ವಿಷಯವನ್ನು, ವಿಷಯವನ್ನು ಒದಗಿಸುವ ಉತ್ಪನ್ನದೊಳಗೆ ಮಾತ್ರ ಬಳಸಬಹುದಾಗಿದೆ. ನಿಮ್ಮ Bing ನಕ್ಷೆಗಳ ಬಳಕೆಯನ್ನು go.microsoft.com/?linkid=9710837 ರಲ್ಲಿ ಲಭ್ಯವಿರುವ Bing ನಕ್ಷೆಗಳ ಅಂತಿಮ ಬಳಕೆದಾರರ ಬಳಕೆಯ ನಿಯಮಗಳು ಮತ್ತು go.microsoft.com/fwlink/?LinkID=248686 ರಲ್ಲಿ ಲಭ್ಯವಿರುವ Microsoft ಗೌಪ್ಯತೆ ಹೇಳಿಕೆಯಿಂದ ನಿಯಂತ್ರಿಸಲಾಗುತ್ತದೆ.
ಡಿಜಿಟಲ್ ಸರಕುಗಳು
- i. ಡಿಜಿಟಲ್ ಸರಕುಗಳು. Microsoft ಗ್ರೂವ್, Microsoft ಮೂವೀಸ್ ಮತ್ತು TV, ಸ್ಟೋರ್, Xbox ಸೇವೆಗಳು ಮತ್ತು ಯಾವುದೇ ಇತರ ಸಂಬಂಧಿತ ಮತ್ತು ಭವಿಷ್ಯದ ಸೇವೆಗಳ ಮೂಲಕ, ಸಂಗೀತ, ಚಿತ್ರಗಳು, ವೀಡಿಯೊ, ಪಠ್ಯ, ಪುಸ್ತಕಗಳು, ಗೇಮ್ಗಳು ಅಥವಾ ಬೇರೆ ಸಾಮಗ್ರಿಯನ್ನು ("ಡಿಜಿಟಲ್ ಸರಕುಗಳು") ಪಡೆದುಕೊಳ್ಳಲು, ಆಲಿಸಲು, ವೀಕ್ಷಿಸಲು, ಪ್ಲೇ ಮಾಡಲು ಮತ್ತು/ಅಥವಾ ಓದಲು (ಸಂದರ್ಭಕ್ಕೆ ತಕ್ಕಂತೆ) Microsoft ನಿಮಗೆ ಅವಕಾಶ ಮಾಡಿಕೊಡಬಹುದು. ಡಿಜಿಟಲ್ ಸರಕುಗಳು ನಿಮ್ಮ ವೈಯಕ್ತಿಕ, ವಾಣಿಜ್ಯೇತರ ಮನೋರಂಜನಾ ಬಳಕೆಗಾಗಿ ಮಾತ್ರ ಇರುತ್ತದೆ. ಡಿಜಿಟಲ್ ಸರಕುಗಳ ಯಾವುದೇ ಪ್ರತಿಗಳನ್ನು ಮರುಹಂಚಿಕೆ, ಪ್ರಸಾರ, ಸಾರ್ವಜನಿಕ ಅಭಿನಯ ಅಥವಾ ಸಾರ್ವಜನಿಕ ಪ್ರದರ್ಶನ ಅಥವಾ ವರ್ಗಾವಣೆ ಮಾಡುವುದಿಲ್ಲ ಎಂಬುದಾಗಿ ನೀವು ಒಪ್ಪುವಿರಿ. ಡಿಜಿಟಲ್ ಸರಕುಗಳು Microsoft ಅಥವಾ ಮೂರನೇ ಪಕ್ಷದವರ ಮಾಲೀಕತ್ವದಲ್ಲಿರಬಹುದು. ಎಲ್ಲ ಪರಿಸ್ಥಿತಿಗಳಲ್ಲಿಯೂ, ಡಿಜಿಟಲ್ ಸರಕುಗಳಿಗೆ ಸಂಬಂಧಿಸಿದಂತೆ ನಿಮ್ಮ ಹಕ್ಕುಗಳು ಈ ನಿಯಮಗಳು, ಕೃತಿಸ್ವಾಮ್ಯ ಕಾನೂನು, ಮತ್ತು https://go.microsoft.com/fwlink/p/?LinkId=723143 ಎಂಬಲ್ಲಿರುವ ಬಳಕೆಯ ನಿಯಮಗಳಿಗೆ ಮಿತಿಗೊಳಪಟ್ಟಿವೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ ಮತ್ತು ಒಪ್ಪುತ್ತೀರಿ. ಗುರುತು ಬದಲಾವಣೆ ಅಥವಾ ಮಾಲೀಕತ್ವದ ಅಥವಾ ಡಿಜಿಟಲ್ ಸರಕುಗಳ ಮೂಲದ ಬದಲಾವಣೆಯ ಉದ್ದೇಶವೂ ಸೇರಿದಂತೆ, ಯಾವುದೇ ಕಾರಣಕ್ಕೂ, ಯಾವುದೇ ಸಂಗ್ರಹಗಳಿಂದ ಪಡೆದುಕೊಂಡ ಯಾವುದೇ ಡಿಜಿಟಲ್ ಸರಕುಗಳನ್ನು ಮಾರ್ಪಡಿಸಲು ಪ್ರಯತ್ನಿಸುವುದಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ. ಕಾಲದಿಂದ ಕಾಲಕ್ಕೆ, ಸೂಚನೆ ನೀಡದೆಯೇ Microsoft ಮತ್ತು/ಅಥವಾ ಡಿಜಿಟಲ್ ಸರಕುಗಳ ಮಾಲೀಕರು, ಸೇವೆಗಳಿಂದ ಡಿಜಿಟಲ್ ಸರಕುಗಳನ್ನು ತೆಗೆದುಹಾಕಬಹುದಾಗಿದೆ.
Microsoft ಸಂಗ್ರಹಣೆ
- j. Microsoft ಸಂಗ್ರಹಣೆ.
- i. OneDrive ಸಂಗ್ರಹಣೆ ನಿಯೋಜನೆ. Microsoft ಸಂಗ್ರಹಣೆಗಾಗಿ ಉಚಿತ ಅಥವಾ ಪಾವತಿ ಚಂದಾದಾರಿಕೆ ಸೇವೆ ನಿಯಮಗಳ ಅಡಿಯಲ್ಲಿ ನಿಮಗೆ ಒದಗಿಸಿರುವ ವಿಷಯಕ್ಕಿಂತ ಹೆಚ್ಚಿನ ವಿಷಯಗಳು ನಿಮ್ಮ OneDrive ನಲ್ಲಿ ಸಂಗ್ರಹವಾಗಿದ್ದರೆ ಮತ್ತು ಹೆಚ್ಚುವರಿ ವಿಷಯವನ್ನು ತೆಗೆದುಹಾಕಿ ನಿಮ್ಮ ಖಾತೆಯನ್ನು ಹೊಂದಿಸುವ ಅಥವಾ ಹೆಚ್ಚು ಸಂಗ್ರಹಣೆಯನ್ನು ಹೊಂದಿದ ಹೊಸ ಚಂದಾ ಯೋಜನೆಯನ್ನು ಪಡೆದುಕೊಳ್ಳುವ ಕುರಿತಾಗಿ Microsoft ನಿಂದ ಪಡೆದ ಸೂಚನೆಗೆ ನೀವು ಪ್ರತಿಕ್ರಿಯಿಸದಿದ್ದರೆ ನಿಮ್ಮ ಖಾತೆಯನ್ನು ಮುಚ್ಚುವ ಮತ್ತು OneDrive ವಿಷಯಕ್ಕೆ ನಿಮ್ಮ ಪ್ರವೇಶವನ್ನು ಅಳಿಸುವ ಅಥವಾ ನಿಷ್ಕ್ರಿಯಗೊಳಿಸುವ ಹಕ್ಕನ್ನು ನಾವು ಮೀಸಲಿರಿಸುತ್ತೇವೆ. Microsoft ಸಂಗ್ರಹಣೆ ಕೋಟಾಗಳ ಬಗ್ಗೆ ಇಲ್ಲಿ (https://prod.support.services.microsoft.com/office/how-does-microsoft-storage-work-2a261b34-421c-4a47-9901-74ef5bd0c426) ಇನ್ನಷ್ಟು ಓದಿ.
- ii. OneDrive ಸೇವಾ ಕಾರ್ಯನಿರ್ವಹಣೆ. ನಿಮ್ಮ ಸಾಧನ, ಇಂಟರ್ನೆಟ್ ಸಂಪರ್ಕ, ಮತ್ತು ತನ್ನ ಸೇವೆಯ ಕಾರ್ಯಕ್ಷಮತೆ ಮತ್ತು ಸಮಗ್ರತೆಯನ್ನು ಕಾಯ್ದುಕೊಳ್ಳಲು Microsoft ನ ಪ್ರಯತ್ನಗಳು ಇತ್ಯಾದಿ ಅಂಶಗಳನ್ನು ಅವಲಂಬಿಸಿ, OneDrive ನಲ್ಲಿ ವಿಷಯವನ್ನು ಅಪ್ಲೋಡ್ ಅಥವಾ ಸಿಂಕ್ ಮಾಡುವಲ್ಲಿ ನೀವು ಕೆಲವೊಮ್ಮೆ ವಿಳಂಬವನ್ನು ಅನುಭವಿಸಬಹುದು.
- iii. Outlook.com ಸಂಗ್ರಹಣೆ ನಿಯೋಜನೆ. ನಿಮ್ಮ Outlook.com ಮೇಲ್ಬಾಕ್ಸ್ ಸಂಗ್ರಹಣೆ ಕೋಟಾ ಅಥವಾ ಉಚಿತ ಅಥವಾ ಪಾವತಿಸಿದ ಚಂದಾದಾರಿಕೆಯ ಅಡಿಯಲ್ಲಿ ನಿಮಗೆ ಒದಗಿಸಲಾದ ನಿಮ್ಮ Microsoft ಸಂಗ್ರಹಣೆ ಕೋಟಾವನ್ನು ನೀವು ಮೀರಿದರೆ, ನೀವು ಹೆಚ್ಚುವರಿ ವಿಷಯವನ್ನು ತೆಗೆದುಹಾಕುವವರೆಗೆ ಅಥವಾ ಸಾಕಷ್ಟು ಸಂಗ್ರಹಣೆಯೊಂದಿಗೆ ಹೊಸ ಚಂದಾದಾರಿಕೆಗೆ ತೆರಳುವವರೆಗೆ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ನಿಮಗೆ ಸಾಧ್ಯವಾಗುವುದಿಲ್ಲ. Microsoft ನಿಂದ ಸೂಚನೆಯನ್ನು ಸ್ವೀಕರಿಸಿದ ನಂತರ ಹೆಚ್ಚುವರಿ ವಿಷಯವನ್ನು ತೆಗೆದುಹಾಕಲು ಅಥವಾ ಸಾಕಷ್ಟು ಹೆಚ್ಚುವರಿ ಸಂಗ್ರಹಣೆಯನ್ನು ಪಡೆಯಲು ನೀವು ವಿಫಲವಾದರೆ, ನಿಮ್ಮ ವಿಷಯಕ್ಕೆ ಪ್ರವೇಶವನ್ನು ಅಳಿಸಲು ಅಥವಾ ನಿಷ್ಕ್ರಿಯಗೊಳಿಸಲು ನಾವು ಹಕ್ಕನ್ನು ಕಾಯ್ದಿರಿಸುತ್ತೇವೆ. Microsoft ಸಂಗ್ರಹಣೆ ಕೋಟಾಗಳ ಬಗ್ಗೆ ಇಲ್ಲಿ (https://prod.support.services.microsoft.com/office/how-does-microsoft-storage-work-2a261b34-421c-4a47-9901-74ef5bd0c426) ಇನ್ನಷ್ಟು ಓದಿ.
Microsoft ಕ್ಯಾಶ್ಬ್ಯಾಕ್
- k. Microsoft ಕ್ಯಾಶ್ಬ್ಯಾಕ್. Microsoft ಕ್ಯಾಶ್ಬ್ಯಾಕ್ ಪ್ರೋಗ್ರಾಂ (“ಕ್ಯಾಶ್ಬ್ಯಾಕ್”) ಕೆಲವು Microsoft ಉತ್ಪನ್ನಗಳು ಮತ್ತು Bing.com ಮತ್ತು Microsoft Edge ನಂತಹ ಸೇವೆಗಳನ್ನು ಬಳಸಿಕೊಂಡು ಭಾಗವಹಿಸುವ ಚಿಲ್ಲರೆ ವ್ಯಾಪಾರಿಗಳೊಂದಿಗೆ ಶಾಪಿಂಗ್ ಮಾಡುವಾಗ ಕ್ಯಾಶ್ ಬ್ಯಾಕ್ ಪ್ರಶಸ್ತಿಗಳನ್ನು ಗಳಿಸಲು Microsoft ಗ್ರಾಹಕರಿಗೆ ಅನುಮತಿಸುತ್ತದೆ. ಕ್ಯಾಶ್ಬ್ಯಾಕ್ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಅಥವಾ ಕ್ಯಾಶ್ಬ್ಯಾಕ್ ಆಫರ್ ಅನ್ನು ಸಕ್ರಿಯಗೊಳಿಸುವ ಮೂಲಕ, ನೀವು ಕ್ಯಾಶ್ಬ್ಯಾಕ್ ನಿಯಮಗಳು ಮತ್ತು ಷರತ್ತುಗಳನ್ನು (https://www.microsoft.com/bing/rebates-terms) ಸಮ್ಮತಿಸುತ್ತೀರಿ ಮತ್ತು ಒಪ್ಪುತ್ತೀರಿ. ಕ್ಯಾಶ್ಬ್ಯಾಕ್ನಲ್ಲಿ ನಿಮ್ಮ ಭಾಗವಹಿಸುವಿಕೆಗೆ ಕೆಲವು ಅರ್ಹತಾ ಮಾನದಂಡಗಳು, ನಿರ್ಬಂಧಗಳು ಮತ್ತು ಇತರ ಮಿತಿಗಳು ಅನ್ವಯಿಸುತ್ತವೆ; ಹೆಚ್ಚಿನ ಮಾಹಿತಿಗಾಗಿ, ಕ್ಯಾಶ್ಬ್ಯಾಕ್ FAQ (https://www.bing.com/rebates/faq) ಅನ್ನು ನೋಡಿ.
Microsoft Rewards
- l. Microsoft Rewards.
- i. ಸಾಮಾನ್ಯ ಮಾಹಿತಿ. Microsoft Rewards ("Rewards ಪ್ರೋಗ್ರಾಂ") ಅನ್ನು ಸೇರಿಕೊಳ್ಳುವುದು ಉಚಿತವಾಗಿದೆ, ಹಾಗೂ ಕೆಲವು ಚಟುವಟಿಕೆಗಳಿಗೆ ಹಾಗೂ ಕೆಲವು Microsoft ಉತ್ಪನ್ನಗಳು ಮತ್ತು ಸೇವೆಗಳ ವೈಯಕ್ತಿಕ ಬಳಕೆಗೆ ಪಾಯಿಂಟ್ಗಳನ್ನು ("ಪಾಯಿಂಟ್ಗಳು") ಗಳಿಸಲು ನಿಮ್ಮನ್ನು ಸಶಕ್ತಗೊಳಿಸುತ್ತದೆ. Microsoft ಖಾತೆಯನ್ನು ನೀವು ಹೊಂದಿದ್ದು, ಪಾಲ್ಗೊಳ್ಳುವ ಪ್ರದೇಶವೊಂದರಲ್ಲಿ (ಕೆಳಗೆ ವ್ಯಾಖ್ಯಾನಿಸಲ್ಪಟ್ಟಿದೆ) ನೆಲೆಗೊಂಡಿದ್ದಲ್ಲಿ, ಈ Rewards ಪ್ರೋಗ್ರಾಂನಲ್ಲಿ ನೀವು ಸ್ವಯಂಚಾಲಿತವಾಗಿ ನೋಂದಾಯಿಸಿಕೊಳ್ಳಲ್ಪಟ್ಟಿದ್ದು, ಪಾಯಿಂಟ್ಗಳನ್ನು ಗಳಿಸುವುದನ್ನು ತಕ್ಷಣದಿಂದ ಆರಂಭಿಸಬಹುದು. ಈ ಕೆಳಗಿನ ಸೂಚನೆಗಳನ್ನು ಅನುಸರಿಸುವ ಮೂಲಕ ಈ Rewards ಪ್ರೋಗ್ರಾಂನಲ್ಲಿನ ನಿಮ್ಮ ಪಾಲ್ಗೊಳ್ಳುವಿಕೆಯನ್ನು ಯಾವುದೇ ಸಮಯದಲ್ಲಿ ನೀವು ರದ್ದುಪಡಿಸಬಹುದು.
- ii. https://aka.ms/redeemrewards ("Rewards") ಈ ರಿಡೆಂಪ್ಷಲ್ ಪುಟದಲ್ಲಿ ಪಟ್ಟಿ ಮಾಡಲ್ಪಟ್ಟಿರುವ ಕೆಲವು ಉತ್ಪನ್ನಗಳು ಮತ್ತು ಸೇವೆಗಳೂ ಸೇರಿದಂತೆ, ನಿಮ್ಮ ಪಾಯಿಂಟ್ಗಳನ್ನು ಹಲವಾರು ವಿಧದಲ್ಲಿ ("ರಿಡೆಂಪ್ಷನ್ ಆಯ್ಕೆಗಳು") ನೀವು ರಿಡೀಮ್ ಮಾಡಬಹುದು. ಯಾವುದೇ ರಿಡೆಂಪ್ಷನ್ ಆಯ್ಕೆಗೆ ನಿಮ್ಮ ಪಾಯಿಂಟ್ಗಳನ್ನು ರಿಡೀಮ್ ಮಾಡಲು ಅರ್ಹರಾಗಲು, https://rewards.microsoft.com/ ನಲ್ಲಿನ Rewards ಡ್ಯಾಶ್ಬೋರ್ಡ್ನಲ್ಲಿ ಅಥವಾ ಇತರ ಕೆಲವು Microsoft ಸೈಟ್ಗಳು ಮತ್ತು ಪುಟಗಳಲ್ಲಿ ನಿಮ್ಮ Rewards ಪ್ರೋಗ್ರಾಂ ಖಾತೆ ("Rewards ಖಾತೆ") ಅನ್ನು ನೀವು ಮೊದಲು ಸಕ್ರಿಯಗೊಳಿಸಬೇಕು. ನಿಮ್ಮ Rewards ಖಾತೆ ಅನ್ನು ಸಕ್ರಿಯಗೊಳಿಸಲು ಯಾವುದೇ ಶುಲ್ಕ ಇರುವುದಿಲ್ಲ.
- iii. Rewards ಪ್ರೋಗ್ರಾಂನಲ್ಲಿ ಪಾಯಿಂಟ್ಗಳನ್ನು ಗಳಿಸಲು, ರಿಡೀಮ್ ಮಾಡಲು ಮತ್ತು ಇತರ ಬಳಕೆಗಳಿಗೆ ಕೆಲವು ನಿರ್ಬಂಧನೆಗಳು ಮತ್ತು ಇತಿಮಿತಿಗಳು ಅನ್ವಯವಾಗುತ್ತವೆ. ಹೆಚ್ಚಿನ ಮಾಹಿತಿಗಾಗಿ https://support.microsoft.com ("FAQ") ನಲ್ಲಿ Rewards ವಿಭಾಗವನ್ನು ನೋಡಿ.
- iv. ಅಗತ್ಯತೆಗಳು. ನಿಮ್ಮ Rewards ಖಾತೆ ಅನ್ನು ಸಕ್ರಿಯಗೊಳಿಸಿ, ಪಾಯಿಂಟ್ಗಳನ್ನು ಗಳಿಸಲು, ರಿಡೀಮ್ ಮಾಡಲು, ಅಥವಾ ಅನ್ಯಥಾ ಬಳಸಲು ಒಂದು ಮಾನ್ಯವಾದ Microsoft ಖಾತೆ ನಿಮಗೆ ಬೇಕಾಗುತ್ತದೆ ಹಾಗೂ FAQ ("ಪ್ರದೇಶಗಳು") ಇಲ್ಲಿ ಪಟ್ಟಿ ಮಾಡಲ್ಪಟ್ಟಿರುವ ಭೌಗೋಳಿಕ ಪ್ರದೇಶಗಳಲ್ಲೊಂದರಲ್ಲಿ ನೀವು ವಾಸಿಸುತ್ತಿರಬೇಕು. ನೀವು ಹಲವಾರು ಇಮೇಲ್ ವಿಳಾಸಗಳನ್ನು ಹೊಂದಿದ್ದರೂ ಸಹ, ಒಂದು Rewards ಖಾತೆ ಅನ್ನು ಮಾತ್ರ ನೀವು ತೆರೆದು, ಬಳಸಬಹುದು. ಪ್ರತಿಯೊಂದು ಕುಟುಂಬವೂ ಆರು Rewards ಖಾತೆಗಳ ಮಿತಿಗೆ ಒಳಪಟ್ಟಿರುತ್ತದೆ. Rewards ಪ್ರೋಗ್ರಾಂ ಕೇವಲ ನಿಮ್ಮ ವೈಯಕ್ತಿಕ ಮತ್ತು ವಾಣಿಜ್ಯೇತರ ಬಳಕೆಗಾಗಿ ಇರುತ್ತದೆ. ವರ್ಚುವಲ್ ಖಾಸಗಿ ನೆಟ್ವರ್ಕ್ (VPN) ಒಂದರ ಅಥವಾ ನಿಮ್ಮ ಭೌಗೋಳಿಕ ಸ್ಥಳವನ್ನು ಮರೆಮಾಚಲು ಅಥವಾ ಮಸುಕಾಗಿಸಲು ಬಳಸಬಹುದಾದ ಇತರ ತಾಂತ್ರಿಕತೆ ಅಥವಾ ಸೇವೆಯನ್ನು ಬಳಸುವಿಕೆಯು ನಿಮ್ಮ Rewards ಖಾತೆಯನ್ನು ರದ್ದುಪಡಿಸಿ, ನೀವು ಸಂಚಯಿಸಿರುವ ಪಾಯಿಂಟ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾರಣವಾಗಬಹುದು.
- v. ಪಾಯಿಂಟ್ಗಳನ್ನು ಗಳಿಸುವುದು. ಹುಡುಕಾಟಗಳು, ಸ್ವಾಧೀನಪಡಿಸುವಿಕೆಗಳು, ಕೆಲವು Microsoft ಉತ್ಪನ್ನಗಳು ಮತ್ತು ಸೇವೆಗಳ ಬಳಕೆ, ಮತ್ತು Microsoft ಇವರಿಂದ ಇತರ ಅವಕಾಶಗಳಂತಹ, ಕೆಲವು ಅರ್ಹ ಚಟುವಟಿಕೆಗಳಿಗೆ ಪಾಯಿಂಟ್ಗಳನ್ನು ಗಳಿಸುವ ಅವಕಾಶಗಳು ("ಆಫರ್ಗಳು") ನಿಮಗೆ ಪ್ರಸ್ತುತಪಡಿಸಲ್ಪಡಬಹುದು. ಇಂಥ ಆಫರ್ಗಳ ಪ್ರಯೋಜನವನ್ನು ಪಡೆದುಕೊಳ್ಳಲು ಸಕ್ರಿಯ Rewards ಖಾತೆಯನ್ನು ನೀವು ಹೊಂದಿರಬೇಕು. ಕೆಲವು ಆಫರ್ಗಳಿಗೆ ಅಗತ್ಯತೆಗಳನ್ನು ಪೂರ್ಣಗೊಳಿಸಿದ ನಂತರ, ಪಾಯಿಂಟ್ಗಳನ್ನು ಗಳಿಸುವ ಮೊದಲು ಮತ್ತು ನಿಮ್ಮ ಪ್ರತಿಫಲಗಳ ಖಾತೆಗೆ ಸೇರಿಸುವ ಮೊದಲು ನೀವು ಪ್ರತಿಫಲಗಳ ಡ್ಯಾಶ್ಬೋರ್ಡ್ನಲ್ಲಿ ಪಾಯಿಂಟ್ಗಳನ್ನು ಕ್ಲೈಮ್ ಮಾಡಬೇಕಾಗಬಹುದು. Microsoft ನಿರ್ದಿಷ್ಟಪಡಿಸಿದ ಸಮಯದೊಳಗೆ ಪಾಯಿಂಟ್ಗಳನ್ನು ಕ್ಲೈಮ್ ಮಾಡಲು ವಿಫಲವಾದರೆ ಪಾಯಿಂಟ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಪ್ರದೇಶವಾರು ಅರ್ಹ ಆಫರ್ಗಳು ಬದಲಾಗಬಹುದು ಹಾಗೂ ನಿರ್ದಿಷ್ಟ ಸಮಯ ಅಥವಾ ವಿಷಯಕ್ಕೆ ಅಥವಾ ಇತರ ಮಿತಿಗೆ ಒಳಪಟ್ಟು ಮಾತ್ರ ಲಭ್ಯವಿದ್ದಿರಬಹುದು. ನಿರ್ದಿಷ್ಟ ಆಫರ್ ಒಂದರೊಂದಿಗೆ ಪುರಸ್ಕರಿಸುವ ಪಾಯಿಂಟ್ಗಳನ್ನು ಗಳಿಸಲು ಆ ಆಫರ್ನ ಎಲ್ಲ ಷರತ್ತುಗಳು ಹಾಗೂ ನಿಬಂಧನೆಗಳನ್ನು ನೀವು ಅನುಸರಣೆ ಮಾಡಬೇಕು. Rewards ಡ್ಯಾಶ್ಬೋರ್ಡ್ನಲ್ಲಿ ನೇರವಾಗಿ ಅಥವಾ ಕೆಲವು Microsoft ಉತ್ಪನ್ನಗಳು ಹಾಗೂ ಸೇವೆಗಳನ್ನು ನೀವು ಬಳಸಿದಾಗ ಆಫರ್ಗಳು ನಿಮಗೆ ಪ್ರಸ್ತುತಪಡಿಸಲ್ಪಡಬಹುದು. ಕಾಲಕಾಲಕ್ಕೆ, ಯಾವುದಕ್ಕಾಗಿ Microsoft ಉತ್ತಮ ನಂಬಿಕೆಯ ಹುಡುಕಾಟಗಳು ಎಂದು ನಿರ್ಧರಿಸುತ್ತದೆಮತ್ತು Microsoft ಸೇವೆಗಳೊಂದಿಗೆ ಇತರ ಸಂವಹನಗಳು ಸೇರಿದಂತೆ Microsoft ತನ್ನ ಸ್ವಂತ ವಿವೇಚನೆಯಿಂದ ಮತ್ತು ಪೂರ್ವ ಸೂಚನೆಯೊಂದಿಗೆ ಅಥವಾ ಇಲ್ಲದೆಯೇ ಹೆಚ್ಚುವರಿ ಪಾಯಿಂಟ್ಗಳನ್ನು ನಿಮಗೆ ಆಫರ್ ಮಾಡಬಹುದು ಅಥವಾ ನೀಡಬಹುದು.
- vi. Rewards ಪ್ರೋಗ್ರಾಂನ ಉದ್ದೇಶಗಳಿಗಾಗಿ, "ಹುಡುಕಾಟ" ಎಂಬುದು ಅಂತಹ ಬಳಕೆದಾರರ ಸ್ವಂತ ಸಂಶೋಧನಾ ಉದ್ದೇಶಗಳಿಗಾಗಿ Bing ಹುಡುಕಾಟ ಫಲಿತಾಂಶಗಳನ್ನು ಪಡೆಯುವ ಉತ್ತಮ ನಂಬಿಕೆಯ ಉದ್ದೇಶಕ್ಕಾಗಿ ಪಠ್ಯವನ್ನು ಹಸ್ತಚಾಲಿತವಾಗಿ ನಮೂದಿಸುವ ವ್ಯಕ್ತಿಯ ಕ್ರಿಯೆಯಾಗಿದೆ; "ಹುಡುಕಾಟ" ವು ನಿಜವಾದ ಒಳ್ಳೆಯ ನಂಬಿಕೆಯ ವೈಯಕ್ತಿಕ ಸಂಶೋಧನಾ ಉದ್ದೇಶಗಳಿಗಾಗಿ ಉದ್ದೇಶಿಸದ ಅಥವಾ ಬಳಸದ ಪ್ರಶ್ನೆಗಳನ್ನು ಒಳಗೊಂಡಿಲ್ಲ ಅಥವಾ ಯಾವುದೇ ರೀತಿಯ ಬೋಟ್, ಮ್ಯಾಕ್ರೋ ಅಥವಾ ಇತರ ಸ್ವಯಂಚಾಲಿತ ಅಥವಾ ಮೋಸದ ವಿಧಾನಗಳಿಂದ ನಮೂದಿಸಲಾದ ಪ್ರಶ್ನೆಯನ್ನು ಒಳಗೊಂಡಿರುವುದಿಲ್ಲ. ಪ್ರತಿಫಲಗಳ ಪ್ರೋಗ್ರಾಂನ ಉದ್ದೇಶಗಳಿಗಾಗಿ, “ಸ್ವಾಧೀನಪಡಿಸುವಿಕೆ” ಎಂಬುದು Microsoft ನಿಂದ ಸರಕುಗಳನ್ನು ಖರೀದಿಸುವುದು ಅಥವಾ ಡಿಜಿಟಲ್ ಕಂಟೆಂಟ್ಗಾಗಿ ನೇರವಾಗಿ ಪರವಾನಗಿಯನ್ನು ಡೌನ್ಲೋಡ್ ಮಾಡುವುದು ಅಥವಾ ಪಡೆಯುವುದು ಅದು ಉಚಿತವಾಗಿರಬಹುದು ಅಥವಾ ಪಾವತಿಸಬೇಕಾಗಿರಬಹುದು. Microsoft ಇವರಿಂದ ಪ್ರತಿ ಸ್ವಾಧೀನಪಡಿಸುವಿಕೆಗೂ ಪಾಯಿಂಟ್ಗಳು ಆಫರ್ ಮಾಡಲ್ಪಡುವುದಿಲ್ಲ, ಮತ್ತು ಕೆಲವು ನಿಬಂಧನೆಗಳು ಅನ್ವಯವಾಗಬಹುದು.
- vii. ಪಾಯಿಂಟ್ಗಳ ಮೇಲೆ ನಿರ್ಬಂಧನೆಗಳು ಮತ್ತು ಇತಿಮಿತಿಗಳು. ಪಾಯಿಂಟ್ಗಳು Microsoft ಇವರಿಂದ ಪ್ರತ್ಯೇಕ Rewards ಖಾತೆಗಳಿಗೆ ಪುರಸ್ಕರಿಸಲ್ಪಡುತ್ತವೆ, ಯಾವುದೇ ವ್ಯಕ್ತಿ ಅಥವಾ ಅಸ್ತಿತ್ವಕ್ಕೆ ವರ್ಗಾಯಿಸಲು ಸಾಧ್ಯವಿರುವುದಿಲ್ಲ. ಈ ಮುಂಚೆ ತಿಳಿಸಿರುವುದರ ಹೊರತಾಗಿಯೂ, (i) ನಿಮ್ಮ ಪಾಯಿಂಟ್ಗಳನ್ನು ನಿಮ್ಮ ಕುಟುಂಬದೊಂದಿಗೆ (ಇತಿಮಿತಿಗಳು ಅನ್ವಯವಾಗಬಹುದು) ಹಂಚಲು, (ii) ರಿಡೆಂಪ್ಷನ್ ಪುಟದಲ್ಲಿ ಪಟ್ಟಿ ಮಾಡಲ್ಪಟ್ಟಿರುವ ಲಾಭರಹಿತ ಸಂಸ್ಥೆಯೊಂದಕ್ಕೆ ನೆರವಾಗುವುದಕ್ಕಾಗಿ ನಿಮ್ಮ ಪಾಯಿಂಟ್ಗಳನ್ನು ದೇಣಿಗೆಯಾಗಿ ನೀಡಲು, ಅಥವಾ (iii) ನಿಮ್ಮ ಪ್ರದೇಶದ ಮೇಲೆ ಅವಲಂಬಿತವಾಗಿ ಹಾಗೂ ಇತರ ಷರತ್ತುಗಳು ಹಾಗೂ ನಿಬಂಧನೆಗಳಿಗೆ ಒಳಪಟ್ಟು, Microsoft ಅಥವಾ ಅಧೀಕೃತ ತೃತೀಯ ಪಕ್ಷಗಳಿಂದ ಕಾರ್ಯಾಚರಿಸಲ್ಪಡುವ ಪ್ರೋಗ್ರಾಂಗಳೂ ಸೇರಿದಂತೆ ಇತರ ಕೆಲವು Rewards ಅಥವಾ ಲಾಯಲ್ಟಿ ಪ್ರೋಗ್ರಾಂಗಳಲ್ಲಿನ ಪಾಯಿಂಟ್ಗಳಿಗೆ ನಿಮ್ಮ ಎಲ್ಲ ಅಥವಾ ಕೆಲವು ಪಾಯಿಂಟ್ಗಳನ್ನು ರಿಡೀಮ್ ಮಾಡಲು Microsoft, ಕಾಲಕಾಲಕ್ಕೆ ತಮ್ಮ ಏಕಮಾತ್ರ ವಿವೇಚನೆಯಲ್ಲಿ ನಿಮ್ಮನ್ನು ಅನುಮತಿಸಬಹುದು. ಪಾಯಿಂಟ್ಗಳು ಸದಾ ಕಾಲವೂ Microsoft ರವರ ಸ್ವತ್ತು ಆಗಿರುತ್ತವೆ ಮತ್ತು ಆಗಿ ಉಳಿಯುತ್ತವೆ, ನಿಮ್ಮ ವೈಯಕ್ತಿಕ ಸ್ವತ್ತು ಆಗುವುದಿಲ್ಲ; ನಗದು ಮೌಲ್ಯವನ್ನು ಅವುಗಳು ಹೊಂದಿರುವುದಿಲ್ಲ, ಮತ್ತು ಅವುಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಯಾವುದೇ ನಗದು ಅಥವಾ ಹಣವನ್ನು ನೀವು ಪಡೆದುಕೊಳ್ಳಬಹುದಾಗಿರುವುದಿಲ್ಲ. ನಿಮಗೆ ಪಾಯಿಂಟ್ಗಳನ್ನು ಪ್ರಚಾರಾತ್ಮಕ ಆಧಾರದಲ್ಲಿ ಮಾತ್ರ ನೀಡಲಾಗುತ್ತದೆ. ಪಾಯಿಂಟ್ಗಳನ್ನು ಖರೀದಿಸಲು ನಿಮಗೆ ಸಾಧ್ಯವಿಲ್ಲ. ಸದುದ್ದೇಶದ ಉಲ್ಲಂಘನೆಯಲ್ಲಿ ನೀವು ಅನಾನುಕೂಲಪಡಿಸಲ್ಪಡುವುದಿಲ್ಲ ಎಂಬುದಕ್ಕೆ ಒಳಪಟ್ಟು, ಪ್ರತಿ ವ್ಯಕ್ತಿ, ಪ್ರತಿ ಕುಟುಂಬ, ಅಥವಾ ನಿರ್ದಿಷ್ಟಪಡಿಸಿದ ಒಂದು ಅವಧಿಯಲ್ಲಿ (ಉದಾಹರಣೆಗೆ ಒಂದು ದಿನ) ಗಳಿಸಬಹುದಾದ ಅಥವಾ ರಿಡೀಮ್ ಮಾಡಬಹುದಾದ ಪಾಯಿಂಟ್ಗಳು ಅಥವಾ Rewards ನ ಪ್ರಮಾಣವನ್ನು, Microsoft ಮಿತಿಗೊಳಿಸಬಹುದು; ಪ್ರಸ್ತುತ ಅನ್ವಯವಾಗುವ ಇತಿಮಿತಿಗಳಿಗಾಗಿ ದಯವಿಟ್ಟು FAQ ಅನ್ನು ಉಲ್ಲೇಖಿಸಿ. ಆಫರ್ ಅಥವಾ ರಿಡೆಂಪ್ಷನ್ ಆಯ್ಕೆ ಒಂದು ಅನ್ಯಥಾ ಸ್ಪಷ್ಟವಾಗಿ ತಿಳಿಸುವುದನ್ನು ಹೊರತುಪಡಿಸಿ, ಪ್ರೋಗ್ರಾಂನಲ್ಲಿ ಗಳಿಸಿದ ಪಾಯಿಂಟ್ಗಳು Microsoft ಅಥವಾ ತೃತೀಯ ಪಕ್ಷಗಳಿಂದ ಪ್ರಸ್ತಾಪಿಸಲ್ಪಡುವ ಬೇರಾವುದೇ ಪ್ರೋಗ್ರಾಂನಲ್ಲಿ ಮಾನ್ಯವಾಗಿರುವುದಿಲ್ಲ, ಹಾಗೂ ಅದರೊಂದಿಗಿನ ಸಂಯೋಜನೆಯಲ್ಲಿ ಬಳಸಲ್ಪಡಬಹುದಾಗಿರುವುದಿಲ್ಲ. ನಿರಂತರವಾಗಿ 12 ತಿಂಗಳುಗಳವರೆಗೆ ನಿಮ್ಮ Rewards ಖಾತೆಯಲ್ಲಿ ಯಾವುದೇ ಪಾಯಿಂಟ್ಗಳನ್ನು ನೀವು ಗಳಿಸದಿದ್ದಲ್ಲಿ ಅಥವಾ ರಿಡೀಮ್ ಮಾಡದಿದ್ದಲ್ಲಿ, ನಿಮ್ಮ Rewards ಖಾತೆಗೆ ಸಂಬಂಧಿಸಿದ, ರಿಡೀಮ್ ಮಾಡದ ಪಾಯಿಂಟ್ಗಳು ಎಕ್ಸ್ಪೈರ್ ಆಗುತ್ತವೆ.
- viii. ರಿಡೆಂಪ್ಷನ್ಗಳು. ರಿಡೆಂಪ್ಷನ್ ಆಯ್ಕೆಗಳು ರಿಡೆಂಪ್ಷನ್ ಪುಟದಲ್ಲಿ ಮತ್ತು ಇತರ ಕೆಲವು Microsoft ಸೈಟ್ಗಳು ಮತ್ತು ಪುಟಗಳಲ್ಲಿ ನಿಮಗೆ ಲಭ್ಯವಾಗಿಸಲ್ಪಡುತ್ತವೆ. ರಿಡೆಂಪ್ಷನ್ ಆಯ್ಕೆ ಒಂದಕ್ಕೆ ನಿಮ್ಮ ಪಾಯಿಂಟ್ಗಳನ್ನು ನೀವು ರಿಡೀಮ್ ಮಾಡಬಹುದಾಗುವ ಮೊದಲು ಆ ರಿಡೆಂಪ್ಷನ್ ಆಯ್ಕೆಗೆ ಬೇಕಾಗುವ ಎಲ್ಲ ಪಾಯಿಂಟ್ಗಳನ್ನು ನಿಮ್ಮ Rewards ಖಾತೆಯಲ್ಲಿ ನೀವು ಗಳಿಸಿ, ಲಭ್ಯವಾಗಿರಿಸಿಕೊಳ್ಳಬೇಕು. ನಿರ್ದಿಷ್ಟ ಪುರಸ್ಕಾರವು ಸೀಮಿತ ಸಂಖ್ಯೆಯಲ್ಲಿ ಲಭ್ಯವಿರಬಹುದು ಮತ್ತು ಅಂತಹ ಪುರಸ್ಕಾರಗಳನ್ನು ಮೊದಲು ಬಂದ, ಮೊದಲು-ನೀಡುವ ಆಧಾರದಲ್ಲಿ ವಿತರಿಸಲಾಗುತ್ತದೆ. ಕೆಲವು ರಿಡೆಂಪ್ಷನ್ ಆಯ್ಕೆಗಳಿಗೆ ಪಾಯಿಂಟ್ಗಳನ್ನು ರಿಡೀಮ್ ಮಾಡಲು ನಿಮ್ಮ ಮೇಲ್ ವಿಳಾಸ ಹಾಗೂ ದೂರವಾಣಿ ಸಂಖ್ಯೆಯಂತಹ (VOIP ಅಥವಾ ಶುಲ್ಕರಹಿತ ಸಂಖ್ಯೆಯನ್ನು ಹೊರತುಪಡಿಸಿ) ಹೆಚ್ಚುವರಿ ಮಾಹಿತಿಯನ್ನು ನೀವು ಒದಗಿಸಬೇಕಾಗಬಹುದು, ಹಾಗೂ ವಂಚನೆ-ತಡೆ ಕೋಡ್ ಒಂದನ್ನು ನಮೂದಿಸುವಂತೆ ಅಥವಾ ಕಾನೂನಾತ್ಮಕ ದಾಖಲೆಗಳಿಗೆ ಸಹಿ ಮಾಡುವಂತೆಯೂ ಸಹ ನಿಮ್ಮನ್ನು ಕೇಳಬಹುದು. ನಿಮ್ಮ ಪಾಯಿಂಟ್ಗಳನ್ನು ನೀವು ರಿಡೀಮ್ ಮಾಡಿದ ನಂತರ, ದೋಷಪೂರಿತ ಉತ್ಪನ್ನಗಳ ಸಂದರ್ಭದಲ್ಲಿ ಅಥವಾ ಅನ್ವಯವಾಗುವ ಕಾನೂನಿನಿಂದ ಅಗತ್ಯಪಡಿಸಿದಂತೆ ಹೊರತುಪಡಿಸಿ ಪಾಯಿಂಟ್ಗಳ ರಿಫಂಡ್ಗಾಗಿ ರಿಡೆಂಪ್ಷನ್ ಆಯ್ಕೆಯನ್ನು ನೀವು ರದ್ದುಪಡಿಸಲು ಅಥವಾ ಹಿಂದಿರುಗಿಸಲು ಸಾಧ್ಯವಿರುವುದಿಲ್ಲ. ದಾಸ್ತಾನು ಮುಗಿದಿರುವ ಅಥವಾ ಬೇರೆ ಕಾರಣಗಳಿಗಾಗಿ ಅಲಭ್ಯವಾಗಿರುವ ರಿಡೆಂಪ್ಷನ್ ಆಯ್ಕೆ ಒಂದನ್ನು ನೀವು ಆಯ್ಕೆ ಮಾಡಿಕೊಂಡಲ್ಲಿ, ತುಲನಾತ್ಮಕ ಮೌಲ್ಯದ ರಿಡೆಂಪ್ಷನ್ ಆಯ್ಕೆಯನ್ನು ನಾವು ಪರ್ಯಾಯವಾಗಿ ಒದಗಿಸಬಹುದು ಅಥವಾ ನಮ್ಮ ಏಕಮಾತ್ರ ವಿವೇಚನೆಯಲ್ಲಿ ನಿಮ್ಮ ಪಾಯಿಂಟ್ಗಳನ್ನು ರಿಫಂಡ್ ಮಾಡಬಹುದು.
- ix. ನಿರ್ದಿಷ್ಟ ರಿಡೆಂಪ್ಷನ್ ಆಯ್ಕೆಗಳನ್ನು ಯಾವುದೇ ಕಾರಣಕ್ಕೆ ಯಾವುದೇ ಸಮಯದಲ್ಲಿ Microsoft ನವೀಕರಿಸಬಹುದು ಅಥವಾ ಆಫರಿಂಗ್ನ ಮುಂದುವರಿಕೆಯನ್ನು ನಿಲ್ಲಿಸಬಹುದು. ಕೆಲವು ರಿಡೆಂಪ್ಷನ್ ಆಯ್ಕೆಗಳು ಅವುಗಳ ರಿಡೆಂಪ್ಷನ್ ಅಥವಾ ಬಳಕೆಯ ಮೇಲೆ ವಯಸ್ಸು ಅಥವಾ ಪ್ರದೇಶ ಅರ್ಹತೆಯ ಅಗತ್ಯತೆಗಳನ್ನು, ಅಥವಾ ಇತರ ಷರತ್ತುಗಳು ಅಥವಾ ನಿಬಂಧನೆಗಳನ್ನು ಹೊಂದಿರಬಹುದು. ಇಂಥ ಯಾವುದೇ ಅಗತ್ಯತೆಗಳು ಅಥವಾ ಷರತ್ತುಗಳು ಸಂಬಂಧಿತ ರಿಡೆಂಪ್ಷನ್ ಆಫರ್ನಲ್ಲಿ ಒಳಗೊಳ್ಳಲ್ಪಟ್ಟಿರುತ್ತವೆ. ಎಲ್ಲಾ ಫೆಡರಲ್, ರಾಜ್ಯ ಮತ್ತು ಸ್ಥಳೀಯ ತೆರಿಗೆಗಳಿಗೆ ಮತ್ತು ರಿಡೆಂಪ್ಷನ್ ಆಯ್ಕೆಯನ್ನು ಸ್ವೀಕರಿಸುವ ಮತ್ತು ಬಳಸುವ ಯಾವುದೇ ಇತರ ವೆಚ್ಚಗಳಿಗೆ ನೀವೇ ಜವಾಬ್ದಾರರು. ಪುರಸ್ಕಾರಗಳನ್ನು ನಿಮ್ಮ Microsoft ಖಾತೆಗೆ ಸಂಬಂಧಿಸಿದ ಇಮೇಲ್ ವಿಳಾಸಕ್ಕೆ ಇಮೇಲ್ ಮಾಡಲಾಗುತ್ತದೆ, ಆದ್ದರಿಂದ ನಿಮ್ಮ ಇಮೇಲ್ ವಿಳಾಸವನ್ನು ನವೀಕೃತವಾಗಿರಿಸಿ. ತಲುಪಿಸಲಾಗದಿದ್ದ ಪುರಸ್ಕಾರಗಳನ್ನು ಇನ್ನೊಮ್ಮೆ ರವಾನಿಸಲಾಗುವುದಿಲ್ಲ ಮತ್ತು ಆದ್ದರಿಂದ ಮುಟ್ಟುಗೋಲು ಹಾಕಲಾಗುತ್ತದೆ. ರಿವಾರ್ಡ್ಗಳನ್ನು ಮರುಮಾರಾಟ ಮಾಡಬಹುದಾಗಿರುವುದಿಲ್ಲ. Rewards ಪ್ರೋಗ್ರಾಂನಲ್ಲಿ ನೀವು ಒಂದು ವರ್ಷಕ್ಕೆ 550,000 ಪಾಯಿಂಟ್ಗಳಿಗಿಂತ ಹೆಚ್ಚಿನದ್ದನ್ನು ರಿಡೀಮ್ ಮಾಡಲು ಸಾಧ್ಯವಿಲ್ಲ.
- x. ನಿಮ್ಮ Rewards ಖಾತೆಯನ್ನು ರದ್ದುಪಡಿಸುವುದು. ಪ್ರತಿಫಲಗಳ ಪ್ರೋಗ್ರಾಂನಲ್ಲಿ ಮುಂದಕ್ಕೆ ಪಾಲ್ಗೊಳ್ಳಲು ನೀವು ಬಯಸದಿದ್ದಲ್ಲಿ, ನಿಮ್ಮ ಪ್ರತಿಫಲಗಳ ಖಾತೆಯನ್ನು ರದ್ದುಪಡಿಸಲು ಹೊರಹೋಗುವ ಆಯ್ಕೆ ಪುಟದಲ್ಲಿ (https://rewards.microsoft.com/optout) ಇರುವ ಸೂಚನೆಗಳನ್ನು ಅನುಸರಿಸಿ. ನಿಮ್ಮ Rewards ಖಾತೆಯನ್ನು ರದ್ದುಪಡಿಸಿದಲ್ಲಿ, ಗಳಿಸಿದ ನಿಮ್ಮ ಎಲ್ಲ ಪಾಯಿಂಟ್ಗಳು ತಕ್ಷಣ ಮುಟ್ಟುಗೋಲು ಹಾಕಿಕೊಳ್ಳಲ್ಪಡುತ್ತವೆ ಹಾಗೂ ಭವಿಷ್ಯದಲ್ಲಿ ಹೊಸ ಪಾಯಿಂಟ್ಗಳನ್ನು ಗಳಿಸುವ ಸಾಮರ್ಥ್ಯವನ್ನು ನೀವು ಕಳೆದುಕೊಳ್ಳುತ್ತೀರಿ. ಪಾಯಿಂಟ್ಗಳನ್ನು ಪುನಃ ಗಳಿಸಲಾರಂಭಿಸಲು, ಹೊಸ Rewards ಖಾತೆಯನ್ನು ನೀವು ತೆರೆಯಬೇಕು (ಆದರೆ ಹಿಂದೆ ಮುಟ್ಟುಗೋಲು ಹಾಕಿಕೊಂಡ ಯಾವುದೇ ಪಾಯಿಂಟ್ಗಳನ್ನು Microsoft ಪುನಃಸ್ಥಾಪಿಸುವುದಿಲ್ಲ). ನಿರಂತರವಾಗಿ 12 ತಿಂಗಳುಗಳವರೆಗೆ ನಿಮ್ಮ Microsoft ಖಾತೆಗೆ ನೀವು ಲಾಗಿನ್ ಆಗದಿದ್ದಲ್ಲಿ, ನಿಮ್ಮ Rewards ಖಾತೆ ರದ್ದುಪಡಿಸಲ್ಪಡಬಹುದು (ಹಾಗೂ ನಿಮ್ಮ ಪಾಯಿಂಟ್ಗಳು ಮುಟ್ಟುಗೋಲು ಹಾಕಿಕೊಳ್ಳಲ್ಪಡಬಹುದು).
- xi. ಪ್ರೋಗ್ರಾಂ ಬದಲಾವಣೆಗಳು ಅಥವಾ ಮುಂದುವರೆಸುವಿಕೆಯನ್ನು ನಿಲ್ಲಿಸುವುದು. Rewards ಪ್ರೋಗ್ರಾಂ ಅನ್ನು ಅಥವಾ ಅದರ ಯಾವುದೇ ಭಾಗವನ್ನು ಯಾವುದೇ ಸಮಯದಲ್ಲಿ, ತಮ್ಮ ಏಕಮಾತ್ರ ವಿವೇಚನೆಯಲ್ಲಿ, ಹಾಗೂ ಪೂರ್ವ ಸೂಚನೆಯನ್ನು ನೀಡದೇ ಬದಲಾವಣೆ ಮಾಡುವ, ಮಾರ್ಪಾಡು ಮಾಡುವ, ಮುಂದುವರೆಸುವಿಕೆಯನ್ನು ನಿಲ್ಲಿಸುವ, ಅಥವಾ ರದ್ದುಪಡಿಸುವ ಹಕ್ಕನ್ನು Microsoft ಕಾಯ್ದಿರಿಸುತ್ತದೆ. ಆದಾಗ್ಯೂ, Rewards ಪ್ರೋಗ್ರಾಂ ರದ್ದುಪಡಿಸಲ್ಪಟ್ಟಲ್ಲಿ ಅಥವಾ ಮುಂದುವರೆಸುವಿಕೆಯು ನಿಲ್ಲಿಸಲ್ಪಟ್ಟಲ್ಲಿ, ಕಾನೂನಾತ್ಮಕ ಅಥವಾ ಭದ್ರತಾ ಕಾರಣಗಳಿಗಾಗಿ ಇಂಥ ರದ್ದುಪಡಿಸುವಿಕೆಯ ತಕ್ಷಣ ಜಾರಿಗೆ ಬರಬೇಕು ಎಂದು ನಾವು ನಿರ್ಧರಿಸದ ಹೊರತು, ಇಮೇಲ್ ಮೂಲಕ ಹಾಗೂ Rewards ಡ್ಯಾಶ್ಬೋರ್ಡ್ನಲ್ಲಿ ನಿಮ್ಮನ್ನು ಸೂಚಿತಗೊಳಿಸುವ ಹಾಗೂ ನಿಮ್ಮ ಸಂಚಿತ ಪಾಯಿಂಟ್ಗಳನ್ನು ರಿಡೀಮ್ ಮಾಡಲು ಕನಿಷ್ಟ 90 ದಿನಗಳನ್ನು ನಿಮಗೆ ಒದಗಿಸುವ ಸಮಂಜಸ ಪ್ರಯತ್ನಗಳನ್ನು ನಾವು ಮಾಡುತ್ತೇವೆ.
- xii. ಇತರ ನಿಯಮಗಳು. Rewards ಪ್ರೋಗ್ರಾಂನ ಯಾವುದೇ ಸಂಗತಿಯೊಂದಿಗೆ ನೀವು ಹಸ್ತಕ್ಷೇಪ ಮಾಡಿದ್ದೀರಿ, ಅದನ್ನು ದುರುಪಯೋಗಪಡಿಸಿಕೊಂಡಿದ್ದೀರಿ, ಅಥವಾ ವಂಚಿಸಿದ್ದೀರಿ ಅಥವಾ ಈ ಷರತ್ತುಗಳನ್ನು ಉಲ್ಲಂಘಿಸಿದ್ದೀರಿ ಎಂದು Microsoft ನಂಬಿದಲ್ಲಿ, ನಿಮ್ಮ Rewards ಖಾತೆಯನ್ನು ತಕ್ಷಣವೇ ರದ್ದುಪಡಿಸುವ, Rewards ಪ್ರೋಗ್ರಾಂನಲ್ಲಿ ಭವಿಷ್ಯದಲ್ಲಿ ಪಾಲ್ಗೊಳ್ಳದಂತೆ ನಿಮ್ಮನ್ನು ಅನರ್ಹಗೊಳಿಸುವ, ನೀವು ಗಳಿಸಿದ ನಿಮ್ಮ ಎಲ್ಲ ಪಾಯಿಂಟ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ, ಹಾಗೂ Rewards ಪ್ರೋಗ್ರಾಂ ಮೂಲಕ ನೀವು ಪಡೆದುಕೊಂಡಿರುವ ಯಾವುದೇ ರಿಡೆಂಪ್ಷನ್ ಆಯ್ಕೆಯನ್ನು ರದ್ದುಪಡಿಸುವ ಅಥವಾ ಅಮಾನತ್ತುಪಡಿಸುವ ಹಕ್ಕನ್ನು Microsoft ಕಾಯ್ದಿರಿಸುತ್ತದೆ. ಮುಂದುವರೆದು, ಕಾನೂನಾತ್ಮಕ ಕಾರಣಗಳಿಗಾಗಿ (ರಫ್ತು ಕಾನೂನುಗಳಂತಹ) ರಿಡೆಂಪ್ಷನ್ ಆಯ್ಕೆಯನ್ನು ಪಡೆಯಲು ನೀವು ಅನರ್ಹರಾಗಿದ್ದೀರಿ ಎಂದು Microsoft ನಿರ್ಧರಿಸಿದಲ್ಲಿ, Rewards ಪ್ರೋಗ್ರಾಂ ಮೂಲಕ ನೀವು ಪಡೆದುಕೊಂಡಿರುವ ಅಥವಾ ಪಡೆದುಕೊಳ್ಳಲು ಪ್ರಯತ್ನಿಸಿರುವ ಯಾವುದೇ ರಿಡೆಂಪ್ಷನ್ ಆಯ್ಕೆಯನ್ನು ರದ್ದುಪಡಿಸುವ ಅಥವಾ ಅಮಾನತ್ತುಪಡಿಸುವ ಹಕ್ಕನ್ನು Microsoft ಕಾಯ್ದಿರಿಸುತ್ತದೆ. ನಿಖರತೆಯನ್ನು ಖಚಿತಪಡಿಸಿಕೊಳ್ಳುವ ಪ್ರತಿಯೊಂದು ಪ್ರಯತ್ನವನ್ನು Microsoft ಮಾಡುತ್ತದಾದಲ್ಲಿ, ಸಾಂದರ್ಭಿಕವಾಗಿ ಲೋಪಗಳು ಉಂಟಾಗುತ್ತವೆ. ಪ್ರಸ್ತುತ ಆಫರ್ಗಳನ್ನು ಅಥವಾ ನಿಮ್ಮ ಬಾಕಿ ಇರುವ, ಗಳಿಸಿದ, ಅಥವಾ ರಿಡೀಮ್ ಮಾಡಿದ ಪಾಯಿಂಟ್ಗಳು ಅಥವಾ ರಿವಾರ್ಡ್ಗಳನ್ನು ಅದು ಬಾಧಿಸುತ್ತದಾದರೂ ಸಹ, ಯಾವುದೇ ಸಮಯದಲ್ಲಿ ಅಂಥ ದೋಷಗಳನ್ನು ಸರಿಪಡಿಸುವ ಹಕ್ಕನ್ನು ಆದ್ದರಿಂದ Microsoft ಕಾಯ್ದಿರಿಸುತ್ತದೆ. ಈ Rewards ಪ್ರೋಗ್ರಾಂನ ಷರತ್ತುಗಳು ಅಥವಾ ಸಂಬಂಧಿತ ಯಾವುದೇ ಸಾಮಗ್ರಿಗಳು ಅಥವಾ ಜಾಹೀರಾತುಗಳಲ್ಲಿ ಒಳಗೊಂಡಿರುವ ಇತರ ಹೇಳಿಕೆಗಳ ನಡುವೆ ಯಾವುದೇ ಅಸ್ಥಿರತೆ ಅಥವಾ ವ್ಯತ್ಯಾಸ ಉಂಟಾದ ಸಂದರ್ಭದಲ್ಲಿ, ಈ ಷರತ್ತುಗಳು ಚಾಲ್ತಿಯಲ್ಲಿರುತ್ತವೆ, ಆಳುತ್ತವೆ ಹಾಗೂ ನಿಯಂತ್ರಿಸುತ್ತವೆ.
Azure
- m. Azure. https://aka.ms/AA7z67v ನಲ್ಲಿ Microsoft Azure ಕಾನೂನು ಮಾಹಿತಿ ಪುಟದಲ್ಲಿ ವಿವರಿಸಿರುವಂತೆ, ನಿಮ್ಮ Azure ಸೇವೆಯ ಬಳಕೆಯು ನೀವು ಸೇವೆಗಳನ್ನು ಪಡೆದುಕೊಂಡ ಪ್ರತ್ಯೇಕ ಒಪ್ಪಂದದ ನಿಮಯಗಳು ಮತ್ತು ಷರತ್ತುಗಳಿಂದ ನಿಯಂತ್ರಿಸಲ್ಪಡುತ್ತದೆ.
Microsoft ಸೌಂಡ್ಸ್ಕೇಪ್
- n. Microsoft ಸೌಂಡ್ಸ್ಕೇಪ್. Microsoft ಸೌಂಡ್ಸ್ಕೇಪ್ ಅನ್ನು (1) ಒಂದು ವೈದ್ಯಕೀಯ ಸಾಧನವಾಗಿ ವಿನ್ಯಾಸಗೊಳಿಸಿಲ್ಲ, ಉದ್ದೇಶಿಸಿಲ್ಲ, ಅಥವಾ ಲಭ್ಯವಾಗಿಸಲಾಗಿಲ್ಲ, ಹಾಗೂ (2) ವೃತ್ತಿಪರ ವೈದ್ಯಕೀಯ ಸಲಹೆ, ತಪಾಸಣೆ, ಚಿಕಿತ್ಸೆ, ಅಥವಾ ನಿರ್ಣಯಕ್ಕೆ ಒಂದು ಪರ್ಯಾಯವಾಗಲು ವಿನ್ಯಾಸಗೊಳಿಸಿಲ್ಲ ಅಥವಾ ಉದ್ದೇಶಿಸಿಲ್ಲ ಹಾಗೂ ವೃತ್ತಿಪರ ವೈದ್ಯಕೀಯ ಸಲಹೆ, ತಪಾಸಣೆ, ಚಿಕಿತ್ಸೆ, ಅಥವಾ ನಿರ್ಣಯಕ್ಕೆ ಬದಲಿಯಾಗಿ ಅಥವಾ ಒಂದು ಪರ್ಯಾಯವಾಗಿ ಬಳಸಬಾರದು ಎಂದು ನೀವು ಅಂಗೀಕರಿಸುತ್ತೀರಿ.
ಪವರ್ ಪ್ಲಾಟ್ಫಾರ್ಮ್
- o. ಪವರ್ ಪ್ಲಾಟ್ಫಾರ್ಮ್. Microsoft ಪವರ್ ಪ್ಲಾಟ್ಫಾರ್ಮ್ (https://www.microsoft.com/en-us/power-platform/business-applications/legal) ನಲ್ಲಿ ಪವರ್ ಪ್ಲಾಟ್ಫಾರ್ಮ್ ಕಾನೂನು ಮಾಹಿತಿ ಪುಟದಲ್ಲಿ ವಿವರಿಸಿರುವಂತೆ, ನಿಮ್ಮ ಪವರ್ ಪ್ಲಾಟ್ಫಾರ್ಮ್ ಸೇವೆಯ ಬಳಕೆಯು ನೀವು ಸೇವೆಗಳನ್ನು ಪಡೆದುಕೊಂಡ ಪ್ರತ್ಯೇಕ ಒಪ್ಪಂದದ ನಿಮಯಗಳು ಮತ್ತು ಷರತ್ತುಗಳಿಂದ ನಿಯಂತ್ರಿಸಲ್ಪಡುತ್ತದೆ.
Dynamics 365
- p. Dynamics 365. Microsoft Dynamics 365 (https://www.microsoft.com/en-us/dynamics-365/business-applications/legal) ನಲ್ಲಿ Dynamics 365 ಕಾನೂನು ಮಾಹಿತಿ ಪುಟದಲ್ಲಿ ವಿವರಿಸಿರುವಂತೆ, ನಿಮ್ಮ Dynamics 365 ಸೇವೆಯ ಬಳಕೆಯು ನೀವು ಸೇವೆಗಳನ್ನು ಪಡೆದುಕೊಂಡ ಪ್ರತ್ಯೇಕ ಒಪ್ಪಂದದ ನಿಮಯಗಳು ಮತ್ತು ಷರತ್ತುಗಳಿಂದ ನಿಯಂತ್ರಿಸಲ್ಪಡುತ್ತದೆ.
Copilot AI ಅನುಭವಗಳು
- q. Copilot AI ಅನುಭವಗಳು. ನಿಮ್ಮ Copilot AI ಅನುಭವಗಳ ಬಳಕೆಯನ್ನು (ವಾಣಿಜ್ಯ ಡೇಟಾ ರಕ್ಷಣೆಯೊಂದಿಗೆ Copilot ಹೊರತುಪಡಿಸಿ) ಈ ನಿಯಮಗಳೊಂದಿಗೆ Copilot - ಬಳಕೆಯ ನಿಯಮಗಳು (bing.com) (https://www.bing.com/new/termsofuse#content-policy) ನಲ್ಲಿ ವಿವರಿಸಿದಂತೆ ನೀವು ಆ ಸೇವೆಗಳನ್ನು ಪಡೆದ ಪೂರಕ ನಿಯಮಗಳು ಮತ್ತು ಷರತ್ತುಗಳಿಂದ ನಿಯಂತ್ರಿಸಲ್ಪಡುತ್ತದೆ. ನೀವು ವಾಣಿಜ್ಯ ಡೇಟಾ ರಕ್ಷಣೆ ಬಳಕೆದಾರರೊಂದಿಗೆ Microsoft Copilot ಆಗಿದ್ದರೆ, ಈ ನಿಯಮಗಳ ಜೊತೆಗೆ ನಿಮಗೆ ಅನ್ವಯವಾಗುವ ಬಳಕೆಯ ನಿಯಮಗಳನ್ನು ಪರಿಶೀಲಿಸಲು ದಯವಿಟ್ಟು ಈ ಪುಟಕ್ಕೆ ಭೇಟಿ ನೀಡಿ: https://aka.ms/BCETermsOfUse.
AI ಸೇವೆಗಳು
- r. AI ಸೇವೆಗಳು. "AI ಸೇವೆಗಳು" ಎಂದರೆ ಯಾವುದೇ ಉತ್ಪಾದಕ AI ಸೇವೆಗಳನ್ನು ಒಳಗೊಂಡಂತೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಗಳನ್ನು ಬಳಸುವ ಸೇವೆಗಳು ಅಥವಾ ಅವುಗಳ ವೈಶಿಷ್ಟ್ಯಗಳು.
- i. ಯಾವುದೇ ವೃತ್ತಿಪರ ಸಲಹೆ ಇಲ್ಲ. AI ಸೇವೆಗಳನ್ನು ವಿನ್ಯಾಸಗೊಳಿಸಲಾಗಿಲ್ಲ, ಉದ್ದೇಶಿಸಲಾಗಿಲ್ಲ ಅಥವಾ ವೃತ್ತಿಪರ ಸಲಹೆಗಾಗಿ ಬದಲಿಯಾಗಿ ಬಳಸಲಾಗುವುದಿಲ್ಲ.
- ii. ರಿವರ್ಸ್ ಇಂಜಿನೀಯರಿಂಗ್. ಮಾಡೆಲ್ಗಳು, ಆಲ್ಗೊರಿದಮ್ಗಳು, ಮತ್ತು ಸಿಸ್ಟಂಗಳ ಯಾವುದೇ ಮೂಲ ಘಟಕಾಂಶಗಳನ್ನು ಅನ್ವೇಷಿಸಲು AI ಸೇವೆಗಳನ್ನು ನೀವು ಬಳಸಬಹುದಾಗಿರುವುದಿಲ್ಲ. ಉದಾಹರಣೆಗೆ, ನೀವು ಮಾದರಿಗಳ ತೂಕವನ್ನು ನಿರ್ಧರಿಸಲು ಮತ್ತು ತೆಗೆದುಹಾಕಲು ಅಥವಾ ನಿಮ್ಮ ಸಾಧನದಿಂದ AI ಸೇವೆಗಳ ಯಾವುದೇ ಭಾಗಗಳನ್ನು ಹೊರತೆಗೆಯಲು ಪ್ರಯತ್ನಿಸಬಾರದು.
- iii. ಡೇಟಾವನ್ನು ಹೊರತೆಗೆಯುವುದು. ಸ್ಪಷ್ಟವಾಗಿ ಅನುಮತಿಸಲ್ಪಟ್ಟಿರದ ಹೊರತು, AI ಸೇವೆಗಳಿಂದ ಡೇಟಾ ಅನ್ನು ಹೊರತೆಗೆಯಲು ವೆಬ್ ಸ್ಕ್ರೇಪಿಂಗ್, ವೆಬ್ ಹಾರ್ವೆಸ್ಟಿಂಗ್, ಅಥವಾ ವೆಬ್ ಡೇಟಾ ಹೊರತೆಗೆಯುವಿಕೆ ವಿಧಾನಗಳನ್ನು ನೀವು ಬಳಸಬಹುದಾಗಿರುವುದಿಲ್ಲ.
- iv. AI ಸೇವೆಗಳಿಂದ ಡೇಟಾದ ಬಳಕೆಯ ಮೇಲಿನ ಮಿತಿಗಳು. ಯಾವುದೇ AI ತಂತ್ರಜ್ಞಾನವನ್ನು ರಚಿಸಲು, ತರಬೇತಿ ನೀಡಲು ಅಥವಾ ಸುಧಾರಿಸಲು (ನೇರವಾಗಿ ಅಥವಾ ಪರೋಕ್ಷವಾಗಿ) ನೀವು AI ಸೇವೆಗಳನ್ನು ಅಥವಾ AI ಸೇವೆಗಳಿಂದ ಡೇಟಾವನ್ನು ಬಳಸಬಾರದು.
- v. ನಿಮ್ಮ ವಿಷಯದ ಬಳಕೆ. AI ಸೇವೆಗಳನ್ನು ಒದಗಿಸುವಿಕೆಯ ಭಾಗವಾಗಿ, ಈ ಸೇವೆಯ ದುರುಪಯೋಗ ಅಥವಾ ಅಪಾಯಕಾರಿ ಬಳಕೆಗಳು ಅಥವಾ ಫಲಿತಾಂಶಗಳನ್ನು ಅವಲೋಕಿಸುವ ಮತ್ತು ತಡೆಗಟ್ಟುವ ಉದ್ದೇಶಗಳಿಗಾಗಿ ಈ ಸೇವೆಗಳಿಗೆ ನಿಮ್ಮ ಸಲಹೆಗಳನ್ನು ಹಾಗೂ ಈ ಸೇವೆಯಿಂದ ಪಡೆದುಕೊಂಡ ಫಲಿತಾಂಶವನ್ನು Microsoft ಸಂಸ್ಕರಿಸಿ, ಶೇಖರಿಸಿಡುತ್ತದೆ.
- vi. ವಿಷಯದ ಮಾಲೀಕತ್ವ. AI ಸೇವೆಗಳಿಗೆ (ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಒಳಗೊಂಡಂತೆ) ನೀವು ಒದಗಿಸುವ, ಪೋಸ್ಟ್ ಮಾಡುವ, ಇನ್ಪುಟ್ ಮಾಡುವ ಅಥವಾ ಸಲ್ಲಿಸುವ ಅಥವಾ ಸ್ವೀಕರಿಸುವ ಯಾವುದೇ ವಿಷಯದ ಮಾಲೀಕತ್ವವನ್ನು Microsoft ಕ್ಲೈಮ್ ಮಾಡುವುದಿಲ್ಲ. ಔಟ್ಪುಟ್ ವಿಷಯ ಮತ್ತು ಅದರ ಉಪಯುಕ್ತತೆಯಲ್ಲಿ ನೀವು ಹೊಂದಿರುವ ಬೌದ್ಧಿಕ ಆಸ್ತಿ ಹಕ್ಕುಗಳ ಬಗ್ಗೆ ನಿಮ್ಮ ಸ್ವಂತ ನಿರ್ಣಯವನ್ನು ನೀವು ಮಾಡಬೇಕಾಗುತ್ತದೆ, ಇತರ ವಿಷಯಗಳ ಜೊತೆಗೆ, ನಿಮ್ಮ ಬಳಕೆಯ ಸನ್ನಿವೇಶ(ಗಳು) ಮತ್ತು ಸಂಬಂಧಿತ ನ್ಯಾಯವ್ಯಾಪ್ತಿಯ ಕಾನೂನುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಮಿತಿಯಿಲ್ಲದೆ, ವಿಷಯವನ್ನು ಒದಗಿಸಲು, ಪೋಸ್ಟ್ ಮಾಡಲು, ಅಪ್ಲೋಡ್ ಮಾಡಲು, ಇನ್ಪುಟ್ ಮಾಡಲು ಅಥವಾ ಸಲ್ಲಿಸಲು ನಿಮಗೆ ಅಗತ್ಯವಿರುವ ಎಲ್ಲಾ ಹಕ್ಕುಗಳು ಸೇರಿದಂತೆ, ಈ ನಿಯಮಗಳಲ್ಲಿ ವಿವರಿಸಿದಂತೆ ನಿಮ್ಮ ವಿಷಯದ ಎಲ್ಲಾ ಹಕ್ಕುಗಳನ್ನು ನೀವು ಹೊಂದಿದ್ದೀರಿ ಅಥವಾ ನಿಯಂತ್ರಿಸುತ್ತೀರಿ ಎಂದು ನೀವು ಸಮರ್ಥಿಸುತ್ತೀರಿ ಮತ್ತು ಪ್ರತಿನಿಧಿಸುತ್ತೀರಿ.
- vii. ವಿಷಯ ರುಜುವಾತುಗಳು. ನೀವು ವಿಷಯವನ್ನು ರಚಿಸಲು AI ಸೇವೆಗಳನ್ನು ಬಳಸುವಾಗ, Microsoft ವಿಷಯದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬಹುದು ಮತ್ತು ಈ ಮಾಹಿತಿ ಮತ್ತು ವಿಷಯವನ್ನು ವಿಷಯ ರುಜುವಾತುಗಳೊಂದಿಗೆ ಸಂಯೋಜಿಸಬಹುದು. ನೀವು AI ಸೇವೆಗಳನ್ನು ಬಳಸಬಾರದು ಅಥವಾ ವಿಷಯದ ರುಜುವಾತುಗಳು ಅಥವಾ ಇತರ ಮೂಲ ವಿಧಾನಗಳು, ಗುರುತುಗಳು ಅಥವಾ ಸಂಕೇತಗಳನ್ನು ತೆಗೆದುಹಾಕುವ, ಬದಲಾಯಿಸುವ, ಮರೆಮಾಚುವ ಅಥವಾ ಮರೆಮಾಡುವ ಉದ್ದೇಶದಿಂದ ವಿಷಯವನ್ನು ರಚಿಸಬಾರದು ಅಥವಾ AI ಸೇವೆಗಳನ್ನು ಬಳಸಿಕೊಂಡು ವಿಷಯವನ್ನು ರಚಿಸಲಾಗಿದೆಯೇ ಎಂಬುದರ ಕುರಿತು ಇತರರನ್ನು ದಾರಿತಪ್ಪಿಸುವ ಉದ್ದೇಶದಿಂದ ವಿಷಯವನ್ನು ರಚಿಸಲು AI ಸೇವೆಗಳನ್ನು ಬಳಸಬಾರದು.
- viii. ಮೂರನೇ-ವ್ಯಕ್ತಿಯ ಕ್ಲೇಮ್ಗಳು. (AI ಸೇವೆಗಳನ್ನು ನೀವು ಬಳಸುವ ಸಂದರ್ಭದಲ್ಲಿ ಕೃತಿಸ್ವಾಮ್ಯ ಉಲ್ಲಂಘನೆ ಅಥವಾ ವಿಷಯ ಔಟ್ಪುಟ್ಗೆ ಸಂಬಂಧಿಸಿದ ಇತರ ಕ್ಲೇಮ್ಗಳನ್ನು ಅವುಗಳಿಗಷ್ಟೇ ಸೀಮಿತವಾಗದಂತೆ ಒಳಗೊಂಡು) ಅನ್ವಯವಾಗುವ ಕಾನೂನುಗಳ ಅನುಸರಣೆಯಲ್ಲಿ AI ಸೇವೆಗಳ ನಿಮ್ಮ ಬಳಕೆಗೆ ಸಂಬಂಧಿಸಿದಂತೆ ಯಾವುದೇ ಮೂರನೇ-ವ್ಯಕ್ತಿಯ ಕ್ಲೇಮ್ಗಳಿಗೆ ಸ್ಪಂದಿಸಲು ನೀವು ಏಕಮಾತ್ರವಾಗಿ ಜವಾಬ್ದಾರರಾಗಿರುತ್ತೀರಿ.
- ix. ಬಳಕೆಯ ನಿರ್ಬಂಧಗಳು. ಮೇಲಿನ "ನಡತೆ ಸಂಹಿತೆ" ಯನ್ನು ಅನುಸರಿಸುವುದರ ಜೊತೆಗೆ, ನೀವು AI ಸೇವೆಗಳನ್ನು ಬಳಸುವುದಿಲ್ಲ, ನಿರ್ಧಾರಗಳನ್ನು ತೆಗೆದುಕೊಳ್ಳುವ ಅಥವಾ ಕ್ರಮಗಳನ್ನು ತೆಗೆದುಕೊಳ್ಳುವ, ಸ್ವಾಯತ್ತವಾಗಿ ಅಥವಾ ಮಾನವ ಹಸ್ತಕ್ಷೇಪದ ವಿವಿಧ ಹಂತಗಳೊಂದಿಗೆ ಬಳಸುವುದಿಲ್ಲ ಎಂದು ನೀವು ಒಪ್ಪುತ್ತೀರಿ:
- 1. ಯಾವುದೇ ವ್ಯಕ್ತಿಯ ಕಾನೂನು ಸ್ಥಿತಿ, ಆರ್ಥಿಕ ಸ್ಥಿತಿ, ಜೀವನ ಅವಕಾಶಗಳು, ಉದ್ಯೋಗಾವಕಾಶಗಳು ಅಥವಾ ಮಾನವ ಹಕ್ಕುಗಳ ಮೇಲೆ ಪರಿಣಾಮ ಬೀರುವ ಅಥವಾ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿಗೆ ದೈಹಿಕ ಅಥವಾ ಮಾನಸಿಕ ಹಾನಿಯನ್ನುಂಟುಮಾಡುವ ಸೂಕ್ತ ಮಾನವ ಮೇಲ್ವಿಚಾರಣೆಯಿಲ್ಲದೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಥವಾ ಕ್ರಮಗಳನ್ನು ತೆಗೆದುಕೊಳ್ಳಲು;
- 2. ವ್ಯಕ್ತಿಯ ನಡವಳಿಕೆಯನ್ನು ಹಾನಿ ಉಂಟುಮಾಡುವ ರೀತಿಯಲ್ಲಿ ಕುಶಲತೆಯಿಂದ ಅಥವಾ ವಿರೂಪಗೊಳಿಸುವ ಉದ್ದೇಶದಿಂದ ಮೋಸಗೊಳಿಸಲು ಅಥವಾ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಲು (ಉದಾ. ಸುಳ್ಳು ಜಾಹೀರಾತು), ಅಥವಾ ಸಬ್ಲಿಮಿನಲ್ ತಂತ್ರಗಳನ್ನು (ಉದಾ. ದೃಶ್ಯ, ಶ್ರವಣೇಂದ್ರಿಯ ಅಥವಾ ಸಾಮಾನ್ಯ ವ್ಯಕ್ತಿಯ ಗ್ರಹಿಕೆಯ ವ್ಯಾಪ್ತಿಯನ್ನು ಮೀರಿದ ಇತರ ಸಂಕೇತಗಳು) ನಿಯೋಜಿಸಲು;
- 3. ವ್ಯಕ್ತಿಯ ವಯಸ್ಸು, ಅಂಗವೈಕಲ್ಯ ಅಥವಾ ನಿರ್ದಿಷ್ಟ ಸಾಮಾಜಿಕ ಅಥವಾ ಆರ್ಥಿಕ ಪರಿಸ್ಥಿತಿಯಿಂದಾಗಿ ಅವರ ಯಾವುದೇ ದುರ್ಬಲತೆಗಳನ್ನು ಬಳಸಿಕೊಳ್ಳಲು, ಆ ವ್ಯಕ್ತಿ ಅಥವಾ ಆ ಗುಂಪಿಗೆ ಸೇರಿದ ವ್ಯಕ್ತಿಯ ನಡವಳಿಕೆಯನ್ನು ಭೌತಿಕವಾಗಿ ವಿರೂಪಗೊಳಿಸುವ ಉದ್ದೇಶದಿಂದ ಅಥವಾ ಪರಿಣಾಮದೊಂದಿಗೆ, ಆ ವ್ಯಕ್ತಿ ಅಥವಾ ಇನ್ನೊಬ್ಬ ವ್ಯಕ್ತಿಗೆ ಗಮನಾರ್ಹ ಹಾನಿಯನ್ನುಂಟುಮಾಡುವ ಅಥವಾ ಉಂಟುಮಾಡುವ ಸಾಧ್ಯತೆಯಿರುವ ರೀತಿಯಲ್ಲಿ;
- 4. ಕೆಲವು ವ್ಯಕ್ತಿಗಳು ಅಥವಾ ವ್ಯಕ್ತಿಗಳ ಗುಂಪುಗಳ ತಾರತಮ್ಯ, ಅನ್ಯಾಯ, ಪಕ್ಷಪಾತ, ಹಾನಿಕಾರಕ, ಪ್ರತಿಕೂಲ ಅಥವಾ ಹಾನಿಕಾರಕ ವರ್ತನೆಗೆ ಕಾರಣವಾಗುವ ಸಾಮಾಜಿಕ ಸ್ಕೋರಿಂಗ್ ಅಥವಾ ಭವಿಷ್ಯಸೂಚಕ ಪ್ರೊಫೈಲಿಂಗ್ಗಾಗಿ;
- 5. ನೈಸರ್ಗಿಕ ವ್ಯಕ್ತಿಯ ಪ್ರೊಫೈಲಿಂಗ್ ಅಥವಾ ಅವರ ವ್ಯಕ್ತಿತ್ವದ ಲಕ್ಷಣಗಳು ಮತ್ತು ಗುಣಲಕ್ಷಣಗಳನ್ನು ನಿರ್ಣಯಿಸುವುದರ ಆಧಾರದ ಮೇಲೆ ನೈಸರ್ಗಿಕ ವ್ಯಕ್ತಿಗಳ ಅಪರಾಧ ಅಪಾಯದ ಮೌಲ್ಯಮಾಪನಕ್ಕಾಗಿ. ಈ ನಿಷೇಧವು ಅಪರಾಧ ಚಟುವಟಿಕೆಯಲ್ಲಿ ವ್ಯಕ್ತಿಯ ಒಳಗೊಳ್ಳುವಿಕೆಯ ಮಾನವ ಮೌಲ್ಯಮಾಪನವನ್ನು ಬೆಂಬಲಿಸಲು ಬಳಸಲಾಗುವ AI ಸೇವೆಗಳಿಗೆ ಅನ್ವಯಿಸುವುದಿಲ್ಲ, ಇದು ಈಗಾಗಲೇ ಅಪರಾಧ ಚಟುವಟಿಕೆಗೆ ನೇರವಾಗಿ ಸಂಬಂಧಿಸಿರುವ ವಸ್ತುನಿಷ್ಠ ಮತ್ತು ಪರಿಶೀಲಿಸಬಹುದಾದ ಸಂಗತಿಗಳನ್ನು ಆಧರಿಸಿದೆ;
- 6. ಅವರ ಬಯೋಮೆಟ್ರಿಕ್ ಡೇಟಾದ ಆಧಾರದ ಮೇಲೆ, ಜನರನ್ನು ವರ್ಗೀಕರಿಸಲು ಅಥವಾ ಅವರ ಜನಾಂಗ, ರಾಜಕೀಯ ಅಭಿಪ್ರಾಯಗಳು, ಟ್ರೇಡ್ ಯೂನಿಯನ್ ಸದಸ್ಯತ್ವ, ಧಾರ್ಮಿಕ ಅಥವಾ ತಾತ್ವಿಕ ನಂಬಿಕೆಗಳು, ಅಥವಾ ಲೈಂಗಿಕ ಜೀವನ ಅಥವಾ ಲೈಂಗಿಕ ದೃಷ್ಟಿಕೋನವನ್ನು ನಿರ್ಣಯಿಸಲು ಅಥವಾ ಊಹಿಸಲು, ಬಯೋಮೆಟ್ರಿಕ್ ಡೇಟಾ ಅಥವಾ ಕಾನೂನು ಜಾರಿ ಕ್ಷೇತ್ರದಲ್ಲಿ ಬಯೋಮೆಟ್ರಿಕ್ ಡೇಟಾದ ವರ್ಗೀಕರಣದ ಆಧಾರದ ಮೇಲೆ ಚಿತ್ರಗಳಂತಹ ಕಾನೂನುಬದ್ಧವಾಗಿ ಸ್ವಾಧೀನಪಡಿಸಿಕೊಂಡ ಬಯೋಮೆಟ್ರಿಕ್ ಡೇಟಾಸೆಟ್ಗಳ ಯಾವುದೇ ಲೇಬಲಿಂಗ್ ಅಥವಾ ಫಿಲ್ಟರ್ ಮಾಡುವಿಕೆಯನ್ನು ಹೊರತುಪಡಿಸಿ;
- 7. ಇಂಟರ್ನೆಟ್ ಅಥವಾ CCTV ಫೂಟೇಜ್ನಿಂದ ಮುಖದ ಚಿತ್ರಗಳ ಗುರಿಯಿಲ್ಲದ ಸ್ಕ್ರ್ಯಾಪಿಂಗ್ ಮೂಲಕ ಮುಖ ಗುರುತಿಸುವಿಕೆ ಡೇಟಾಬೇಸ್ಗಳನ್ನು ರಚಿಸಲು ಅಥವಾ ವಿಸ್ತರಿಸಲು;
- 8. ಅನಿಯಂತ್ರಿತ, "ಕಾಡಿನಲ್ಲಿ" ವ್ಯಕ್ತಿಗಳನ್ನು ಗುರುತಿಸಲು ಪ್ರಯತ್ನಿಸಲು ಜಾಗತಿಕವಾಗಿ ಯಾವುದೇ ಕಾನೂನು ಜಾರಿ ಸಂಸ್ಥೆಗಳು ಬಳಸುವ ಮೊಬೈಲ್ ಕ್ಯಾಮೆರಾಗಳಲ್ಲಿನ ಯಾವುದೇ ನೈಜ-ಸಮಯದ ಮುಖ ಗುರುತಿಸುವಿಕೆ ತಂತ್ರಜ್ಞಾನಕ್ಕಾಗಿ, ಇದರಲ್ಲಿ (ಮಿತಿಯಿಲ್ಲದೆ) ಗಸ್ತು ತಿರುಗುತ್ತಿರುವ ಪೊಲೀಸ್ ಅಧಿಕಾರಿಗಳು ದೇಹ-ಧರಿಸಿರುವ ಅಥವಾ ಡ್ಯಾಶ್-ಮೌಂಟೆಡ್ ಕ್ಯಾಮೆರಾಗಳನ್ನು ಬಳಸಿಕೊಂಡು ಶಂಕಿತರ ಅಥವಾ ಹಿಂದಿನ ಕೈದಿಗಳ ಡೇಟಾಬೇಸ್ನಲ್ಲಿರುವ ವ್ಯಕ್ತಿಗಳನ್ನು ಗುರುತಿಸಲು ಪ್ರಯತ್ನಿಸಲು ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸುತ್ತಾರೆ; ಅಥವಾ
- 9. ಜನರ ಭಾವನಾತ್ಮಕ ಸ್ಥಿತಿಗಳನ್ನು ಅವರ ದೈಹಿಕ, ಶಾರೀರಿಕ ಅಥವಾ ನಡವಳಿಕೆಯ ಗುಣಲಕ್ಷಣಗಳಿಂದ (ಉದಾ., ಮುಖದ ಅಭಿವ್ಯಕ್ತಿಗಳು, ಮುಖದ ಚಲನೆಗಳು ಅಥವಾ ಮಾತಿನ ಮಾದರಿಗಳು) ಊಹಿಸಲು ಪ್ರಯತ್ನಿಸುವುದು, ಇದರಲ್ಲಿ ಕೋಪ, ಅಸಹ್ಯ, ಸಂತೋಷ, ದುಃಖ, ಆಶ್ಚರ್ಯ, ಭಯ ಅಥವಾ ವ್ಯಕ್ತಿಯ ಭಾವನಾತ್ಮಕ ಸ್ಥಿತಿಯನ್ನು ವಿವರಿಸಲು ಸಾಮಾನ್ಯವಾಗಿ ಬಳಸುವ ಇತರ ಪದಗಳು ಸೇರಿವೆ.
ಸಂವಹನ ಸೇವೆಗಳು
- s. ಸಂವಹನ ಸೇವೆಗಳು. Skype, Teams, Outlook ಮತ್ತು GroupMe ಸೇರಿದಂತೆ ಆದರೆ ಅವುಗಳಿಗೆ ಸೀಮಿತವಾಗಿರದೆ ವ್ಯಕ್ತಿಗಳ ನಡುವೆ ಸಂವಹನವನ್ನು ಸಕ್ರಿಯಗೊಳಿಸುವ ಸೇವೆಗಳು, https://aka.ms/useterms ನಲ್ಲಿ ಈ ನಿಯಮಗಳೊಂದಿಗೆ ಇರುವ ಪೂರಕ ಬಳಕೆಯ ನಿಯಮಗಳಿಂದ ನಿಯಂತ್ರಿಸಲ್ಪಡುತ್ತವೆ.
ಇತರೆ
14. ಇತರೆ. ಈ ವಿಭಾಗ, ಮತ್ತು 1, 9 (ಈ ನಿಯಮಗಳು ಅಂತ್ಯವಾಗುವ ಮೊದಲು ಆದ ವೆಚ್ಚದ ಮೊತ್ತಗಳಿಗಾಗಿ), 10, 11, 12, 15, 17 ನೇ ವಿಭಾಗಗಳು, ಮತ್ತು ಈ ನಿಯಮಗಳ ಅಂತ್ಯದ ಬಳಿಕ ಅನ್ವಯವಾಗುವ ನಿಯಮಗಳು ಇರುವ ವಿಭಾಗಗಳಿಗೆ, ಈ ನಿಯಮಗಳ ಯಾವುದೇ ರದ್ದುಗೊಳಿಸುವಿಕೆ ಅಥವಾ ಕೊನೆಗೊಳಿಸುವಿಕೆ ಅನ್ವಯವಾಗುವುದಿಲ್ಲ. ಅನ್ವಯಿತ ಕಾನೂನು ಅನುಮತಿಸಿದ ಪ್ರಮಾಣದವರೆಗೆ, ಪೂರ್ಣವಾಗಿ ಅಥವಾ ಭಾಗಶಃ, ಯಾವುದೇ ಸಮಯದಲ್ಲಿ ನಿಮಗೆ ಸೂಚನೆ ನೀಡದೆ ನಾವು ಈ ನಿಯಮಗಳನ್ನು ಬೇರೆಯವರಿಗೆ ವಹಿಸಬಹುದು, ಈ ನಿಯಮಗಳ ಅಡಿಯಲ್ಲಿ ನಮ್ಮ ಜವಾಬ್ದಾರಿಗಳನ್ನು ಉಪ-ಗುತ್ತಿಗೆ ನೀಡಬಹುದು, ಅಥವಾ ಈ ನಿಯಮಗಳ ಅಡಿಯಲ್ಲಿ ನಮ್ಮ ಹಕ್ಕುಗಳಿಗೆ ಉಪ ಪರವಾನಗಿ ನೀಡಬಹುದು. ಸೇವೆಗಳನ್ನು ಬಳಸಲು ನೀವು ಈ ನಿಯಮಗಳನ್ನು ಬೇರೆಯವರಿಗೆ ವಹಿಸುವಂತಿಲ್ಲ ಅಥವಾ ಯಾವುದೇ ಹಕ್ಕುಗಳನ್ನು ವರ್ಗಾಯಿಸುವಂತಿಲ್ಲ. ಇದು ಸೇವೆಗಳ ನಿಮ್ಮ ಬಳಕೆಗಾಗಿ ನಿಮ್ಮ ಹಾಗೂ Microsoft ನಡುವಿನ ಪೂರ್ಣ ಒಪ್ಪಂದವಾಗಿರುತ್ತದೆ. ಇದು ಸೇವೆಗಳ ನಿಮ್ಮ ಬಳಕೆಗೆ ಸಂಬಂಧಿಸಿದಂತೆ ನಿಮ್ಮ ಮತ್ತು Microsoft ನಡುವೆ ಹಿಂದೆ ನಡೆದ ಯಾವುದೇ ಒಪ್ಪಂದಗಳನ್ನು ರದ್ದು ಮಾಡುತ್ತದೆ. ಈ ನಿಯಮಗಳಿಗೆ ಒಪ್ಪುವಾಗ, ನೀವು ಈ ನಿಯಮಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿರುವುದನ್ನು ಹೊರತುಪಡಿಸಿ, ಬೇರೆ ಯಾವುದೇ ಹೇಳಿಕೆ, ಪ್ರಾತಿನಿಧ್ಯ, ವಾರಂಟಿ, ಅರ್ಥೈಸಿಕೊಳ್ಳುವಿಕೆ, ಲಿಖಿತ ವಾಗ್ದಾನ, ಭಾಷೆ ಅಥವಾ ಭರವಸೆಯನ್ನು ನೀವು ಅವಲಂಬಿಸಿಲ್ಲ. ಈ ನಿಯಮಗಳ ಎಲ್ಲ ಭಾಗಗಳು ಸಂಬಂಧಿತ ಕಾನೂನಿನಲ್ಲಿ ಅನುಮತಿಸಲಾದ ಗರಿಷ್ಠ ಪ್ರಮಾಣಕ್ಕೆ ಅನ್ವಯವಾಗುತ್ತವೆ. ಈ ನಿಯಮಗಳ ಒಂದು ಭಾಗವನ್ನು ನಾವು ಲಿಖಿತವಾಗಿ ಅನುಷ್ಠಾನಗೊಳಿಸುವುದು ಅಸಾಧ್ಯ ಎಂದು ನ್ಯಾಯಾಲಯ ಅಥವಾ ಮಧ್ಯಸ್ಥಿಕೆದಾರರು ತೀರ್ಮಾನಿಸಿದರೆ, ಸಂಬಂಧಿತ ಕಾನೂನಿನಡಿಯಲ್ಲಿ ಅನುಷ್ಠಾನಯೋಗ್ಯವಾಗುವ ಮಟ್ಟಿಗೆ ನಾವು ಅದೇ ರೀತಿಯ ನಿಯಮಗಳುಳ್ಳ ನಿಯಮಗಳ ಮೂಲಕ ಅವುಗಳನ್ನು ಬದಲಾಯಿಸಬಹುದಾಗಿದೆ, ಆದರೆ ಈ ನಿಯಮಗಳ ಉಳಿದ ಭಾಗಗಳು ಬದಲಾವಣೆಯಾಗುವುದಿಲ್ಲ. ಈ ನಿಯಮಗಳು ಕೇವಲ ನಿಮ್ಮ ಮತ್ತು ನಮ್ಮ ಲಾಭಕ್ಕಾಗಿ ಮಾತ್ರ. ಈ ನಿಯಮಗಳು, Microsoft ನ ಉತ್ತರಾಧಿಕಾರಿಗಳು ಮತ್ತು ವಹಿಸಿದವರಿಗೆ ಹೊರತು, ಬೇರೆ ಯಾವುದೇ ವ್ಯಕ್ತಿಯ ಲಾಭಕ್ಕಾಗಿ ಅಲ್ಲ. ವಿಭಾಗದ ಶೀರ್ಷಿಕೆಗಳು ಉಲ್ಲೇಖಕ್ಕಾಗಿ ಮಾತ್ರ ಮತ್ತು ಅವು ಕಾನೂನುರೀತ್ಯಾ ಪ್ರಭಾವ ಹೊಂದಿಲ್ಲ.
15. ಕ್ಲೇಮುಗಳನ್ನು ಒಂದು ವರ್ಷದೊಳಗೆ ಫೈಲ್ ಮಾಡಬೇಕು. ಈ ನಿಯಮಗಳು ಅಥವಾ ಸೇವೆಗಳಿಗೆ ಸಂಬಂಧಿಸಿದ ಯಾವುದೇ ಕ್ಲೈಮ್ಗಳು (ಅಥವಾ 10.d ವಿಭಾಗವು ಅನ್ವಯಿಸಿದರೆ ಮಧ್ಯಸ್ಥಿಕೆ) ನ್ಯಾಯಾಲಯದಲ್ಲಿ, ಕ್ಲೈಮ್ಗಳನ್ನು ಫೈಲ್ ಮಾಡಲು ನಿಮ್ಮ ಸ್ಥಳೀಯ ಕಾನೂನಿನ ಅನುಸಾರ ಹೆಚ್ಚು ಸಮಯದ ಅಗತ್ಯವಿರುವ ಹೊರತಾಗಿ, ನೀವು ಮೊದಲು ಕ್ಲೈಮ್ ಫೈಲ್ ಮಾಡಬಹುದಾದ ದಿನಾಂಕದಿಂದ ಒಂದು ವರ್ಷದೊಳಗೆ ಫೈಲ್ ಮಾಡಬೇಕು. ಆ ಸಮಯದೊಳಗೆ ಫೈಲ್ ಮಾಡದಿದ್ದರೆ, ಆಗ ಅದನ್ನು ಶಾಶ್ವತವಾಗಿ ನಿರ್ಬಂಧಿಸಲಾಗುತ್ತದೆ.
16. ರಫ್ತು ಕಾನೂನುಗಳು. ನೀವು, ಗಮ್ಯಸ್ಥಾನಗಳು, ಅಂತಿಮ ಬಳಕೆದಾರರು, ಮತ್ತು ಅಂತಿಮ ಬಳಕೆಯ ಮೇಲಿನ ನಿರ್ಬಂಧಗಳೂ ಸೇರಿದಂತೆ, ಸಾಫ್ಟ್ವೇರ್ ಮತ್ತು/ಅಥವಾ ಸೇವೆಗಳಿಗೆ ಅನ್ವಯವಾಗುವ ಎಲ್ಲ ದೇಶೀಯ ಮತ್ತು ಅಂತಾರಾಷ್ಟ್ರೀಯ ರಫ್ತು ಕಾನೂನುಗಳು ಹಾಗೂ ನಿಬಂಧನೆಗಳಿಗೆ ಬದ್ಧರಾಗಿರಬೇಕು. ಭೌಗೋಳಿಕ ಮತ್ತು ರಫ್ತು ನಿರ್ಬಂಧಗಳ ಕುರಿತ ಹೆಚ್ಚಿನ ಮಾಹಿತಿಗಾಗಿ, https://www.microsoft.com/exporting ಗೆ ಭೇಟಿ ನೀಡಿ.
17. ಹಕ್ಕುಗಳು ಮತ್ತು ಪ್ರತಿಕ್ರಿಯೆಯ ಮೀಸಲಾತಿ. ಈ ನಿಯಮಗಳ ಅಡಿಯಲ್ಲಿ ಸ್ಪಷ್ಟವಾಗಿ ಒದಗಿಸಿರುವ ಸಂದರ್ಭವನ್ನು ಹೊರತುಪಡಿಸಿ, ಯಾವುದೇ ಹೆಸರು, ಟ್ರೇಡ್ ಡ್ರೆಸ್, ಲೋಗೋ ಅಥವಾ ಅದಕ್ಕೆ ಸಮಾನವಾದವುಗಳೂ ಸೇರಿದಂತೆ ಆದರೆ ಅಷ್ಟಕ್ಕೇ ಸೀಮಿತವಾಗಿರದೆ, Microsoft ನಿಮಗೆ ಪರವಾನಗಿ ಅಥವಾ ಯಾವುದೇ ಪೇಟೆಂಟ್ಗಳ ಅಡಿಯಲ್ಲಿ ಯಾವುದೇ ಪ್ರಕಾರದ ಯಾವುದೇ ಇತರ ಹಕ್ಕುಗಳನ್ನು, ಕೌಶಲಗಳು, ಕೃತಿಸ್ವಾಮ್ಯಗಳು, ವ್ಯಾಪಾರದ ರಹಸ್ಯಗಳು, ಟ್ರೇಡ್ಮಾರ್ಕ್ಗಳು ಅಥವಾ Microsoft ಅಥವಾ ಯಾವುದೇ ಸಂಬಂಧಿತ ಘಟಕದ ಮೂಲಕ ನಿಯಂತ್ರಿತ ಅಥವಾ ಸ್ವಾಮ್ಯದಲ್ಲಿರುವ ಇತರ ಬೌದ್ಧಿಕ ಸ್ವತ್ತುನ್ನು ನೀಡುವುದಿಲ್ಲ. ಹೊಸ ಉತ್ಪನ್ನಗಳು, ತಂತ್ರಜ್ಞಾನಗಳು, ಪ್ರಚಾರಗಳು, ಉತ್ಪನ್ನದ ಹೆಸರುಗಳು, ಉತ್ಪನ್ನದ ಪ್ರತಿಕ್ರಿಯೆ ಮತ್ತು ಉತ್ಪನ್ನದ ಸುಧಾರಣೆಗಳಿಗಾಗಿ ಅಭಿಪ್ರಾಯಗಳೂ ಸೇರಿದಂತೆ ಆದರೆ ಅಷ್ಟಕ್ಕೇ ಸೀಮಿತವಾಗಿರದೆ, ನೀವು Microsoft ಗೆ ಯಾವುದೇ ಅಭಿಪ್ರಾಯ, ಪ್ರಸ್ತಾಪ, ಸಲಹೆ ಅಥವಾ ಪ್ರತಿಕ್ರಿಯೆಯನ್ನು (""ಪ್ರತಿಕ್ರಿಯೆ"") ನೀಡಿದರೆ, ಯಾವುದೇ ಶುಲ್ಕವಿಲ್ಲದೆ, ರಾಯಧನಗಳಿಲ್ಲದೆ ಅಥವಾ ನಿಮಗೆ ಇತರ ಬಾಧ್ಯತೆಗಳಿಲ್ಲದೆ, ನಿಮ್ಮ ಪ್ರತಿಕ್ರಿಯೆಯನ್ನು ಯಾವುದೇ ರೀತಿಯಲ್ಲಿ ಮತ್ತು ಯಾವುದೇ ಉದ್ದೇಶಕ್ಕಾಗಿ ತಯಾರಿಸುವ, ಅದನ್ನು ತಯಾರಿಸಿರುವ, ವ್ಯುತ್ಪನ್ನ ಕೆಲಸಗಳನ್ನು ರಚಿಸುವ, ಅದನ್ನು ಬಳಸುವ, ಹಂಚುವ ಮತ್ತು ವಾಣಿಜ್ಯೀಕರಿಸುವ ಹಕ್ಕನ್ನು ನೀವು Microsoft ಗೆ ನೀಡುತ್ತೀರಿ. Microsoft ತನ್ನ ಸಾಫ್ಟ್ವೇರ್, ತಂತ್ರಜ್ಞಾನಗಳು ಅಥವಾ ದಾಖಲೀಕರಣವನ್ನು ಮೂರನೇ ಪಕ್ಷದವರಿಗೆ ಪರವಾನಗಿ ನೀಡುವ ಅಗತ್ಯವನ್ನು ಹೊಂದಿರುವ ಪರವಾನಗಿಗೆ ಒಳಪಟ್ಟಿರುವ ಪ್ರತಿಕ್ರಿಯೆಯನ್ನು ನೀವು ನೀಡುವುದಿಲ್ಲ ಏಕೆಂದರೆ ಅದರಲ್ಲಿ Microsoft ನಿಮ್ಮ ಪ್ರತಿಕ್ರಿಯೆಯನ್ನು ಸೇರ್ಪಡಿಸುತ್ತದೆ.
ಸೂಚನೆಗಳು
ಬೌದ್ಧಿಕ ಆಸ್ತಿಯ ಉಲ್ಲಂಘನೆಗಾಗಿ ಕ್ಲೇಮುಗಳನ್ನು ಮಾಡುವ ಸೂಚನೆಗಳು ಮತ್ತು ಪ್ರಕ್ರಿಯೆಗಳು. Microsoft ಮೂರನೇ ಪಕ್ಷಗಳ ಬೌದ್ಧಿಕ ಆಸ್ತಿಯ ಹಕ್ಕುಗಳನ್ನು ಗೌರವಿಸುತ್ತದೆ. ಕೃತಿಸ್ವಾಮ್ಯ ಉಲ್ಲಂಘನೆಯ ಕ್ಲೇಮ್ಗಳನ್ನೂ ಒಳಗೊಂಡು, ಬೌದ್ಧಿಕ ಸ್ವತ್ತು ಉಲ್ಲಂಘನೆಯ ಸೂಚನೆಯನ್ನು ನೀವು ಕಳುಹಿಸಬಯಸಿದಲ್ಲಿ, ಉಲ್ಲಂಘನೆಯ ಸೂಚನೆಗಳನ್ನು (https://www.microsoft.com/en-us/legal/intellectualproperty/infringement) ಸಲ್ಲಿಸಲು ದಯವಿಟ್ಟು ನಮ್ಮ ಕಾರ್ಯವಿಧಾನಗಳನ್ನು ಬಳಸಿ, ಈ ಕಾರ್ಯವಿಧಾನಗಳು ಈ ಷರತ್ತುಗಳ ಭಾಗವನ್ನು ರೂಪಿಸುತ್ತವೆ. ಈ ಕಾರ್ಯವಿಧಾನಕ್ಕೆ ಸಂಬಂಧಪಟ್ಟ ವಿಚಾರಣೆಗಳಿಗೆ ಮಾತ್ರ ಪ್ರತಿಕ್ರಿಯೆ ಸಿಗುತ್ತದೆ.
ಕೃತಿಸ್ವಾಮ್ಯ ಉಲ್ಲಂಘನೆಯ ಸೂಚನೆಗಳಿಗೆ ಸ್ಪಂದಿಸಲು ಶೀರ್ಷಿಕೆ 17, ಯುನೈಟೆಡ್ ಸ್ಟೇಟ್ಸ್ ಸಂಹಿತೆ, ವಿಭಾಗ 512, ಹಾಗೂ, ಅನ್ವಯವಾಗುವಲ್ಲಿ, EU 2022/2065 ರ ಅಧ್ಯಾಯ III ರಲ್ಲಿ ನಿಗದಿಪಡಿಸಿರುವ ಪ್ರಕ್ರಿಯೆಗಳನ್ನು Microsoft ಬಳಸುತ್ತದೆ. ಅಲ್ಲದೆ ಸೂಕ್ತ ಪರಿಸ್ಥಿತಿಗಳಲ್ಲಿ, ಪುನರಾವರ್ತಿತವಾಗಿ ಉಲ್ಲಂಘನೆ ಮಾಡುವ Microsoft ಸೇವೆಗಳ ಬಳಕೆದಾರರ ಖಾತೆಗಳನ್ನು Microsoft ನಿಷ್ಕ್ರಿಯಗೊಳಿಸಬಹುದು ಅಥವಾ ಕೊನೆಗೊಳಿಸಬಹುದು. ಇನ್ನೂ ಮುಂದಕ್ಕೆ, ಸಮರ್ಪಕ ಸನ್ನಿವೇಶಗಳಲ್ಲಿ, ಆಧಾರರಹಿತ ಸೂಚನೆಗಳನ್ನು ಆಗಾಗ್ಗೆ ಸಲ್ಲಿಸುವ ವ್ಯಕ್ತಿಗಳು ಅಥವಾ ಅಸ್ತಿತ್ವಗಳು ಕಳುಹಿಸುವ ಸೂಚನೆಗಳನ್ನು ಸಂಸ್ಕರಿಸುವುದನ್ನು Microsoft ಅಮಾನತ್ತುಗೊಳಿಸಬಹುದು. ಈ ಕಾರ್ಯವಿಧಾನಗಳ ಭಾಗವಾಗಿ Microsoft ಇವರಿಂದ ಕೈಗೊಳ್ಳಲಾದ ನಿರ್ಧಾರಕ್ಕೆ ಸಂಭಾವ್ಯ ಪರಿಹಾರೋಪಾಯವನ್ನೂ ಒಳಗೊಂಡು, ನಿರ್ದಿಷ್ಟ ಸೇವೆಯೊಂದಕ್ಕೆ ಅನ್ವಯವಾಗುವ ಕಾರ್ಯವಿಧಾನಗಳ ಇನ್ನಷ್ಟು ವಿವರಣೆಯನ್ನು ಉಲ್ಲಂಘನೆಯ ಸೂಚನೆಗಳು (https://www.microsoft.com/legal/intellectualproperty/infringement) ಇಲ್ಲಿ ಕಾಣಬಹುದು.
ಜಾಹೀರಾತಿನಲ್ಲಿ ಬೌದ್ಧಿಕ ಆಸ್ತಿಗೆ ಸಂಬಂಧಿಸಿದ ಹಿತಾಸಕ್ತಿಗಳ ಕುರಿತು ಸೂಚನೆಗಳು ಮತ್ತು ಪ್ರಕ್ರಿಯೆಗಳು. ನಮ್ಮ ಜಾಹೀರಾತು ನೆಟ್ವರ್ಕ್ನಲ್ಲಿ ಬೌದ್ಧಿಕ ಆಸ್ತಿಯ ಹಿತಾಸಕ್ತಿ ಕುರಿತು ನಮ್ಮ ಬೌದ್ಧಿಕ ಆಸ್ತಿಯ ಮಾರ್ಗದರ್ಶಿ (https://go.microsoft.com/fwlink/?LinkId=243207) ಸೂತ್ರಗಳನ್ನು ದಯವಿಟ್ಟು ಪರಿಶೀಲಿಸಿ.
ಕೃತಿಸ್ವಾಮ್ಯ ಮತ್ತು ಟ್ರೇಡ್ಮಾರ್ಕ್ ಸೂಚನೆಗಳು. ಸೇವೆಗಳ ಕೃತಿಸ್ವಾಮ್ಯ © Microsoft Corporation ಮತ್ತು/ಅಥವಾ ಅದರ ವಿತರಕರು, One Microsoft Way, Redmond, WA 98052, U.S.A. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. Microsoft ಟ್ರೇಡ್ಮಾರ್ಕ್ ಮತ್ತು ಬ್ರಾಂಡ್ ಮಾರ್ಗಸೂಚಿಗಳನ್ನು (https://www.microsoft.com/en-us/legal/intellectualproperty/trademarks) ಸಂಯೋಜಿಸುವ ನಿಯಮಗಳು (ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ). Microsoft ಮತ್ತು ಎಲ್ಲಾ Microsoft ಉತ್ಪನ್ನಗಳು, ಸಾಫ್ಟ್ವೇರ್ ಮತ್ತು ಸೇವೆಗಳ ಹೆಸರುಗಳು, ಲೋಗೋಗಳು ಮತ್ತು ಐಕಾನ್ಗಳು, ಯುನೈಟೆಡ್ ಸ್ಟೇಟ್ಸ್ ಮತ್ತು/ಅಥವಾ ಇತರ ನ್ಯಾಯಾಂಗ ವ್ಯಾಪ್ತಿಗಳಲ್ಲಿ Microsoft ಕಂಪನಿಗಳ ಗುಂಪಿನ ನೋಂದಾಯಿಸದ ಅಥವಾ ನೋಂದಾಯಿತ ಟ್ರೇಡ್ಮಾರ್ಕ್ಗಳಾಗಿರಬಹುದು. ಕೆಳಗಿನವು https://cdn-dynmedia-1.microsoft.com/is/content/microsoftcorp/microsoft/mscle/documents/presentations/TrademarksListFY25Q3.pdf ನಲ್ಲಿ Microsoft ನ ಟ್ರೇಡ್ಮಾರ್ಕ್ಗಳ ಸಮಗ್ರವಲ್ಲದ ಪಟ್ಟಿಯಾಗಿವೆ. ವಾಸ್ತವಿಕ ಕಂಪನಿಗಳು ಮತ್ತು ಉತ್ಪನ್ನಗಳ ಹೆಸರುಗಳು ಅನುಕ್ರಮವಾಗಿ ಅವುಗಳ ಮಾಲೀಕರ ಟ್ರೇಡ್ಮಾರ್ಕ್ಗಳಾಗಿರಬಹುದು. ಈ ನಿಯಮಗಳಲ್ಲಿ ಸ್ಪಷ್ಟವಾಗಿ ಒದಗಿಸಲಾಗದ ಯಾವುದೇ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಕೆಲವು Microsoft ವೆಬ್ಸೈಟ್ ಸರ್ವರ್ಗಳಲ್ಲಿ ಬಳಸಿದ ಕೆಲವು ಸಾಫ್ಟ್ವೇರ್ Independent JPEG Group ನ ಕೆಲಸದ ಭಾಗದ ಆಧಾರದಲ್ಲಿದೆ. ಕೃತಿಸ್ವಾಮ್ಯ © 1991-1996 ಥಾಮಸ್ ಜಿ. ಲೇನ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಕೆಲವು Microsoft ವೆಬ್ಸೈಟ್ ಸರ್ವರ್ಗಳಲ್ಲಿ ಬಳಸಲಾಗುವ "gnuplot" ಸಾಫ್ಟ್ವೇರ್ ಕೃತಿಸ್ವಾಮ್ಯ © 1986 1993 ಥಾಮಸ್ ವಿಲಿಯಮ್ಸ್, ಕಾಲಿನ್ ಕೆಲಿ. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ವೈದ್ಯಕೀಯ ಸೂಚನೆ. ವೈದ್ಯಕೀಯ ಅಥವಾ ಯಾವುದೇ ಬೇರೆ ಆರೋಗ್ಯ ಆರೈಕೆಯ ಸಲಹೆ, ತಪಾಸಣೆ ಅಥವಾ ಚಿಕಿತ್ಸೆಯನ್ನು Microsoft ಒದಗಿಸುವುದಿಲ್ಲ. ವೈದ್ಯಕೀಯ ಪರಿಸ್ಥಿತಿ, ಆಹಾರ ಪಥ್ಯ, ಫಿಟ್ನೆಸ್ ಅಥವಾ ಸ್ವಾಸ್ಥ್ಯ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಿಮ್ಮಲ್ಲಿರಬಹುದಾದ ಯಾವುದೇ ಪ್ರಶ್ನೆಗಳಿಗಾಗಿ ಯಾವಾಗಲೂ ನಿಮ್ಮ ವೈದ್ಯರು ಅಥವಾ ಬೇರೆ ಅರ್ಹ ಆರೋಗ್ಯ ಆರೈಕೆ ಸೇವೆ ಪೂರೈಕೆದಾರರ ಸಲಹೆ ಪಡೆಯಿರಿ. ಸೇವೆಗಳ ಮೂಲಕ ಅಥವಾ ಅದರಲ್ಲಿ ನೀವು ಪ್ರವೇಶಿಸಿದ ಮಾಹಿತಿಯ ಕಾರಣಕ್ಕೆ ವೃತ್ತಿಪರ ವೈದ್ಯಕೀಯ ಸಲಹೆಯನ್ನು ಎಂದಿಗೂ ಕಡೆಗಣಿಸಬೇಡಿ ಅಥವಾ ಅದನ್ನು ಪಡೆಯಲು ವಿಳಂಬಿಸಬೇಡಿ.
ಸ್ಟಾಕ್ ದರಗಳು ಮತ್ತು ಸೂಚ್ಯಂಕ ಡೇಟಾ (ಸೂಚ್ಯಂಕ ಮೌಲ್ಯಗಳು ಸೇರಿದಂತೆ). ಸೇವೆಗಳ ಮೂಲಕ ಒದಗಿಸಲಾದ ಹಣಕಾಸಿನ ಮಾಹಿತಿಯು ನಿಮ್ಮ ವೈಯಕ್ತಿಕ, ವಾಣಿಜ್ಯೇತರ ಬಳಕೆಗಾಗಿ ಮಾತ್ರವಾಗಿರುತ್ತದೆ. ಮೂರನೇ ವ್ಯಕ್ತಿಯ ಪರವಾನಗಿದಾರರಿಂದ ಪ್ರತ್ಯೇಕ ಲಿಖಿತ ಒಪ್ಪಂದವಿಲ್ಲದೆ, ಯಾವುದೇ ಹಣಕಾಸು ಉಪಕರಣಗಳು ಅಥವಾ ಹೂಡಿಕೆ ಉತ್ಪನ್ನಗಳ (ಉದಾ. ಉಪಕರಣ ಅಥವಾ ಹೂಡಿಕೆ ಉತ್ಪನ್ನದ ಬೆಲೆ, ಪ್ರತಿಫಲ ಮತ್ತು/ಅಥವಾ ಕಾರ್ಯನಿರ್ವಹಣೆಯು ಯಾವುದೇ ಹಣಕಾಸು ಡೇಟಾದ ಆಧಾರದಲ್ಲಿರುವ, ಅದಕ್ಕೆ ಸಂಬಂಧಿಸಿದ ಅಥವಾ ಅದನ್ನು ಟ್ರ್ಯಾಕ್ ಮಾಡುವ ಉದ್ದೇಶ ಹೊಂದಿರುವ ಸೂಚ್ಯಂಕಗಳು ವ್ಯುತ್ಪನ್ನಗಳು, ಸಂರಚಿತ ಉತ್ಪನ್ನಗಳು, ಹೂಡಿಕೆ ನಿಧಿಗಳು, ವಿನಿಮಯ-ವ್ಯವಹಾರದ ನಿಧಿಗಳು, ಹೂಡಿಕೆ ಪೋರ್ಟ್ಫೋಲಿಯೋಗಳು, ಇತ್ಯಾದಿ) ವಿತರಣೆ, ರಚನೆ, ಪ್ರಾಯೋಜಕತ್ವ, ಟ್ರೇಡಿಂಗ್, ಮಾರ್ಕೆಟಿಂಗ್, ಅಥವಾ ಪ್ರಚಾರಕ್ಕೆ ಸಂಬಂಧಿಸಿದಂತೆ ನೀವು ಯಾವುದೇ ಹಣಕಾಸು ಡೇಟಾ ಅಥವಾ ಮೂರನೇ ವ್ಯಕ್ತಿಯ ಪರವಾನಗಿದಾರರ ಗುರುತುಗಳನ್ನು ಬಳಸುವಂತಿಲ್ಲ.
ಹಣಕಾಸು ಸೂಚನೆ. Microsoft ಬ್ರೋಕರ್/ಡೀಲರ್ ಅಥವಾ ಯುನೈಟೆಡ್ ಸ್ಟೇಟ್ಸ್ ಫೆಡರಲ್ ಸೆಕ್ಯುರಿಟೀಸ್ ಕಾಯಿದೆ ಅಥವಾ ಬೇರೆ ನ್ಯಾಯಾಂಗ ವ್ಯಾಪ್ತಿಯ ಸೆಕ್ಯುರಿಟೀಸ್ ಕಾನೂನುಗಳಡಿ ನೋಂದಾಯಿತ ಹೂಡಿಕೆ ಸಲಹೆಗಾರ ಅಲ್ಲ ಮತ್ತು ಸೆಕ್ಯುರಿಟಿಗಳು ಅಥವಾ ಬೇರೆ ಹಣಕಾಸು ಉತ್ಪನ್ನಗಳು ಅಥವಾ ಸೇವೆಗಳಲ್ಲಿ ಹೂಡಿಕೆ ಮಾಡುವ, ಖರೀದಿಸುವ, ಅಥವಾ ಮಾರಾಟ ಮಾಡುವ ಕುರಿತ ಸಲಹೆಗೆ ಸಂಬಂಧಿಸಿದಂತೆ ವ್ಯಕ್ತಿಗಳಿಗೆ ಸಲಹೆ ನೀಡುವುದಿಲ್ಲ. ಸೇವೆಗಳಲ್ಲಿರುವ ಯಾವುದು ಕೂಡ ಯಾವುದೇ ಸೆಕ್ಯುರಿಟಿಯ ಖರೀದಿ ಅಥವಾ ಮಾರಾಟಕ್ಕೆ ಕೊಡುಗೆಯಲ್ಲ ಅಥವಾ ಕೋರಿಕೆಯಲ್ಲ. Microsoft ಆಗಲೀ ಅಥವಾ ಸ್ಟಾಕ್ ದರಗಳು ಅಥವಾ ಸೂಚ್ಯಂಕ ಡೇಟಾದ ಅದರ ಪರವಾನಗಿದಾರರಾಗಲಿ, ಯಾವುದೇ ನಿರ್ದಿಷ್ಟ ಹಣಕಾಸು ಉತ್ಪನ್ನಗಳು ಅಥವಾ ಸೇವೆಗಳನ್ನು ಅನುಮೋದಿಸುವುದಿಲ್ಲ ಅಥವಾ ಶಿಫಾರಸು ಮಾಡುವುದಿಲ್ಲ. ಹೂಡಿಕೆ ಅಥವಾ ತೆರಿಗೆ ಸಲಹೆಯೂ ಸೇರಿದಂತೆ, ಆದರೆ ಅದಕ್ಕೆ ಸೀಮಿತವಾಗದೆ, ಸೇವೆಗಳಲ್ಲಿರುವ ಯಾವುದು ಕೂಡ ವೃತ್ತಿಪರ ಸಲಹೆಯಾಗುವ ಉದ್ದೇಶವನ್ನು ಹೊಂದಿಲ್ಲ.
H.264/AVC ಮತ್ತು VC-1 ವೀಡಿಯೊ ಸ್ಟ್ಯಾಂಡರ್ಡ್ಗಳ ಕುರಿತು ಸೂಚನೆ. MPEG LA, L.L.C. ಯಿಂದ ಪರವಾನಗಿ ನೀಡಲಾಗಿರುವ H.264/AVC ಮತ್ತು/ಅಥವಾ VC-1 ಕೊಡೆಕ್ ತಂತ್ರಜ್ಞಾನವನ್ನು ಸಾಫ್ಟ್ವೇರ್ ಒಳಗೊಂಡಿರಬಹುದು. ಈ ತಂತ್ರಜ್ಞಾನವು ವೀಡಿಯೊ ಮಾಹಿತಿಯ ಡೇಟಾ ಕುಗ್ಗಿಸುವಿಕೆಯ ಫಾರ್ಮ್ಯಾಟ್ ಆಗಿದೆ. MPEG LA, L.L.C. ಗೆ ಈ ಸೂಚನೆಯ ಅಗತ್ಯವಿದೆ:
H.264/AVC ಮತ್ತು ಗ್ರಾಹಕರ ವೈಯಕ್ತಿಕ ಮತ್ತು ವಾಣಿಜ್ಯೇತರ ಬಳಕೆಗಾಗಿ ಇರುವ VC-1 ಪೇಟೆಂಟ್ ಪೋರ್ಟ್ಫೋಲಿಯೋ ಪರವಾನಗಿಗಳ ಅಡಿಯಲ್ಲಿ, (A) ಸ್ಟ್ಯಾಂಡರ್ಡ್ಗಳಿಗೆ ("ವೀಡಿಯೊ ಸ್ಟ್ಯಾಂಡರ್ಡ್ಗಳು") ಅನುಗುಣವಾಗಿ ವೀಡಿಯೊವನ್ನು ಎನ್ಕೋಡ್ ಮಾಡಲು ಮತ್ತು/ಅಥವಾ (B) ವೈಯಕ್ತಿಕ ಮತ್ತು ವಾಣಿಜ್ಯೇತರ ಚಟುವಟಿಕೆಗಾಗಿ ತೊಡಗಿಕೊಂಡಿರುವ ಮತ್ತು/ಅಥವಾ ಇಂತಹಾ ವೀಡಿಯೊ ಒದಗಿಸಲು ಪರವಾನಗಿಯುಳ್ಳ ವೀಡಿಯೊ ಪೂರೈಕೆದಾರರಿಂದ ಗಳಿಸಿಕೊಂಡ ಗ್ರಾಹಕರು ಎನ್ಕೋಡ್ ಮಾಡಿರುವ H.264/AVC, MPEG-4 ವಿಷುವಲ್, ಮತ್ತು VC-1 ವೀಡಿಯೊವನ್ನು ಡೀಕೋಡ್ ಮಾಡಲು ಉತ್ಪನ್ನಕ್ಕೆ ಪರವಾನಗಿ ನೀಡಲಾಗಿದೆ. ಬೇರೆ ಯಾವುದೇ ಬಳಕೆಗೆ ಯಾವುದೇ ಪರವಾನಗಿಯನ್ನು ನೀಡಲಾಗಿಲ್ಲ ಅಥವಾ ಅನ್ವಯಿಸಲಾಗದು. MPEG LA, L.L.C. ನಿಂದ ಹೆಚ್ಚುವರಿ ಮಾಹಿತಿಯನ್ನು ಪಡೆದುಕೊಳ್ಳಬಹುದು. MPEG LA ವೆಬ್ಸೈಟ್ (https://www.mpegla.com) ಅನ್ನು ನೋಡಿ.
ಕೇವಲ ಸ್ಪಷ್ಟೀಕರಣ ಉದ್ದೇಶಗಳಿಗಾಗಿ, ಈ ಸೂಚನೆಯು (i) ಮೂರನೇ ಪಕ್ಷಗಳಿಗೆ ಸಾಫ್ಟ್ವೇರ್ನ ಮರುವಿತರಣೆಯನ್ನು, ಅಥವಾ (ii) ಮೂರನೇ ಪಕ್ಷಗಳಿಗೆ ವಿತರಿಸಲು ವೀಡಿಯೊ ಸ್ಟ್ಯಾಂಡರ್ಡ್ಗಳಿಗೆ ಬದ್ಧವಾಗಿರುವ ತಂತ್ರಜ್ಞಾನಗಳೊಂದಿಗೆ ಸಾಮಗ್ರಿಯನ್ನು ರಚಿಸುವುದನ್ನು ಒಳಗೊಂಡಿಲ್ಲದ, ಸಾಮಾನ್ಯ ವ್ಯಾವಹಾರಿಕ ಬಳಕೆಗಳಿಗೆ, ಆಯಾ ವ್ಯವಹಾರಕ್ಕೆ ವೈಯಕ್ತಿಕವಾದ ಈ ನಿಯಮಗಳ ಅಡಿಯಲ್ಲಿ ಒದಗಿಸಲಾದ ಸಾಫ್ಟ್ವೇರ್ನ ಬಳಕೆಯನ್ನು ಮಿತಿಗೊಳಿಸುವುದಿಲ್ಲ ಅಥವಾ ಪ್ರತಿಬಂಧಿಸುವುದಿಲ್ಲ.
H.265/HEVC ವೀಡಿಯೊ ಸ್ಟ್ಯಾಂಡರ್ಡ್ ಕುರಿತು ಸೂಚನೆ. ಈ ಸಾಫ್ಟ್ವೇರ್ H.265/HEVC ಕೋಡಿಂಗ್ ತಂತ್ರಜ್ಞಾನವನ್ನು ಒಳಗೊಂಡಿರಬಹುದು. ಪ್ರವೇಶ ಮುಂಗಡ LLC ಗೆ ಈ ಸೂಚನೆಯ ಅಗತ್ಯವಿದೆ:
ಒಳಗೊಂಡಲ್ಲಿ, ಈ ಸಾಫ್ಟ್ವೇರ್ನಲ್ಲಿರುವ H.265/HEVC ತಂತ್ರಜ್ಞಾನವು ಈ ಮುಂದಿನದರಲ್ಲಿ ಪಟ್ಟಿ ಮಾಡಿರುವ HEVC ಪೇಟೆಂಟ್ಗಳ ಒಂದು ಅಥವಾ ಹೆಚ್ಚು ದಾವೆಗಳಿಂದ ರಕ್ಷಿಸಲ್ಪಟ್ಟಿರುತ್ತದೆ: PATENTLIST.ACCESSADVANCE.COM. ಈ ಸಾಫ್ಟ್ವೇರ್ ಅನ್ನು ನೀವು ಹೇಗೆ ಪಡೆದುಕೊಂಡಿರಿ ಎಂಬುದರ ಮೇಲೆ ಅವಲಂಬಿತವಾಗಿ, ಈ ಉತ್ಪನ್ನವು HEVC ಸುಧಾರಿತ ಪೇಟೆಂಟ್ ಪೊರ್ಟ್ಫೋಲಿಯೋ ಅಡಿಯಲ್ಲಿ ಪರವಾನಗಿ ಪಡೆಯಬಹುದು.
ಈ ಸಾಫ್ಟ್ವೇರ್ ಅನ್ನು Microsoft ಸಾಧನದಲ್ಲಿ ಸ್ಥಾಪಿಸಿದ್ದರೆ, ಹೆಚ್ಚುವರಿ ಪರವಾನಗಿ ಮಾಹಿತಿಯನ್ನು ಇಲ್ಲಿ ಕಾಣಬಹುದು: aka.ms/HEVCVirtualPatentMarking.
ಪ್ರಮಾಣಿತ ಅಪ್ಲಿಕೇಶನ್ ಪರವಾನಗಿ ನಿಯಮಗಳು
ಸ್ಟ್ಯಾಂಡರ್ಡ್ ಅಪ್ಲಿಕೇಶನ್ ಪರವಾನಗಿ ನಿಯಮಗಳು
MICROSOFT STORE, WINDOWS ನಲ್ಲಿ MICROSOFT STORE, ಮತ್ತು XBOX ನಲ್ಲಿ MICROSOFT STORE
ಪರವಾನಗಿ ನಿಯಮಗಳು ನಿಮ್ಮ ಮತ್ತು ಅಪ್ಲಿಕೇಶನ್ ಪ್ರಕಾಶಕರ ನಡುವಿನ ಒಪ್ಪಂದವಾಗಿರುತ್ತದೆ. ದಯವಿಟ್ಟು ಅವುಗಳನ್ನು ಓದಿ. Microsoft Store, Windows ನಲ್ಲಿ Microsoft Store ಅಥವಾ Xbox ನಲ್ಲಿ Microsoft Store ನಿಂದ (ಇವುಗಳಲ್ಲಿ ಪ್ರತಿಯೊಂದನ್ನೂ ಈ ಪರವಾನಗಿ ನಿಯಮಗಳಲ್ಲಿ "ಸ್ಟೋರ್" ಎಂದೇ ಉಲ್ಲೇಖಿಸಲಾಗಿದೆ), ಅಪ್ಲಿಕೇಶನ್ಗಾಗಿನ ಯಾವುದೇ ಪರಿಷ್ಕರಣೆಗಳು ಅಥವಾ ಪೂರಕಗಳನ್ನೂ ಒಳಗೊಂಡಂತೆ, ನೀವು ಡೌನ್ಲೋಡ್ ಮಾಡುವ ಸಾಫ್ಟ್ವೇರ್ ಅಪ್ಲಿಕೇಶನ್ಗಳಿಗೆ ಅವು ಅನ್ವಯವಾಗುತ್ತಿದ್ದು, ಅಪ್ಲಿಕೇಶನ್ ಪ್ರತ್ಯೇಕ ನಿಯಮಗಳೊಂದಿಗೆ ಬಂದಿದ್ದರೆ, ಆ ಸಂದರ್ಭದಲ್ಲಿ ಆ ನಿಯಮಗಳು ಅನ್ವಯವಾಗುತ್ತವೆ.
ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವ ಅಥವಾ ಬಳಸುವ ಮೂಲಕ, ಅಥವಾ ಇವುಗಳಲ್ಲಿ ಯಾವುದನ್ನಾದರೂ ಮಾಡಲು ಪ್ರಯತ್ನಿಸುವುದರ ಮೂಲಕ, ನೀವು ಈ ನಿಯಮಗಳಿಗೆ ಒಪ್ಪುತ್ತೀರಿ. ನೀವು ಅವುಗಳನ್ನು ಒಪ್ಪದಿದ್ದರೆ, ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಅಥವಾ ಬಳಸುವ ಹಕ್ಕು ನಿಮಗೆ ಇರುವುದಿಲ್ಲ ಮತ್ತು ಹಾಗೆ ಮಾಡಬಾರದು.
ಅಪ್ಲಿಕೇಶನ್ ಪ್ರಕಾಶಕರು ಎಂದರೆ, ಸಂಗ್ರಹದಲ್ಲಿ ಗುರುತಿಸಿರುವಂತೆ, ನಿಮಗೆ ಅಪ್ಲಿಕೇಶನ್ನ ಪರವಾನಗಿ ನೀಡುವ ಸಂಸ್ಥೆ.
ನೀವು ಈ ಪರವಾನಗಿ ನಿಯಮಗಳನ್ನು ಪಾಲಿಸಿದರೆ, ನಿಮಗೆ ಈ ಕೆಳಗಿನ ಹಕ್ಕುಗಳು ಇರುತ್ತವೆ.
- 1. ಸ್ಥಾಪನೆ ಮತ್ತು ಬಳಕೆ ಹಕ್ಕುಗಳು; ಅವಧಿ ಮುಕ್ತಾಯ. ನೀವು Microsoft ನ ಬಳಕೆ ನಿಯಮಗಳಲ್ಲಿ (https://go.microsoft.com/fwlink/p/?LinkId=723143) ವಿವರಿಸಿರುವಂತೆ Windows ಸಾಧನಗಳಲ್ಲಿ ಅಥವಾ Xbox ಕನ್ಸೋಲ್ಗಳಲ್ಲಿ ಅಪ್ಲಿಕೇಶನ್ ಅನ್ನು ಸ್ಥಾಪಿಸಬಹುದು ಮತ್ತು ಬಳಸಬಹುದು. Microsoft ನ ಬಳಕೆ ನಿಯಮಗಳನ್ನು (https://go.microsoft.com/fwlink/p/?LinkId=723143) ಯಾವುದೇ ಸಮಯದಲ್ಲಿ ಬದಲಾಯಿಸುವ ಹಕ್ಕನ್ನು Microsoft ಕಾಯ್ದಿರಿಸಿಕೊಳ್ಳುತ್ತದೆ.
- 2. ಇಂಟರ್ನೆಟ್-ಆಧಾರಿತ ಸೇವೆಗಳು.
- a. ಇಂಟರ್ನೆಟ್-ಆಧಾರಿತ ಅಥವಾ ವೈರ್ಲೆಸ್ ಸೇವೆಗಳಿಗೆ ಸಮ್ಮತಿ. ಅಪ್ಲಿಕೇಶನ್ ವೈರ್ಲೆಸ್ ನೆಟ್ವರ್ಕ್ ಸೇರಿದಂತೆ, ಇಂಟರ್ನೆಟ್ ಮೂಲಕ ಕಂಪ್ಯೂಟರ್ ಸಿಸ್ಟಂಗಳನ್ನು ಸಂಪರ್ಕಿಸಿದರೆ, ಅಪ್ಲಿಕೇಶನ್ ಅನ್ನು ಬಳಸುವುದು ಇಂಟರ್ನೆಟ್-ಆಧಾರಿತ ಅಥವಾ ವೈರ್ಲೆಸ್ ಸೇವೆಗಳಿಗೆ ಸ್ಟ್ಯಾಂಡರ್ಡ್ ಸಾಧನದ ಮಾಹಿತಿಯ (ನಿಮ್ಮ ಸಾಧನ, ಸಿಸ್ಟಂ ಮತ್ತು ಅಪ್ಲಿಕೇಶನ್ ಸಾಫ್ಟ್ವೇರ್, ಮತ್ತು ಪೆರಿಫೆರಲ್ಗಳ ತಾಂತ್ರಿಕ ಮಾಹಿತಿಯನ್ನು ಒಳಗೊಂಡ ಆದರೆ ಸೀಮಿತವಲ್ಲದ) ಟ್ರಾನ್ಸ್ಮಿಶನ್ಗೆ ನಿಮ್ಮ ಸಮ್ಮತಿ ಎಂದು ತಿಳಿಯಲಾಗುತ್ತದೆ. ಅಪ್ಲಿಕೇಶನ್ ಬಳಸಿ ಪ್ರವೇಶಿಸಿದ ಸೇವೆಗಳ ನಿಮ್ಮ ಬಳಕೆಗೆ ಸಂಬಂಧಿಸಿದಂತೆ ಬೇರೆ ನಿಯಮಗಳನ್ನು ಪ್ರಸ್ತುತಪಡಿಸಲಾದರೆ, ಆ ನಿಯಮಗಳು ಕೂಡ ಅನ್ವಯವಾಗುತ್ತವೆ.
- b. ಇಂಟರ್ನೆಟ್-ಆಧಾರಿತ ಸೇವೆಗಳ ದುರ್ಬಳಕೆ. ಇಂಟರ್ನೆಟ್-ಆಧಾರಿತ ಸೇವೆಗೆ ಯಾವುದೇ ರೀತಿಯಲ್ಲಿ ಹಾನಿಯಾಗುವಂತೆ ಅಥವಾ ಬೇರೆಯವರು ಅದನ್ನು ಬಳಸುವುದಕ್ಕೆ ಅಥವಾ ವೈರ್ಲೆಸ್ ನೆಟ್ವರ್ಕ್ಗೆ ಅಡ್ಡಿಯಾಗುವ ಯಾವುದೇ ರೀತಿಯಲ್ಲಿ ನೀವು ಅದನ್ನು ಬಳಸುವಂತಿಲ್ಲ. ಯಾವುದೇ ಸೇವೆ, ಡೇಟಾ, ಖಾತೆ, ಅಥವಾ ನೆಟ್ವರ್ಕ್ಗೆ ಯಾವುದೇ ರೀತಿಯಲ್ಲಿ ಅನಧಿಕೃತ ಪ್ರವೇಶಕ್ಕಾಗಿ ಪ್ರಯತ್ನಿಸಲು ನೀವು ಸೇವೆಯನ್ನು ಬಳಸುವಂತಿಲ್ಲ.
- 3. ಪರವಾನಗಿಯ ವ್ಯಾಪ್ತಿ. ಈ ಅಪ್ಲಿಕೇಶನ್ಗೆ ಪರವಾನಗಿ ನೀಡಲಾಗಿದೆಯೇ ಹೊರತು, ಮಾರಾಟ ಮಾಡಿಲ್ಲ. ಈ ಒಪ್ಪಂದವು ನಿಮಗೆ ಅಪ್ಲಿಕೇಶನ್ ಬಳಕೆಗೆ ಕೆಲವು ಹಕ್ಕುಗಳನ್ನು ಮಾತ್ರ ನೀಡುತ್ತದೆ. Microsoft ಜತೆ ನಿಮ್ಮ ಒಪ್ಪಂದದ ಅನುಸಾರವಾಗಿ ನಿಮ್ಮ ಸಾಧನಗಳಲ್ಲಿ ಅಪ್ಲಿಕೇಶನ್ಗಳ ಬಳಕೆಯ ನಿಮ್ಮ ಸಾಮರ್ಥ್ಯವನ್ನು Microsoft ನಿಷ್ಕ್ರಿಯಗೊಳಿಸಿದರೆ, ಸಂಬಂಧ ಹೊಂದಿರುವ ಯಾವುದೇ ಪರವಾನಗಿ ಹಕ್ಕುಗಳು ಕೂಡ ಕೊನೆಗೊಳ್ಳುತ್ತವೆ. ಎಲ್ಲಾ ಇತರ ಹಕ್ಕುಗಳನ್ನು ಅಪ್ಲಿಕೇಶನ್ ಪ್ರಕಾಶಕರು ಕಾಯ್ದಿರಿಸುತ್ತಾರೆ. ಈ ಮಿತಿಯ ಹೊರತಾಗಿಯೂ ಅನ್ವಯವಾಗುವ ಕಾನೂನು ನಿಮಗೆ ಹೆಚ್ಚಿನ ಹಕ್ಕುಗಳನ್ನು ಕೊಡುವ ಹೊರತು, ಈ ಒಪ್ಪಂದದಲ್ಲಿ ಸ್ಪಷ್ಟವಾಗಿ ಅನುಮತಿಸಲಾದಂತೆ ಮಾತ್ರವೇ ನೀವು ಅಪ್ಲಿಕೇಶನ್ ಅನ್ನು ಬಳಸಬಹುದು. ಈ ರೀತಿ ಮಾಡುವ ಮೂಲಕ, ಅಪ್ಲಿಕೇಶನ್ ಅನ್ನು ನಿರ್ದಿಷ್ಟ ರೂಪಗಳಲ್ಲಿ ಮಾತ್ರ ಬಳಸಲು ನಿಮಗೆ ಅನುಮತಿಸುವ ಅದರ ಯಾವುದೇ ತಾಂತ್ರಿಕ ಮಿತಿಗಳಿಗೆ ನೀವು ಬದ್ಧರಾಗಿರಬೇಕು. ನೀವು ಹೀಗೆ ಮಾಡುವಂತಿಲ್ಲ:
- a. ಅಪ್ಲಿಕೇಶನ್ನ ಯಾವುದೇ ತಾಂತ್ರಿಕ ಮಿತಿಗಳನ್ನು ಬದಲಾಯಿಸುವಂತಿಲ್ಲ.
- b. ಈ ಮಿತಿಯ ಹೊರತಾಗಿಯೂ, ಅನ್ವಯಿಸುವ ಕಾನೂನು ಸ್ಪಷ್ಟವಾಗಿ ಅನುಮತಿಸುವ ಮಟ್ಟಿಗೆ ಮತ್ತು ಹೊರತಾಗಿ ಮಾತ್ರ ನೀವು ಅಪ್ಲಿಕೇಶನ್ ಅನ್ನು ರಿವರ್ಸ್ ಇಂಜಿನಿಯರ್, ಡೀಕಂಪೈಲ್, ಅಥವಾ ಡೀಅಸೆಂಬಲ್ ಮಾಡುವಂತಿಲ್ಲ.
- c. ಈ ಮಿತಿಯ ಹೊರತಾಗಿಯೂ, ಈ ಒಪ್ಪಂದದಲ್ಲಿ ನಿರ್ದಿಷ್ಟಪಡಿಸಿರುವುದಕ್ಕಿಂತ ಅಥವಾ ಅನ್ವಯವಾಗುವ ಕಾನೂನಿನಲ್ಲಿ ಅನುಮತಿಸಿರುವುದಕ್ಕಿಂತ ಹೆಚ್ಚು ಅಪ್ಲಿಕೇಶನ್ ನಕಲುಗಳನ್ನು ಮಾಡುವಂತಿಲ್ಲ.
- d. ಅಪ್ಲಿಕೇಶನ್ ಅನ್ನು ಪ್ರಕಟಿಸುವಂತಿಲ್ಲ ಅಥವಾ ಬೇರೆ ರೀತಿಯಲ್ಲಿ ಬೇರೆಯವರಿಗೆ ನಕಲಿಸಲು ಲಭ್ಯವಾಗಿಸುವಂತಿಲ್ಲ.
- e. ಅಪ್ಲಿಕೇಶನ್ ಅನ್ನು ಬಾಡಿಗೆ, ಲೀಸ್, ಅಥವಾ ಕಡ ನೀಡುವಂತಿಲ್ಲ.
- f. ಅಪ್ಲಿಕೇಶನ್ ಅಥವಾ ಈ ಒಪ್ಪಂದವನ್ನು ಯಾವುದೇ ಮೂರನೇ ಪಕ್ಷಕ್ಕೆ ವರ್ಗಾಯಿಸುವುದು.
- 4. ದಾಖಲೀಕರಣ. ಅಪ್ಲಿಕೇಶನ್ ಜತೆಗೆ ದಾಖಲೀಕರಣವನ್ನು ಒದಗಿಸಿದ್ದರೆ, ನೀವು ವೈಯಕ್ತಿಕ ಉದ್ದೇಶಗಳಿಗಾಗಿ ಮಾತ್ರವೇ ದಾಖಲೀಕರಣವನ್ನು ನಕಲಿಸಬಹುದು ಅಥವಾ ಬಳಸಬಹುದು.
- 5. ತಂತ್ರಜ್ಞಾನ ಮತ್ತು ರಫ್ತು ನಿರ್ಬಂಧಗಳು. ಅಪ್ಲಿಕೇಶನ್ ಯುನೈಟೆಡ್ ಸ್ಟೇಟ್ಸ್ ಅಥವಾ ಅಂತಾರಾಷ್ಟ್ರೀಯ ತಾಂತ್ರಿಕ ನಿಯಂತ್ರಣ ಅಥವಾ ರಫ್ತು ಕಾನೂನುಗಳು ಹಾಗೂ ನಿಬಂಧನೆಗಳಿಗೆ ಒಳಪಟ್ಟಿರಬಹುದು. ಅಪ್ಲಿಕೇಶನ್ನಿಂದ ಬಳಕೆಯಾಗುತ್ತಿರುವ ಮತ್ತು ಬೆಂಬಲಿಸುವ ತಂತ್ರಜ್ಞಾನಕ್ಕೆ ಅನ್ವಯವಾಗುವ ಎಲ್ಲ ದೇಶೀಯ ಮತ್ತು ಅಂತಾರಾಷ್ಟ್ರೀಯ ರಫ್ತು ಕಾನೂನುಗಳು ಮತ್ತು ನಿಬಂಧನೆಗಳಿಗೆ ನೀವು ಬದ್ಧರಾಗಿರಬೇಕು. ಈ ಕಾನೂನುಗಳಲ್ಲಿ ಗಮ್ಯಸ್ಥಾನಗಳು, ಅಂತಿಮ ಬಳಕೆದಾರರು, ಮತ್ತು ಅಂತಿಮ ಬಳಕೆಯ ಮೇಲಿನ ನಿರ್ಬಂಧಗಳೂ ಒಳಗೊಂಡಿರುತ್ತವೆ. Microsoft ಬ್ರ್ಯಾಂಡೆಡ್ ಉತ್ಪನ್ನಗಳ ಕುರಿತು ಮಾಹಿತಿಗಾಗಿ, Microsoft ರಫ್ತು ವೆಬ್ಸೈಟ್ (https://go.microsoft.com/fwlink/?linkid=868967) ಗೆ ಹೋಗಿ.
- 6. ಬೆಂಬಲ ಸೇವೆಗಳು. ಯಾವೆಲ್ಲ ಬೆಂಬಲ ಸೇವೆಗಳು ಲಭ್ಯ ಇವೆ ಎಂಬುದನ್ನು ತಿಳಿದುಕೊಳ್ಳಲು ಅಪ್ಲಿಕೇಶನ್ ಪ್ರಕಾಶಕರನ್ನು ಸಂಪರ್ಕಿಸಿ. ಅಪ್ಲಿಕೇಶನ್ಗಾಗಿ ಬೆಂಬಲ ಸೇವೆಗಳನ್ನು ಒದಗಿಸಲು Microsoft, ನಿಮ್ಮ ಹಾರ್ಡ್ವೇರ್ ತಯಾರಕರು ಮತ್ತು ನಿಮ್ಮ ವೈರ್ಲೆಸ್ ಕ್ಯಾರಿಯರ್ (ಇವರಲ್ಲಿ ಒಬ್ಬರು ಅಪ್ಲಿಕೇಶನ್ ಪ್ರಕಾಶಕರಾಗಿರುವ ಹೊರತು) ಜವಾಬ್ದಾರರಲ್ಲ.
- 7. ಸಂಪೂರ್ಣ ಒಪ್ಪಂದ. ಈ ಒಪ್ಪಂದ, ಅನ್ವಯವಾಗುವ ಯಾವುದೇ ಗೌಪ್ಯತೆ ನೀತಿ, ಅಪ್ಲಿಕೇಶನ್ ಒಳಗೊಂಡಿರುವ ಯಾವುದೇ ಹೆಚ್ಚುವರಿ ನಿಯಮಗಳು, ಮತ್ತು ಪೂರಕಗಳು ಹಾಗೂ ಪರಿಷ್ಕರಣೆಗಳ ನಿಯಮಗಳು ನಿಮ್ಮ ಮತ್ತು ಅಪ್ಲಿಕೇಶನ್ ಪ್ರಕಾಶಕರ ನಡುವೆ ಅಪ್ಲಿಕೇಶನ್ಗಾಗಿ ಇರುವ ಸಂಪೂರ್ಣ ಒಪ್ಪಂದವಾಗಿರುತ್ತದೆ.
- 8. ಅನ್ವಯವಾಗುವ ಕಾನೂನು.
- a. ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ. ನೀವು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಅಪ್ಲಿಕೇಶನ್ ಅನ್ನು ಪಡೆದುಕೊಂಡಿದ್ದರೆ, ಈ ಒಪ್ಪಂದದ ವ್ಯಾಖ್ಯಾನವು ನೀವು ವಾಸಿಸುತ್ತಿರುವ ರಾಜ್ಯ ಅಥವಾ ಪ್ರಾಂತ್ಯದ (ಅಥವಾ, ವ್ಯವಹಾರವಾಗಿದ್ದರೆ, ನಿಮ್ಮ ಪ್ರಧಾನ ವ್ಯವಹಾರದ ಸ್ಥಳವು ಇರುವಲ್ಲಿನ) ಕಾನೂನುಗಳ ಅಧೀನದಲ್ಲಿರುತ್ತದೆ ಮತ್ತು ಕಾನೂನುಗಳ ಸಿದ್ಧಾಂತಗಳ ಸಂಘರ್ಷವನ್ನು ಲೆಕ್ಕಿಸದೆ, ಅವುಗಳ ಉಲ್ಲಂಘನೆಗಾಗಿನ ಕ್ಲೇಮುಗಳು, ಮತ್ತು ಬೇರೆಲ್ಲಾ ಕ್ಲೇಮುಗಳಿಗೆ (ಗ್ರಾಹಕ ಸಂರಕ್ಷಣೆ, ಅನ್ಯಾಯಯುತ ಸ್ಫರ್ಧೆ, ಮತ್ತು ಕರ್ತವ್ಯ ಲೋಪದ ಕ್ಲೇಮುಗಳು ಸೇರಿದಂತೆ) ಅನ್ವಯವಾಗುತ್ತವೆ.
- b. ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದ ಹೊರಗೆ. ನೀವು ಬೇರೆ ದೇಶದಲ್ಲಿ ಅಪ್ಲಿಕೇಶನ್ ಅನ್ನು ಪಡೆದುಕೊಂಡಿದ್ದರೆ, ಆ ದೇಶದ ಕಾನೂನುಗಳು ಅನ್ವಯವಾಗುತ್ತವೆ.
- 9. ಶಾಸನಾತ್ಮಕ ಪರಿಣಾಮ. ಈ ಒಪ್ಪಂದವು ಕೆಲವೊಂದು ಶಾಸನಾತ್ಮಕ ಹಕ್ಕುಗಳನ್ನು ವಿವರಿಸುತ್ತದೆ. ನಿಮ್ಮ ರಾಜ್ಯ ಅಥವಾ ದೇಶದ ಕಾನೂನುಗಳ ಅಡಿಯಲ್ಲಿ ನೀವು ಬೇರೆ ಹಕ್ಕುಗಳನ್ನು ಹೊಂದಿರಬಹುದು. ನಿಮ್ಮ ರಾಜ್ಯ ಅಥವಾ ದೇಶದ ಕಾನೂನುಗಳ ಅಡಿಯಲ್ಲಿರುವ ನಿಮ್ಮ ಹಕ್ಕುಗಳನ್ನು ಬದಲಾಯಿಸಲು ನಿಮ್ಮ ರಾಜ್ಯ ಅಥವಾ ದೇಶದ ಕಾನೂನುಗಳು ಅನುಮತಿ ನೀಡದಿದ್ದರೆ ಈ ಒಪ್ಪಂದವು ಅದನ್ನು ಬದಲಾಯಿಸುವುದಿಲ್ಲ.
- 10. ವಾರಂಟಿಯ ಹಕ್ಕು ನಿರಾಕರಣೆ. ಅನ್ವಯವಾಗುವ ಕಾನೂನಿಗೆ ಒಳಪಟ್ಟು, ಅಪ್ಲಿಕೇಶನ್ಗೆ "ಇದ್ದದ್ದು ಇದ್ದಂತೆ", "ಎಲ್ಲ ದೋಷಗಳೊಂದಿಗೆ" ಮತ್ತು "ಲಭ್ಯವಿರುವಂತೆ" ಪರವಾನಗಿ ನೀಡಲಾಗಿದೆ. ಅದರ ಬಳಕೆಯ ಎಲ್ಲ ರಿಸ್ಕ್ಗಳಿಗೆ ನೀವೇ ಜವಾಬ್ದಾರರು. ಅಪ್ಲಿಕೇಶನ್ ಪ್ರಕಾಶಕರು, ತನ್ನ ಪರವಾಗಿ, Microsoft (Microsoft ಅಪ್ಲಿಕೇಶನ್ ಪ್ರಕಾಶಕ ಅಲ್ಲದಿದ್ದರೆ), ಅಪ್ಲಿಕೇಶನ್ ಯಾವ ನೆಟ್ವರ್ಕ್ ಮೂಲಕ ನೀಡಲಾಗಿದೆಯೋ ಆ ವೈರ್ಲೆಸ್ ಕ್ಯಾರಿಯರ್, ಮತ್ತು ನಮ್ಮ ಸಹ ಸಂಸ್ಥೆಗಳು, ಮಾರಾಟಗಾರರು, ಏಜೆಂಟರು ಮತ್ತು ವಿತರಕರು ಪ್ರತಿಯೊಬ್ಬರೂ ("ಆವೃತ ಪಕ್ಷಗಳು"), ಯಾವುದೇ ಸ್ಪಷ್ಟ ವಾರಂಟಿಗಳು, ಗ್ಯಾರಂಟಿಗಳು, ಅಥವಾ ಅಪ್ಲಿಕೇಶನ್ಗೆ ಸಂಬಂಧಿಸಿದಂತೆ ಷರತ್ತುಗಳನ್ನು ನೀಡುವುದಿಲ್ಲ. ಅಪ್ಲಿಕೇಶನ್ನ ಗುಣಮಟ್ಟ, ಸುರಕ್ಷತೆ, ಅನುಕೂಲತೆ, ಮತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿದ ಸಂಪೂರ್ಣ ರಿಸ್ಕ್ ನಿಮಗೇ ಸೇರಿದ್ದಾಗಿರುತ್ತದೆ. ಅಪ್ಲಿಕೇಶನ್ ದೋಷಪೂರಿತವೆಂದು ಸಾಬೀತಾದರೆ, ಅಗತ್ಯವಿರುವ ಸೇವೆ ಅಥವಾ ದುರಸ್ತಿಯ ಸಂಪೂರ್ಣ ವೆಚ್ಚವನ್ನು ನೀವು ಭರಿಸುತ್ತೀರಿ. ನಿಮ್ಮ ಸ್ಥಳೀಯ ಕಾನೂನುಗಳ ಅಡಿಯಲ್ಲಿ ಈ ಒಪ್ಪಂದವು ಬದಲಾಯಿಸಲಾಗದ ಹೆಚ್ಚುವರಿ ಗ್ರಾಹಕ ಹಕ್ಕುಗಳನ್ನು ನೀವು ಹೊಂದಿರಬಹುದು. ನಿಮ್ಮ ಸ್ಥಳೀಯ ಕಾನೂನಿನಡಿಯಲ್ಲಿ ಅನುಮತಿಸಲಾದ ಮಟ್ಟಿಗೆ, ವ್ಯಾಪಾರಾತ್ಮಕತೆ, ನಿರ್ದಿಷ್ಟ ಉದ್ದೇಶಕ್ಕಾಗಿನ ಕಾರ್ಯಕ್ಷಮತೆ, ಸುರಕ್ಷತೆ, ಅನುಕೂಲತೆ ಮತ್ತು ಉಲ್ಲಂಘಿಸದಿರುವುದೂ ಸೇರಿದಂತೆ, ಆವೃತ ಪಕ್ಷಗಳು ಯಾವುದೇ ಸೂಚಿತ ವಾರಂಟಿಗಳನ್ನು ಅಥವಾ ಷರತ್ತುಗಳನ್ನು ಹೊರತುಪಡಿಸುತ್ತವೆ.
- 11. ಪರಿಹಾರಗಳು ಮತ್ತು ಹಾನಿಗಳ ಮಿತಿ ಮತ್ತು ಹೊರತುಪಡಿಸುವಿಕೆ. ಕಾನೂನಿನಿಂದ ನಿಷೇಧಿತವಾಗಿಲ್ಲದ ಮಟ್ಟಿಗೆ, ಹಾನಿ ಪರಿಹಾರ ಪಡೆಯಲು ನಿಮಗೆ ಯಾವುದೇ ಆಧಾರವಿದ್ದರೆ, ನೀವು ಅಪ್ಲಿಕೇಶನ್ ಪ್ರಕಾಶಕರಿಂದ ಅಪ್ಲಿಕೇಶನ್ಗೆ ನೀವು ಪಾವತಿಸಿದ ಮೊತ್ತದಷ್ಟು ಅಥವಾ USD$1.00, ಯಾವುದು ಹೆಚ್ಚೋ, ಅಷ್ಟನ್ನು ಕೇವಲ ನೇರ ಹಾನಿಗಳಿಗೆ ಮಾತ್ರ ಪರಿಹಾರ ಪಡೆಯಬಹುದು. ಅನ್ವಯವಾಗುವ ಕಾನೂನಿಗೆ ಒಳಪಟ್ಟು, ಪರಿಣಾಮಕಾರಿಯಾದ, ಕಳೆದುಹೋದ ಲಾಭಗಳು, ಅಪ್ಲಿಕೇಶನ್ ಪ್ರಕಾಶಕರಿಂದ ವಿಶೇಷ, ಪರೋಕ್ಷ ಅಥವಾ ಪ್ರಾಸಂಗಿಕ ಹಾನಿಗಳನ್ನು ಒಳಗೊಂಡಂತೆ ನೀವು ಯಾವುದೇ ಹಾನಿಗಳನ್ನು ಮರುಪಡೆಯಲು ಪ್ರಯತ್ನಿಸುವುದಿಲ್ಲ ಮತ್ತು ಯಾವುದೇ ಹಕ್ಕನ್ನು ತ್ಯಜಿಸುವುದಿಲ್ಲ. ಈ ನಿಯಮಗಳು, ಅನ್ವಯಿಸುವ ಕಾನೂನಿಗೆ ಒಳಪಟ್ಟಿಲ್ಲದಿದ್ದರೂ, ನಿಮ್ಮ ಸ್ಥಳೀಯ ಕಾನೂನುಗಳು ವಾರಂಟಿ, ಗ್ಯಾರಂಟಿ ಅಥವಾ ಷರತ್ತು ವಿಧಿಸಿದರೆ ಅದರ ಅವಧಿಯು, ನೀವು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ ದಿನದಿಂದ 90 ದಿನಗಳವರೆಗೆ ಸೀಮಿತವಾಗಿರುತ್ತದೆ.
ಈ ಮಿತಿಯು ಇವುಗಳಿಗೆ ಅನ್ವಯವಾಗುತ್ತವೆ:
- ಅಪ್ಲಿಕೇಶನ್ಗೆ ಅಥವಾ ಅಪ್ಲಿಕೇಶನ್ ಮೂಲಕ ಲಭ್ಯವಾಗಿಸಿದ ಸೇವೆಗಳಿಗೆ ಸಂಬಂಧಿಸಿದ ಎಲ್ಲದಕ್ಕೂ; ಮತ್ತು
- ಗುತ್ತಿಗೆ, ವಾರಂಟಿ, ಗ್ಯಾರಂಟಿ, ಅಥವಾ ಷರತ್ತಿನ ಉಲ್ಲಂಘನೆಯ ಕ್ಲೇಮುಗಳು; ಕಟ್ಟುನಿಟ್ಟಿನ ಹೊಣೆಗಾರಿಕೆ, ನಿರ್ಲಕ್ಷ್ಯ, ಅಥವಾ ಬೇರೆ ಕರ್ತವ್ಯಲೋಪ; ಶಾಸನವಿಧಿ ಅಥವಾ ನಿಬಂಧನೆಯ ಉಲ್ಲಂಘನೆ;ಅನ್ಯಾಯಯುತ ಸಂವರ್ಧನೆ; ಅಥವಾ ಬೇರೆ ಯಾವುದೇ ಸಿದ್ಧಾಂತದಡಿಯಲ್ಲಿ; ಎಲ್ಲವೂ ಕೂಡ ಅನ್ವಯವಾಗುವ ಕಾನೂನಿನಲ್ಲಿ ಅನುಮತಿಸಲಾದ ಮಟ್ಟಿಗೆ.
ಅಲ್ಲದೆ ಇದು ಇವುಗಳಿಗೂ ಅನ್ವಯವಾಗುತ್ತದೆ:
- ಯಾವುದೇ ನಷ್ಟಗಳಿಗೆ ಈ ಪರಿಹಾರವು ನಿಮಗೆ ಸಂಪೂರ್ಣವಾಗಿ ನಷ್ಟ ಭರ್ತಿ ಮಾಡದಿದ್ದರೆ; ಅಥವಾ
- ಹಾನಿಗಳ ಸಂಭವನೀಯತೆಯ ಕುರಿತು ಅಪ್ಲಿಕೇಶನ್ ಪ್ರಕಾಶಕರಿಗೆ ತಿಳಿದಿದ್ದರೆ ಅಥವಾ ತಿಳಿಯಬೇಕಾಗಿದ್ದರೆ.
ವ್ಯಾಪಿಸಿದ ಸೇವೆಗಳು
ಈ ಕೆಳಗಿನ ಉತ್ಪನ್ನಗಳು, ಅಪ್ಲಿಗಳು ಮತ್ತು ಸೇವೆಗಳು Microsoft ಸೇವೆಗಳ ಒಪ್ಪಂದದಲ್ಲಿ ವ್ಯಾಪಿಸುತ್ತವೆ, ಆದರೆ ನಿಮ್ಮ ಮಾರುಕಟ್ಟೆಯಲ್ಲಿ ಲಭ್ಯವಿರಲಾರವು.
- Account.microsoft.com
- Bing Image and News (iOS)
- Bing Search APIs/SDKs
- Bing Translator
- Bing Webmaster
- Bing ಅಪ್ಲಿಗಳು
- Bing ನಕ್ಷೆಗಳು
- Bing ನಿಘಂಟು
- Bing ಪುಟಗಳು
- Bing ರಿಯಾಯಿತಿಗಳು
- Bing ಶೋಧ ಅಪ್ಲಿ
- Bing ನಲ್ಲಿ Microsoft ಶೋಧ
- Bing.com
- Bingplaces.com
- Clipchamp
- Cortana skills by Microsoft
- Cortana
- Default Homepage and New Tab Page on Microsoft Edge
- Dev Center App
- Dictate
- education.minecraft.net
- Face Swap
- Feedback Intake Tool for Azure Maps (aka “Azure Maps Feedback”)
- Forms.microsoft.com
- forzamotorsport.net
- Groove Music Pass
- Groove
- GroupMe
- LineBack
- Microsoft 365 Business Standard, Microsoft 365 Business Basic, Microsoft 365 Apps, Microsoft 365 app, Microsoft 365 Copilot, Microsoft 365 Copilot app, and Microsoft 365 Copilot Chat*
- *Until a commercial domain is established for use of these services, at which time separate Microsoft commercial terms will govern instead.
- Microsoft 365 Consumer
- Microsoft 365 Family ಯೊಂದಿಗೆ ಅಪ್ಲಿಕೇಶನ್ಗಳು ಮತ್ತು ಸೇವೆಗಳನ್ನು ಸೇರಿಸಲಾಗಿದೆ
- Microsoft 365 Family
- Microsoft 365 Personal ನೊಂದಿಗೆ ಅಪ್ಲಿಕೇಶನ್ಗಳು ಮತ್ತು ಸೇವೆಗಳನ್ನು ಸೇರಿಸಲಾಗಿದೆ
- Microsoft 365 Personal
- Microsoft 365 ಐಚ್ಛಿಕ ಸಂಪರ್ಕಿತ ಅನುಭವಗಳು
- Microsoft 365 ಗ್ರಾಹಕ ಚಂದಾದಾರಿಕೆಗಳೊಂದಿಗೆ ಅಪ್ಲಿಕೇಶನ್ಗಳು ಮತ್ತು ಸೇವೆಗಳನ್ನು ಸೇರಿಸಲಾಗಿದೆ
- Microsoft 365 ಬೇಸಿಕ್ನೊಂದಿಗೆ ಅಪ್ಲಿಕೇಶನ್ಗಳು ಮತ್ತು ಸೇವೆಗಳನ್ನು ಸೇರಿಸಲಾಗಿದೆ
- Microsoft 365 ರ ಉಚಿತ ಆವೃತ್ತಿ
- Microsoft Academic
- Microsoft Add-Ins for Skype
- Microsoft Bots
- Microsoft Copilot
- Microsoft Designer ನಿಂದ ಇಮೇಜ್ ಕ್ರಿಯೇಟರ್
- Microsoft Educator Community
- Microsoft Launcher
- Microsoft Loop
- Microsoft Pay
- Microsoft Pix
- Microsoft Reading Coach
- Microsoft Research Interactive Science
- Microsoft Research Open Data
- Microsoft Rewards
- Microsoft Soundscape
- Microsoft Sway
- Microsoft Teams
- Microsoft Translator
- Microsoft ಆರೋಗ್ಯ
- Microsoft ಕುಟುಂಬ
- Microsoft ಖಾತೆ
- Microsoft ಗಣಿತ ಪರಿಹಾರಕ
- Microsoft ಬೆಂಬಲ (ಗ್ರಾಹಕ)
- Microsoft ಮೂವಿಗಳು & TV
- Microsoft ವಾಲ್ಪೇಪರ್
- Microsoft ಸಂಗ್ರಹಗಳು
- Minecraft Realms Plus and Minecraft Realms
- Minecraft ಗೇಮ್ಸ್
- Mixer
- MSN (ಈ ಹಿಂದೆ Microsoft Start ಎಂದು ಕರೆಯಲಾಗುತ್ತಿತ್ತು)
- MSN Explorer
- MSN Money
- MSN ಆರೋಗ್ಯ ಮತ್ತು ಫಿಟ್ನೆಸ್
- MSN ಆಹಾರ ಮತ್ತು ಪಾನೀಯ
- MSN ಕ್ರೀಡೆ
- MSN ಡಯಲ್ ಅಪ್
- MSN ಪ್ರವಾಸ
- MSN ಪ್ರೀಮಿಯಂ
- MSN ಸುದ್ದಿ
- MSN ಹವಾಮಾನ
- MSN.com
- Office 365 ಗಾಗಿ Microsoft ಬೆಂಬಲ ಹಾಗೂ ಮರುಪ್ರಾಪ್ತಿ ಸಹಾಯಕ
- Office Store
- Office ಸಂಗ್ರಹ
- Office ಸ್ವೇ
- OneDrive.com
- OneDrive
- OneNote.com
- Outlook.com
- Paint 3D
- Presentation Translator
- rise4fun
- Seeing AI
- Send
- Skype in the Classroom
- Skype ವ್ಯವಸ್ಥಾಪಕರು
- Skype.com
- Skype
- SMS ಆಯೋಜಕ ಅಪ್ಲಿಕೇಶನ್
- Snip Insights
- Spreadsheet Keyboard
- Sway.com
- to-do.microsoft.com
- Translator for Microsoft Edge
- Translator Live
- Universal Human Relevance System (UHRS)
- UrWeather
- ux.microsoft.com
- Video Breakdown
- Visio Online
- Web Translator
- whiteboard.office.com
- Windows Live ಮೇಲ್
- Windows Live ರೈಟರ್
- Windows ಆಟಗಳು, ಅಪ್ಲಿಗಳು ಮತ್ತು ವೆಬ್ಸೈಟ್ಗಳು, Microsoft ನಿಂದ ಪ್ರಕಟಿತ
- Windows ಫೋಟೋ ಗ್ಯಾಲರಿ
- Windows ಮೂವೀ ಮೇಕರ್
- Windows ಸ್ಟೋರ್
- Windowsಗೆ ಲಿಂಕ್ ಮಾಡಿ
- Xbox Game Pass
- Xbox Game Studios ಆಟಗಳು, ಅಪ್ಲಿಗಳು ಮತ್ತು ವೆಬ್ಸೈಟ್ಗಳು
- Xbox Live Gold
- Xbox Live
- Xbox Store
- Xbox ಸಂಗೀತ
- ನಕ್ಷೆಗಳು ಅಪ್ಲಿ
- ಫೋನ್ ಲಿಂಕ್
- ಮುಂದಿನ ಲಾಕ್ ಸ್ಕ್ರೀನ್
- ವೆಬ್ಗಾಗಿ Microsoft 365
- ವ್ಯಕ್ತಿಗಳಿಗಾಗಿ Microsoft Defender
- ಸಂಗ್ರಹಗಳು
- ಸಾಧನ ಆರೋಗ್ಯ ಅಪ್ಲಿ
- ಸ್ಟೋರ್
- ಸ್ಮಾರ್ಟ್ ಶೋಧ